Horticulture

ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕೆ ರೋಗ ಮತ್ತದರ ನಿರ್ವಹಣೆ

22 November, 2022 10:24 AM IST By: Kalmesh T
Management of leaf spot disease in areca nut crop

ಎಲೆ ಚುಕ್ಕೆ ರೋಗದಿಂದಾಗಿ ಆಡಿಕೆಯಲ್ಲಿ ಇಳುವರಿ ಕುಂಠಿತವಾಗುತ್ತಿದ್ದು, ನಿರ್ದಿಷ್ಟ ಅವಧಿಯಲ್ಲಿ ಸರಿಯಾದ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಂಡಿದ್ದೇ ಆದರೆ, ಈ ರೋಗದ ಬಾಧೆ ಹಾಗೂ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಈ ರೋಗದ ಲಕ್ಷಣಗಳು, ಹರಡುವಿಕೆ ಮತ್ತು ತೆಗೆದುಕೊಳ್ಳಬೇಕಾದ ನಿರ್ವಹಣಾ ಕ್ರಮಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿರಿ: Paddy Price: ಕ್ವಿಂಟಲ್ ಭತ್ತಕ್ಕೆ ₹2450 ನಿಗದಿ, ಜಿಲ್ಲಾಡಳಿತದಿಂದ ಸ್ಪಷ್ಟನೆ

ಅಡಿಕೆ ಬೆಳೆಯು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದು, ವಾತಾವರಣದಲ್ಲಿ ಉಂಟಾಗುತ್ತಿರುವ ವೈಪರೀತ್ಯದಿಂದಾಗಿ ಈ ಅಡಿಕೆ ಬೆಳೆಯಲಿ ಹಾನಿ ಉಂಟು ಮಾಡುತ್ತಿದ್ದ ರೋಗಗಳ ಸಂತತಿ ತೀವ್ರ ವೇಗವಾಗಿ ಅಭಿವೃದ್ಧಿ ಹೊಂದಿ ಹೆಚ್ಚಿನ ಹಾನಿಯನ್ನುಂಟು ಮಾಡುತ್ತಿವೆ.

ಅವುಗಳಲ್ಲಿ ಎಲೆ ಚುಕ್ಕೆ ರೋಗ ಪ್ರಮುಖವಾಗಿದ್ದು, ಮಲೆನಾಡಿನೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಈ ಭಾಗದ ಬೆಳೆಗಾರರಲ್ಲಿ ಹೆಚ್ಚು ಆತಂಕಕ್ಕೆ ಕೂಡ ಇದಿ ಕಾರಣವಾಗುತ್ತಿದೆ. ಈ ರೋಗದಿಂದಾಗಿ ಆಡಿಕೆಯಲ್ಲಿ ಇಳುವರಿ ಕುಂಠಿತವಾಗುತ್ತಿದೆ.

ನಿರ್ದಿಷ್ಟ ಅವಧಿಯಲ್ಲಿ ಸರಿಯಾದ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಂಡಿದ್ದೇ ಆದರೆ, ಈ ರೋಗದ ಬಾಧೆ ಹಾಗೂ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಈ ರೋಗದ ಲಕ್ಷಣಗಳು, ಹರಡುವಿಕೆ ಮತ್ತು ತೆಗೆದುಕೊಳ್ಳಬೇಕಾದ ನಿರ್ವಹಣಾ ಕ್ರಮಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಟೊಮೆಟೊ ಬೆಳೆಗೆ ಅಂಗಮಾರಿ ರೋಗ: ನಿರ್ವಹಣೆ ಮತ್ತು ತಡೆಗಟ್ಟುವಿಕೆ …

ರೋಗಕ್ಕೆ ಪೂರಕವಾದ ಅಂಶಗಳು:

