ನಿತ್ಯ ನಾವು ನೀವೆಲ್ಲ ಶಾಪಿಂಗ್ ಮಾಲ್‌ಗಳಿಗೆ, ಮಾರುಕಟ್ಟೆಗೆ ಹೋಗುವುದು ಸಾಮಾನ್ಯ. ಶಾಪಿಂಗ್‌ಗೆಂದು ತೆರಳಿ ಐದಾರು ಸಾವಿರದ ಖರೀದಿ ಮಾಡಿದರೂ ಒಂದು ಕ್ಯಾರಿಬ್ಯಾಗ್ ಅಥವಾ ಚೀಲವನ್ನು ಉಚಿತವಾಗಿ ನೀಡಲು ಮಾಲ್‌ನವರು ನಿರಾಕರಿಸುತ್ತಾರೆ. ಆದರೆ, ಕೆಲವೊಂದು ಅಂಗಡಿಗಳಲ್ಲಿ ಹಣ ಪಡೆದು ಚೀಲಗಳನ್ನು ಅಥವಾ ಕ್ಯಾರಿಬ್ಯಾಗ್‌ಗಳನ್ನು ನೀಡುತ್ತಾರೆ. ಅದರಲ್ಲೂ ಕೆಲವರು ಹೀಗೆ ಹಣ ಪಡೆದು ನೀಡುವ ಕ್ಯಾರಿಬ್ಯಾಗ್ ಗಳ ಮೇಲೆ ತಮ್ಮ ಅಂಗಡಿಯ ಜಾಹೀರಾತುಗಳನ್ನು ಮುದ್ರಿಸಿರುತ್ತಾರೆ. ಇದು ತಪ್ಪು ಎನ್ನುತ್ತದೆ ಗ್ರಾಹಕರ ನ್ಯಾಯಾಲಯ.
ಕ್ಯಾರಿ ಬ್ಯಾಗ್‌ಗೆ 12 ರೂಪಾಯಿ ಶುಲ್ಕ ವಿಧಿಸಿದ್ದಕ್ಕಾಗಿ ಆಂಧ್ರಪ್ರದೇಶದ (Andhra Pradesh) ವೈಜಾಗ್ ನಗರದ (Vizag city) ಗ್ರಾಹಕ ನ್ಯಾಯಾಲಯವು ಗ್ರಾಹಕರಿಗೆ 21,000 ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತೆ ಸೆಂಟ್ರಲ್ ಮಾಲ್‌ಗೆ ಆದೇಶಿಸಿದೆ. ಎಫ್‌ಎಲ್‌ಎಫ್‌ಎಲ್‌ನ ವಿಭಾಗವಾದ ಮಲ್ಟಿ-ಬ್ರಾಂಡ್ ಬಟ್ಟೆ ಚಿಲ್ಲರೆ ಮಾರಾಟ ಸಂಸ್ಥೆ ಸೆಂಟ್ರಲ್‌ಗೆ ಮಾಲ್‌ಗೆ ಕೋರ್ಟ್ ಈ ಆದೇಶ ನೀಡಿದೆ.
ಇದನ್ನೂ ಓದಿರಿ:
LPG ಸಿಲಿಂಡರ್‌ಗೆ ಹೆಚ್ಚಿನ ಬೆಲೆ ಕೇಳ್ತಿದ್ದಾರಾ..? ಹಾಗಾದ್ರೇ ಇಲ್ಲಿ ಕಂಪ್ಲೇಟ್ ಮಾಡಿ ಸಾಕು
ಎಚ್ಚರಿಕೆ: India Post Government Subsidy ಹೆಸರಲ್ಲಿ ವಂಚನೆ! ನಿಮ್ಮ ಖಾತೆ ಹ್ಯಾಕ್ ಆಗಬಹುದು ಹುಷಾರು!
