News

ಕೋಟಿಗೂ ಹೆಚ್ಚು ಸರ್ಕಾರಿ ನೌಕರರಿಗೆ ಶುಭಸುದ್ದಿ; ಮೊದಲ ಸಲ ಇಷ್ಟೊಂದು ಪ್ರಮಾಣದಲ್ಲಿ DA ಹೆಚ್ಚಳ!

11 June, 2022 11:44 AM IST By: Kalmesh T
An increase in the amount of DA for the first time

ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಸಿಹಿ ಸುದ್ದಿ. ಇದೆ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಡಿಎಯಲ್ಲಿ ಹೆಚ್ಚಳ.

ಇದನ್ನೂ ಓದಿರಿ: 

Rain Alert: ಇನ್ನೂ ನಾಲ್ಕೈದು ದಿನಗಳಲ್ಲಿ ಕರ್ನಾಟಕದಾದ್ಯಂತ ಗುಡುಗು- ಮಿಂಚು ಸಮೇತ ಮಳೆ ಸಾಧ್ಯತೆ!

PM ಉಚಿತ ಹೊಲಿಗೆ ಯಂತ್ರ ಯೋಜನೆ; ಒಂದು ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆಯಿರಿ..! ಈಗಲೇ ಅರ್ಜಿ ಸಲ್ಲಿಸಿ

ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಹಿಂದೆಂದಿಗಿಂತಲೂ ಪಡೆಯದಷ್ಟು ಹೆಚ್ಚಿನ ತುಟ್ಟಿಭತ್ಯೆಯನ್ನು (DA Hike) ಪಡೆಯಲಿದ್ದಾರೆ.

ಕಳೆದ ಬಾರಿಗಿಂತ ಈ ಸಹ ಹೆಚ್ಚು ಡಿಎ (Dearness Allowance) ಪಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಸಹಜವಾಗಿ ಕೇಂದ್ರ ಸರ್ಕಾರಿ ನೌಕರರ ಡಿಎಯನ್ನು ಶೇ.3 ಅಥವಾ ಶೇ.4 ರಷ್ಟು ಹೆಚ್ಚಿಸಲಾಗುತ್ತದೆ. ಕೇಂದ್ರ ಸರ್ಕಾರವು ವರ್ಷಕ್ಕೆ 2 ಬಾರಿ DA ಯನ್ನು ಹೆಚ್ಚಿಸುತ್ತದೆ.

7th Pay : ಸಂಬಳದ ಹೊರತಾಗಿಯೂ ನೌಕರರಿಗೆ ದೊರೆಯಲಿದೆ ಲಾಭ! ಏನಿದು ಗೊತ್ತೆ!

EPFO: 6 ಕೋಟಿಗೂ ಹೆಚ್ಚು ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ; ಈ ದಿನದಂದು ನಿಮ್ಮ ಖಾತೆಗೆ ಬರಲಿದೆ ₹80,000!

ಪ್ರತಿ ವರ್ಷ ಜನವರಿಯಲ್ಲಿ ಮತ್ತು ಜುಲೈನಲ್ಲಿ ಎರಡು ಬಾರಿ ಡಿಎ (DA) ಹೆಚ್ಚಳ ಮಾಡಲಾಗುತ್ತದೆ. ಈ ವರ್ಷ ಜುಲೈನಲ್ಲಿ ಡಿಎ ಏರಿಕೆಯಾಗಲಿದೆ.

ಈ ಬಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್ ಶೇ.5ರಷ್ಟು ಹೆಚ್ಚಳವಾಗಲಿದೆ ಎನ್ನುತ್ತವೆ ವರದಿಗಳು.

ಡಿಎ ಹೆಚ್ಚಳ ಮಾಡುವಾಗ ಕೇಂದ್ರ ಸರ್ಕಾರ AICPI ಡೇಟಾವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಈ ಡೇಟಾ ಉದ್ಯೋಗಿಗಳ ಡಿಎ ಹೆಚ್ಚಳವನ್ನು ನಿರ್ಧರಿಸುತ್ತದೆ.

ಈ ಅಂಕಿಅಂಶಗಳ ಪ್ರಕಾರ, ಡಿಎ ವರ್ಷಕ್ಕೆ ಕೇವಲ 3 ಪ್ರತಿಶತ ಅಥವಾ 4 ಪ್ರತಿಶತದಷ್ಟು ಹೆಚ್ಚಾಗುತ್ತದೆ. ಕಳೆದ ಬಾರಿ ಶೇ.3ರಷ್ಟು ಡಿಎ ಹೆಚ್ಚಿಸಲಾಗಿತ್ತು.

ಹಸು ಸಾಕಾಣಿಕೆಗೆ ₹60,249, ಎಮ್ಮೆ ಸಾಕಾಣಿಕೆಗೆ ₹40,783 ಸಹಾಯಧನ! ಯಾವ ಪ್ರಾಣಿ ಸಾಕಾಣಿಕೆಗೆ ಎಷ್ಟು ಹಣ ಗೊತ್ತೆ?

ಸಾವಯವ ಗೊಬ್ಬರ ಖರೀದಿಸುವ ರೈತರಿಗೆ ಭರ್ಜರಿ ರಿಯಾಯಿತಿ: ಈ ಯೋಜನೆಯಡಿ ₹227.40 ಲಕ್ಷ ಅನುದಾನ ಮೀಸಲು!

ಇತ್ತೀಚಿನ AICPI ದತ್ತಾಂಶವನ್ನು ಆಧರಿಸಿ, ಉದ್ಯೋಗಿಗಳಿಗೆ DA ಈ ಬಾರಿ 5% ರಷ್ಟು ಹೆಚ್ಚಾಗುವ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದೆ. AICPI ಅಂಕಿ-ಅಂಶಗಳನ್ನು ಗಮನಿಸಿದರೆ, ಜನವರಿಯಲ್ಲಿ 125.1 ಅಂಕಗಳಿಷ್ಟಿತ್ತು.

ಫೆಬ್ರವರಿಯಲ್ಲಿ 125 ಅಂಕಗಳು, ಮಾರ್ಚ್ ನಲ್ಲಿ 126 ಅಂಕಗಳು ಮತ್ತು ಏಪ್ರಿಲ್ನಲ್ಲಿ 127.7 ಅಂಕಗಳಿತ್ತು. ಹಣದುಬ್ಬರದಿಂದಾಗಿ ಎಐಸಿಪಿಐ ಅಂಕಿಅಂಶಗಳು ಹೆಚ್ಚುತ್ತಿವೆ. ಇದರ ಪರಿಣಾಮವಾಗಿ ಉದ್ಯೋಗಿಗಳು ಹೆಚ್ಚುವರಿ DA ಪಡೆಯುವ ಸಾಧ್ಯತೆಗಳಿವೆ.