News

ಶತಮಾನದ ಹಿಂದೆ ಬ್ರಿಟೀಷರು ನೆಟ್ಟಿದ್ದ ಮರ ಲಕ್ಷ ಲಕ್ಷಕ್ಕೆ ಹರಾಜು!

23 February, 2023 2:43 PM IST By: Hitesh
A century ago, the tree planted by the British was auctioned for lakhs!

ಕೇರಳದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಅದೇ ಬ್ರಿಟಿಷರ ಕಾಲದಲ್ಲಿ ನೆಡಲಾಗಿದ್ದ ಸಸಿ ಬರೋಬ್ಬರಿ 40 ಲಕ್ಷಕ್ಕೆ ಮಾರಾಟವಾಗಿರುವುದು. ಆ ಮರದ ಹಿನ್ನೆಲೆ ಇಲ್ಲಿದೆ…

ಕೇರಳದ ನಿಲಂಬೂರು ಮರಗಳ ತೋ‍ಪಿನಲ್ಲಿ ಬ್ರಿಟೀಷರು ಒಂದು ಶತಮಾನಕ್ಕೂ ಹಿಂದೆ ಅಂದರೆ ಬರೋಬ್ಬರಿ 114 ವರ್ಷ ಹಿಂದೆ

ನೆಟ್ಟಿದ್ದ ಹಳೆಯ ತೇಗದ ಮರವೊಂದು ಇದೀಗ ಬರೋಬ್ಬರಿ 40 ಲಕ್ಷಕ್ಕೆ ಹರಾಜಾಗಿದೆ.

ಬ್ರಿಟೀಷ್‌ ಅಧಿಕಾರಿಯೊಬ್ಬರು 1909ರಲ್ಲಿ ಈ ಮರವನ್ನು ನೆಟ್ಟಿದ್ದರು ಎಂದು ಹೇಳಲಾಗಿದೆ. 

ಇತ್ತೀಚೆಗಷ್ಟೇ ಈ ಮರವು ಧರೆಗುರುಳಿತ್ತು. ಹೀಗಾಗಿ ಅದನ್ನು ಹರಾಜಿಗೆ ಇರಿಸಲಾಗಿತ್ತು.

Unemployment in india ಭಾರತದಲ್ಲಿ ಇನ್ನೂ ಮೂರು ಪಟ್ಟು ಹೆಚ್ಚಾಗಲಿದೆ ನಿರುದ್ಯೋಗ ಸಮಸ್ಯೆ!

ಕೇರಳದ ನೆಡುಂಕಯಮ್‌ ಅರಣ್ಯ ಡಿಪೋದಲ್ಲಿ ಫೆಬ್ರುವರಿ 10 ರಂದು ನಡೆದ ಹರಾಜಿನಲ್ಲಿ ವರ್ಧಮಾನ್‌ ಟಿಂಬರ್‌ ಮಾಲೀಕರಾದ ಅಜನೀಶ್‌

ಕುಮಾರ್‌ ಎಂಬವರು ಬರೋಬ್ಬರಿ 39.25 ಲಕ್ಷ ರೂಪಾಯಿಗೆ ಈ ಮರವನ್ನು ಖರೀದಿ ಮಾಡಿದ್ದಾರೆ. ಹರಾಜು ಪ್ರಕ್ರಿಯೆಯು ಕುತೂಹಲದಿಂದ ಕೂಡಿತ್ತು.  

ನನಗೆ ಇದರಿಂದ ತುಂಬಾ ಸಂತೋಷವಾಗಿದೆ. 1909ರಲ್ಲಿ ಬ್ರಿಟೀಷರು ನೆಟ್ಟಿದ್ದ ಈ ತೋಪನ್ನು ಸಂರಕ್ಷಿತಾರಣ್ಯವಾಗಿ ಇರಿಸಲಾಗಿತ್ತು.  

Today Weather ಇಂದಿನ ಹವಾಮಾನ ಹೇಗಿದೆ, ಎಲ್ಲೆಲ್ಲಿ ಗರಿಷ್ಠ ತಾಪಮಾನ ? 

ಮರವು 8 ಮೀಟರ್ನಷ್ಟಿದ್ದು, ಒಳ್ಳೆಯ ಬೆಲೆಗೆ ಹರಾಜಾಗಿದೆ. ಇದು ಈವರೆಗೆ ಈ ಡಿಪೋದಲ್ಲಿ ಹರಾಜಾದ ದೊಡ್ಡ ಮೊತ್ತದ ಮರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಮೂಲಕ ಹೊಸ ದಾಖಲೆಯೊಂದು ಸೃಷ್ಟಿಯಾಗಿದೆ.

ನಿಲಂಬೂರು ತೇಗದ ಮರ ಅಂತರ್‌ರಾಷ್ಟ್ರೀಯ ಬ್ರಾಂಡ್ ಆಗಿದ್ದು, ಐತಿಹಾಸಿಕ ಮಹತ್ವವೂ ಇದೆ ಎಂದು ಕೇರಳದ ಅರಣ್ಯಾಧಿಕಾ ರಿಗಳು ತಿಳಿಸಿದ್ದಾರೆ.