ವಿಶಾಖಪಟ್ಟಣಂ ಜಿಲ್ಲಾ ಗ್ರಾಹಕರ ಆಯೋಗದ (Visakhapatnam District Consumers Commission) ಸದಸ್ಯರಾದ ರಹಿಮುನ್ನೀಸಾ ಬೇಗಂ (Rahimunnisa Begum) ಮತ್ತು ಅಧ್ಯಕ್ಷ ವರ್ರಿ ಕೃಷ್ಣ ಮೂರ್ತಿ (Varri Krishna Murthy) ಅವರು ವಿಜಾಗ್ ನಗರದ ನಿವಾಸಿಯಾ ಸೀಪನಾ ರಾಮರಾವ್ (Seepana Rama Rao) ಎಂಬ ವಕೀಲರಿಗೆ ವಿಧಿಸಲಾದ 12 ರೂ.ಗಳನ್ನು ಹಿಂದಿರುಗಿಸುವಂತೆ ಚಿಲ್ಲರೆ ವ್ಯಾಪಾರಿಯನ್ನು ಕೇಳಿದರು. ನಂತರ ವಾದ ವಿವಾದಗಳು ನಡೆದು 21,000 ಹಣವನ್ನು ಗ್ರಾಹಕರಿಗೆ ಪಾವತಿಸುವಂತೆ ಗ್ರಾಹಕರ ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
ಗ್ರಾಹಕರ ಆಯೋಗವು ಗ್ರಾಹಕರ ಮನವಿಯನ್ನು ಭಾಗಶಃ ಅನುಮೋದಿಸಿದೆ. ಮತ್ತು ಗ್ರಾಹಕರಿಗೆ ನೀಡಿದ ಮಾನಸಿಕ ಕಿರುಕುಳಕ್ಕೆ ಪರಿಹಾರವಾಗಿ 21,000 ರೂ ಮತ್ತು ಕಾನೂನು ವೆಚ್ಚಕ್ಕಾಗಿ ರೂ 1,500 ಪಾವತಿಸಲು ಚಿಲ್ಲರೆ ವ್ಯಾಪಾರಿಗೆ ಆದೇಶಿಸಿದೆ. ದೂರುದಾರರ ಪ್ರಕಾರ, ಅವರು ಜುಲೈ 14, 2019 ರಂದು ಚಿಲ್ಲರೆ ವ್ಯಾಪಾರಿಯಿಂದ ರೂ 628.96 ಮೌಲ್ಯದ ಬಟ್ಟೆಗಳನ್ನು ಖರೀದಿಸಿದ್ದಾರೆ. ಕ್ಯಾಷಿಯರ್ ಬಟ್ಟೆಗಳನ್ನು ಕ್ಯಾರಿ ಬ್ಯಾಗ್‌ನಲ್ಲಿ ಇರಿಸಿದರು ಮತ್ತು ಕ್ಯಾರಿ ಬ್ಯಾಗ್‌ನ (carry bag) ವೆಚ್ಚವಾಗಿ ರೂ 12 ಪಾವತಿಸಲು ದೂರುದಾರರಿಗೆ ಹೇಳಿದರು. ಆದರೆ ಈ ಕ್ಯಾರಿಬ್ಯಾಗ್‌ನಲ್ಲಿ ಚಿಲ್ಲರೆ ವ್ಯಾಪಾರಿಯ ಲೋಗೋ ಇತ್ತು. ಈ ಹಿನ್ನೆಲೆಯಲ್ಲಿ ಲೋಗೋ ಇರುವುದನ್ನು ಪ್ರಶ್ನಿಸಿ ಬ್ಯಾಗ್‌ಗೆ ಹಣ ನೀಡಲು ಗ್ರಾಹಕರು ನಿರಾಕರಿಸಿದರು. ಆದರೆ ಕ್ಯಾಷಿಯರ್ ಹಣ ಪಾವತಿಗೆ ಒತ್ತಾಯಿಸಿದರು.