ಶಿಲೀಂದ್ರವು ರೋಗಗ್ರಸ್ತ ಗರಿಗಳಲ್ಲಿ ವಾಸಿಸುವುದು. ಮಳೆ ಹನಿಗಳ ಚಿಮ್ಮುವಿಕೆಯಿಂದ ಶೀಲೀಂಧ್ರದ ಕಣಗಳು ಗಾಳಿಯಲಿ ಸೇರಿ ಹೊಸ ಗರಿಗಳನ್ನು ತಲುಪುತ್ತವೆ. ಹಾಗೆಯೇ ತೇವಭರಿತ ಬಿಸಿಲಿನ ವಾತಾವರಣ, ಕಡಿಮೆ ಉಷ್ಣಾಂಶ (189 ರಿಂದ 240 ಡಿಗ್ರಿ ಸೆಲ್ಸಿಯಸ್‌) ಮತ್ತು ಹೆಚ್ಚಿನ ಆದ್ರತೆ (85%) ಈ ರೋಗದ ತೀವ್ರತೆ ಮತ್ತು ಹರಡುವಿಕೆಗೆ ಪೂರಕವಾದ ಅಂಶಗಳಾಗಿರುತ್ತವೆ.

ರೋಗವು ವರ್ಷ ಪೂರ್ತಿ ಕಂಡುಬಂದರೂ ಸಹ ಮಾರ್ಚ್ ನಿಂದ ಸೆಪ್ಟೆಂಬರ್ ತಿಂಗಳವರೆಗೂ ಹೆಚ್ಚಾಗಿ ಬಾಧೆಯನ್ನು ಉಂಟುಮಾಡುತ್ತದೆ.

ಸಾಲ ಪಾವತಿಸದಿದ್ದರೂ ರೈತರ ಆಸ್ತಿ ಜಪ್ತಿ ಮಾಡದಂತೆ ಕಾನೂನು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ರೋಗಕಾರಕಗಳು: ಕೊಲೆಟೋಟ್ರೈಕಮ್ ಗಿಯೋಸೆ ರೋಗದ ಲಕ್ಷಣಗಳು: ರೆಡ್, ಫಿಲೋ ಸಿಕ್ಕೆ ಅರಕೆ ಮತ್ತು ಪೆಲೋಷಿಯಾ ಅರಕೆ

ರೋಗದ ಲಕ್ಷಣಗಳು:

  • ಕೊಲೆಟೋಟ್ರೈಕಮ್ ಶಿಲೀಂದ್ರವು ಸೋಗೆಗಳ ಗರಿಗಳ ಮೇಲೆ ಹಳದಿ ಮತ್ತು ಕಪ್ಪು ಬಣ್ಣದ ಚಿಕ್ಕ ಗಾತ್ರದ ಚುಕ್ಕೆಗಳು ಕಾಣಿಸುತ್ತವೆ ಹಾಗೂ ಗರಿಗಳು ತುದಿಯಿಂದ ಒಣಗಲು ಪ್ರಾರಂಭಿಸುತ್ತವೆ.
  • ಫಿಲೊಸ್ಟಿಕ್ಟ್‌ ಶಿಲೀಂದ್ರವು ಮರಗಳ ಸೋಗೆಗಳ ಮೇಲಾಗದಲ್ಲಿ ದೊಡ್ಡ ಗಾತ್ರದ ಕಂದು ಮತ್ತು ಕಪ್ಪು ಬಣ್ಣದ ಚುಕ್ಕೆಗಳ ರೂಪದಲ್ಲಿ ಕಾಣಿಸುತ್ತದೆ.
  • ಪೆಸ್ಟಲೋಸಿಯಾ ಬಾಧಿತ ಗರಿಗಳ ಮೇಲೆ ನಸು ಹಳದಿ ಬಣ್ಣದ ಚುಕ್ಕೆಗಳು ಕಾಣಿಸುತ್ತವೆ.
  • ಈ ಚುಕ್ಕೆಗಳು ಕೆಳಗಿನ ಎಲೆಗಳಿಂದ ಪ್ರಾರಂಭವಾಗಿ ಶೀಘ್ರವಾಗಿ ಒಂದಕೊಂದು ಕೂಡಿಕೊಂಡು ಪೂರ್ತಿ ಹೆಡೆಗಳನ್ನು ಆವರಿಸುತ್ತವೆ.
  • ರೋಗ ಉಲ್ಬಣಗೊಂಡಾಗ ಹೆಡೆಗಳು ಒಣಗಲಾರಂಭಿಸುತ್ತವೆ. ಇಂತಹ ಒಣಗಿದ ಎಲ್ಲಾ ಹೆಡೆಗಳು ಕಾಂಡಕ್ಕೆ ಜೋತು ಬಿದ್ದು ಮರ ಶಕ್ತಿ ಕಳೆದುಕೊಂಡು, ಇಳುವರಿ ಕುಂಠಿತಗೊಳ್ಳುತ್ತದೆ.

