Success stories

70 ಎಕರೆ ಜಾಗ, 5 ಕೋಟಿ ಮರಗಳು, ಒಂದು ದೊಡ್ಡ ಕಾಡನ್ನೇ ಸೃಷ್ಟಿಸಿದ ಆಧುನಿಕ ಭಗೀರಥ!

09 April, 2022 5:49 PM IST By: Kalmesh T

ಅಭಿವೃದ್ಧಿ ಹೆಸರಲ್ಲಿ ನಿತ್ಯವೂ ಎಲ್ಲೆಡೆ ಮರಗಳನ್ನು ಕಡಿಯುತ್ತಿದ್ದಾರೆ. ಎಲ್ಲೆಲ್ಲೂ ಒಣ ರಸ್ತೆಗಳನ್ನೆ ಕಾಣುವುದು ಇಂದಿನ ಸರ್ವೇ ಸಾಮಾನ್ಯವಾದ ಸಂಗತಿಯಾಗಿದೆ. ಅದರ ನಡುವೆ ಇಲ್ಲೊಬ್ಬ ವ್ಯಕ್ತಿ 70 ಎಕರೆ ಜಾಗದಲ್ಲಿ 5 ಕೋಟಿ ಮರಗಳನ್ನು ಬೆಳೆಸಿ ಒಂದು ದೊಡ್ಡ ಕಾಡನ್ನೇ ನಿರ್ಮಾಣ ಮಾಡಿದ್ದಾರೆ.

ಹೌದು! ನಂಬಲು ತುಸು ಕಷ್ಟವೆನಿಸಿದರೂ ಇದು ಸತ್ಯ.! ತೇಲಂಗಾಣ ರಾಜ್ಯದ ಸೂರ್ಯಪೇಟ್ ಜಿಲ್ಲೆಯ ರಾಘವಪುರಂ ಗ್ರಾಮದ ದುಶಾರ್ಲಾ ಸತ್ಯನಾರಾಯಣ ಎಂಬ ವ್ಯಕ್ತಿಯೊಬ್ಬರು 70 ಎಕರೆ ಜಮೀನನ್ನು ಕಾಡನ್ನಾಗಿ ಪರಿವರ್ತನೆ ಮಾಡಿದ್ದಾರೆ.

ಇವರು ನಿರ್ಮಿಸಿದ ಅರಣ್ಯವು ಸರಿಸುಮಾರು 32 ವಿವಿಧ ಪಕ್ಷಿಗಳು, ಪ್ರಾಣಿಗಳು ಮತ್ತು ಸುಮಾರು 5 ಕೋಟಿ ವಿವಿಧ ರೀತಿಯ ಮರಗಳನ್ನು ಹೊಂದಿದೆ. ಸತ್ಯನಾರಾಯಣ ಅವರು ಬೆಳೆಸಿದ ಅರಣ್ಯವು ಏಳು ಕೊಳಗಳನ್ನು ಹೊಂದಿದ್ದು , ಅವುಗಳಲ್ಲಿ ಕಮಲದ ಕೊಳವು ಅತ್ಯಂತ ಜನಪ್ರಿಯವಾಗಿದೆ.

ಇದನ್ನು ಓದಿರಿ:

ಹಸಿರುಮಯ ಆಟೋ! ಇಲ್ಲಿದೆ ಮಿನಿ ಸಂಚಾರಿ ಪಾರ್ಕ್!

ಬಿರು ಬಿಸಿಲ ನಾಡು ಯಾದಗಿರಿಯಲ್ಲಿ ಹರಡಿದೆ ಕೆಂಪು ಡ್ರಾಗನ್ ಹಣ್ಣುಗಳ ಕಂಪು

ಪ್ರಕೃತಿ ಪ್ರೇಮಿ ಸತ್ಯನಾರಾಯಣ

ಸತ್ಯನಾರಾಯಣ್ ಬಾಲ್ಯದಿಂದಲೂ ಪ್ರಕೃತಿ ಪ್ರೇಮಿ. ಅವರು ತಮ್ಮ ಇಡೀ ಜೀವನವನ್ನು ರಾಘವಪುರಂ ಗ್ರಾಮದಲ್ಲಿ ಕಾಡಿನ ಆರೈಕೆಯಲ್ಲಿಯೇ ಕಳೆದಿದ್ದಾರೆ. ಸ್ವತಃ ಇಬ್ಬರು ಮಕ್ಕಳಿದ್ದರೂ ಆಸ್ತಿ ಮಾತ್ರ ಆ ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಸೀಮಿತವಾಗಿದೆ ಎನ್ನುವ ಅವರು ಪ್ರಕೃತಿ ಹಾಗೂ ಸಮಾಜ ಸೇವೆಯಲ್ಲಿ ಯಾವತ್ತಿಗೂ ಒಂದು ಕೈ ಮುಂದೆಯೇ ಇರುತ್ತಾರೆ. 

