News

Good News ರಾಜ್ಯ ಸರ್ಕಾರದಿಂದ ರೈತರಿಗೆ ಬಂಪರ್‌ ಕೊಡುಗೆ!

21 November, 2023 3:54 PM IST By: Hitesh
ರೈತರಿಗೆ ಇರುವ ಪ್ರಮುಖ ಯೋಜನೆಗಳ ಸಂಪೂರ್ಣ ವಿವರ ಇಲ್ಲಿದೆ

ರಾಜ್ಯ ಸರ್ಕಾರ ರೈತರಿಗಾಗಿ ಪರಿಚಯಿಸಿದ ಪ್ರಮುಖ ಯೋಜನೆ ಹಾಗೂ ಕ್ರಮಗಳ ವಿವರ ಇಲ್ಲಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದ್ದು, ರೈತರಿಗೆ (important Farmers scheme For state government) ಹಲವು

ಬಂಪರ್‌ ಕೊಡುಗೆಗಳನ್ನು ನೀಡಿದೆ.

ರಾಜ್ಯದಲ್ಲಿ (Schemes for Farmers ) ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಐದು ಪ್ರಮುಖ ಗ್ಯಾರಂಟಿಗಳನ್ನು ಜಾರಿ ಮಾಡುವುದಕ್ಕೆ ಆದ್ಯತೆ ನೀಡಿತ್ತು.

ಆದರೆ, ಇದೇ ಸಂದರ್ಭದಲ್ಲಿ (Farmer Schemes of State Govt) ರೈತರಿಗೆ ಹಲವು ಪ್ರಮುಖ (Govt Schemes) ಯೋಜನೆಗಳನ್ನು ಪರಿಚಯಿಸಿದೆ. 

ಕೃಷಿ ಯಾಂತ್ರೀಕರಣಕ್ಕೆ 218 ಕೋಟಿ ರೂ.

ಇದು ವರೆಗೆ ವಿತರಣೆಯಾದ (Agricultural mechanization) ಯಂತ್ರೋಪಕರಣಗಳು
21,021

ಸರ್ಕಾರದಿಂದ ಬಿಡುಗಡೆಯಾದ ಅನುದಾನ: 218 ಕೋಟಿ ರೂಪಾಯಿ

ನೀರಾವರಿ ಯೋಜನೆ

Irrigation Scheme

45,643 ಹೇಕ್ಟರ್‌  ಕೃಷಿ ಭೂಮಿಗೆ ಸೂಕ್ಷ್ಮ ನೀರಾವರಿ ಸೌಲಭ್ಯ

44,476 ರೈತರಿಗೆ ಅನುಕೂಲ  

Farmers Pumpsets ಕೃಷಿ ಪಂಪ್‌ಸೆಟ್‌ಗಳಿಗೆ ಸೌರವಿದ್ಯುತ್ ಮೂಲಕ ವಿದ್ಯುತ್: ಸಿ.ಎಂ ಸೂಚನೆ!

ಕೃಷಿಭಾಗ್ಯ ಯೋಜನೆ: 100 ಕೋಟಿ ರೂ. ಅನುದಾನ

ರಾಜ್ಯದಲ್ಲಿ (Krishi Bhagya Yojana) ಬರ ಕಾಣಿಸಿಕೊಂಡು ರೈತರು ತೀವ್ರ ಸಂಕಷ್ಟದಲ್ಲಿ ಇದ್ದಾರೆ.

ಕೃಷಿಕರಿಗೆ ಬರಪರಿಸ್ಥಿತಿಯಲ್ಲಿ ನೆರವಾಗುವ ನಿಟ್ಟಿನಲ್ಲಿ 106 ಬರಪೀಡಿತ ತಾಲೂಕುಗಳಲ್ಲಿ 16,065 ಕೃಷಿ ಹೊಂಡಗಳನ್ನು ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ.

ಕೃಷಿಭಾಗ್ಯ (Water under Krishibhagya scheme) ಯೋಜನೆಯಡಿ ನೀರು ಸಂಗ್ರಹಣೆಗಾಗಿ ಕೃಷಿ(farm)ಹೊಂಡಗಳ ನಿರ್ಮಾಣ, ನೀರು

ಇಂಗದಂತೆ ತಡೆಯಲು ಪಾಲಿತಿನ್‌ ಹೊದಿಕೆ, ಹೊಂಡದಿಂದ (Polythene Cover, Diesel Pump Set )ನೀರೆತ್ತಲು ಡೀಸೆಲ್‌ (Diesel pump set) ಪಂಪ್‌

ಸೆಟ್‌, ನೀರನ್ನು ಬೆಳೆಗೆ ಹಾಯಿಸಲು ಲಘು ನೀರಾವರಿ ಸಾಧನಗಳು, ಕೃಷಿ ಹೊಂಡದ ಸುತ್ತಲೂ ತಂತಿಬೇಲಿ ನಿರ್ಮಾಣಕ್ಕಾಗಿ

ರಾಜ್ಯದ 24 ಜಿಲ್ಲೆಗಳ 106 ತಾಲೂಕುಗಳಲ್ಲಿ ರೂ.100 ಕೋಟಿ ವೆಚ್ಚದಲ್ಲಿ ಸಹಾಯಧನ ನೀಡಲಾಗುತ್ತಿದೆ. 

