ಕಳೆದ ಮೂರು ತಿಂಗಳಲ್ಲಿ 5500 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಿ, ಚಾಲನೆಯನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪಿಎಂ ಕಿಸಾನ್ ಯೋಜನೆಯಡಿ ಬರೋಬ್ಬರಿ 42 ಕೋಟಿ ಮೌಲ್ಯದ ಪ್ರಯೋಜನ ಪಡೆದ ಅನರ್ಹ ರೈತರು!
ಬೆಳಗಾವಿ ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆಯ ವತಿಯಿಂದ ಸುವರ್ಣ ವಿಧಾನಸೌಧದ ಆವರಣದಲ್ಲಿ ಆಯೋಜಿಸಿರುವ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಅನಾವರಣಗೊಳಿಸಿ ಮಾತನಾಡಿದರು.
ಈ ಬಾರಿಯ ಬಜೆಟ್‌ನಲ್ಲಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ರಚಿಸಲು ಅವಕಾಶ ಕಲ್ಪಿಸಲಾಗಿದೆ. ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲು ತೀರ್ಮಾನ ಮಾಡಲಾಗಿದೆ.
ಈ ಭಾಗದ ಬೃಹತ್ ಯೋಜನೆಗಳು ಹಾಗೂ ಅಭಿವೃದ್ಧಿಗೆ ಅಗತ್ಯವಿರುವ ವಿಶೇಷ ಅನುದಾನ ಹಾಗೂ ಕಾರ್ಯನೀತಿಯನ್ನು ರೂಪಿಸಲು ಮಂಡಳಿ ಕೆಲಸ ಮಾಡಲಿದೆ ಎಂದರು.
Green manure: ಹಸಿರು ಗೊಬ್ಬರದ ಪ್ರಯೋಜನ ಹಾಗೂ ಗುಣಗಳು
ಕಿತ್ತೂರು ಕರ್ನಾಟಕ ಕೃಷಿ, ನೀರಾವರಿ, ಕೃಷಿ ಆಧಾರಿತ ಉದ್ಯಮಗಳಿಗೆ, ಸಕ್ಕರೆ ಕಾರ್ಖಾನೆಗಳಿಗೆ, ಇತರೆ ವ್ಯವಹಾರಕ್ಕೆ, ಶೈಕ್ಷಣಿಕ ಕೇಂದ್ರಗಳಿಗೆ ಅತ್ಯಂತ ಹೆಸರುವಾಸಿ.
ಸಮೃದ್ಧ ನಾಡನ್ನು ಯೋಜನಾಬದ್ಧವಾಗಿ ಇನ್ನಷ್ಟು ಅಭಿವೃದ್ಧಿ ಮಾಡಿ ಈ ಭಾಗಕ್ಕೆ ದೊರೆಯಬೇಕಾದ ಎಲ್ಲಾ ಬೃಹತ್ ಯೋಜನೆಗಳನ್ನು, ಮೂಲಸೌಲಭ್ಯ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳನ್ನು ತರುವ ಮೂಲಕ ನಿರಂತರವಾಗಿ ಅಭಿವೃದ್ಧಿ ಸಮೃದ್ದಿ ಆಗಲಿ ಎಂದು ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ಜನರ ಆಶೋತ್ತರಗಳ ಈಡೇರಿಕೆ
ಪ್ರತಿಮೆ ಸ್ಥಾಪಿಸುವ ಪ್ರೇರಣೆ ಜನರಿಂದ ಬಂದಿದೆ. ಜನರ ಆಶೋತ್ತರಗಳನ್ನು ಈಡೇರಿಸುವ ಕೆಲಸ ಮಾಡಿದೆ. ಈ ಭಾಗದ ನೀರಾವರಿಗೆ ಅತಿ ಹೆಚ್ವು ಪ್ರಾಮುಖ್ಯತೆ ನೀಡಿದೆ.
ಪ್ಯಾನ್- ಆಧಾರ್ ಕಾರ್ಡ್ ಅಷ್ಟೇ ಅಲ್ಲ ರೇಷನ್ ಕಾರ್ಡ್‌ನೊಂದಿಗೂ ಜೋಡಣೆ ಮಾಡಬೇಕು!
ಕೃಷ್ಣಾ ಮೇಲ್ದಂಡೆಯ ಮೂರನೇ ಹಂತ, ನೆನೆಗುದಿಗೆ ಬಿದ್ದ ಯೋಜನೆಗಳನ್ನು ಪೂರ್ಣ ಮಾಡಿದೆ. ರೈತರಿಗೆ ಏಕರೂಪ ದರವನ್ನು ನೀಡಲು ಕಳೆದ 7-8 ವರ್ಷಗಳಿಂದ ಪ್ರಯತ್ನ ಮಾಡಲಾಗಿತ್ತು.
ನಮ್ಮ ಸರ್ಕಾರ ನಿರ್ಣಯ ಮಾಡಿ ಚೆಕ್ ವಿತರಣೆ ಮಾಡಲಾಗುತ್ತಿದೆ. ಕಳಸಾ ಬಂಡೂರಿ ಯೋಜನೆಗೆ ಡಿಪಿಆರ್ ಸಿದ್ಧವಾಗಿದೆ. ಟೆಂಡರ್ ಕರೆಯಲಾಗಿದ್ದು. ಮುಂದಿನ ದಿನಗಳಲ್ಲಿ ನಾವೇ ಚಾಲನೆ ನೀಡುತ್ತೇವೆ ಎಂದರು.