ಸತ್ಯನಾರಾಯಣ ಅವರು ನಿರ್ಮಿಸಿರುವ ಈ ಅರಣ್ಯಕ್ಕೆ ತುಂಬಾ ಬೆಲೆ ಬರುತ್ತಿದೆ. ಮಾರಾಟಕ್ಕೆ ಸಾಕಷ್ಟು ಜನ ಉದ್ಯಮಿಗಳು ಕೇಳಿದ್ದರಂತೆ. ಆದರೆ, ಕಳೆದ 60 ವರ್ಷಗಲಿಂದ ಕಷ್ಟಪಟ್ಟು ಬೆಳೆಸಿದ ಈ ಕಾಡಿನ ಜಾಗಕ್ಕೆ ಬೆಲೆ ಕಟ್ಟಬಹುದೇ ಹೊರತು ಸಂಪೂರ್ಣ  ಕಾಡಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮತ್ತು ತಮ್ಮ ಭೂಮಿಯನ್ನು ಮಾರುವ ಉದ್ದೇಶವನ್ನು ತಾವು ಹೊಂದಿಲ್ಲವೆಂದು ಅವರು ಖಡಕ್‌ ಆಗಿಯೇ ಉತ್ತರಿಸುತ್ತಾರೆ.

ಕಾಡನ್ನು ಬೆಳೆಸುವ ಯೋಚನೆ ಬಂದಿದ್ದು ಹೇಗೆ?

ಸತ್ಯನಾರಾಯಣ ಅವರು ಚಿಕ್ಕವರಾಗಿದ್ದಾಗ ಒಂದು ಘಟನೆ ನಡೆಯುತ್ತದೆ. ಒಂದು ದಿನ ಒಬ್ಬ ವ್ಯಕ್ತಿ ತನ್ನ ದನಕರುಗಳನ್ನು ಮೇಯಲು ಹೊರಗೆ ಬಿಟ್ಟಾಗ ಮರದ ಕೊಂಬೆಗಳನ್ನು ಮುರಿದು ಅವುಗಳಿಗೆ ತಿನ್ನಲು ಹಾಕುತ್ತಿರುತ್ತಾನೆ. ಇದನ್ನು ನೋಡಿ ಸಿಟ್ಟಿಗೆದ್ದ ಸತ್ಯನಾರಾಯಣ ಅವರು  ಅವನೊಂದಿಗೆ ಜಗಳ ಮಾಡುತ್ತಾರೆ.  ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೊಡೆದು ಬಿಡುತ್ತಾರೆ.

ಸುವರ್ಣ ಕರ್ನಾಟಕದಲ್ಲಿ ಸಂಚಲನ ಮೂಡಿಸಿದ ಬಾಳೆಕಾಯಿ ಹುಡಿ ನವೋದ್ಯಮ!

ಪಡಿತರ ತರಲು ಪರದಾಡಿದ್ದ ಯುವಕ; ಹೊಸ App ರಚಿಸಿದ ಕಥೆ!

ಇದರ ನಂತರ ಆ ಜಗಳ ಮನೆಯವರೆಗೂ ಬಂದು ದೂರು ನೀಡುತ್ತಾನೆ. ಆಗ ಸ್ವತಃ ಸತ್ಯನಾರಾಯಣ ಅವರ ತಂದೆಯೂ ಮಗನ ಕೆಲಸವನ್ನ ಮೆಚ್ಚಿ ಪರಿಸರ ಕಾಳಜಿ ನನ್ನ ಮಗನ ಗುಣ ಎಂದು ಹೇಳಿ ಜಗಳ ಮುಗಿಸಿ ಕಳುಹಿಸುತ್ತಾರೆ. ಹೀಗೆ ಆಗ ತಂದೆಯಿಂದ ದೊರೆತ ಸಣ್ಣ ಬೆಂಬಲ ಇಂದು ಇಷ್ಟು ದೊಡ್ಡ ಕಾಡನ್ನು ಬೆಳೆಸಲು ಕಾರಣವಾಗಿದೆ ಎನ್ನುತ್ತಾರೆ ಅವರು.