ಹೈನುಗಾರರಿಗೆ ಪ್ರೋತ್ಸಾಹ ಧನ

ಮುಖ್ಯಮಂತ್ರಿ (Incentives for dairy farmers) ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದು

6 ತಿಂಗಳ ಅವಧಿಯನ್ನು ಪೂರ್ಣಗೊಳಿಸಿದೆ. ಅಲ್ಲದೇ ಹೈನುಗಾರಿಕೆ (Dairy farming is a special incentive) ವಿಶೇಷ

ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೈಗೊಳ್ಳಲಾಗಿದೆ. 5 ರೂಪಾಯಿ ಪ್ರೋತ್ಸಾಹ ಧನದಿಂದ 24 ಲಕ್ಷಕ್ಕೂ

ಹೆಚ್ಚು ಹೈನುಗಾರರಿಗೆ ಅನುಕೂಲವಾಗಿದೆ ಎಂದು ಸರ್ಕಾರ ತಿಳಿಸಿದೆ.   

ಪಶು ಸಂಗೋಪನೆಗೆ ಆದ್ಯತೆ

ರಾಜ್ಯ (Animal husbandry) ಸರ್ಕಾರವು ಪಶು ಸಂಗೋಪನೆಗೆ ಆದ್ಯತೆ ನೀಡುತ್ತಿದೆ. ಈ ಹಂತದಲ್ಲಿ ಅನುಗ್ರಹ

ಯೋಜನೆಗೆ ಉತ್ತೇಜನ ನೀಡಲಾಗುತ್ತಿದೆ. ಆಕಸ್ಮಿಕವಾಗಿ ಸಾವನ್ನಪ್ಪುವ ಜಾನುವಾರುಗಳಿಗೆ (Farmers) ಪರಿಹಾರ ನೀಡಲಾಗುತ್ತಿದೆ.

5000 – ಕುರಿ, ಮೇಕೆಗಳಿಗೆ

10,000 – ಹಸು, ಎತ್ತು, ಎಮ್ಮೆಗಳಿಗೆ

ಜಾನುವಾರು ಲಸಿಕೀಕರಣ

2.6 ಕೋಟಿ ರೂಪಾಯಿ

ಜಾನುವಾರುಗಳಿಗೆ ಚರ್ಮಗಂಟು ರೋಗ (Lumpy skin disease ) ಸೇರಿದಂತೆ ಇತರೆ ರೋಗಗಳನ್ನು

ತಡೆಗಟ್ಟಲು ಲಸಿಕೆ ಹಾಕಿರುವುದಾಗಿ ಸರ್ಕಾರ ತಿಳಿಸಿದೆ.

ಕರ್ನಾಟಕದಲ್ಲಿ ನಿಲ್ಲದ ಬರ, ಪ್ರವಾಹ ಕಾರಣವೇನು, ಬರ ನಿರಂತರವೇ ?

ಕೃಷಿಯಂತ್ರಧಾರೆಗೆ ಅನುದಾನ!

ರಾಜ್ಯದಲ್ಲಿ (Grants for agricultural machinery) ಕೃಷಿಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸುವ ಉದ್ದೇಶದಿಂದ ತಲಾ 1 ಕೋಟಿ ರೂಪಾಯಿ

ವೆಚ್ಚದಲ್ಲಿ 100 ಹೈ-ಟೆಕ್ ಹಾರ್ವೆಸ್ಟರ್‌ ಹಬ್‌ಗಳ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ

ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.  

ರಾಗಿ ಸಂಗ್ರಹಕ್ಕೆ ಆದ್ಯತೆ

ರಾಜ್ಯ ಸರ್ಕಾರವು ರಾಗಿ (Promotion of millet collection) ಸಂಗ್ರಹಕ್ಕೆ ಉತ್ತೇಜನ ನೀಡುತ್ತಿದ್ದು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ

ರೈತರಿಂದ 4 ಲಕ್ಷ ಮೆಟ್ರಿಕ್ ಟನ್ ರಾಗಿ ಸಂಗ್ರಹಿಸಲು ಅಗತ್ಯವಿರುವ 80 ಲಕ್ಷ ಗೋಣಿಚೀಲಗಳ ಖರೀದಿಗೆ ರೂ. 76 ಕೋಟಿ

ಅನುದಾನ ಒದಗಿಸಲು  ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಿದೆ.  