ಈ ಕಂಪನಿಯಲ್ಲಿ ತೂಕ ಇಳಿಸಿಕೊಂಡ್ರೆ ಅರ್ಧ ತಿಂಗಳ ಸಂಬಳ ಬೋನಸ್..!
ಈ ತಪ್ಪುಗಳನ್ನ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗೋದು ಫಿಕ್ಸ್..!
ನಂತರ ದೂರುದಾರರು ಹಣ ಪಾವತಿಸಿ ಅಂಗಡಿ ವ್ಯವಸ್ಥಾಪಕರ ಬಳಿಯೂ ಮಾತನಾಡಿದರು. ಆದರೆ ಉಚಿತವಾಗಿ ಕ್ಯಾರಿ ಬ್ಯಾಗ್ ನೀಡಲು ಅವರೂ ನಿರಾಕರಿಸಿದರು. ನಂತರ, ದೂರುದಾರರು ಕ್ಯಾರಿ ಬ್ಯಾಗ್‌ನಲ್ಲಿ ವ್ಯಾಪಾರಿಯ ಲಾಂಛನವನ್ನು ಹೊಂದಿದ್ದು, ಬ್ಯಾಗ್‌ನ ಎರಡೂ ಬದಿಗಳಲ್ಲಿ ಮುದ್ರಿಸಿದ್ದರು. ಅಂಗಡಿಯ ಜಾಹೀರಾತಿಗೆ ಬಳಸಿದ ಕ್ಯಾರಿ ಬ್ಯಾಗ್‌ಗೆ ಶುಲ್ಕ ವಿಧಿಸುವುದು ಕಾನೂನು ಬಾಹಿರ ಎಂದು ದೂರುದಾರರು ವಿವರಿಸಿದರೂ, ಅಂಗಡಿಯ ಮ್ಯಾನೇಜರ್ ಅವರ ಮೇಲೆ ಕೂಗಿದರು. ಹೀಗಾಗಿ ಈ ಮಾನಸಿಕ ಕಿರುಕುಳಕ್ಕಾಗಿ (mental harassment)ಪರಿಹಾರವನ್ನು ಪಾವತಿಸಲು ಚಿಲ್ಲರೆ ವ್ಯಾಪಾರಿಗಳಿಗೆ ನಿರ್ದೇಶನ ಕೋರಿ ಗ್ರಾಹಕರು ಗ್ರಾಹಕರ ವೇದಿಕೆಯನ್ನು ಸಂಪರ್ಕಿಸಿದರು.
UAN ನಂಬರ್ ಇಲ್ಲದೆ EPF ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ..?
SBI ಹಾಗೂ Axis ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್..! ಬಡ್ಡಿ ದರಗಳಲ್ಲಿ ಹೆಚ್ಚಳ
ಈ ಪ್ರಕರಣದ ವಿಚಾರಣೆ ನಡೆಸಿದ ವಿಶಾಖಪಟ್ಟಣಂ ಜಿಲ್ಲಾ ಗ್ರಾಹಕರ ಆಯೋಗವು ಚಿಲ್ಲರೆ ವ್ಯಾಪಾರಿಗೆ ಪರಿಹಾರವಾಗಿ 21,000 ರೂ, ಕಾನೂನು ವೆಚ್ಚವಾಗಿ ರೂ 1,500 ಮತ್ತು ಬ್ಯಾಗ್‌ಗಾಗಿ ವಿಧಿಸಿದ ಹಣವನ್ನು ಹಿಂದಿರುಗಿಸುವಂತೆ ಆದೇಶಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
Papaya! (ಪಪ್ಪಾಯಿ) Dengue ನಿಂದ ಮುಕ್ತಿ!
ಮಜ್ಜಿಗೆಗಿಂತ ಮತ್ತೊಂದು ಮದ್ದು ಬೇಕೆ..? ಬೆರಗುಗೊಳಿಸುತ್ತೆ ಇದರ ಪ್ರಯೋಜನಗಳು