News

ನೇಪಾಳದಲ್ಲಿ ಭೂಕಂಪನ: ದೆಹಲಿಯಲ್ಲಿ ಭೂಮಿ ಕಂಪಿಸಿದ ಅನುಭವ!

09 November, 2022 10:05 AM IST By: Hitesh
Earthquake in Nepal: Earthquake experience in Delhi!

ನೇಪಾಳದಲ್ಲಿ ಮಂಗಳವಾರ ತಡರಾತ್ರಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಮಿ ಕಂಪಿಸಿದೆ.   

ಆಧಾರ್‌ ಕಾರ್ಡ್‌ಗಾಗಿ 24 ವರ್ಷ ಬಿಟ್ಟು ಮನೆಗೆ ಬಂದ ವ್ಯಕ್ತಿ!

ನೇಪಾಳದ ಗಡಿಭಾಗವಾಗಿರುವ ಉತ್ತರಾಖಂಡದ ಪಿತೋರ್ಗಢನ್‌ ಹಿಮಾಲಯ ಪ್ರದೇಶದಲ್ಲಿ ಸೃಷ್ಟಿಯಾದ ಭೂಕಂಪದಿಂದಾಗಿ ಉತ್ತರ ಭಾರತದ ಹಲವೆಡೆ ಭೂಮಿ ನಡುಗಿದ ಅನುಭವ ಆಗಿರುವುದು ವರದಿ ಆಗಿದೆ.

ಪಶ್ಚಿಮ ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪದ ನಂತರ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ

ರಾಷ್ಟ್ರೀಯ ಭೂಕಂಪನ ಕೇಂದ್ರದ ಮಾಹಿತಿಯ ಪ್ರಕಾರ, ದೋಟಿ ಜಿಲ್ಲೆಯ ಖಾಪ್ತದ್ ರಾಷ್ಟ್ರೀಯ ಉದ್ಯಾನವನದಲ್ಲಿ ಭೂಕಂಪವು ಮಂಗಳವಾರ ತಡರಾತ್ರಿ 2.12 ಗಂಟೆಗೆ ಸಂಭವಿಸಿದೆ.

ನೇಪಾಳದಲ್ಲಿ ಉಂಟಾದ ಭೂಕಂಪನದ ಪರಿಣಾಮ ಗಾಜಿಯಾಬಾದ್, ಗುರುಗ್ರಾಮ ಮತ್ತು ಲಖನೌದಲ್ಲೂ ಮಧ್ಯರಾತ್ರಿ ಭೂಮಿ ನಡುಗಿದ್ದರಿಂದ ಜನ ಆತಂಕಕ್ಕೆ ಒಳಗಾಗಿದ್ದರು.    

ಕರಾವಳಿ ಬಿಪಿಎಲ್‌ ಕಾರ್ಡ್‌ದಾರರಿಗೆ ಸಿಹಿಸುದ್ದಿ: ಇನ್ಮುಂದೆ ಸಿಗಲಿದೆ ಕುಚಲಕ್ಕಿ! 

ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಇನ್ನು ಪಶ್ಚಿಮ ನೇಪಾಳದಲ್ಲಿ 6.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ಕನಿಷ್ಠ ಆರು ಜನ ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ.

ರಾಷ್ಟ್ರೀಯ ಭೂಕಂಪನ ಕೇಂದ್ರದ ಪ್ರಕಾರ, ಭೂಕಂಪವು ದೋಟಿ ಜಿಲ್ಲೆಯ ಖಾಪ್ತದ್ ರಾಷ್ಟ್ರೀಯ ಉದ್ಯಾನವನದ ಕೇಂದ್ರಬಿಂದುದೊಂದಿಗೆ 2.12 ಗಂಟೆಗೆ ಸಂಭವಿಸಿದೆ.

ಭೂಕಂಪದ ಸಮಯದಲ್ಲಿ ಹಾನಿಗೊಳಗಾದ ಮನೆಗಳ ಅವಶೇಷಗಳಡಿ ಇರುವವರು ಸಾವನ್ನಪ್ಪಿದ್ದಾರೆ ಎಂದು ದೋಟಿಯ ಜಿಲ್ಲಾ ಪೊಲೀಸ್ ಕಚೇರಿಯ ಕಾರ್ಯನಿರ್ವಾಹಕ ಮುಖ್ಯಸ್ಥ ಉಪ ಪೊಲೀಸ್ ಅಧೀಕ್ಷಕ ಭೋಲಾ ಭಟ್ಟ ಹೇಳಿದ್ದಾರೆ.