Gkvk ಬೆಂಗಳೂರು ಕೃಷಿ ಮೇಳ 2023: ಈ ಬಾರಿಯ ವಿಶೇಷತೆ ಇಲ್ಲಿದೆ!

ರೈತರಿಗೆ ಆನ್‌ಲೈನ್‌ನ ಮೂಲಕ ಪರಿಹಾರ

ಈ ಬಾರಿ ರಾಜ್ಯದಲ್ಲಿ ಕಾಣಿಸಿಕೊಂಡ ಬರದಿಂದ ಜನ ಸಂಕಷ್ಟದಲ್ಲಿ ಇದ್ದಾರೆ.

ಈ ಸಂದರ್ಭದಲ್ಲಿ ಆನ್‌ಲೈನ್‌ ಮೂಲಕವೇ ರೈತರಿಗೆ ಬೆಳೆ ಪರಿಹಾರ (Crop solution for farmers through online) ತಲುಪಲಿದ್ದು, ಅದರ ಮಾಹಿತಿ

ಬಿಟ್ಟು ಹೋದರೆ ಮ್ಯಾನ್ಯುವಲ್‌ ಆಗಿ ನೀಡಲು ಸಾಧ್ಯವಿಲ್ಲ.

ಹೀಗಾಗಿ ಶೇ.100ರಷ್ಟು ಎಲ್ಲಾ ರೈತರ ಬೆಳೆ ಸಮೀಕ್ಷೆ ಮಾಹಿತಿಯನ್ನು ಒಂದು ವಾರದಲ್ಲಿ 'ಫ್ರುಟ್ಸ್‌' ತಂತ್ರಾಂಶದಲ್ಲಿ ನಮೂದಿಸಬೇಕು

ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.

ಬಗರ್‌ ಹುಕುಂ ಸಾಗುವಳಿ

ಅನಧಿಕೃತ  (Cultivation of Bagar Hukum) ಸಾಗುವಳಿಗಳನ್ನು ಸಕ್ರಮಗೊಳಿಸುವಂತೆ ಕೋರಿ

ಸಲ್ಲಿಸಿರುವ 9.90 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ.

15 ವರ್ಷಗಳಿಂದ ಸಾಗುವಳಿ ಮಾಡಿರುವುದನ್ನು ಖಾತರಿಪಡಿಸಿಕೊಂಡ ಬಳಿಕವೇ ಮಂಜೂರಾತಿ ಆದೇಶ ನೀಡುವುದಾಗಿ

ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. 

Krishi Bhagya ಕೃಷಿ ಭಾಗ್ಯ ಎಂದರೇನು, ರೈತರಿಗೆ ಏನೆಲ್ಲ ಉಪಯೋಗ ?

ಒಂದು ಲಕ್ಷ ಮೆಟ್ರಿಕ್‌ಟನ್‌ ಮೆಕ್ಕೆಜೋಳ

ಕರ್ನಾಟಕ ಹಾಲು ಮಹಾ ಮಂಡಳಿ (Karnataka Milk Mahamandal) ವತಿಯಿಂದ ಪಶು ಆಹಾರ ತಯಾರಿಕೆಗಾಗಿ

ಒಂದು ಲಕ್ಷ ಮೆಟ್ರಿಕ್‌ ಟನ್‌ ಮೆಕ್ಕೆಜೋಳವನ್ನು ರೈತರಿಂದ (Metricton Maize) ನೇರವಾಗಿ ಬೆಂಬಲ (Support price) ಬೆಲೆ

ಮೂಲದರಕ್ಕೆ ₹160ರಂತೆ ಉತ್ತೇಜನ ದರ ನೀಡಿ ಪ್ರತಿ ಕ್ವಿಂಟಾಲ್‌ಗೆ ₹2,250ರಂತೆ ಖರೀದಿಸಲು ಉದ್ದೇಶಿಸಲಾಗಿದೆ.

ನವೆಂಬರ್‌ 13ರಿಂದ ಮೆಕ್ಕೆ(Maize)ಜೋಳ ಖರೀದಿಗಾಗಿ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. 

ಕೃಷಿ ಮೇಳ 2023: ರೈತರಿಗೆ ಬೀಜಸಂತೆ, ಬೀಜೋತ್ಪಾದನೆ ಮಾಹಿತಿ!