1. ಸುದ್ದಿಗಳು

ಏಪ್ರೀಲ್ 9 ರಿಂದ ಐಪಿಎಲ್ ಪಂದ್ಯ ಆರಂಭ, ಮೇ 30ಕ್ಕೆ ಅಹ್ಮದಾಬಾದ್ ನಲ್ಲಿ ಫೈನಲ್

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಆರಂಭವಾಗುವ ದಿನಾಂಕದ ಅಧಿಕೃತ ಘೋಷಣೆ ಮಾಡಲಾಗಿದೆ. ಏಪ್ರೀಲ್ 9 ರಂದು ಮೊದಲ ಪಂದ್ಯ ಚೆನ್ನೈ ನಲ್ಲಿ ನಡೆಯಲಿದೆ, ಪಂದ್ಯಾವಳಿಯ ಫೈನಲ್ ಪಂದ್ಯ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಏಪ್ರಿಲ್ 9ರಂದು ಆರಂಭವಾಗಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಐದು ಬಾರಿಯ ಹಾಗೂ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಎದುರು ಆರ್‌ಸಿಬಿ ಪೈಪೋಟಿ ನಡೆಸಲಿದೆ.

ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಬಿಸಿಸಿಐ ಈ ಬಾರಿ ಭಾರತದ 6 ನಗರಗಳನ್ನು ಮಾತ್ರವೇ ಪಂದ್ಯಗಳ ಆಯೋಜನೆಗೆ ಆಯ್ಕೆ ಮಾಡಿಕೊಂಡಿದೆ. ಬೆಂಗಳೂರು, ಡೆಲ್ಲಿ, ಕೋಲ್ಕತಾ, ಮುಂಬೈ, ಚೆನ್ನೈ ಮತ್ತು ಅಹ್ಮದಾಬಾದ್‌ನಲ್ಲಿ ಪಂದ್ಯಗಳು ನಡೆಯಲಿದೆ.

ತನ್ನ ಚೊಚ್ಚಲ ಐಪಿಎಲ್‌ ಕಿರೀಟ ಸಲುವಾಗಿ ಭಾರಿ ಯೋಜನೆ ಹಾಕಿಕೊಂಡಿರುವ ಆರ್‌ಸಿಬಿ, ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆದ ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕೋಟಿ ಕೋಟಿ ರೂ. ಹಣದ ಹೊಳೆ ಹರಿಸಿ ಬಲಿಷ್ಠ ಆಟಗಾರರನ್ನು ಖರೀದಿ ಮಾಡಿದೆ.