ಕೇಳುವವರೇ ಇಲ್ಲ ಕೋವ್ಯಾಕ್ಸಿನ್‌; 50 ಮಿಲಿಯನ್‌ ಕೋವ್ಯಾಕ್ಸಿನ್‌ ನಿಷ್ಕ್ರೀಯತೆಗೆ ತಯಾರಿ!

ನಸುಕಿನ 1.57ಕ್ಕೆ ಸಂಭವಿಸಿದ 6.3 ತೀವ್ರತೆಯ ಭೂಕಂಪದ ಕೇಂದ್ರಬಿಂದು ಉತ್ತರಾಖಂಡದ ಪಿಥೋರಗಢನ್‌ ಪೂರ್ವ-ಆಗ್ನೇಯಕ್ಕೆ 90 ಕಿಮೀ ದೂರದಲ್ಲಿರುವ ನೇಪಾಳದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.

ರಾಷ್ಟ್ರೀಯ ಭೂಕಂಪನ ಕೇಂದ್ರದ ಪ್ರಕಾರ, ಭೂಕಂಪದ ಕೇಂದ್ರವು ನೇಪಾಳದಲ್ಲಿದೆ.  

Earthquake in Nepal: Earthquake experience in Delhi!

ಏಪ್ರಿಲ್ 2015 ರಲ್ಲಿ, ನೇಪಾಳದಲ್ಲಿ 7.8 ತೀವ್ರತೆಯ ವಿನಾಶಕಾರಿ ಭೂಕಂಪನ ಸಂಭವಿಸಿತ್ತು. ಇದರಲ್ಲಿ 9,000 ಜನ ಸಾವನ್ನಪ್ಪಿದ್ದರು.

ಸುಮಾರು 22,000 ಜನರು ಗಾಯಗೊಂಡಿದ್ದರು. ಅಲ್ಲದೇ 800,000 ಮನೆಗಳು ಮತ್ತು ಶಾಲಾ ಕಟ್ಟಡಗಳು ಹಾನಿಗೊಳಗಾಗಿತ್ತು.

ಅಡಿಕೆ ಚುಕ್ಕೆರೋಗ ತಡೆಗೆ 10 ಕೋಟಿ ರೂ. ಅನುದಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Earthquake in Nepal: Earthquake experience in Delhi!

24 ಗಂಟೆಗಳಲ್ಲಿ ಎರಡನೇ ಭೂಕಂಪ

ಪಶ್ಚಿಮ ನೇಪಾಳದಲ್ಲಿ 9.07 ಗಂಟೆಗೆ 5.7 ತೀವ್ರತೆಯ ಕಂಪನದ ಪ್ರಬಲ ಕಂಪನದ ಮೊದಲು ಎರಡು ಮಧ್ಯಮ ಭೂಕಂಪಗಳು ಸಂಭವಿಸಿದವು.

ನವೆಂಬರ್ 8 ರಂದು ಮತ್ತು ಸ್ವಲ್ಪ ಸಮಯದ ನಂತರ 9.56 ಕ್ಕೆ 4.1 ತೀವ್ರತೆ. ಭೂಕಂಪದ ಕೇಂದ್ರವು ಒಂದೇ ಆಗಿತ್ತು.

ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ದೆಹಲಿ ಮತ್ತು ಅದರ ಉಪನಗರಗಳಾದ ಗುರುಗ್ರಾಮ್ ಮತ್ತು ಗಾಜಿಯಾಬಾದ್ ಸೇರಿದಂತೆ ಉತ್ತರ ಭಾರತದಾದ್ಯಂತ ಕಂಪನದ ಅನುಭವವಾಗಿದೆ. 

ಕರಾವಳಿ ಬಿಪಿಎಲ್‌ ಕಾರ್ಡ್‌ದಾರರಿಗೆ ಸಿಹಿಸುದ್ದಿ: ಇನ್ಮುಂದೆ ಸಿಗಲಿದೆ ಕುಚಲಕ್ಕಿ!