Krishi Jagran Kannada
Menu Close Menu

ಅಡಿಕೆ ಬೆಳಗಾರರಿಗೆ ಸಿಹಿಸುದ್ದಿ : ಹಳೆಯ ಅಡಿಕೆ ಕೆಜಿಗೆ 400 ರೂಪಾಯಿ ಬೆಲೆ

Saturday, 17 October 2020 01:03 PM

ಅಡಕೆ ಬೆಳಗಾರರಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ಅಡಿಕೆ ದರ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ.  ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ ದಿಢೀರ್ ಏರಿಕೆಯಾಗುತ್ತಿದ್ದು, ಹೊಸ ಅಡಿಕೆ, ಹಳೆಯ ಅಡಿಕೆ, ಡಬಲ್ ಚೋಲ್ ಅಡಿಕೆ ಬೆಲೆಯಲ್ಲಿಯೂ ಸಹ ಹೆಚ್ಚಳ ಕಂಡುಬಂದಿದೆ. ಹಂಗಾಮಿಗೆ ಸರಿಯಾಗಿ ಉತ್ತಮ ದರದ ನಿರೀಕ್ಷೆಯಲ್ಲಿದ್ದ ಅಡಕೆ ಬೆಳೆಗಾರರು ಇದರಿಂದ ಖುಷಿಯಾಗಿದೆ.

ಗುರುವಾರ ಹೊಸ ಅಡಿಕೆಗೆ 330 ರೂಪಾಯಿ, ಹಳೆಯ ಅಡಿಕೆಗೆ 383 ರೂಪಾಯಿ, ಡಬಲ್ ಚೋಲ್ ಗೆ 400 ರೂಪಾಯಿ ಇತ್ತು. ಶುಕ್ರವಾರ ಒಂದೇ ದಿನ ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಶುಕ್ರವಾರ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ 330 ರೂಪಾಯಿ, ಹಳೆಯ ಅಡಿಕೆಗೆ 400 ರೂಪಾಯಿ ಡಬಲ್ ಚೋಲ್ ಗೆ 410 ರೂಪಾಯಿ ಏರಿಕೆಯಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಅಡಿಕೆ ಬೆಲೆ ಏರಿಕೆಯಾಗಿದ್ದು ಇದೇ ಮೊದಲು ಎಂದು ಅಡಿಕೆ ಬೆಳೆಗಾರರು ಆಡಿಕೊಳ್ಳುತ್ತಿದ್ದಾರೆ.

ಕಳೆದ ಒಂದು ವಾರದಿಂದ ಖಾಸಗಿ ವಲಯದಲ್ಲಿಯೂ ಅಡಿಕೆ ದಾರಣೆ ಏರಿಕೆಯಾಗುತ್ತಿದೆ.ಇದೀಗ ಕ್ಯಾಂಪ್ಕೋ ಸಹ ಬೆಲೆ ಏರಿಸಿದ್ದು,  ಈ ವಾರದಲ್ಲಿ  ಹೊಸ ಅಡಿಕೆಗೆ ಪ್ರತಿ ಕೆಜಿಗೆ 40 ರೂಪಾಯಿ, ಹೊಸರ ಡಬಲ್ ಚೋಲ್ ಅಡಿಕಗೆ 10 ರೂಪಾಯಿ ಹೆಚ್ಚಿನ ಧಾರಣೆ ನೀಡಿದೆ. ಶುಕ್ರವಾರ ಮತ್ತೆ ಹೊಸ ಅಡಿಕೆ ಚೋಲ್ಗೆ 15, ಡಬಲ್ ಚೋಲ್ ಗೆ 10 ರಷ್ಟು ಬೆಲೆ ಹೆಚ್ಚಿಸಿದೆ. ಹಬ್ಬದ ಸಂದರ್ಭದಲ್ಲಿ ಈ ರೀತಿಯ ಬೆಲೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಸಾರ್ವಕಾಲಿಕ ಗರಿಷ್ಠ ಬೆಲೆ ಸಿಕ್ಕಿಂತಾಗಿದೆ.

ಕೊರೊನಾ ಲಾಕ್ ಡೌನ್ ಬಳಿಕ ದೇಶಿ ಅಡಿಕೆಗೆ ಭಾರೀ ಪ್ರಮಾಣದಲ್ಲಿ ಬೇಡಿಕೆ ಬಂದಿದೆ. ಅಷ್ಟೇ ಅಲ್ಲ, ಉತ್ತರ ಭಾರತದಲ್ಲಿಯಊ ಅಡಿಕೆಗೆ ಹೆಚ್ಚು ಬೇಡಿಕೆ ಬಂದಿದೆ. ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಷ್ಠು ಅಡಿಕೆ ಪೂರೈಕೆಯಾಗುತ್ತಿಲ್ಲ. ಇತ್ತೀಚೆಗೆ ಮಳೆಯಿಂದಾಗಿ ಅಡಿಕೆ ಬೆಳೆ ರಾಶಿಯಲ್ಲಿ ವಿಳಂಬವಾಗಿದೆ. ಈ ವರ್ಷ ಇಳುವರಿಯೂ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವುದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಹೆಚ್ಚಾಗಿದೆ. ಹಬ್ಬಗಳು ಬಂದಿರುವುದರಿಂದ ಅಡಿಕೆಯಲ್ಲಿ ಬೆಲೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

arecanut price all time high farmers happy arecanut price hike arecanut

Share your comments

Krishi Jagran Kannada Subscription

CopyRight - 2020 Krishi Jagran Media Group. All Rights Reserved.