Success stories

ಹಸಿರುಮಯ ಆಟೋ! ಇಲ್ಲಿದೆ ಮಿನಿ ಸಂಚಾರಿ ಪಾರ್ಕ್!

09 April, 2022 3:52 PM IST By: Kalmesh T
The Greenest Auto! Here's the mini traffic park!

ಪರಿಸರ ಕಾಳಜಿ ಬಗ್ಗೆ ನಾವೆಲ್ಲ ಭಾಷಣ ಮಾಡಿ ಮರೆತು ಬಿಡುತ್ತೇವೆ. ಆದರೆ, ಇಲ್ಲೊಬ್ಬರು ತಮ್ಮ ದಿನಚರಿಯಲ್ಲಿಯೇ ಹಸಿರನ್ನು ಹಾಸಿ ಹೊದ್ದಿದ್ದಾರೆ. ಹೌದು! ಆಟೋ ಚಾಲಕರೊಬ್ಬರು ತಮ್ಮ ಆಟೋವನ್ನೇ ಪರಿಸರ ಸ್ನೇಹಿ ಗಾರ್ಡನ್‌ ರೀತಿ ರೂಪಿಸಿದ್ದು, ಇವರ ಆಟೋದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಆಟೋ ಚಾಲಕ ತನ್ನ ರಿಕ್ಷಾದಲ್ಲಿ ಬಿಸಿಲಿನ ಧಗೆಯಿಂದ ರಕ್ಷಿಸಿಕೊಳ್ಳಲು ಮಿನಿ ಗಾರ್ಡನ್ ಮಾಡಿದ್ದಾರೆ.

ಇದನ್ನು ಓದಿರಿ: 

ಬೆಲೆ ಏರಿಕೆಯ ಕೊಂಬೆಗೆ ಸಿಲುಕಿದ ನಿಂಬೆ! KG ಗೆ 300 ರೂ, RBI ಎಚ್ಚರಿಕೆ

ATM Card ಇಲ್ಲದೆ ಹಣ ಪಡೆಯಿರಿ: RBI ತರುತ್ತಿದೆ ಹೊಸ ಸೌಲಭ್ಯ !

ಎರಿಕ್ ಸೋಲ್ಹೈಮ್ ಎಂಬವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಈ ಫೋಟೋದಲ್ಲಿ ಒಂದು ಸಾಮಾನ್ಯ ಆಟೋವನ್ನು ಸಂಪೂರ್ಣ  ಹುಲ್ಲು ಮತ್ತು ಸಸ್ಯಗಳ ಪದರದಿಂದ ಆವೃತವಾಗಿರುವಂತೆ ಮಾಡಲಾಗಿದೆ. ಬಹುಪಾಲು ಆಟೋದವರು ರಿಬ್ಬನ್‌, ರೆಡಿಯಂ ಗಂಳತಹ ಅಲಂಕಾರಗಳನ್ನು ಬಳಸುವವ ನಡುವೆ ಇವರು ವಿಶೇಷವಾಗಿ ಆಟೋವನ್ನು ಸಿಂಗರಿಸುವ ಮೂಲಕ ಆದರ್ಶವಾಗಿದ್ದಾರೆ.

PMAY: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ?

ಈ ಫೋಟೋದಲ್ಲಿ ಆಟೋ ಚಾಲಕ ತನ್ನ ರಿಕ್ಷಾದಲ್ಲಿ ಕುಳಿತಿರುವುದನ್ನು ತೋರಿಸುತ್ತಿದೆ. ಆದರೆ ಈ ವಾಹನವು ನೀವು ಪ್ರತಿದಿನ ನೋಡುವ ರಿಕ್ಷಾಗಳಂತಲ್ಲ. ಇದನ್ನು ಹುಲ್ಲಿನ ಸೊಂಪಾದ ಪದರದಿಂದ ಮುಚ್ಚಲ್ಪಟ್ಟಿದೆ. ಅಲ್ಲದೆ, ರಿಕ್ಷಾದಲ್ಲಿ ಸಣ್ಣ ಸಣ್ಣ ಹಲವಾರು ಸಣ್ಣ ಪ್ಲಾಸ್ಟಿಕ್‌ ಕುಂಡಗಳಲ್ಲಿ ಸಸ್ಯಗಳನ್ನು ಇರಿಸಿರುವುದನ್ನು ಕಾಣಬಹುದು. ಈ ವ್ಯಕ್ತಿ ಬಿಸಿಲಲ್ಲಿಯೂ ತಂಪಾಗಿರಲು ತನ್ನ ರಿಕ್ಷಾದಲ್ಲಿ ಹುಲ್ಲು ಬೆಳೆದಿದ್ದಾನೆ. ನಿಜವಾಗಿಯೂ ಇದು ತಂಪಾಗಿದೆ ಎಂದು ಬರೆದು ಈ ಫೋಟೋವನ್ನು ಪೋಸ್ಟ್‌ ಮಾಡಲಾಗಿದೆ.

ATM Card ಇಲ್ಲದೆ ಹಣ ಪಡೆಯಿರಿ: RBI ತರುತ್ತಿದೆ ಹೊಸ ಸೌಲಭ್ಯ !

Bank Of Baroda ನೇಮಕಾತಿ: ವಾ. 18,00,000 ಸಂಬಳ

ಇವರ ಈ ಫೋಟೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದು, ಭಾರತ ಹಲವು ಕಾಣದ ಪ್ರತಿಭೆಗಳನ್ನು ಹೊಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೇರೆ ಆಟೋ ಚಾಲಕರು ಕೂಡ ಇದೇ ರೀತಿಯ ಕ್ರಮವನ್ನು ಕೈಗೊಂಡರೆ ಚೆನ್ನಾಗಿರುವುದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Agriculture Income! ರೈತರೇ ನಿಮ್ಮ Income 10 ಲಕ್ಷ ಮೀರಿದರೆ? ಏನಾಗುತ್ತೆ?

Chicken And Fish: ಚಿಕನ್‌ & ಮೀನು ಯಾವುದು ಬೆಸ್ಟ್‌..!