Health & Lifestyle

“ಹಾಗಲವೆಂದು ಹೀಗೆಲ್ಲಾ ಹೀಗಳೆಯಬೇಡಿ...” ಇಲ್ಲಿದೆ ಹಾಗಲಕಾಯಿ ಔಷಧಿಯ ಗುಣಗಳ ಕುರಿತಾದ ಲೇಖನ

08 June, 2022 12:10 PM IST By: Kalmesh T
Article on the medicinal properties of cucumber

ನೋಡಲು ಮೊಸಳೆಯ ಮೈಯಂತಿರುವ ಮುಳ್ಳುಮುಳ್ಳಾದ ಮೇಲ್ಮೆ ಹೊಂದಿರುವ ‘ಮೊಮೊಡಿಕಾ ಚರಾಂತಿಯಾ’ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಇಂಗ್ಲೀಷ್‍ನಲ್ಲಿ ಬಿಟರ್ ಮೆಲನ್ ಅಥವಾ ಬಿಟರ್ ಗಾರ್ಡ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿರಿ: ಹೆಚ್ಚು ಉಪ್ಪು ನಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಕಲ್ಲಂಗಡಿ ಅತಿಯಾದ ಸೇವನೆಯಿಂದ ಏನೆಲ್ಲ ಅಡ್ಡ ಪರಿಣಾಮಗಳಿವೆ ಗೊತ್ತಾ..?

ಇದು ಉಷ್ಣಾಂಶವಿರುವ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವ ಸೌತೆಕಾಯಿ ಜಾತಿಯ ಒಂದು ಬಳ್ಳಿಯಾಗಿದೆ. ಇದು ಹೆಚ್ಚಾಗಿ ಏಷ್ಯಾ ಖಂಡ, ಆಫ್ರೀಕಾ, ವೆಸ್ಟ್‍ಇಂಡೀಸ್‍ನ ದ್ವೀಪ ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ. ಇದರ ಹಣ್ಣು ಇತರ ಎಲ್ಲಾ ಹಣ್ಣುಗಳಿಗಿಂತ ಅತ್ಯಂತ ಕಹಿಯಾದ ಗುಣವನ್ನು ಹೊಂದಿದ್ದು ಸಾಮಾನ್ಯವಾಗಿ ಈ ಹಣ್ಣಿನಲ್ಲಿ ಆಕಾರ ಹಾಗೂ ಕಾಯಿಯ ಗುಣದಲ್ಲಿ ವ್ಯತ್ಯಾಸವಿರುವ ಹಲವು ರೀತಿಯ ಪ್ರಭೇಧಗಳಿವೆ.

ಇದು ಅತ್ಯಂತ ಉಷ್ಣಾಂಶವಿರುವ ಪ್ರದೇಶದಲ್ಲಿ ಬೆಳೆಯುವ ಬಳ್ಳಿಯಾದರೂ ಇದರ ಮೂಲ ಹಾಗೂ ಉಗಮದ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಈ ಸಸ್ಯವನ್ನು ಸ್ಥಳಿಯಾವಾಗಿ ವಿವಿಧ ಹೆಸರುಗಳಿಂದ ಕರೆಯಾಲಾಗುತ್ತದೆ. ಕನ್ನಡದಲ್ಲಿ ಇದನ್ನು “ಹಾಗಲಕಾಯಿ” ಎಂದು ಕರೆಯುತ್ತಾರೆ. ಈ ಹೆಸರು ಚೈನೀಸ್ ಭಾಷೆಯ “ಕುಗೂವಾ” ಎಂಬ ಶಬ್ಧದಿಂದ ಬಂದದ್ದಾಗಿದೆ. ಮಲಯಾಳಂ ಭಾಷೆಯಲ್ಲಿ “ಪಾವಕ್ಕ” ಎಂದು ಕರೆಯಾಲಾಗುತ್ತದೆ.

ಈ ಸಸ್ಯವು ಮೂಲತಃ ಔಷಧಿಯ ಗುಣಗಳಿಂದ ಕೂಡಿದ್ದು ಐದರಿಂದ ಆರು ಮೀಟರ್ ಉದ್ದದವರೆಗೂ ಬೆಳೆಯಬಲ್ಲದು. ಪ್ರತಿ ಸಸ್ಯವು ಬೇರೆ ಬೇರೆಯೇ ಗಂಡು ಹಾಗೂ ಹೆಣ್ಣು ಹೂಗಳನ್ನು ಹೊಂದಿರುತ್ತದೆ ಹಾಗೂ ಜೂನ್, ಜುಲೈ ತಿಂಗಳಲ್ಲಿ ಹೂ ಬಿಟ್ಟು ಸೆಪ್ಟೆಂಬರ್‍ನಿಂದ ನವೆಂಬರ್ ಅವಧಿಯಲ್ಲಿ ಕಾಯಿಯಾಗಿ ಹಣ್ಣಾಗುತ್ತದೆ.

