News

LPG ಸಿಲಿಂಡರ್‌ಗೆ ಹೆಚ್ಚಿನ ಬೆಲೆ ಕೇಳ್ತಿದ್ದಾರಾ..? ಹಾಗಾದ್ರೇ ಇಲ್ಲಿ ಕಂಪ್ಲೇಟ್‌ ಮಾಡಿ ಸಾಕು

23 April, 2022 3:38 PM IST By: Maltesh
ಸಾಂದರ್ಭಿಕ ಚಿತ್ರ
ಈಗಾಗಲೇ ಗ್ಯಾಸ್ ಸಿಲಿಂಡರ್ ಬೆಲೆ ಸಾರ್ವಜನಿಕರಿಗೆ ಭಾರಿ ಹೊರೆಯಾಗುತ್ತಿದೆ. ಹೀಗಿರುವಾಗ ಸಿಲಿಂಡರ್ ಬೆಲೆ ಮೀರಿ ಗ್ರಾಹಕರಿಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಅದು ಸಿಲಿಂಡರ್ ವಿತರಣಾ ಶುಲ್ಕವಾಗಿದೆ. ಫೆಬ್ರವರಿಯಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಪ್ರಾರಂಭವಾಗಿದ್ದು, ಈ ನಡುವೆ ಇದರ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ.
ಬೆಲೆ ಏರಿಕೆಯಿಂದ ಸಾರ್ವಜನಿಕರಿಗೆ ತೀವ್ರ ಸಂಕಷ್ಟ ಎದುರಾಗಿದ್ದು, ಸಿಲಿಂಡರ್ ವಿತರಣಾ ಸಿಬ್ಬಂದಿ ಹೆಚ್ಚುವರಿ ಹಣ ಕೇಳುತ್ತಿದ್ದಾರೆ ಎಂದು ಗ್ರಾಹಕರು ದೂರುತ್ತಿದ್ದಾರೆ. ಸಿಲಿಂಡರ್ ಮೇಲಿನ ಬಿಲ್ ಮಾತ್ರ ಪಾವತಿಸಿದರೆ ಸಾಕು ಎಂಬುದು ನಿಯಮವಾಗಿದ್ದು, ಆದರೆ, ವಿತರಣಾ ಸಿಬ್ಬಂದಿಗೆ 20ರಿಂದ 40 ರೂ.ವರೆಗೆ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕೆಲವೆಡೆ ಡೆಲಿವರಿ ಸಿಬ್ಬಂದಿ 60 ಅಥವಾ 80 ರೂ.ವರೆಗೆ ಹೆಚ್ಚುವರಿ ಹಣ ಕೇಳುತ್ತಿದ್ದಾರೆ ಎಂಬ ದೂರುಗಳಿವೆ.
ಈ ನಡುವೆ ಬಿಲ್‌ನಲ್ಲಿ ನಮೂದಿಸಲಾದ ಮೊತ್ತವನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸದೆಯೇ ಕಟ್ಟಡ/ಫ್ಲಾಟ್‌ಗಳಲ್ಲಿ ನೆಲದ ಸ್ಥಳವನ್ನು ಲೆಕ್ಕಿಸದೆ ಗ್ಯಾಸ್ ಸಿಲಿಂಡರ್ ಅನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವುದು ಗ್ಯಾಸ್ ವಿತರಕರ ಜವಾಬ್ದಾರಿಯಾಗಿದೆ. LPG ಸಿಲಿಂಡರ್‌ನ ನಗದು ಜ್ಞಾಪಕ ಪತ್ರದಲ್ಲಿ ಸೂಚಿಸಲಾದ ಚಿಲ್ಲರೆ ಮಾರಾಟದ ಬೆಲೆಗಿಂತ ಹೆಚ್ಚುವರಿ ಮೊತ್ತವನ್ನು ಸಂಗ್ರಹಿಸಲು ದೇಶೀಯ ಅನಿಲ ವಿತರಕರಿಗೆ ಯಾವುದೇ ನಿಯಮಗಳು ಅಥವಾ ಸೂಚನೆಗಳಿಲ್ಲ.

ಎಲ್‌ಪಿಜಿ ಸಿಲಿಂಡರ್‌ನ ವಿತರಣೆಯ ಮೇಲೆ ಯಾವುದೇ ವಿತರಣಾ ಶುಲ್ಕಗಳನ್ನು ಪಾವತಿಸುವ ಅಗತ್ಯವಿಲ್ಲ. ಇನ್‌ವಾಯ್ಸ್‌ನಲ್ಲಿ ನಮೂದಿಸಲಾದ ಮೊತ್ತವನ್ನು ಮಾತ್ರ ಪಾವತಿಸಬೇಕಾಗುತ್ತದೆ ಒಂದು ವೇಳೆ ಹೆಚ್ಚಿನ ಹಣವನ್ನು ಕೇಳಿದ್ರೆ ಸಂಬಂಧಪಟ್ಟ ವಿತರಣೆ ಎಜೆನ್ಸಿಗೆ ದೂರು ನೀಡಬಹುದಾಗಿದೆ.

ಇದನ್ನೂ ಓದಿ: ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ

ಇದನ್ನೂ ಓದಿ: UAN ನಂಬರ್ ಇಲ್ಲದೆ EPF ಬ್ಯಾಲೆನ್ಸ್‌ ಚೆಕ್‌ ಮಾಡೋದು ಹೇಗೆ..?