News

Aadhaar card ಆಧಾರ್‌ ಕಾರ್ಡ್‌ ಅಪ್ಡೇಟ್ಸ್‌ ಮಾಡುವುದು ಕಡ್ಡಾಯ, ಕೊನೆದಿನ ಯಾವಾಗ ?

27 November, 2023 10:01 AM IST By: Hitesh
ಆಧಾರ್‌ ಕಾರ್ಡ್‌ ಹೊಸ ಅಪ್ಡೇಟ್ಸ್‌ ಇಲ್ಲಿದೆ

ಆಧಾರ್‌ ಕಾರ್ಡ್‌ ಬಗ್ಗೆ ಆಗಾಗ್ಗೇ ಅಪ್ಡೇಟ್ಸ್‌ ಬರುತ್ತಲ್ಲೇ ಇರುತ್ತದೆ. ಇದೀಗ ಮತ್ತೊಂದು ಬಿಗ್‌ ಅಪ್ಡೇಟ್ಸ್‌ ಬಂದಿದೆ.

‌ಆಧಾರ್‌ ಕಾರ್ಡ್‌ ಇದೀಗ ಹಲವು ಯೋಜನೆಗಳಿಗೆ ಬಳಸಲಾಗುತ್ತಿದೆ. ಆಧಾರ್‌ ಕಾರ್ಡ್‌ ಬಳಕೆಯಿಂದಾಗಿ ಹಲವು ಯೋಜನೆಗಳಲ್ಲಿ

ಫಲಾನುಭವಿಗಳಲ್ಲಿ ಆಗುವ ಮೋಸವನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಅನುಸರಿಸಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಆಧಾರ್‌ ಕಾರ್ಡ್‌ ಬಳಸಿ ಬ್ಯಾಂಕ್‌ ಖಾತೆಗಳಿಂದ ಹಣ ತೆಗೆದಯುತ್ತಿರುವುದು ಹೆಚ್ಚಾಗುತ್ತಿರುವ ಬೆನ್ನಲ್ಲೇ ಜನರಿಗೆ

ಈ ರೀತಿಯ ಮೆಸೇಜ್‌ ಬರುತ್ತಿರುವುದು ಸಾರ್ವಜನಿಕರಲ್ಲೂ ಸಣ್ಣ ಆತಂಕವನ್ನೂ ಮೂಡಿಸಿದೆ.

ಈ ನಡುವೆ ಪ್ರಾಧಿಕಾರವೇ ಅಧಿಕೃತವಾಗಿ ಮಾಹಿತಿಯೊಂದನ್ನು ಪ್ರಕಟಿಸಿದೆ. 

Aadhaar Card Fraud: ಆಧಾರ್‌ ಕಾರ್ಡ್‌ ವಂಚನೆ: ನಿಮಗೇ ತಿಳಿಯದೆಯೇ ನಿಮ್ಮ ಖಾತೆಯಿಂದ ಹಣ ಖಾಲಿ!

ಈಗಾಗಲೇ ಹಲವು ವರ್ಷಗಳಿಂದ ಆಧಾರ್‌ ಕಾರ್ಡ್‌ ಅಪ್ಡೇಟ್ಸ್‌ ಮಾಡಿಕೊಳ್ಳದೆ ಇರುವವರು ಈಗ ಆಧಾರ್‌ ಕಾರ್ಡ್‌ ಅಪ್ಡೇಟ್‌ ಮಾಡಿಕೊಳ್ಳುವುದು

ಕಡ್ಡಾಯ ಎನ್ನುವುದು ಈಗ ಬಂದಿರುವ ಸಂದೇಶದ ವಿವರವಾಗಿದೆ.

ಆಧಾರ್‌ ಕಾರ್ಡ್‌ನ ಹೊಸ ಅಪ್ಡೇಟ್ಸ್‌ ಏನು ?  

ಆಧಾರ್‌ ಕಾರ್ಡ್‌ ಅಪ್ಡೇಟ್ಸ್‌ಗೆ ಇದೀಗ ಕೊನೆಯ ಅವಕಾಶವನ್ನು ನೀಡಲಾಗಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಡಿಸೆಂಬರ್ 14ರ ಒಳಗಾಗಿ ಆನ್‌ಲೈನ್ ಆಧಾರ್ ಅಪ್‌ಡೇಟ್‌ಗೆ ಅವಕಾಶ ಕಲ್ಪಿಸಿದೆ.

ಇನ್ನು 2011ರಿಂದ 2015ರ ಒಳಗೆ ಆಧಾರ್ ಕಾರ್ಡ್ ಮಾಡಿಸಿಕೊಂಡು ಒಮ್ಮೆಯೂ ಅಪ್ಡೇಟ್ ಮಾಡದವರಿಗೆ

ಇದೀಗ ಅಪ್ಡೇಟ್ ಮಾಡಿಕೊಳ್ಳುವಂತೆ ಮೆಸೇಜ್ ಬರುತ್ತಿದೆ.

Aadhaar Card Fingerprint ಆಧಾರ್ ಕಾರ್ಡ್‌ನ ಬೆರಳಚ್ಚು ಡೇಟಾ ಏಕೆ Lock ಮಾಡಬೇಕು?

ಇದಕ್ಕೆ ಆನ್‌ಲೈನ್ ಪೋರ್ಟಲ್ ಮೂಲಕ ಅವಕಾಶ ಕಲ್ಪಿಸಲಾಗಿದೆ.  ಇದಕ್ಕಾಗಿ ಆನ್‌ಲೈನ್‌ನ ಮೂಲಕ ಅಥವಾ ಸ್ಥಳೀಯ ಸೈಬರ್‌ ಸೆಂಟರ್‌ನಲ್ಲಿಯೂ ಆಧಾರ್‌ ಕಾರ್ಡ್‌ನ ಹೊಸ ಅಪ್ಡೇಟ್ಸ್‌ ಮಾಡಿಕೊಳ್ಳಬಹುದಾಗಿದೆ. 

ಆಧಾರ್ ಕಾರ್ಡ್ ಬಳಸಿ PhonePe ಆಕ್ಟಿವೇಟ್‌ ಮಾಡುವುದು ಹೇಗೆ..?