Papaya! (ಪಪ್ಪಾಯಿ) Dengue ನಿಂದ ಮುಕ್ತಿ!

ಮಜ್ಜಿಗೆಗಿಂತ ಮತ್ತೊಂದು ಮದ್ದು ಬೇಕೆ..? ಬೆರಗುಗೊಳಿಸುತ್ತೆ ಇದರ ಪ್ರಯೋಜನಗಳು

ಈ ಹಣ್ಣಿನ ಹೊರಭಾಗವು ವಿಶಿಷ್ಟವಾದ  ರಚನೆಯನ್ನು ಹೊಂದಿದ್ದು ನೋಡಲು ಆಯಾತಕಾರವಾಗಿ ಇರುತ್ತದೆ. ಹಾಗೂ ಗಂಟು ಗಂಟಾಗಿ ಕಾಣಿಸುತ್ತದೆ. ಹಣ್ಣಿನ ಒಳಭಾಗವೂ ಪೂರ್ತಿಯಾಗಿ ಟೊಳ್ಳಾಗಿದ್ದು ಮಧ್ಯದಲ್ಲಿ ತಿರುಳಗಳ ನಡುವೆ ಬೀಜವಿರುತ್ತದೆ.

ಇದು ಕಾಯಿಯಾಗಿದ್ದಾಗ ಹಸಿರು ಬಣ್ಣದಿಂದ ಕೂಡಿದ್ದು ಹಣ್ಣಾಗುತ್ತಿದ್ದಂತೆ ಹಳದಿ ಬಣ್ಣಕ್ಕೆ ತಿರುಗಲಾರಂಭಿಸುತ್ತದೆ. ಈ ಹಣ್ಣಿನಲ್ಲಿ ಸ್ವಯಂ ಚಾಲಿತ ಬೀಜ ಪ್ರಸರಣ ವ್ಯವಸ್ಥೆಯು ವಿಶೇಷವಾಗಿದೆ. ಅಂದರೆ ಈ ಕಾಯಿಯು ಬಲಿತು ಹಣಾಗುತ್ತಿದ್ದಂತೆ ತನ್ನಿಂದ  ತಾನೇ ಕಾಯಿಯು ಒಡೆದು ಬೀಜಗಳನ್ನು ಎಲ್ಲೆಡೆ ಚಿಮ್ಮುವ ವ್ಯವಸ್ಥೆಯನ್ನು ಹೊಂದಿದ್ದು ಈ ಮೂಲಕ ಹೊಸ ಹೊಸ ಬಳ್ಳಿಗಳು ಮೊಳಕೆಯೊಡೆಯುತ್ತವೆ.

ಇದು ಸೌತೆಕಾಯಿ ಅಥವಾ ದಪ್ಪ ಮೆಣಸಿನಕಾಯಿ ಮಾದರಿಯಂತೆ ಇದ್ದರೂ ಗುಣದಲ್ಲಿ ಬಹಳ ಕಹಿಯಾಗಿದ್ದು ಹೊರ ಭಾಗವು ತೆಳುವಾದುದ್ದರಿಂದ ಅಡುಗೆಯಲ್ಲಿಯೂ ಬಳಸಲಾಗುತ್ತದೆ. ಹಗಲಕಾಯಿಯು ಹಲವು ಗಾತ್ರ ಮತ್ತು ಆಕಾರಗಳಿದ್ದು ಬಲಿತ ಹಾಗಲಕಾಯಿ 20-30 ಸೆ.ಮೀ ಉದ್ದವಿರುತ್ತದೆ.

ಭಾರತದಲ್ಲಿ ಬೆಳೆಯಾಲಾಗುವ ಹಾಗಲ ಕಾಯಿಯು ಎರಡು ತುದಿಗಳು ಚೂಪಾದ ಆಕಾರವನ್ನು ಹೊಂದಿದ್ದು ಗಾಢ ಹಸಿರು ಹಾಗೂ ಬಿಳಿ ಬಣ್ಣದ ತಳಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಬಳ್ಳಿಯ ಸೊಪ್ಪುಗಳನ್ನು ಆಹಾರ ಪದಾರ್ಥವಾಗಿ ಸೇವಿಸಬಹುದು.

ದಾಸವಾಳದ ಹೂವಿನಲ್ಲಿದೆ ಅದ್ಬುತ ರಹಸ್ಯ! ನೀವು ಇದನ್ನೂ ತಿಳಿಯಲೆಬೇಕು!

ಪಳ-ಪಳ ಹೊಳೆಯುವ ಸೌಂದರ್ಯ ನಿಮ್ಮದಾಗಬೇಕೆ? Vitamin E ನಲ್ಲಿದೆ ರಹಸ್ಯ.