ಹವ್ಯಾಸಕ್ಕಾಗಿ ವೃತ್ತಿ ತೊರೆದು ನಿಂತ ಭಗೀರಥ!

ಸತ್ಯನಾರಾಯಣ ಅವರು ಕೃಷಿ ಕ್ಷೇತ್ರದಲ್ಲಿ ಪದವಿ ಪಡೆದಿದ್ದಾರೆ.  ನಂತರ ಬ್ಯಾಂಕ್‌ನಲ್ಲಿ ಕೆಲವು ದಿನಗಳ ಕಾಲ ಕೆಲಸ ಮಾಡಿದ್ದಾರೆ. ಮತ್ತೆ ನಲ್ಗೋಣ ಜಿಲ್ಲೆಯಲ್ಲಿ ಸಿಲುಕಿರುವ ನೀರಿನ ಸಮಸ್ಯೆಗಳ ಬಗ್ಗೆ ಕೆಲಸ ಮಾಡಲು ಅವರು ತಮ್ಮ ಬ್ಯಾಂಕ್ ಕೆಲಸವನ್ನು ತೊರೆದು ಬರುತ್ತಾರೆ. 

ಬರದ ನಾಡಿನಲ್ಲಿ ಗಂಧದಪರಿಮಳ ಹರಡಿಸಲು ಮುಂದಾಗಿದ್ದಾರೆ ಲಕ್ಷ್ಮಣಸಿಂಗ್ ಹಜೇರಿ

ಬರೀ 24 ಗುಂಟೆ ಪೇರಲ ಬೆಳೆದು ವರ್ಷಕ್ಕೆ 25 ಲಕ್ಷ ಆದಾಯ ಗಳಿಸುತ್ತಿರುವ ಯವ ರೈತ!

ಇಲ್ಲಿ ಮಾನವ ಹಸ್ತಕ್ಷೇಪ ಇಲ್ಲ!

ಸತ್ಯನಾರಾಯಣ ರಚಿಸಿದ ಕಾಡು ಇತರೆ ಸಹಜ ಕಾಡುಗಳಂತೆಯೇ ತನ್ನ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಕೊಂಬೆಗಳು ಬಿದ್ದರೆ ಅವು ಬಿದ್ದಲ್ಲಿಯೇ ಇರುತ್ತವೆ. ಅವುಗಳಲ್ಲಿ ಯಾರ ಹಸ್ತಕ್ಷೇಪವು ಆಗುವುದಿಲ್ಲ. ಅದರಲ್ಲಿ ವಾಸಿಸುವ ಪ್ರಾಣಿಗಳು ಮತ್ತು ಪಕ್ಷಿಗಳು ಕಾಡಿನ ಪುನರುಜ್ಜೀವನಕ್ಕೆ ಸಹಾಯ ಮಾಡುತ್ತವೆ.

ಹೀಗೆ ಸರ್ಕಾರಗಳೇ ಮುಂದೆ ನಿಂತು ಇಂದು ಕಾಡುಗಳನ್ನು ನುಂಗಿ ನೀರು ಕುಡಿಯುತ್ತಿರುವ ಸಮಯದಲ್ಲಿ ಸತ್ಯನಾರಾಯಣ ಅವರು ಸ್ವಂತ ಆಸ್ತಿಯಲ್ಲಿ ಕಾಡನ್ನು ನಿರ್ಮಿಸಿ ಅದರ ಪಾಲನೆಗೆ ನಿಂತದ್ದು ಅಚ್ಚರಿ ಹಾಗೂ ಒಂದು ದೊಡ್ಡ ಸಾಮಾಜಿಕ ಕಾರ್ಯವೇ ಸರಿ.

Beekeepingನಿಂದ ರೂ.12 ಲಕ್ಷ ಗಳಿಸಿ!

Pearl-Fish Farming! Profitable Business! ಮಹಿಳೆಯೊಬ್ಬಳು ರೂ 20,00,000 ಕಿಂತ ಹೆಚ್ಚು ಗಾಳಿಸುತ್ತಾಳೆ!