Today Weather ಇಂದಿನ ಹವಾಮಾನ ಹೇಗಿದೆ, ಎಲ್ಲೆಲ್ಲಿ ಗರಿಷ್ಠ ತಾಪಮಾನ ?

A century ago, the tree planted by the British was auctioned for lakhs!

ಹರಾಜಿನಲ್ಲಿ ಮರದ ತುಂಡುಗಳನ್ನು ಖರೀದಿ ಮಾಡಿದ ಅಜನೀಶ್‌ಕುಮಾರ್‌ ಅವರು ಸಹ ಬಿಡ್‌ಗೆದ್ದಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಕೇರಳ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದು, ಮರದ ದಿಮ್ಮಿಗಳನ್ನು ನಿಲಂಬೂರಿನಿಂದ ತಿರುವನಂತಪುರಕ್ಕೆ

ಸಾಗಿಸಲು 15,000 ಸಾವಿರ ರೂಪಾಯಿ ಖರ್ಚು ಆಗಿರುವುದಾಗಿ ತಿಳಿಸಿದ್ದಾರೆ.  

ಇಂತಹ ಅಪರೂಪದ ಮರವನ್ನು ಸಾಗಾಟ ಮಾಡುವ ದೃಶ್ಯ ಕಣ್ತುಂಬಿಕೊಳ್ಳಲು ನೂರಾರು ಜನ ಸೇರಿದ್ದು ವಿಶೇಷವಾಗಿತ್ತು.

PMKisanUpdate ಪಿ.ಎಂ ಕಿಸಾನ್‌ ಹಣ ಇದೇ ದಿನ ನಿಮ್ಮ ಖಾತೆಗೆ ಬರಲಿದೆ!

A century ago, the tree planted by the British was auctioned for lakhs!

ನಿಲಂಬೂರು ತೇಗದ ತೋಪು ವಿಶ್ವದ ಹಳೆಯ ತೋಪುಗಳಲ್ಲಿ ಒಂದಾಗಿದ್ದು, ಮಲಬಾರ್‌ನ ಮಾಜಿ ಬ್ರಿಟೀಷ್‌ ಕಲೆಕ್ಟರ್‌ಎಚ್‌.ವಿ ಕೊನೊಲ್ಲಿ ಅವರ ಹೆಸರನ್ನು ಇದಕ್ಕೆ ಇಡಲಾಗಿತ್ತು.  

ಸಾಗುವಾನಿ ಅಥವಾ ತೇಗದ ಮರಗಳಿಗೆ ಬಹಳ ಬೇಡಿಕೆಯಿದೆ. ಏಕೆಂದರೆ ಅದು ಇತರೆ ಮರಳಗಳಂತೆ ಬೇಗ ಹಾಳಾಗುವುದಿಲ್ಲ.

ಇದೇ ಕಾರಣಕ್ಕೆ ಮರಕ್ಕೆ ಬೆಲೆ ಹೆಚ್ಚಿರುತ್ತದೆ.

ಕೇರಳದಲ್ಲಿ ಶತಮಾನಕ್ಕೂ ಹಳೆದಯದಾದ ತೇಗದ ಮರ ಬರೋಬ್ಬರಿ 39.25 ಲಕ್ಷಕ್ಕೆ ಮಾರಾಟವಾಗಿದೆ. 

ಹರಾಜು ಪ್ರಕ್ರಿಯೆ ಹೇಗೆ ನಡೆಯಿತು ಗೊತ್ತೆ ? 

8 ಘನ ಮೀಟರ್ ದಪ್ಪದ  ಮರವನ್ನು, ಮೂರು ತುಂಡುಗಳನ್ನಾಗಿ ಮಾಡಿ ಹರಾಜು ಮಾಡಲಾಯಿತು.

ಅಲ್ಲದೇ 3 ಮೀಟರ್‌ಉದ್ದ ಇದ್ದ ಪ್ರಮುಖ ತುಂಡು ₹ 23 ಲಕ್ಷಕ್ಕೆ ಹರಾಜು ಮಾಡಲಾಯಿತು.

ಇನ್ನು ಉಳಿದೆರಡು ತುಂಡುಗಳು ಕ್ರಮವಾಗಿ 11 ಲಕ್ಷ ಹಾಗೂ 5.25 ಲಕ್ಷಕ್ಕೆ ಮಾರಾಟವಾಗಿರುವುದು ವರದಿ ಆಗಿದೆ.

Children Missing Case 9,018 ಮಕ್ಕಳು ರಾಜ್ಯದಲ್ಲಿ ನಾಪತ್ತೆ: ಆತಂಕಕ್ಕೆ ಕಾರಣವಾದ ಅಂಕಿ- ಅಂಶ!