ಹಾಗಲಕಾಯಿಯ ವಿವಿಧ ಉಪಯೋಗಗಳು (ಆಯುರ್ವೇದ ಔಷಧಿಯಾಗಿ ಹಾಗಲಕಾಯಿ):

ಹಾಗಲಕಾಯಿ ಕಹಿಯಾದ ರುಚಿಯನ್ನು ಹೊಂದಿದ್ದು ಪಚನ (ಜೀರ್ಣ) ಕ್ರೀಯೆಯನ್ನು ಚುರುಕುಗೊಳಿಸುತ್ತದೆ. ಅಜೀರ್ಣ ಹಾಗೂ ಮಲಬದ್ಧತೆ ನಿವಾರಣೆಯಲ್ಲಿ ಸಹಕಾರಿಯಾಗಿದೆ.

ಹಾಗಲಕಾಯಿ ರಸವನ್ನು ಕರುಳಿನ ಲಾಡಿಹುಳು ನಿರೋಧಕವಾಗಿಯೂ ಬಳಸಲಾಗುತ್ತದೆ. ಹಾಗಲಕಾಯಿಯ ಕಹಿಯು ‘ಕ್ವಿನೈನ್’ ಎಂಬ ಸಂಯುಕ್ತದಿಂದ ಬರುತ್ತದೆ ಹಾಗೂ ಇದು ಮಲೇರಿಯಾ ರೋಗಕ್ಕೆ ರಾಮ ಬಾಣವಾಗಿ ಕೆಲಸ ನಿರ್ವಹಿಸುತ್ತದೆ.

ಪನಾಮ ಹಾಗೂ ಕೊಲಂಬಿಯಾ ದೇಶದಲ್ಲಿ ಮಲೇರಿಯಾ ನಿರೋಧಕ ಅಂಶಗಳ ಕಾರಣದಿಂದಲೇ ಇದರ ಎಲೆಯಿಂದ ತಯಾರಿಸಲಾಗುವ ಟೀಯನ್ನು ಹೆಚ್ಚಾಗಿ ಬಳಸುತ್ತಾರೆ. West Togo ದೇಶದಲ್ಲಿ ಸಿಡಿಬು, ದಡಾರದಂತಹ ರೋಗಗಳ ವಿರುದ್ಧ ಈ ಸಸ್ಯವನ್ನು ರೋಗ ನಿರೋಧಕವಾಗಿ ಬಳಸುತ್ತಾರೆ.

ಹಾಗಲಕಾಯಿಯು ಮಧುಮೇಹ ಪೀಡಿತರಿಗೆ ಒಂದು ಅತ್ಯುತ್ತಮ ಆಹಾರವಾಗಿದ್ದು ಸದ್ರಿ ರೋಗ ಲಕ್ಷಣಗಳನ್ನು ತಡೆಗಟ್ಟಲು ಹಾಗೂ ನಿಷ್ಪಲಗೊಳಿಸಲು ಸಹಕಾರಿಯಾಗಿದೆ. ಹಾಗಲಕಾಯಿಯ ವಿಶೇಷತೆ ಎಂದರೆ ಮನುಷ್ಯನಲ್ಲಿನ ಇನ್ಸುಲಿನ್‍ನ ಸೂಕ್ಷ್ಮ ಸಂವೇದನೆಗಳನ್ನು ಹೆಚ್ಚಿಸುತ್ತದೆ ಎಂದು ಧೃಢಪಟ್ಟಿದೆ.

ಫಿಲಿಫೈನ್ಸ್‍ನ ಆರೋಗ್ಯ ಇಲಾಖೆ 2007 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಮನುಷ್ಯನ ದೇಹ ತೂಕದ ಪ್ರತಿ ಕಿಲೋಗ್ರಾಮ್‍ಗೆ 100 ಮಿ.ಲೀ ಗ್ರಾಮ್‍ನಷ್ಟು ಹಾಗಲ ಕಾಯಿಯನ್ನು ಸೇವಿಸಿದಲ್ಲಿ ಅದು ನಿತ್ಯದ ಡೋಸೆಜ್‌ ದಿನಕ್ಕೆ 2 ಬಾರಿ ತೆಗೆದುಕೊಳ್ಳಲಾಗುವಂತಹ 20.5 ಮಿ.ಲೀ.ಗ್ರಾಂ ಡಯಾಬಿಟಿಸ್‌ ನಿರೋದಕ  ಗ್ಲಿಬೆನ್ಕಾಮೈಡ್ ಔಷಧಿಗೆ ಸರಿ ಸಮಾನವಾಗಿದೆ ಎಂದು ತಿಳಿದು ಬಂದಿದೆ.

