News

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಲ್ಲಿ ನೇಮಕಾತಿ; ಇಂದೇ ಅರ್ಜಿ ಸಲ್ಲಿಸಿ!

27 May, 2022 5:33 PM IST By: Kalmesh T
Appointment to All India Technical Education Board

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು ಖಾಲಿ ಇರುವ ಅಧ್ಯಕ್ಷ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಆನ್ಲೈ‌ನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 13 ಕೊನೆಯ ದಿನವಾಗಿದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (All India Council for Technical Education - AICTE) ಖಾಲಿ ಇರುವ ಅಧ್ಯಕ್ಷ (Chairman) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈ‌ನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 13 ಕೊನೆಯ ದಿನವಾಗಿದೆ.  ಹೆಚ್ಚಿನ ಮಾಹಿತಿಗೆ https://www.aicte-india.org/ ಗೆ ಭೇಟಿ ನೀಡಬಹುದು. 

ಇದನ್ನೂ ಓದಿರಿ: NDDB ನೇಮಕಾತಿ: ಮಾ. 1,82,200 ಸಂಬಳ!

TCS ನೇಮಕಾತಿ.. ಪದವಿ ಹೊಂದಿದ Freshersಗೆ ಇಲ್ಲಿದೆ ಸುವರ್ಣಾವಕಾಶ

ಶೈಕ್ಷಣಿಕ ವಿದ್ಯಾರ್ಹತೆ:  AICTE ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ  ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.

ವಯೋಮಿತಿ: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಗರಿಷ್ಠ 60 ವಯೋಮಿತಿಯನ್ನು ಹೊಂದಿರಬೇಕು.

 ಹೆಣ್ಣುಮಕ್ಕಳಿಗೆ ಭರ್ಜರಿ ಕೊಡುಗೆ: ಕಾಲೇಜು ಪ್ರವೇಶಕ್ಕೆ 25,000 ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ₹8 ಲಕ್ಷ ನೀಡಲಿದೆ ಸರ್ಕಾರ!

Atal Pension Yojana: 4 ಕೋಟಿಗೂ ಹೆಚ್ಚು ಜನರಿಗೆ ಲಾಭವಾದ ಈ ಯೋಜನೆಯ ಲಾಭ ನೀವು ಪಡೆದಿದ್ದೀರಾ?

ಆಯ್ಕೆ ಪ್ರಕ್ರಿಯೆ: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು   ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ವಿಧಿಸಲಾಗಿಲ್ಲ.

ವೇತನ ವಿವರ: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ  ಮಾಸಿಕ  ₹2,55,900 ತನಕ ವೇತನ ದೊರೆಯಲಿದೆ.

ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‌ಗಳಿಗೆ ಅಧಿಸೂಚನೆ: ಭಾರತೀಯ ಸೇನೆಯು (Indian Army) ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‌ಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

 136ನೇ ಬ್ಯಾಚ್‌ ನ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‌ಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ.  ಒಟ್ಟು 40 ವಿವಿಧ ಹುದ್ದೆಗಳಿಗೆ  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 9, 2022 ಆಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್, joinindianarmy.nic.in ಮೂಲಕ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್ ಹೊರತು ಬೇರೆ ಯಾವುದೇ ಮಾದರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. 136ನೇ ಬ್ಯಾಚ್‌ ನ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‌ 2023ನೇ ಇಸವಿಯ ಜನವರಿಯಲ್ಲಿ ಪ್ರಾರಂಭವಾಗಲಿದೆ.

Recruitment: ONGCಯ 922 ಹುದ್ದೆಗಳಿಗೆ ಅರ್ಜಿ ಆಹ್ವಾನ

KPSC Recruitment: ಸಹಾಯಕ ಟೌನ್‌ ಪ್ಲಾನರ್‌ ಅರ್ಜಿ ಆಹ್ವಾನ.. 62,600 ರೂ ವೇತನ

136ನೇ ಬ್ಯಾಚ್‌ ನ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‌ ನಲ್ಲಿ ಯಾವೆಲ್ಲ ವಿಭಾಗಗಳಲ್ಲಿ 40 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.

ಸಿವಿಲ್:  9 ಹುದ್ದೆಗಳು

ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್/ ಕಂಪ್ಯೂಟರ್ ಟೆಕ್ನಾಲಜಿ/ M Sc ಕಂಪ್ಯೂಟರ್ ಸೈನ್ಸ್: 8 ಹುದ್ದೆಗಳು

ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್:  3 ಹುದ್ದೆಗಳು

ಮಾಹಿತಿ ತಂತ್ರಜ್ಞಾನ: 3 ಹುದ್ದೆಗಳು

ವಾಸ್ತುಶಿಲ್ಪ:  1 ಹುದ್ದೆ

ಯಾಂತ್ರಿಕ:  6 ಹುದ್ದೆಗಳು

ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ: 1 ಹುದ್ದೆ

ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ: 3 ಹುದ್ದೆಗಳು

Recruitment: ONGCಯ 922 ಹುದ್ದೆಗಳಿಗೆ ಅರ್ಜಿ ಆಹ್ವಾನ

KPSC Recruitment: ಸಹಾಯಕ ಟೌನ್‌ ಪ್ಲಾನರ್‌ ಅರ್ಜಿ ಆಹ್ವಾನ.. 62,600 ರೂ ವೇತನ

ಎಲೆಕ್ಟ್ರಾನಿಕ್ಸ್:  1 ಹುದ್ದೆ

ಏರೋನಾಟಿಕಲ್/ಏರೋಸ್ಪೇಸ್:  1 ಹುದ್ದೆ

ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಸ್ಟ್ರುಮೆಂಟೇಶನ್/ಇನ್‌ಸ್ಟ್ರುಮೆಂಟೇಶನ್:  1 ಹುದ್ದೆ

ಉತ್ಪಾದನೆ:  1 ಹುದ್ದೆ

ಕೈಗಾರಿಕಾ/ಕೈಗಾರಿಕಾ/ಉತ್ಪಾದನೆ/ಇಂಡಸ್ಟ್ರಿಯಲ್ ಇಂಜಿನ್ & ಎಂಜಿಟಿ:  1 ಹುದ್ದೆ

ಆಟೋಮೊಬೈಲ್ ಇಂಜಿನ್:  1 ಹುದ್ದೆ