News

“ಕರ್ನಾಟಕದ ಅಲ್ಫಾನ್ಸೋ ರಾಜಧಾನಿ” ಟ್ಯಾಗ್ ಕಳೆದುಕೊಳ್ಳಲಿದೆಯಾ ಧಾರವಾಡ?

26 April, 2022 5:43 PM IST By: Kalmesh T
Will Dharwad lose the "Alfonso Capital of Karnataka" tag?

ಮಾವು ಬೆಳೆಯ ಬೆಳೆಗಾರರು ಬೇರೆ ಬೇರೆ ಉತ್ಪನ್ನಗಳ ಬೆನ್ನ ಹಿಂದೆ ಬಿದ್ದ ಕಾರಣವೋ ಅಥವಾ ಈ ಸಲ ಬೇರೆ ಕಾರಣವೋ ಏನೋ ಧಾರವಾಡದಲ್ಲಿ ಎಣಿಕೆ ಲೆಕ್ಕದ ಮಾವು ಬರುತ್ತಿಲ್ಲ. ಪ್ರತಿ ವರ್ಷ ಏಪ್ರಿಲ್‌ ತಿಂಗಳ ಸಮಯಕ್ಕೆ ಮಾರುಕಟ್ಟೆಯಲ್ಲೆಲ್ಲ ತನ್ನದೇ ಘಮವನ್ನ ಕಾಯ್ದುಕೊಳ್ಳುತ್ತಿದ್ದ ಮಾವು ಈ ವರ್ಷ ಹೇಳ ಹೆಸರಿಲ್ಲದಂತಾಗಿದೆ. ಅಂದರೇ 45 ರಿಂದ 50 ದಿನಗಳ ಕಾಲ ತಡವಾಗಿ ಮಾರುಕಟ್ಟೆ ಪ್ರವೇಶಿಸಲಿದೆ.

ಅಲ್ಫೊನ್ಸೊ ಮಾವು ಬೆಳೆಯುವ ಪ್ರದೇಶವು 2017ರಲ್ಲಿ 25,000 ಹೆಕ್ಟೇರ್‌ನಿಂದ ಈ ವರ್ಷ 8,890 ಹೆಕ್ಟೇರ್‌ಗೆ ಕುಗ್ಗಿದೆ. ಶೀಘ್ರದಲ್ಲಿಯೇ ಧಾರವಾಡ ತನ್ನ 'ಕರ್ನಾಟಕದ ಅಲ್ಫೋನ್ಸೋ ರಾಜಧಾನಿ' ಟ್ಯಾಗ್ ಅನ್ನು ಕಳೆದುಕೊಳ್ಳಬಹುದು. ಧಾರವಾಡ ಜಿಲ್ಲೆಯಲ್ಲಿ ಬೆಳೆಯುವ ಸುಮಾರು 95% ಮಾವು ಅಲ್ಫೋನ್ಸೋ ತಳಿಯಾಗಿದೆ.

ಇದನ್ನೂ ಓದಿರಿ:

MANGO FARMING! ಉತ್ತಮ MANGOಗಾಗಿ ಏನು ಮಾಡಬೇಕು?

ಇಂದು (ಜುಲೈ 22) ರಾಷ್ಟ್ರೀಯ ಮಾವು ದಿನ; ಬನ್ನಿ ಹಣ್ಣುಗಳ ರಾಜನ ಇತಿಹಾಸ ತಿಳಿಯೋಣ

ಹವಾಮಾನ ವೈಪರೀತ್ಯಗಳು ಮತ್ತು ಏರಿಳಿತದ ಮಾರುಕಟ್ಟೆ ಬೆಲೆಗಳು ಮಾವು ಬೆಳೆಗಾರರನ್ನು ಪರ್ಯಾಯಗಳನ್ನು ಹುಡುಕುವಂತೆ ಮಾಡಿದೆ. ಈ ಪರಿಣಾಮವಾಗಿ, ಪೇರಲ, ಅಡಿಕೆ, ಒಂದು ಕಾಲದಲ್ಲಿ ಮಾವಿನ ತೋಟಗಳಲ್ಲಿ ಗೋಡಂಬಿ ಮತ್ತು ಬಾಳೆ ಕೃಷಿ ಬೆಳೆಯುತ್ತಿದೆ.  ಎರಡು ವರ್ಷಗಳ ಹಿಂದೆ ಜಿಲ್ಲೆಗೆ 1.37 ಲಕ್ಷ ಟನ್ ಇಳುವರಿ ಬಂದಿತ್ತು. ಈ ವರ್ಷ ಇಳುವರಿ 60 ಸಾವಿರ ಟನ್ ದಾಟುವುದಿಲ್ಲ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು. 

ಮುಖ್ಯವಾಗಿ ಕರ್ನಾಟಕದ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಬೆಳೆಯುವ ಅಲ್ಫೋನ್ಸೊ ಉತ್ತಮ ರಫ್ತು ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಯುರೋಪ್, ಯುಎಸ್ಎ, ಆಸ್ಟ್ರೇಲಿಯಾ ಮತ್ತು ಕೆಲವು ಏಷ್ಯಾದ ದೇಶಗಳಿಗೆ ರಫ್ತು ಮಾಡಲಾಗುತ್ತದೆ.

ಮಿಯಾಜಕಿ; ಇದು ಜಗತ್ತಿನ ಅತ್ಯಂತ ದುಬಾರಿ ಮಾವು: ಇದರ ಬೆಲೆ ಕೆ.ಜಿಗೆ 2.7 ಲಕ್ಷ ರೂಪಾಯಿ!

ಈ ಮಾವಿನ ಹಣ್ಣಿನ ಬೆಲೆ ಕೇಳಿದರೆ ಬೆಚ್ಚಿ ಬೀಳ್ತೀರ!

ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಂತಹ ಮಾವು ಬೆಳೆಯುವ ಇತರ ಪ್ರದೇಶಗಳಲ್ಲಿಯೂ ಕಡಿಮೆ ಇಳುವರಿ ಮತ್ತು ವಿಳಂಬವಾದ ಕೊಯ್ಲು ಕಾಣಬಹುದು. ಈ ಪ್ರದೇಶಗಳಲ್ಲಿ ವಿವಿಧ ಮಾವಿನ ಹಣ್ಣುಗಳನ್ನು ಬೆಳೆಯುತ್ತಾರೆ. ಇಳುವರಿ ಉತ್ತಮವಾದಾಗ, ರೈತರು ಪ್ರತಿ ಹೆಕ್ಟೇರ್ ಭೂಮಿಗೆ ಗರಿಷ್ಠ ಆರು ಟನ್ ಹಣ್ಣುಗಳನ್ನು ಪಡೆಯಬೇಕು. ಆದರೆ ಈ ಹಂಗಾಮಿನಲ್ಲಿ ಹೆಕ್ಟೇರ್‌ಗೆ ಎರಡು ಟನ್‌ಗಿಂತ ಕಡಿಮೆ ಇಳುವರಿ ಬಂದಿದೆ.

ಮಾವಿಗೆ ತಗಲುವ ಹಣ್ಣು ನೊಣದ ಬಾಧೆ ನಿರ್ವಹಣೆ

ಮಾವಿನ ತೋಟ ಸ್ಥಾಪನೆಗೆ ತೋಟಗಾರಿಕಾ ಇಲಾಖೆಯಿಂದ 7.5 ಲಕ್ಷ ರೂಪಾಯಿಯವರೆಗೆ ಸಹಾಯಧನ