  • 01. 9 ಏಪ್ರಿಲ್, ರಾತ್ರಿ7.30: ಮುಂಬೈ ಇಂಡಿಯನ್ಸ್ vs ಆರ್‌ಸಿಬಿ (ಸ್ಥಳ: ಚೆನ್ನೈ)
  • 02. 14 ಏಪ್ರಿಲ್, ರಾತ್ರಿ7.30: ಸನ್‌ರೈಸರ್ಸ್‌ ಹೈದರಾಬಾದ್‌ vs ಆರ್‌ಸಿಬಿ (ಸ್ಥಳ: ಚೆನ್ನೈ)
  • 03. 18 ಏಪ್ರಿಲ್, ಮಧ್ಯಾಹ್ನ3.30: ಕೋಲ್ಕತಾ ನೈಟ್‌ ರೈಡರ್ಸ್‌ vs ಆರ್‌ಸಿಬಿ (ಸ್ಥಳ: ಚೆನ್ನೈ)
  • 04. 22 ಏಪ್ರಿಲ್, ರಾತ್ರಿ7.30: ರಾಜಸ್ಥಾನ್‌ ರಾಯಲ್ಸ್‌ vs ಆರ್‌ಸಿಬಿ (ಸ್ಥಳ: ಮುಂಬೈ)
  • 05. 25 ಏಪ್ರಿಲ್, ಮಧ್ಯಾಹ್ನ3.30: ಚೆನ್ನೈ ಸೂಪರ್‌ ಕಿಂಗ್ಸ್‌ vs ಆರ್‌ಸಿಬಿ (ಸ್ಥಳ: ಮುಂಬೈ)
  • 06. 27 ಏಪ್ರಿಲ್, ರಾತ್ರಿ7.30: ಡೆಲ್ಲಿ ಕ್ಯಾಪಿಟಲ್ಸ್‌ vs ಆರ್‌ಸಿಬಿ (ಸ್ಥಳ: ಅಹ್ಮದಾಬಾದ್)
  • 07. 30 ಏಪ್ರಿಲ್, ರಾತ್ರಿ7.30: ಪಂಜಾಬ್‌ ಕಿಂಗ್ಸ್‌ vs ಆರ್‌ಸಿಬಿ (ಸ್ಥಳ: ಅಹ್ಮದಾಬಾದ್)
  • 08. 3 ಮೇ, ರಾತ್ರಿ7.30: ಕೋಲ್ಕತಾ ನೈಟ್‌ ರೈಡರ್ಸ್‌ vs ಆರ್‌ಸಿಬಿ (ಸ್ಥಳ: ಅಹ್ಮದಾಬಾದ್)
  • 09. 6 ಮೇ, ರಾತ್ರಿ7.30: ಪಂಜಾಬ್‌ ಕಿಂಗ್ಸ್‌ vs ಆರ್‌ಸಿಬಿ (ಸ್ಥಳ: ಅಹ್ಮದಾಬಾದ್)
  • 10. 9 ಮೇ, ರಾತ್ರಿ7.30: ಸನ್‌ರೈಸರ್ಸ್‌ ಹೈದರಾಬಾದ್ vs ಆರ್‌ಸಿಬಿ (ಸ್ಥಳ: ಕೋಲ್ಕತಾ)
  • 11. 14 ಮೇ, ರಾತ್ರಿ7.30: ಡೆಲ್ಲಿ ಕ್ಯಾಪಿಟಲ್ಸ್‌ vs ಆರ್‌ಸಿಬಿ (ಸ್ಥಳ: ಕೋಲ್ಕತಾ)
  • 12. 16 ಮೇ, ಮಧ್ಯಾಹ್ನ3.30: ರಾಜಸ್ಥಾನ್ ರಾಯಲ್ಸ್‌ vs ಆರ್‌ಸಿಬಿ (ಸ್ಥಳ: ಕೋಲ್ಕತಾ)
  • 13. 20 ಮೇ, ರಾತ್ರಿ7.30: ಮುಂಬೈ ಇಂಡಿಯನ್ಸ್‌ vs ಆರ್‌ಸಿಬಿ (ಸ್ಥಳ: ಕೋಲ್ಕತಾ)
  • 14. 23 ಮೇ, ರಾತ್ರಿ7.30: ಚೆನ್ನೈ ಸೂಪರ್‌ ಕಿಂಗ್ಸ್‌ vs ಆರ್‌ಸಿಬಿ (ಸ್ಥಳ: ಕೋಲ್ಕತಾ)

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪೈನಲ್ ಪಂದ್ಯ ಮೇ 30ರಂದು ನಡೆಯಲಿದೆ. ಇದಕ್ಕೂ ಮುನ್ನ ಕ್ವಾಲಿಫೈಯರ್‌-1, ಎಲಿಮಿನೇಟರ್‌ ಮತ್ತು ಕ್ವಾಲಿಫೈಯರ್‌-2 ಪಂದ್ಯಗಳಿಗೂ ಕೂಡ ಮೊಟೆರಾ ಕ್ರೀಡಾಂಗಣವೇ ಆತಿಥ್ಯ ವಹಿಸಲಿದೆ. ಈ ಪಂದ್ಯಗಳು ಕ್ರಮವಾಗಿ ಮೇ 25, 25 ಮತ್ತು 28ರಂದು ನಡೆಯಲಿವೆ.

Published On: 09 March 2021, 07:47 PM English Summary: BCCI announces schedule for vivo IPL 2021

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.