News

ವಾರಪೂರ್ತಿ 12 ತಾಸು ದುಡಿಯಿರಿ ಎಂದ ಎಲಾನ್‌ ಮಸ್ಕ್‌!

03 November, 2022 2:46 PM IST By: Hitesh
Elon Musk

ಟ್ವಿಟರ್‌ ಖರೀದಿ ಮಾಡಿದ ನಂತರ ಎಲಾನ್ ಮಸ್ಕ್ (Elon Musk) ಅವರು ಟ್ವಿಟರ್‌ನ ಒಂದೊಂದೇ ನಿಯಮಗಳನ್ನು ಬದಲಾಯಿಸುತ್ತಿದ್ದಾರೆ. 

ಪಂಜಾಬ್‌ನಲ್ಲಿ ಕಳೆ ಸುಡುತ್ತಿರುವ ರೈತರು; ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ! 

ಟ್ವಿಟರ್‌ನ ಬಾಸ್‌ ತರುತ್ತಿರುವ ಹೊಸ ಹೊಸ ಬದಲಾವಣೆಗಳು ಟ್ವಿಟರ್‌ನ ಸಿಬ್ಬಂದಿಗೆ ಒಂದಿಲ್ಲೊಂದು ತಲೆಬಿಸಿ ಪ್ರಾರಂಭವಾಗಿದೆ.

ಇದೀಗ ಎಲಾನ್‌ ಮಸ್ಕ್‌ ಟ್ವಿಟರ್‌ನ ಮ್ಯಾನೇಜರ್‌ಗಳಿಗೆ ವಾರದ ಏಳು ದಿನ, ದಿನದ 12 ತಾಸು ಕೆಲಸ ಮಾಡಬೇಕು ಎಂದು ಷರತ್ತು ವಿಧಿಸಿದ್ದು, ಟ್ವಿಟರ್‌ನ ಸಿಬ್ಬಂದಿಗೆ ತಲೆಬಿಸಿಯಾಗಿ ಪರಿಣಮಿಸಿದೆ.  

 ಈಗಾಗಲೇ ಹಲವು ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿರುವುದರಿಂದಾಗಿ ಮತ್ತಷ್ಟು ಸಿಬ್ಬಂದಿಗೆ ಉದ್ಯೋಗ ಕಡಿತದ ಭೀತಿ ಶುರುವಾಗಿದೆ.

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ: 8 ಲಕ್ಷ ವಿದ್ಯಾರ್ಥಿಗಳು ದಾಖಲು!  

ಟ್ವಿಟರ್ ಮ್ಯಾನೇಜರ್‌ಗಳಿಗೆ ದಿನಕ್ಕೆ 12 ಗಂಟೆ ಹಾಗೂ ವಾರದ ಎಲ್ಲ ದಿನಗಳಲ್ಲಿಯೂ ಕೆಲಸ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.  

ಟ್ವಿಟರ್‌ನ ಹೊಸ ಬಾಸ್‌ನ ನಿರ್ದೇಶನಗಳಿಂದ ಕೆಲವು ಸಿಬ್ಬಂದಿ ವಾರಾಂತ್ಯದಲ್ಲಿ ಮನೆಗೂ ಹೋಗದೆ ಕಂಪನಿಯಲ್ಲೇ ಮಲಗುತ್ತಿದ್ದಾರೆ ಎನ್ನಲಾಗಿದೆ.   

ಈಗಾಗಲೇ ಎಲಾನ್‌ ಮಸ್ಕ್‌ ಅವರು ಹಲವರನ್ನು ಉದ್ಯೋಗಕ್ಕೆ ರಾಜೀನಾಮೆ ನೀಡುವಂತೆ ಮಾಡಿದ್ದಾರೆ. ಟ್ವಿಟರ್‌ನ  ಸಿಬ್ಬಂದಿಗೆ ಇದೀಗ ಹೆಚ್ಚುವರಿ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿರುವುದು ಸಮಸ್ಯೆ ಆಗಿದೆ.  

ಇದನ್ನೂ ಓದಿರಿ: TWITTER ದೂರುವುದಿದ್ದರೆ ದೂರಿ; ತಿಂಗಳಿಗೆ ಎಂಟು ಡಾಲರ್‌ ಕೊಡಿ ಎಂದ ಎಲಾನ್‌ ಮಸ್ಕ್‌!  

ಟ್ವಿಟರ್‌ನ ಉದ್ಯೋಗ ಕಡಿತದ ಭೀತಿಯಲ್ಲಿರುವ ಮೈಕ್ರೋ ಬ್ಲಾಗಿಂಗ್ ವೇದಿಕೆಯ (Twitter) ಸಿಬ್ಬಂದಿ ಇದೀಗ ಹೆಚ್ಚುವರಿ ಸಮಯ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗಿದೆ.

ಎಲಾನ್‌ ಮಸ್ಕ್‌ ಅವರು ಟ್ವಿಟರ್ ಖರೀದಿ ಮಾಡುವುದಕ್ಕೂ ಮೊದಲೇ, ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ನಿರ್ದಿಷ್ಟ ನಿರ್ದೇಶನಗಳನ್ನು ನೀಡಿದ್ದರು ಎನ್ನಲಾಗಿದೆ.