ಆದ್ದರಿಂದ ಇದರಿಂದ ತಯಾರಿಸಲಾದ ಮಾತ್ರೆಗಳನ್ನು ಚರಾಂತಿನ್ ಎಂಬ ವ್ಯಾಪಾರಿ ಹೆಸರಿನೊಂದಿಗೆ ಫಿಲಿಫೈನ್ಸ್ ಹಾಗಲಕಾಯಿಯನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ. ವಿಶೇಷವಾಗಿ ಹಾಗಲಾಕಾಯಿಯಲ್ಲಿ ಗ್ಲೂಕೋಸ್‌ನ್ನು ನಿಯಂತ್ರಿಸುವ ಶಕ್ತಿಯನ್ನೂ ಇದ್ದು ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ.

ರೈತರಿಗೆ ಸಿಹಿ ಸುದ್ದಿ: ಮಾರುಕಟ್ಟೆಯಲ್ಲಿ ಗೋಧಿಗೆ ಬಂಪರ್ ಬೆಲೆ: ರೈತರ ಮುಖದಲ್ಲಿ ನಗೆ!

Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…

ಎಚ್ಚರಿಕೆ:

ಹಾಗಲಕಾಯಿಯ ಬೀಜಗಳು ಮಾನವ ದೇಹಕ್ಕೆ ವಿಷಕಾರಿಯೆನಿಸಿದ ಅಂಶಗಳನ್ನೂ ಒಳಗೊಂಡಿದ್ದು ಇದರ ಸೇವನೆಯಿಂದ ರಕ್ತ ಹೀನತೆಯ ಲಕ್ಷಣಗಳೂ ಗೋಚರಿಸುವ ಸಾಧ್ಯತೆಯಿದ್ದು ಬೀಜದ ಸೇವನೆ ಉತ್ತಮವಲ್ಲ.

ಅದೇ ರೀತಿ ಇದರ ಬೀಜದ ಸುತ್ತ ಇರುವ ತಿರುಳು ಮಕ್ಕಳಿಗೆ ವಿಷಕಾರಿಯೆಂದೂ ವರದಿಯಾಗಿರುತ್ತದೆ. ಹಾಗೂ ಈ ಹಣ್ಣನ್ನು ಗರ್ಭಧಾರಣೆಯ ಸಂದರ್ಭದಲ್ಲಿ ಸೇವಿಸುವುದರಿಂದ ಇದು ವ್ಯತಿರಿಕ್ತ ಪರಿಣಾಮವನ್ನು ಬೀರುವ ಸಾಧ್ಯತೆ ಅಧಿಕವಾಗಿದೆ.

ಹಾಗಲಕಾಯಿಯು ವಿಶೇಷ ಔಷಧಿಯ ಗುಣವನ್ನು ಹೊಂದಿದ್ದು ದಿನ ನಿತ್ಯದ ಬಳಕೆಯಲ್ಲಿ ಬಳಸಿದರೆ ಉತ್ತಮ ರೋಗ ನಿರೋಧಕ ಶಕ್ತಿಯು ವೃದ್ಧಿಸುವುದರಿಂದ ಮನುಷ್ಯನು ಆರೋಗ್ಯಕರವಾಗಿ ಜೀವಿಸಲು ಸಾಧ್ಯತೆ ಇದೆ.

ಕಹಿಯಾದರು ಹಗಲಕಾಯಿ ಮನುಷ್ಯನ ಆರೋಗ್ಯದ ದೃಷ್ಠಿಯಿಂದ ಅಮೃತವಿದ್ದಂತೆ. ಪ್ರಕೃತಿ ನೀಡಿರುವ ಸಂಪನ್ಮೂಲಗಳನ್ನು ಅಗತ್ಯಕನುಗುಣಾವಾಗಿ ಬಳಸಿ ಜೀವನ ಶೈಲಿಯಲ್ಲಿ ಸುಸ್ಥಿರತೆಯನ್ನ ಕಂಡುಕೊಂಡು ಉತ್ತಮ ಜೀವನದತ್ತ ಸಾಗುವಂತಾಗಲಿ.

ಹಿತ್ತಲ ಗಿಡ ಮದ್ದಲ್ಲ ಎಂಬ ನಾಣ್ಣುಡಿಯಿಂದ ಹೊರ ಬಂದು ಮನೆಯಲ್ಲೇ ಬೆಳೆಯಲಾಗುವ ಈ ಔಷಧೀಯ ಹಣ್ಣನ್ನು ಸಮರ್ಪಕವಾಗಿ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳೋಣ.

ಲೇಖನ: ಸಂತೋಷ್ ರಾವ್, ಪೆರ್ಮುಡ                       

ಪಟ್ರಮೆ ಗ್ರಾಮ ಮತ್ತು ಅಂಚೆ

ಬೆಳ್ತಂಗಡಿ ತಾಲೂಕು, ದ.ಕ

ದೂ:9742884160