News

Bangaluru: ಮೆಟ್ರೋ ನೇಮಕಾತಿ; 40 ಸಾವಿರ ವೇತನ!

06 May, 2022 12:48 PM IST By: Kalmesh T
Bangaluru: Metro Recruitment; 40 thousand wages!

ಉದ್ಯೋಗಾವಕಾಶಕ್ಕಾಗಿ ಹುಡುಕುತ್ತಿರುವ ಯುವಕರಿಗೆ ಇಲ್ಲಿದೆ ಒಂದು ಅನುಕೂಲಕರ ಮಾಹಿತಿ. ಬೆಂಗಳೂರು ಮೆಟ್ರೋದಲ್ಲಿ ಅಗ್ನಿಶಾಮಕ ಹುದ್ದೆಗಳ ನೇಮಕಾತಿ ಆರಂಭಿಸಿದೆ. 

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಅಗ್ನಿಶಾಮಕ ನಿರೀಕ್ಷಕರು ಹುದ್ದೆಗಳ ಭರ್ತಿಗೆ Notification ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿರಿ:

ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆ ಅಮೂಲ್‌ನಲ್ಲಿ ಭಾರೀ ನೇಮಕಾತಿ..ಪದವಿ ಹೊಂದಿದವರಿಗೆ ಭರ್ಜರಿ ಅವಕಾಶ

ಗ್ರಾಮಲೆಕ್ಕಿಗರ ಹುದ್ದೆಗೆ ನೇಮಕಾತಿ: 42,000 ಸಂಬಳ !

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) ಗುತ್ತಿಗೆ ಆಧಾರದ ಮೇಲೆ ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದಲ್ಲಿ ಅಗ್ನಿಶಾಮಕ ನಿರೀಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಕಂಡ ಹೆಚ್ಚಿನ ಮಾಹಿತಿಗಳನ್ನು ತಿಳಿದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಉದ್ಯೋಗ ಸಂಸ್ಥೆ - ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ
ಹುದ್ದೆ ಹೆಸರು - ಅಗ್ನಿಶಾಮಕ ನಿರೀಕ್ಷಕರು
ಹುದ್ದೆಗಳ ಸಂಖ್ಯೆ - 06

ವಿದ್ಯಾರ್ಹತೆ (Education)
- ಬಿಇ / ಬಿ.ಟೆಕ್ ಇನ್ ಫೈಯರ್ ಇಂಜಿನಿಯರಿಂಗ್ ಜತೆಗೆ 2 ವರ್ಷ ಕಾರ್ಯಾನುಭವ. ಅಥವಾ - ಬಿಇ (ಮೆಕ್ಯಾನಿಕಲ್) / ಬಿಇ (ಇಲೆಕ್ಟ್ರಿಕಲ್) ಜತೆಗೆ 1 ವರ್ಷ ಅಗ್ನಿ ಸುರಕ್ಷತೆ ವಿಷಯ ಓದಿದ ಪ್ರಮಾಣಪತ್ರ ಇರಬೇಕು. ಜತೆಗೆ 2 ವರ್ಷ ಕಾರ್ಯಾನುಭವ. ಅಥವಾ - ಬಿಎಸ್ಸಿ (ಅಗ್ನಿ ಮತ್ತು ಸುರಕ್ಷತೆ) / ಬಿಎಸ್ಸಿ (3 ವರ್ಷ ರಸಾಯನಶಾಸ್ತ್ರ ಮತ್ತು 1 ವರ್ಷ ಅಗ್ನಿ ಮತ್ತು ಸುರಕ್ಷತೆ ಕೋರ್ಸ್‌ ಓದಿದ ಪ್ರಮಾಣ ಪತ್ರ ಹೊಂದಿರಬೇಕು. ಜತೆಗೆ 3 ವರ್ಷ ಕಾರ್ಯಾನುಭವ ಅರ್ಹತೆ ಹೊಂದಿರಬೇಕು.