ಜನಸಾಮಾನ್ಯರಿಗೆ ಮತ್ತೊಂದು ಹೊರೆ; ಈರುಳ್ಳಿ ಉತ್ಪಾದನೆಯಲ್ಲಿ ಕುಸಿತ, ಬೆಲೆ ಹೆಚ್ಚಳ ಸಾಧ್ಯತೆ-CRISIL report!

ರೋಗದ ನಿರ್ವಹಣೆ:

  • ರೋಗ ಬಾಧಿತ ಒಣಗಿದ ಗರಿಗಳನ್ನು ತೆಗೆದು ಕತ್ತರಿಸಿ ಸಾರಪಡಿಸುವುದರಿಂದ ರೋಗಾಣುವಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದು
  • ಬಿಸಿಲು ಬೀಳುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು
  • ಮರಗಳ ಉತ್ತಮ ಬೆಳವಣಿಗೆಗೆ ಕೊಟ್ಟಿಗೆ ಗೊಬ್ಬರದ ಜೊತೆಗೆ ಶಿಫಾರಿತ ಪೋಷಕಾಂಶಗಳಾದ ಸಾರಜನಕ - ರಂಜಕ - ಪೊಟಾರ್ (100 - 40 - 140 ಗ್ರಾಂ, ಪ್ರತಿ ಮರಕೆ) ನೀಡಬೇಕು.

 ಅಡಿಕೆಗೆ ಎಲೆಚುಕ್ಕಿ, ಹಳದಿ ರೋಗ; ತಜ್ಞರ ಸಮಿತಿ ಭೇಟಿ – ರೋಗದ ಮೂಲ ಪರಿಶೀಲನೆಯೇ ಸವಾಲು!

ಶಿಲೀಂಧ್ರನಾಶಕಗಳ ಬಳಕೆ:

