News

ಹಣದುಬ್ಬರ ನಿಯಂತ್ರಣಕ್ಕೆ ಮಾಸ್ಟರ್‌ ಪ್ಲಾನ್‌ ಮಾಡ್ತಿದೆ ಕೇಂದ್ರ; ಪೆಟ್ರೋಲ್‌, ಡಿಸೇಲ್‌ ದರ ಇಳಿಕೆ ?!

20 February, 2023 3:24 PM IST By: Hitesh

ದೇಶದಲ್ಲಿ ಇನ್ನಿಲ್ಲದಂತೆ ಹಣದುಬ್ಬರ ಹೆಚ್ಚಳವಾಗುತ್ತಿದೆ.

ಇದೇ ಸಮಯದಲ್ಲಿ ಈ ಹಿಂದೆಂದಿಗಿಂತಲೂ ಗೋಧಿ ಬೆಲೆಯಲ್ಲೂ ಹೆಚ್ಚಳವಾಗಿದ್ದು, ಅದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರವು ಗೋಧಿ ಇ- ಹರಾಜಿಗೆ ಮುಂದಾಗಿದೆ.

ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಹಾಗೂ ಇತರ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಮುನ್ಸೂಚನೆ ನೀಡಿದೆ.

Gold Rate Today ಚಿನ್ನದ ಬೆಲೆಯಲ್ಲಿ ಮುಂದುವರಿದ ಏರುಪೇರು! 

ನಿಯಂತ್ರಣಕ್ಕೆ ಬರದ ಹಣದುಬ್ಬರ, ಪೆಟ್ರೋಲ್‌, ಡೀಸೆಲ್‌ ದರ ಇಳಿಕೆಗೆ ಕೇಂದ್ರ ಚಿಂತನೆ ನಡೆಸಿದೆ.  

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸಲಹೆಯ ಆಧಾರದ ಮೇಲೆ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಸುದ್ದಿ ಸಂಸ್ಥೆ ರಾಯ್ಟರ್ಸ್‌ ವರದಿ ಮಾಡಿದೆ.

weather update ರಾಜ್ಯದಲ್ಲಿ ಇಂದು ಹವಾಮಾನ ಹೇಗಿದ, ಇಲ್ಲಿದೆ ಅಪ್ಡೇಟ್‌ 

ಫೆಬ್ರವರಿಯಲ್ಲಿನ ಹಣದುಬ್ಬರದ ನಿಖರ ಅಂಕಿ ಅಂಶಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಸರ್ಕಾರ ಕಾಯುತ್ತಿದೆ.

ಹಣದುಬ್ಬರವು ಇದೇ ರೀತಿಯಲ್ಲಿ ಏರುಗತಿಯಲ್ಲಿಯೇ ಮುಂದುವರಿದರೆ, ತೆರಿಗೆ ಕಡಿತ ಮಾಡುವ ಸಾಧ್ಯತೆ ಇದೆ.  

ಹಣದುಬ್ಬರ ನಿಗ್ರಹಿಸಲು ಮುಂದಿನ ದಿನಗಳಲ್ಲಿ ಪೆಟ್ರೋಲ್‌, ಡೀಸೆಲ್‌, ಮೆಕ್ಕೆಜೋಳ, ಮೈದಾ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಸರ್ಕಾರ ಕಡಿತ ಮಾಡುವ ಸಾಧ್ಯತೆ ಇದೆ.  

ಇದೀಗ ಈ ಸರಕುಗಳ ಮೇಲೆ ಶೇ. 60ರಷ್ಟು ಸುಂಕ ವಿಧಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದೆ 100 ಡಾಲರ್‌ಗೆ ಏರಿಕೆಯಾಗಿದ್ದ ಪ್ರತಿ ಬ್ಯಾರೆಲ್‌ ಕಚ್ಚಾ ತೈಲದ ಬೆಲೆಯು ಈಚೆಗೆ 75-80 ಡಾಲರ್‌ಗೆ ಇಳಿಕೆಯಾಗಿದೆ.

ಇದರ ಹೊರತಾಗಿಯು ಭಾರತದಲ್ಲಿ ಪೆಟ್ರೋಲ್‌, ಡೀಸೆಲ್‌ ದರಗಳಲ್ಲಿ ಇಳಿಕೆ ಆಗಿಲ್ಲ.

ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆಯಾದರೂ, ಅದನ್ನು ಗ್ರಾಹಕರಿಗೆ ತಲುಪಿಸುತ್ತಿಲ್ಲ ಎನ್ನುವ ಆರೋಪವೂ ಇದೆ. 

ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ನ ಬಳಕೆದಾದರೂ ಇನ್ಮುಂದೆ ಶುಲ್ಕ ಪಾವತಿಸಬೇಕು!

Center is making a master plan to control inflation; Petrol, diesel price reduction?!

ಕಳೆದ ಒಂದು ವರ್ಷದ ಅವಧಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದರೂ, ದೇಶದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿಲ್ಲ.  

ತೈಲ ಕಂಪನಿಗಳು ಕಚ್ಚಾ ತೈಲ ಬೆಲೆ ಇಳಿಕೆಯ ಲಾಭವನ್ನು ಗ್ರಾಹಕರಿಗೆ ಇನ್ನೂ ವರ್ಗಾಯಿಸಿಲ್ಲ.

ಇದೀಗ ಕೇಂದ್ರ ಸರ್ಕಾರವು ಆಮದು ಸುಂಕ ಕಡಿತ ಮಾಡುವುದರಿಂದಾಗಿ ಪೆಟ್ರೋಲ್‌ ಡೀಸೆಲ್‌ ಬೆಲೆ ಇಳಿಕೆ ಆಗಲಿದೆ.

ಇದರಿಂದಾಗಿ ಹಣದುಬ್ಬರವೂ ಇಳಿಕೆ ಆಗಲಿದೆ.  

ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ರಿಸರ್ವ್‌ ಬ್ಯಾಂಕ್‌ ಹಲವು ಬಾರಿ ರೆಪೋ ದರವನ್ನು ಏರಿಸುತ್ತಾ ಬಂದಿದೆ.

ಕಳೆದ ಒಂದು ವರ್ಷ ಅವಧಿಯಲ್ಲಿ ರೆಪೋ ದರವನ್ನು ಶೇ. 2.25ರಷ್ಟು ಏರಿಕೆ ಮಾಡಲಾಗಿದ್ದು, ಇದೀಗ ರೆಪೋ ದರವು ಶೇ. 6.5ಕ್ಕೆ ಮುಟ್ಟಿದೆ.

ತರಕಾರಿಯಿಂದ ಧಾನ್ಯದವರೆಗೆ ಸೋಮವಾರದ ಮಾರುಕಟ್ಟೆ ದರ ವಿವರ 

ರೆಪೋ ದರ ಏರಿಕೆಯಿಂದ ಬ್ಯಾಂಕ್‌ಗಳ ಬಡ್ಡಿ ದರ ಏರಿಕೆಯಾಗಿ, ನಗದಿನ ಹರಿವು ಕಡಿತವಾಗಲಿದೆ ಎಂದೇ ಅಂದಾಜಿಸಲಾಗಿತ್ತು.

ಆದರೆ, ರೆಪೋ ದರ ಹೆಚ್ಚಳದಿಂದ ಹಣದುಬ್ಬರ ನಿಯಂತ್ರಣ ಸಾಧ್ಯವಾಗುತ್ತಿಲ್ಲ.

ಪೆಟ್ರೋಲ್‌ ಮತ್ತು ಡೀಸೆಲ್‌ ತೆರಿಗೆಯನ್ನು ಕಡಿತ ಮಾಡುವುದರಿಂದ ಒಟ್ಟಾರೆ ಹಣದುಬ್ಬರ ಗಣನೀಯವಾಗಿ ಕಡಿಮೆ ಆಗಲಿದೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ.  

ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಶೇ. 6ಕ್ಕಿಂತ ಇಳಿಕೆ ಕಂಡಿದ್ದ  ಚಿಲ್ಲರೆ ಹಣದುಬ್ಬರ ಪ್ರಮಾಣವು ಜನವರಿಯಲ್ಲಿ

ಮತ್ತೆ ಶೇ. 6.25ಕ್ಕೆ ಏರಿಕೆ ಆಗಿತ್ತು. ಅಲ್ಲದೇ ಇದೇ ವೇಳೆ ಸಗಟು ಹಣದುಬ್ಬರ ಇಳಿಕೆ ಆಗಿರುವುದೂ ವರದಿ ಆಗಿದೆ. 

karnataka state budget 2023-2024 ಬೊಮ್ಮಾಯಿ ಗಿಫ್ಟ್‌: ಗೃಹಿಣಿಯರಿಗೆ ಮಾಸಿಕ ಸಿಗಲಿದೆ ಇಷ್ಟು ಸಹಾಯಧನ!