News

ಮೊಬೈಲ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: May 11 ರಿಂದ Call record App ನಿಷೇಧ!

26 April, 2022 2:53 PM IST By: Kalmesh T
Call record App banned from May 11!

ನೀವು ನಿಮಗೆ ಅಗತ್ಯವಿದ್ದವರೊಂದಿಗಿನ ಅಥವಾ ಯಾರದಾದರೂ ಮಾತುಗಳನ್ನು ಮೊಬೈಲ್‌ನಲ್ಲಿ ಕಾಪಿಟ್ಟುಕೊಂಡು ಮಾತನಾಡುತ್ತಿದ್ದರೆ ಇನ್ನು ಮುಂದೆ ಇದು ಸಾಧ್ಯವಿಲ್ಲ. ಏಕೆಂದರೆ ಗೂಗಲ್‌ ಪ್ಲೇ ಸ್ಟೋರ್‌ Google Play Store ತನ್ನಲ್ಲಿರುವ ಎಲ್ಲ ಕಾಲ್‌ ರೇಕಾರ್ಡಿಂಗ್‌ ಆ್ಯಪ್ (Call Record App) ಗಳನ್ನು ಅಳಿಸಿ ಹಾಕುವ ನಿರ್ಧಾರಕ್ಕೆ ಬಂದಿದೆ.

ಇದನ್ನೂ ಓದಿರಿ:

ಈಗ WhatsApp Group Call ನಲ್ಲಿ 32 ಜನ ಮಾತನಾಡಬಹುದು! ಹೊಸ Updateನ ಬಗ್ಗೆ ಈಗಲೇ ತಿಳಿದುಕೊಳ್ಳಿ

Whatsapp Status ನಲ್ಲಿ Location ಸ್ಟೀಕರ್! ಹೇಗೆ? ಏನು? ಇಲ್ಲಿದೆ ಸಂಪೂರ್ಣ ವಿವರ

ನಿಮ್ಮ ಮೊಬೈಲ್​ನಲ್ಲಿ ಕಾಲ್​ ರೆಕಾರ್ಡರ್​ ಆ್ಯಪ್ (Call Record App) ಅನ್ನು ಬಳಸುತ್ತಿದ್ದರೆ ಇನ್ನು ಮುಂದೆ ಅದು ವರ್ಕ್​ ಆಗಲ್ಲ. ಕಾರಣ ಗೂಗಲ್​ ಸಂಸ್ಥೆ ತನ್ನ ಹೊಸ ನೀತಿಯಲ್ಲಿ ಕಾಲ್​ ರೆಕಾರ್ಡರ್​ ಆ್ಯಪ್​ಗಳ (ಥರ್ಡ್​ ಪಾರ್ಟಿ ಆ್ಯಪ್)​ಬಳಕೆ ನಿಷೇಧಿಸುತ್ತಿದೆ. ಅಲ್ಲದೇ ಅವುಗಳನ್ನು ಗೂಗಲ್​ ಪ್ಲೇ ಸ್ಟೋರ್​ (Google Play Store) ನಿಂದ ಕಿತ್ತುಹಾಕಲಿದೆ.

WhatsApp “ಲಾಸ್ಟ್‌ ಸೀನ್‌”ನಲ್ಲಿ ದೊಡ್ಡ ಬದಲಾವಣೆಗೆ ಮುಂದಾದ ಕಂಪನಿ..! ಏನಿದು ಹೊಸ ಫೀಚರ್‌..?

SBI ಅಲರ್ಟ್‌:  ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI

ಗೂಗಲ್​ ತನ್ನ ಪ್ಲೇ ಸ್ಟೋರ್​ ನೀತಿಗೆ ಕೆಲ ಬದಲಾವಣೆ ತಂದಿದ್ದು, ಅದರಲ್ಲಿ ಕಾಲ್​ ರೆಕಾರ್ಡರ್​ ಆ್ಯಪ್​ (Call Record App) ಗಳನ್ನು ನಿಷೇಧಿಸುತ್ತಿದೆ. ಮೇ 11 ರಿಂದ ಈ ನಿಯಮ ಜಾರಿಗೆ ಬರಲಿದ್ದು, ಆ್ಯಂಡ್ರಾಯ್ಡ್​ ಮೊಬೈಲ್​ಗಳಲ್ಲಿ ಥರ್ಡ್​ ಪಾರ್ಟಿ ಆ್ಯಪ್​ಗಳಾಗಿ ಬಳಕೆಯಾಗುತ್ತಿದ್ದ ಕಾಲ್​ ರೆಕಾರ್ಡರ್​ಗಳು (Call Record App) ಇನ್ನು ಅಲ್ಲಿ ಕಾಣಸಿಗುವುದಿಲ್ಲ. ಈಗಾಗಲೇ ಡೌನ್​ಲೋಡ್​ ಮಾಡಿಕೊಂಡು ಬಳಕೆ ಮಾಡುತ್ತಿರುವ ಆ್ಯಪ್​ಗಳು ಕೂಡ ನಿಷ್ಕ್ರಿಯವಾಗಲಿವೆ ಎಂದು ಕಂಪನಿ ತಿಳಿಸಿದೆ.

ಬ್ಯಾಂಕ್‌ ವಿರುದ್ಧ ಕಂಪ್ಲೇಂಟ್‌ ಕೊಡೋದು ಹೇಗೆ..? ಇಲ್ಲಿದೆ ಮಾಹಿತಿ

Tractors Subsidy! ಸರ್ಕಾರದಿಂದ ನಿಮಗೆ 50% Tractor ಖರೀದಿಸಲು Subsidy ಸಿಗಲಿದೆ!

ಆಂತರಿಕ ಕಾಲ್​ ರೆಕಾರ್ಡರ್ ​(Call Record App)  ಇರದ ಸ್ಮಾರ್ಟ್​ಫೋನ್​ಗಳಲ್ಲಿ ಮೇ 11ರ ಬಳಿಕ ಯಾವುದೇ ಕರೆಗಳು ಸಂಗ್ರಹವಾಗುವುದಿಲ್ಲ. ಇನ್​ಬಿಲ್ಟ್​ ಕಾಲ್​ ರೆಕಾರ್ಡರ್​ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಶಿಯೋಮಿ, ಸ್ಯಾಮ್​ಸಂಗ್​, ಒಪ್ಪೋ, ವಿವೋ, ಒನ್​ಪ್ಲಸ್​ನಲ್ಲಿ ಇನ್​ಬಿಲ್ಟ್​ ಕಾಲ್​ ರೆಕಾರ್ಡರ್​ ಲಭ್ಯವಿದೆ.

Good News.. ಡ್ರೋನ್ ಬಳಕೆಗಾಗಿ 477 ಕೀಟನಾಶಕಗಳಿಗೆ ಗ್ರೀನ್ ಸಿಗ್ನಲ್..!

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡುವಂತೆ ಹೈಕೋರ್ಟ್‌ ಸೂಚನೆ