  • 1% ಬೋರ್ಡೋ ದ್ರಾವಣ ಅಥವಾ 3% ರ ತಾಮ್ರದ ಆಕ್ಸಿಕ್ಲೋರೈಡ್‌ ಶಿಲೀಂದ್ರನಾಶಕಗಳನ್ನು ಒಂದು ಲೀಟರ್ ನೀರಿನೊಂದಿಗೆ ಅಂಟು ದ್ರಾವಣ ಜೊತೆ ಬೆರೆಸಿ ಸಿಂಪಡಿಸುವುದು
  • ಅಥವಾ ರೋಗ ಲಕ್ಷಣದ ಪ್ರಾರಂಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾಂಕೋಜೆಬ್ (63%) ಮತ್ತು ಕಾರ್ಬೋಜಿಯಮ್ (12%) 2 ಗ್ರಾಂ. ಒಂದು ಲೀಟರ್ ನೀರಿನ ಜೊತೆಗೆ, ಅಂಟು ದ್ರಾವಣ (1 ಮಿ. ಲೀ.) ಪ್ರತಿ ಲೀಟರ್ ನೀರಿನಲಿ ಬೆರೆಸಿ ಸಿಂಪಡಿಸಬೇಕು
  • ಅಥವಾ ಹೆಕ್ಸ್‌ಕೋನಾಜೋಲ್‌ (5% ಎಸ್.ಸಿ./ ಇ, ಸಿ.) ಅಥವಾ ಪ್ರೊಪಿಕೋನಜೋಲ್ (25% ಇ, ಸಿ.) ಅಂತರವಾಪಿ ಶಿಲೀಂಧ್ರ ನಾಶಕಗಳನ್ನು 1 ಮಿ. ಲೀ. ಜೊತೆಗೆ ಅಂಟು ದ್ರಾವಣ (1ಮಿ, ಲೇ.) ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ರೋಗದ ಬಾಧೆಯು ಅಂತರ ಬೆಳೆಯಾದ ಕಾಳುಮೆಣಸು ಬೆಳೆಗೂ ಸಹ ಹರಡುವುದರಿಂದ ಇವುಗಳಿಗೂ ಸಹ ಸಿಂಪಡಣೆ ಮಾಡಬೇಕು.
  • ಅಥವಾ 1% ಸುಡೊಮೋನಾಸ್ ಫ್ಲೋರೊಸನ್ಸ್‌ ಜೈವಿಕ ಶಿಲೀಂದ್ರ ನಾಶಕವನ್ನು ಸಿಂಪಡಣೆ ಮಾಡಬೇಕು.

ರೋಗ ಮತ್ತೆ ಕಾಣಿಸಿಕೊಂಡಲ್ಲಿ ಮೇಲೆ ತಿಳಿಸಿದ ಯಾವುದಾದರೊಂದು ಶಿಲೀಂಧ್ರ ನಾಶಕಗಳನ್ನು 20-25 ದಿನಗಳ ಅಂತರದಲ್ಲಿ ಸಿಂಪಡಣೆಯನ್ನು ಪುನರಾವರ್ತಿಸಬೇಕು.

ಅಡಿಕೆ ಬೆಳೆ ಕುರಿತು ಒಂದಷ್ಟು ಮಾಹಿತಿ

ಅಡಿಕೆ ಬೆಳೆಯು ಮುಖ್ಯವಾಗಿ ಮಲೆನಾಡು, ಕರಾವಳಿ ಹಾಗೂ ಮೈದಾನ ಪ್ರಾಂತ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಈ ಭಾಗದ ರೈತರ ಜೀವನಾಡಿಯಾಗಿದೆ. ಅಡಿಕೆಗೆ ದೊರೆಯುತ್ತಿರುವ ಹೆಚ್ಚಿನ ಮೌಲ್ಯ ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಹೆಚ್ಚೆಚ್ಚು ರೈತರು ಅಡಿಕೆ ಕೃಷಿಯತ್ತ ಒಲವು ತೋರುತ್ತಿದ್ದಾರೆ.

ಪ್ರಸ್ತುತ ಭಾರತದಲ್ಲಿ 7.30 ಲಕ್ಷ ಹೆಕ್ಟೇ‌ರ್‌ ಪ್ರದೇಶದಿಂದ 9.02 ಲಕ್ಷ ಟನ್‌ ಅಡಿಕೆ ಉತ್ಪಾದನೆ ಆಗುತ್ತಿದ್ದು, ಭಾರತದ ಒಟ್ಟು ಉತ್ಪಾದನೆಯ 65% ರಷ್ಟು ಅಡಿಕೆ ಬೆಳೆ ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಮುಖವಾಗಿ ಅಂಕೋಲಾ ಕುಮಟಾ, ಹೊನ್ನಾವರ ಭಟ್ಕಳ ದಾಪುರ, ಸಿರಸಿ, ಮುಂಡಗೋಡ, ಮರಾಪುರ ಮತ್ತು ಜೊಯಿಡಾ ತಾಲೂಕುಗಳು.ಒಟ್ಟೂ 33,364.79 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿದೆ.