News

ಅಕೌಂಟ್‌ನಲ್ಲಿ ಜಿರೋ ಬ್ಯಾಲೆನ್ಸ್ ಹೊಂದಿರುವಿರಾ..? ಹಾಗಾದ್ರೆ ನೀವು 4 ಲಕ್ಷ ರೂಗಳ ಈ ಪ್ರಯೋಜನವನ್ನು ಕಳೆದುಕೊಳ್ಳುವಿರಿ

21 May, 2022 11:56 AM IST By: Maltesh
Zero Balance

ನೀವು ನಿಮ್ಮ ಬ್ಯಾಂಕ್‌ ಅಕೌಂಟ್‌ನಲ್ಲಿ ಶೂನ್ಯ ಬಾಲೆನ್ಸ್‌ ಹೊಂದಿದ್ದೀರಾ..? ಹೌದು ನೀವು ಶೂನ್ಯ ಬ್ಯಾಲೆನ್ಸ್‌ ಅನ್ನು ನಿಮ್ಮ ಅಕೌಂಟ್‌ನಲ್ಲಿ  ನಿರ್ವಹಿಸುತ್ತಿದ್ದರೆ 4 ಲಕ್ಷ ರೂಪಾಯಿಯ ಪ್ರಯೋಜನದಿಂದ ನೀವು ವಂಚಿತರಾಗಲಿದ್ದೀರಿ..

ಯೆಸ್‌ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಮೊತ್ತವನ್ನು ನಿರ್ವಹಿಸದಿರುವುದು ನಿಮ್ಮ ಖಾತೆಯಲ್ಲಿರುವ ಹಣದಿಂದ ಕಡಿತಗೊಳಿಸಲಾದ ಕೇವಲ ಪ್ರೀಮಿಯಂಗಾಗಿ ಕೇಂದ್ರ ಸರ್ಕಾರವು ನೀಡುವ ಪ್ರಯೋಜನಗಳನ್ನು ಕಳೆದುಕೊಳ್ಳಬಹುದು. ಕೇಂದ್ರ ಸರ್ಕಾರದ ಎರಡು ಯೋಜನೆಗಳ ಅಡಿಯಲ್ಲಿ ನೀಡಲಾಗುವ ವಿಮೆಗಳು -- ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) -- ಶೀಘ್ರದಲ್ಲೇ ನವೀಕರಿಸಲಾಗುವುದು. ಅದಕ್ಕಾಗಿಯೇ ನೀವು ಇವುಗಳ  ಪ್ರಯೋಜನಗಳನ್ನು ಮುಂದುವರಿಸಲು ಬ್ಯಾಂಕ್ ಖಾತೆಯಲ್ಲಿ ಚೂರು ಹಣವನ್ನು ನಿರ್ವಹಿಸುವುದು ಅವಶ್ಯಕ.

ಕೇಂದ್ರ ಸಚಿವ ಪರ್ಷೋತ್ತಮ್ ರೂಪಾಲಾ ಅವರಿಂದ ವಿದ್ಯಾರ್ಥಿಗಳಿಗೆ “ಗೋ ಕಾಶ್ಟ್” ಯಂತ್ರ ವಿತರಣೆ!

ರಸಗೊಬ್ಬರ, ಬೀಜ ಹಾಗೂ ಕೀಟನಾಶಕಗಳ ಆನ್ಲೈನ್ ಡೀಲರ್ಶಿಪ್ ಪರವಾನಗಿ ಪಡೆಯುವ ವಿಧಾನಗಳು!

PMJJBY ಮತ್ತು PMSBY ಯೋಜನೆಗಳ ಅಡಿಯಲ್ಲಿ ನೀಡಲಾಗುವ ವಿಮಾ ಪಾಲಿಸಿಗಳನ್ನು ನವೀಕರಿಸಲು ಕೊನೆಯ ದಿನಾಂಕವು ಮೇ 31, 2022 ಆಗಿದೆ. ಫಲಾನುಭವಿಗಳು ಎರಡು ಯೋಜನೆಗಳ ಅಡಿಯಲ್ಲಿ ರೂ 4 ಲಕ್ಷ ಮೌಲ್ಯದ ವಿಮಾ ಪ್ರಯೋಜನಗಳನ್ನು ಪಡೆಯುತ್ತಾರೆ.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY)