KPSC Recruitment: ಸಹಾಯಕ ಟೌನ್‌ ಪ್ಲಾನರ್‌ ಅರ್ಜಿ ಆಹ್ವಾನ.. 62,600 ರೂ ವೇತನ

Air India ನೇಮಕಾತಿ: ಈಗಲೇ ಅರ್ಜಿ ಸಲ್ಲಿಸಿ!

ವಯೋಮಿತಿ (Age Limit): ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ, ಗರಿಷ್ಠ 35 ವರ್ಷ ವಯಸ್ಸು ನಿಗದಿಪಡಿಸಲಾಗಿದೆ.

ವೇತನ ವಿವರ : ಮಾಸಿಕ ರೂ.40,000. 

ದೈಹಿಕ ಸಾಮರ್ಥ್ಯ ವಿವರ
ಎತ್ತರ : 167 ಸೆಂ.ಮೀ
ತೂಕ: 51 ಕೆಜಿ ಕನಿಷ್ಠ
ಎದೆ ಸುತ್ತಳತೆ : 81-86 ಸೆಂ.ಮೀ
ದೃಷ್ಠಿ ಅರ್ಹತೆ : 6/6

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 05-05-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 03-06-2022 ರ ಸಂಜೆ 04 ಗಂಟೆವರೆಗೆ.

ಅಗ್ನಿಶಾಮಕ ನಿರೀಕ್ಷಕ ಹುದ್ದೆಗಳಿಗೆ ಅಭ್ಯರ್ಥಿಗಳನ್ನು 3 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ.

TCS ನೇಮಕಾತಿ.. ಪದವಿ ಹೊಂದಿದ Freshersಗೆ ಇಲ್ಲಿದೆ ಸುವರ್ಣಾವಕಾಶ

NDDB ನೇಮಕಾತಿ: ಮಾ. 1,82,200 ಸಂಬಳ!

ಅರ್ಜಿ ಸಲ್ಲಿಸುವ ವಿಧಾನ
- ಬಿಎಂಆರ್‌ಸಿ ಅಧಿಕೃತ ವೆಬ್‌ಸೈಟ್‌ http://projectrecruitn.bmrc.co.in/ ಗೆ ಭೇಟಿ ನೀಡಿ.
- ಈ ಪುಟದಲ್ಲಿ ಅಪ್ಲಿಕೇಶನ್‌ ಫಾರ್ಮ್‌ ಅನ್ನು ಆನ್‌ಲೈನ್ ಮೂಲಕ ಭರ್ತಿ ಮಾಡಿ.
- ನಂತರ ಪೂರ್ಣಗೊಂಡ ಅರ್ಜಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ.
- ನಂತರ ಅರ್ಜಿಯ ಹಾರ್ಡ್‌ ಕಾಪಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ.

ಅರ್ಜಿ ತಲುಪಿಸಬೇಕಾದ ವಿಳಾಸ
General Manager (HR),
Bangalore Metro Rail Corporation Limited,
3rd Floor, BMTC Complex, K.H. Road, Shanthinagar, Bengaluru 560027.

ಅರ್ಜಿಯನ್ನು ಸ್ಪೀಡ್ ಪೋರ್ಟ್‌ ಅಥವಾ ಕೊರಿಯರ್ ಮೂಲಕ ತಲುಪಿಸಬೇಕು.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಅಧಿಕೃತ ವೆಬ್‌ಸೈಟ್ : www.bmrc.co.in/Career

NAFED ಮಹಾರಾಷ್ಟ್ರದಲ್ಲಿ ಈರುಳ್ಳಿ ಖರೀದಿಯನ್ನು ಪ್ರಾರಂಭಿಸಿದೆ

ಭರ್ಜರಿ ಸುದ್ದಿ: ಈ ಯೋಜನೆಯಲ್ಲಿ ಟ್ರ್ಯಾಕ್ಟರ್‌ ಕೊಳ್ಳಲು ಸರ್ಕಾರವೇ ದುಡ್ಡು ನೀಡುತ್ತೆ