News

ರಾಜ್ಯಕ್ಕೆ ಇನ್ನೂ ಐದು ವರ್ಷ ವಿರೋಧ ಪಕ್ಷದ ನಾಯಕ ಇರಲ್ವಾ?!

09 August, 2023 11:17 AM IST By: Hitesh
Will the state have an opposition leader for another five years?!

ರಾಜ್ಯದಲ್ಲಿ ಚುನಾವಣಾ ಫಲಿತಾಂಶ ಬಂದು ಮೂರು ತಿಂಗಳು ಸಮೀಪಿಸುತ್ತಿದ್ದರೂ, ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ. ಇದಕ್ಕೆ ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ರಾಜ್ಯ ರಾಜಕೀಯದಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗುತ್ತಿದ್ದರೂ, ವಿರೋಧ ಪಕ್ಷದ ನಾಯಕ ಯಾರು ಎನ್ನುವುದಕ್ಕೆ ಇಲ್ಲಿಯವರೆಗೆ ಯಾವುದೇ ಉತ್ತರ ಸಿಕ್ಕಿಲ್ಲ.

ಇದನ್ನು ಕಾಂಗ್ರೆಸ್‌ ನಿರಂತರವಾಗಿ ಟ್ರೋಲ್‌ ಮಾಡುತ್ತಿದೆ.

ಜಗತ್ತಿನಲ್ಲಿಯೇ ಹೆಚ್ಚು ಕಾರ್ಯಕರ್ತರ ಪಡೆಯನ್ನು ಹೊಂದಿದ್ದೇವೆ. ನಮ್ಮದು ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿಗೆ ಒಬ್ಬ ವಿರೋಧ

ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲವೇ ಎಂದು ಪ್ರಶ್ನೆ ಮಾಡುತ್ತಿದೆ.

ಈ ಸಂಬಂಧ ಕಾಂಗ್ರೆಸ್‌ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ

ಐದು ವರ್ಷವೂ ಕಳೆದುಹೋಗುವ ಸಾಧ್ಯತೆ ಇದೆ! ಎಂದು ವ್ಯಂಗ್ಯವಾಗಿಡಿದೆ.

ಕರ್ನಾಟಕದ ವಿರೋಧ ಪಕ್ಷದ ನಾಯಕ ಯಾರು ಎನ್ನುವುದಕ್ಕೆ ಉತ್ತರವೇ ಇಲ್ಲ!

ಸಂತೋಷ ಬಣ, BSY ಬಣದ ಗುದ್ದಾಟದಲ್ಲಿ ವಿಪಕ್ಷ ನಾಯಕನ ಕುರ್ಚಿ ಅನಾಥವಾಗಿಯೇ ಉಳಿಯಲಿದೆ.

ಪಕ್ಷಕ್ಕೆ ಒಬ್ಬ ಅಧ್ಯಕ್ಷ, ವಿಧಾನಸಭೆಗೆ ಒಬ್ಬ ವಿಪಕ್ಷ ನಾಯಕ ಸಿಗದಷ್ಟು BJP Karnataka ಗೆ ರಾಜಕೀಯ ದಾರಿದ್ರ್ಯ ಅಂಟಿಕೊಂಡಿದೆ,

ಇಂತಹ ಹೀನಾಯ ಸ್ಥಿತಿಗೆ ತಳ್ಳಿದ್ದು ಬಿಜೆಪಿಯ ಹೈಕಮಾಂಡೊ ಅಥವಾ ಸಂತೋಷ ಕೂಟವೋ? ಎಂದು ಪ್ರಶ್ನೆ ಮಾಡಿದೆ. 

ಮೇ 13ಕ್ಕೆ ಕರ್ನಾಟಕ ವಿಧಾನಸಭೆಯ ಚುನಾವಣೆಯ ಫಲಿತಾಂಶ ಪ್ರಕಟವಾಗಿ 135 ಸ್ಥಾನಗಳ ಅಭೂತಪೂರ್ವ ಯಶಸ್ಸನ್ನು ಸಾಧಿಸಿದೆ.

ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಇದಾದ ನಂತರದಲ್ಲಿ

ಕರ್ನಾಟಕದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಮಂತ್ರಿಮಂಡಲ ರಚನೆಯೂ ಆಗಿದೆ.

ಅಲ್ಲದೇ ಕರ್ನಾಟಕದ 2023-24ನೇ ಸಾಲಿನ ಬಜೆಟ್‌ ಹಾಗೂ ವಿಧಾನಸಭೆ ಅಧಿವೇಶನವೂ ಪ್ರಾರಂಭವಾಗಿದೆ.

ವಿಧಾನಸಭೆ ಅಧಿವೇಶನ ಪ್ರಾರಂಭವಾಗಿ ಈಗಾಗಲೇ ಎರಡು ವಾರಗಳು ಮುಕ್ತಾಯವಾಗುತ್ತಿದ್ದು, ಮೂರನೇ ವಾರಕ್ಕೆ ವಿಧಾನಸಭೆ ಅಧಿವೇಶನ ಹೋಗುತ್ತಿದೆ.

ಇಷ್ಟೆಲ್ಲ ಬೆಳವಣಿಗೆಯಾದರೂ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರ ಆಯ್ಕೆಯಾಗಿಲ್ಲ ಎಂದು ಹೇಳಿದೆ.  

ಕಾಂಗ್ರೆಸ್‌ನಿಂದ ನಿರಂತರ ಟ್ರೋಲ್‌!

ಬಿಜೆಪಿ ವಿರೋಧ ಪಕ್ಷದ ನಾಯಕನ್ನು ಆಯ್ಕೆ ಮಾಡದೆ ಇರುವುದರಿಂದ ಕಾಂಗ್ರೆಸ್‌ ಈ ವಿಷಯವನ್ನು ನಿರಂತರವಾಗಿ ಟ್ರೋಲ್‌ ಮಾಡಿತು.

ಅಲ್ಲದೇ ನಿಮಗೆ ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲವೇ ಎಂದು ಪ್ರಶ್ನೆ ಮಾಡಿ ಟ್ರೋಲ್‌ ಮಾಡಿತ್ತು.

ನಮ್ಮ ಪ್ರಕಟಣೆಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ, dear BJP Karnataka ನಿಮ್ಮ ಹೈಕಮಾಂಡ್ ವರಿಷ್ಠರಿಗೆ ಇನ್ನೂ ಸೂಕ್ತ ಸಂದರ್ಭ,

ಸೂಕ್ತ ಸಮಯ, ಸೂಕ್ತ ಮುಹೂರ್ತ ಕೂಡಿ ಬಂದಿಲ್ಲವೇ ಎಂದು ಪ್ರಶ್ನೆಯನ್ನು ಸಹ ಮಾಡಿತ್ತು. 

ಹೀನಾಯ ಸೋಲಿನ ಬಳಿಕ ಕರ್ನಾಟಕ ಬಿಜೆಪಿಯನ್ನು ದೆಹಲಿಯ ನಾಯಕರು ಕಾಲ ಕೆಳಗಿನ ಕಸದಂತೆ ಕಾಣುತ್ತಿದ್ದಾರೆಯೇ?

ಅಥವಾ ಆಂತರಿಕ ಕಲಹ ಇನ್ನೂ ಮುಗಿದಿಲ್ಲವೇ? ಎಂದು ಪ್ರಶ್ನೆ ಮಾಡಿತ್ತು.