ಕೇಂದ್ರ ಸರ್ಕಾರ ಪ್ರಾಯೋಜಿತ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಆಕಸ್ಮಿಕ ವಿಮಾ ಯೋಜನೆಯಾಗಿದೆ. ಅಪಘಾತದಲ್ಲಿ ಪಾಲಿಸಿದಾರನು ಮರಣಹೊಂದಿದರೆ ಮಾತ್ರ ನಾಮಿನಿ/ಗಳಿಗೆ ಹಣಕಾಸಿನ ಮೊತ್ತವನ್ನು ಒದಗಿಸಲಾಗುತ್ತದೆ. 18 ರಿಂದ 70 ವರ್ಷ ವಯಸ್ಸಿನ ಭಾರತೀಯ ನಾಗರಿಕರು ಪಾಲಿಸಿಯನ್ನು ಖರೀದಿಸಬಹುದು. ಈ ಯೋಜನೆಯು ಕೇವಲ 12 ರೂ. ವಾರ್ಷಿಕ ಪ್ರೀಮಿಯಂಗೆ ಲಭ್ಯವಾಗುತ್ತದೆ.  ಆಕಸ್ಮಿಕ ಮರಣದ ಸಂದರ್ಭದಲ್ಲಿ ರೂ. 2 ಲಕ್ಷ ಲಭ್ಯವಾಗುತ್ತದೆ.

ರಾಜ್ಯಾದ್ಯಂತ ಭಾರೀ ಮಳೆ: ಬರೋಬ್ಬರಿ 7 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ (PMJJBY)

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) 18 ರಿಂದ 50 ರ ನಡುವೆ ಲಭ್ಯವಾಗುವ ಜೀವ ವಿಮಾ ಯೋಜನೆಯಾಗಿದೆ. ಪಾಲಿಸಿದಾರನು ಮರಣಹೊಂದಿದರೆ, ಅವನ ಅಥವಾ ಅವಳ ಕುಟುಂಬ ಸದಸ್ಯರು ಅಥವಾ ನಾಮ ನಿರ್ದೇಶಿತರಿಗೆ ಹಣಕಾಸಿನ ಸಹಾಯವನ್ನು ನೀಡಲಾಗುತ್ತದೆ. ಅರ್ಹ ನಾಗರಿಕರು ವರ್ಷಕ್ಕೆ ರೂ 330 ಪಾವತಿಸುವ ಮೂಲಕ ರೂ 2 ಲಕ್ಷ ಮೌಲ್ಯದ ಜೀವ ವಿಮಾ ರಕ್ಷಣೆಯನ್ನು ಪಡೆಯಬಹುದು. ಇನ್ನು ಈ ಎರಡು ಪಾಲಿಸಿ ಮೊತ್ತವನ್ನು ಪಾಲಿಸಿದಾರರ ಖಾತೆಯಿಂದ ಪ್ರೀಮಿಯಂ ಅನ್ನು ಸ್ವಯಂ-ಡೆಬಿಟ್ ಮಾಡಲಾಗುತ್ತದೆ.

ಕೆರೂರು ಏತ ನೀರಾವರಿ ಯೋಜನೆಗೆ CM ಬೊಮ್ಮಾಯಿ ಶಂಕುಸ್ಥಾಪನೆ!

“ನೈಸ್ ಯೋಜನೆಗೆ ನೀಡಿದ್ದ 543 ಎಕರೆ ಭೂಮಿ ವಾಪಸ್”- ಕಂದಾಯ ಸಚಿವ ಆರ್.ಅಶೋಕ್

ಸದ್ಯ ಈ ಎರಡು ಪಾಲಿಸಿಗಳು ಮೇ ಕೊನೆಯ ದಿನದಂದು ನವೀಕರಣಗೊಳ್ಳಿದೆ. ಎರಡು ವಿಮಾ ಪಾಲಿಸಿಗಳ ಅಡಿಯಲ್ಲಿನ 4 ಲಕ್ಷ ರೂಗಳ ಪ್ರಯೋಜನವನ್ನು ಖಚಿತಪಡಿಸಿಕೊಳ್ಳಲು  ಪಾಲಿಸಿದಾರರು ಕನಿಷ್ಠ ರೂ 342 (PMJJBY ಗೆ ರೂ 330 ಮತ್ತು PMSBY ಗೆ ರೂ 12)  ರೂಪಾಯಿ ಅನ್ನು ತಮ್ಮ ಖಾತೆಯಲ್ಲಿ ಇಟ್ಟುಕೊಳ್ಳಬೇಕು.