ಇ- ಕಾಮರ್ಸ್‌ನಲ್ಲಿ ಹೆಚ್ಚು ಮನ್ನಣೆ ಗಳಿಸಿರುವ ಅಮೆಜಾನ್ನ ಸಂಸ್ಥಾಪಕ ಜೆಫ್ ಬೆಜೋಸ್ ಬರೋಬ್ಬರಿ 24 ಬಿಲಿಯನ್ ಡಾಲರ್ ಸಂಪತ್ತನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ.
ನಿರಂತರ ಪ್ರಯತ್ನವೇ ಯಶಸ್ಸಿನ ಗುಟ್ಟು: ಅಭಯ್ ಕುಮಾರ್ ಸಿಂಗ್
ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವುದು ಮತ್ತು ಸಾಮಾಜಿಕ ಮತ್ತು ರಾಜಕೀಯ ವಿಭಜನೆಗಳ ಹೊರತಾಗಿಯೂ
ಮಾನವೀಯತೆಯನ್ನು ಒಂದುಗೂಡಿಸುವ ಜನರನ್ನು ಬೆಂಬಲಿಸಲು ಹಣವನ್ನು ಖರ್ಚು ಮಾಡುವುದು ಅವಶ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಅಮೆಜಾನ್ ಸಂಸ್ಥಾಪಕರು 10 ವರ್ಷಗಳಲ್ಲಿ 10 ಬಿಲಿಯನ್ ಡಾಲರ್ ಅಥವಾ ಅವರ ಪ್ರಸ್ತುತ ನಿವ್ವಳ ಮೌಲ್ಯದ ಸುಮಾರು 8 ಪ್ರತಿಶತವನ್ನು ಸ್ಯಾಂಚೆಜ್ ಸಹ-ಅಧ್ಯಕ್ಷರಾಗಿರುವ ಬೆಜೋಸ್ ಅರ್ಥ್ ಫಂಡ್‌ಗೆ ಕಳುಹಿಸಿದ್ದಾರೆ.
ಬೆಂಗಳೂರು ಸೇರಿ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಎರಡು ದಿನ ಮಳೆ!
ಇದೇ ವರ್ಷ ಮೇ ತಿಂಗಳಲ್ಲಿ ಬೆಜೋಸ್ ಅವರು 118 ಮಿಲಿಯನ್ ಡಾಲರ್ ಅನ್ನು ಲಾಭರಹಿತ ಸಂಸ್ಥೆಗೆ ದೇಣಿಗೆ ನೀಡಿದ್ದರು.
ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಫೈಲಿಂಗ್ (SEC) ಪ್ರಕಾರ, ಬೆಜೋಸ್ ಅಮೆಜಾನ್ ಸ್ಟಾಕ್‌ನ 47,727 ಷೇರುಗಳನ್ನು ಲಾಭೋದ್ದೇಶವಿಲ್ಲದ ಸಂಸ್ಥೆಗೆ ವರ್ಗಾಯಿಸಿದರು.
ಒಟ್ಟು 118 ಮಿಲಿಯನ್ ಡಾಲರ್ ಎಂದು ಫೋರ್ಬ್ಸ್ ವರದಿ ಮಾಡಿದೆ.
ಜಗತ್ತಿನ ಜನಸಂಖ್ಯೆ 800 ಕೋಟಿ; ಮುಂದಿನ ವರ್ಷ ಜನಸಂಖ್ಯೆಯಲ್ಲಿ ನಾವೇ ಫಸ್ಟ್!
ಉದ್ಯೋಗ ಕಡಿತಕ್ಕೆ ಚಿಂತನೆ!
ಟ್ವಿಟರ್ ಸೇರಿದಂತೆ ದೊಡ್ಡ ಸಂಸ್ಥೆಗಳು ಉದ್ಯೋಗಿಗಳ ವಾಜಾಕ್ಕೆ ಮುಂದಾದ ಬೆನ್ನಲ್ಲೇ ಅಮೆಜಾನ್ ಸಹ 10 ಸಾವಿರ ಸಿಬ್ಬಂದಿಯನ್ನು ಕೆಲಸದಿಂದ
ವಜಾ ಮಾಡುವುದಕ್ಕೆ ಮುಂದಾಗಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು.
10 ಸಾವಿರ ಜನ ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನುವ ಭೀತಿಯ ನಡುವೆಯೇ ಅಪಾರ
ಪ್ರಮಾಣದ ಸಂಪತ್ತನ್ನು ಅಮೆಜಾನ್‌ನ ಸಂಸ್ಥಾಪಕರು ದಾನ ಮಾಡುವುದಕ್ಕೆ ಮುಂದಾಗಿರುವುದು ಅಚ್ಚರಿಗೂ ಕಾರಣವಾಗಿದೆ.