ಸಿಬ್ಬಂದಿಯ ಸಾಮರ್ಥ್ಯವನ್ನು ಸಾಬೀತುಪಡಿಸುಂತೆ ಹಾಗೂ ಕಂಪನಿಗೆ ತಮ್ಮ ಮೌಲ್ಯವೇನು ಎಂಬುದನ್ನು ಮನವರಿಕೆ ಮಾಡಿಕೊಡುವಂತೆ ಹೇಳಿದ್ದರು ಎನ್ನಲಾಗಿದೆ.   

ದಕ್ಷಿಣ ಕೊರಿಯಾದಿಂದ ಉತ್ತರ ಕೊರಿಯಾ ಮೇಲೆ ಕ್ಷಿಪಣಿ ಉಡಾವಣೆ! 

Elon Musk

ಯಾವುದೇ ಪರಿಹಾರವಿಲ್ಲದೆ, ಮುನ್ನೆಚರಿಕೆಯನ್ನೂ ನೀಡದೆ ತಮ್ಮನ್ನು ಕೆಲಸದಿಂದ ವಜಾ ಮಾಡಬಹುದು ಎನ್ನುವ ಆತಂಕ ಟ್ವಿಟರ್‌ ಸಿಬ್ಬಂದಿಯನ್ನು ಇನ್ನಿಲ್ಲದಂತೆ ಕಾಡುತ್ತಿದೆ.

ಕೆಲವರು ಶುಕ್ರವಾರ ಮತ್ತು ಶನಿವಾರ ಸಹ ಕೆಲಸದ ಅವಧಿ ಮುಗಿದ ಬಳಿಕ ಮನೆಗೆ ತೆರಳದೆ ಕಚೇರಿಯಲ್ಲಿಯೇ ಮಲಗಿದ್ದಾರೆ ಎಂದು ವರದಿ ಆಗಿದೆ.

Elon Musk

ಎಲಾನ್ ಮಸ್ಕ್ ಅವರು ಈಚೆಗೆ 44 ಶತಕೋಟಿ ಡಾಲರ್ ಮೊತ್ತಕ್ಕೆ ಟ್ವಿಟರ್ ಅನ್ನು ಖರೀದಿಸಿದ್ದರು.

ಇದರ ಬೆನ್ನಲ್ಲೇ, ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪರಾಗ್ ಅಗರ್ವಾಲ್, ನೀತಿ ನಿರೂಪಣೆ-ವಿಶ್ವಾಸಾರ್ಹತೆ ಮತ್ತು ಸುರಕ್ಷಾ ವಿಭಾಗದ ಮುಖ್ಯಸ್ಥರಾದ ವಿಜಯಾ ಗಡ್ಡೆ,

ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಪ) ನೆಡ್ ಸೆಗಲ್ ಅವರನ್ನು ಕೆಲಸದಿಂದ ವಜಾ ಮಾಡಿ ಆದೇಶ ನೀಡಿದ್ದರು.      

ಈ ಬದಲಾವಣೆಯ ನಡುವೆಯೇ ಟೆಸ್ಲಾ ಕಂಪನಿಯ 50 ಉದ್ಯೋಗಿಗಳನ್ನು ಮಸ್ಕ್ ಅವರು ಟ್ವಿಟರ್‌ಗೆ ವರ್ಗಾಯಿಸಿದ್ದಾರೆ. ಟ್ವಿಟರ್‌ನಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಈ ಉದ್ಯೋಗಿಗಳನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ ಎಂದು ವರದಿ ಆಗಿದೆ.   

 

ಸಿಬ್ಬಂದಿ ಕಡಿತಕ್ಕೆ ಚಿಂತನೆ

ಈಗಾಗಲೇ ಹಲವು ಉದ್ಯೋಗಿಗಳನ್ನು ವಜಾ ಮಾಡಿದ್ದಾರೆ. ಎಲಾನ್‌ ಮಸ್ಕ್ ಅವರು ಕಂಪನಿಯ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ಹಲವರನ್ನು ಉದ್ಯೋಗದಿಂದ ವಜಾ ಮಾಡಿದ್ದರು.   

ಇದೀಗ ಮತ್ತೆ ಅಂದಾಜು ಮೂರು ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡುತ್ತಾರೆ ಎನ್ನುವ ಸುದ್ದಿ ಹೆಚ್ಚಾಗಿದೆ.

ಟ್ವಿಟರ್‌ನ ಅರ್ಧದಷ್ಟು ಸಿಬ್ಬಂದಿ ಎಂದರೆ ಅಂದಾಜು 3,700 ಸಿಬ್ಬಂದಿಯನ್ನು ವಜಾ ಮಾಡಲು ಉದ್ದೇಶಿಸಲಾಗಿದೆ ಎಂದು ಬ್ಲೂಮ್ಬರ್ಗ್ ಎಂಬ ಸಂಸ್ಥೆ ವರದಿ ಮಾಡಿದೆ.

ಉದ್ಯೋಗದಿಂದ ವಜಾಗೊಳ್ಳುವ ಸಿಬ್ಬಂದಿಗೆ ಈ ವಾರಾಂತ್ಯದಲ್ಲಿ ತಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಈ ವಿಚಾರವಾಗಿ ಟ್ವಿಟರ್ನ ಮಾಲೀಕ ಎಲಾನ್‌ ಮಸ್ಕ್‌ ಅವರು ಯಾವುದೇ ವಿವರವನ್ನೂ ನೀಡಿಲ್ಲ.