ಮಹಿಳೆಯರು ಕಿರುಧಾನ್ಯಗಳಿಂದ ವಿವಿಧ ತಿನಿಸುಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ಕಿರುಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳ ಪೌಷ್ಠಿಕ ಗುಣಮಟ್ಟ ಅಕ್ಕಿ ಮತ್ತು ಗೋಧಿಯಿಂದ ತಯಾರಿಸಿದ ಆಹಾರ ಪದಾರ್ಥಗಳಿಗಿಂತ ಹೆಚ್ಚಾಗಿದೆಯೆಂದೇ ಹೇಳಬಹುದಾಗಿದೆ.
ಬಲು ರುಚಿಯಾದ ರಾಗಿ ಪರಾಠ..ಇಲ್ಲಿದೆ ಪೂರ್ಣ ರೆಸಿಪಿ
ಕಿರು ಧಾನ್ಯಗಳ ಮೌಲ್ಯವರ್ಧನೆ :
೧) ರಾಗಿ ಮಾಲ್ಟ್ :
ಬೇಕಾಗುವ ಸಾಮಾಗ್ರಿಗಳು ಪ್ರಮಾಣ (ಗ್ರಾಂ)
* ರಾಗಿ ೫೦೦
* ಹೆಸರು ೨೫೦
* ಗೋದಿ ೨೫೦
* ಸಕ್ಕರೆ ರುಚಿಗೆ ತಕ್ಕಷ್ಟು
ಫಟಾಪಟ್ ರುಚಿಕರವಾದ ರಾಗಿ ದೋಸೆ ಮಾಡುವ ವಿಧಾನ ಇಲ್ಲಿದೆ
ತಯಾರಿಸುವ ವಿಧಾನ :-
ರಾಗಿ, ಹೆಸರು ಕಾಳು ಮತ್ತು ಗೋದಿಯನ್ನು ಬೇರೆ ಬೇರೆಯಾಗಿ ರಾತ್ರಿಯಿಡಿ ನೆನೆಸಬೇಕು ಮತ್ತು ನೀರನ್ನು ಬಸಿದು ಸ್ವಚ್ಚವಾದ ಕಾಟನ್ ಬಟ್ಟೆಯಲ್ಲಿ ಬೇರೆ ಬೇರೆಯಾಗಿ ಕಟ್ಟಿ ಮೊಳಕೆ ಬರಲು ಬಿಡಬೇಕು.
(ರಾಗಿಯನ್ನು ಎರಡು ದಿನ ಮತ್ತು ಹೆಸರು ಕಾಳು ಮತ್ತು ಗೋದಿಯನ್ನು ಒಂದು ದಿನ ನೆನಸಬೇಕು) ಬೇರೆ ಬೇರೆಯಾಗಿ ಒಣಗಿಸಿ ಒಳ್ಳೆಯ ಪರಿಮಳ ಬರುವವರೆಗೆ ಹುರಿದು ನಂತರ ಉಜ್ಜಿ ಕೇರಿ ಮೊಳಕೆಯನ್ನು ತೆಗೆಯಬೇಕು.
ಅನಂತರ ಏಲಕ್ಕಿ ಮತ್ತು ಸಕ್ಕರೆ ಜೊತೆ ಸೇರಿಸಿ ಹಿಟ್ಟನ್ನು ಮಾಡಬೇಕು. ಈ ಹಿಟ್ಟನ್ನು ಗಾಳಿಯಾಡದ ಡಬ್ಬಿಯಲ್ಲಿ ತುಂಬಿಡಬೆಕು. ಈಗ ರಾಗಿ ಮಾಲ್ಟ್ ಪುಡಿ ಸಿದ್ದ.
ಮಾಲ್ಟ್ ತಯಾರಿಸುವ ವಿಧಾನ:-
೨-೩ ಚಮಚದಷ್ಟು ಮಾಲ್ಟ್ ಪುಡಿಯನ್ನು ಒಂದು ಕಪ್ ನೀರಿನಲ್ಲಿ ಚೆನ್ನಾಗಿ ಗಂಟಿಲ್ಲದೆ ಕಲಿಸಿಕೊಳ್ಳಿ, ಒಂದು ಕಪ್ ನೀರನ್ನು ಮತ್ತು ಒಂದು ಕಪ್ ಹಾಲನ್ನು ಕುದಿಯಲು ಇಟ್ಟು ಅದಕ್ಕೆ ಮಾಲ್ಟ್ ದ್ರಾವಣವನ್ನು ನಿಧಾನವಾಗಿ ಬೆರೆಸಿ ೫ ನಿಮಿಷದವರೆಗೆ ಕುದಿಸಬೇಕು. ಬೇಕೆನಿಸಿದರೆ ಚಿಟಕಿ ಉಪ್ಪು ಮತ್ತು ಸ್ವಲ್ಪ ಬೆಲ್ಲವನ್ನು ಹಾಕಿ ಕುದಿಸಿ ಕುಡಿದರೆ ಒಳ್ಳೆ ರುಚಿಯನ್ನು ನೀಡುತ್ತದೆ.
ಲೇಖಕರು: ಡಾ. ಕವಿತಾ ಯು. ಉಳ್ಳಿಕಾಶಿ, ವಿಜ್ಞಾನಿ (ಗೃಹ ವಿಜ್ಞಾನ) ಐ.ಸಿ.ಎ.ಆರ್- ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ, ಕೊಪ್ಪಳ