ಮಂಗಳವಾರ ಮಧ್ಯಾಹ್ನದಿಂದ ವಾಟ್ಯಾಪ್ ಕಾರ್ಯನಿರ್ವಹಣೆಯಲ್ಲಿ ಏರುಪೇರಾಗಿದೆ. ವಾಟ್ಯಾಪ್‌ಗೂ ಗ್ರಹಣ ಎಂದು ಜನ ಟ್ರೋಲ್ ಮಾಡಿದ್ದಾರೆ…
ಭಾರತ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿ, ಸಂಭ್ರಮಕ್ಕೆ ಮತ್ತೊಂದು ಕಾರಣ!
ಮಂಗಳವಾರ ಮಧ್ಯಾಹ್ನ 12.30ರಿಂದ ಭಾರತ ಸೇರಿದಂತೆ ವಿಶ್ವದಾದ್ಯಂತ ವಾಟ್ಯಾಪ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಇದು ಸಹಜವಾಗಿಯೇ ವಾಟ್ಯಾಪ್ ಬಳಕೆದಾರರನ್ನು ಚಿಂತೆಗೀಡು ಮಾಡಿದೆ. ಭಾರತದ ಹಲವೆಡೆ ವಾಟ್ಸಾಪ್ ಬಳಕೆದಾರರು ಸಂದೇಶ ರವಾನಿಸಲು ಹಾಗೂ ಸ್ವೀಕರಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.
ಇದನ್ನೂ ಓದಿರಿ: ಚಿನ್ನ, ಬೆಳ್ಳಿ ದರ ಯಥಾಸ್ಥಿತಿ, ಎಷ್ಟಿದೆ ಚಿನ್ನ, ಬೆಳ್ಳಿ ದರ ?
ವಾಟ್ಸಾಪ್ ಮೊಬೈಲ್ ಅಪ್ಲಿಕೇಷನ್ ಮತ್ತು ವೆಬ್ ಅಪ್ಲಿಕೇಷನ್ ಎರಡೂ ಕಾರ್ಯಚರಣೆ ಸ್ಥಗಿತಗೊಂಡಿದೆ.
ವಾಟ್ಸಾಪ್ ಆಡಿಯೊ ಮತ್ತು ವಿಡಿಯೊ ಕಾಲ್ ಸೇವೆಯೂ ಕಾರ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ವಾಟ್ಸಾಪ್ ಕಡೆಯಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ವಾಟ್ಸಾಪ್ ತೆರೆಯಲು ಸಾಧ್ಯವಾಗುತ್ತಿದೆ. ಆದರೆ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಹಲವು ಬಳಕೆದಾರರು ದೂರಿದ್ದಾರೆ.
ಇದೇ ಸಮುಯದಲ್ಲಿ ವಾಟ್ಯಾಪ್ ಸ್ಥಗಿತವಾಗಿರುವುದಕ್ಕೆ ಟ್ರೋಲ್‌ಗಳು ಸಹ ಪ್ರಾರಂಭವಾಗಿದೆ.
ಬಹುಶಃ ವಾಟ್ಯಾಪ್‌ಗೂ ಗ್ರಹಣ ಆಗಿರುವ ಬೇಕು ಎಂದು, ಬರ್ತಾ ಇದೆ. ಇಲ್ಲ ಬರ್ತಾ ಇಲ್ಲ ಎನ್ನುವುದು ಸೇರಿದಂತೆ ಹಲವು ರೀತಿಯಲ್ಲಿ ಟ್ರೋಲ್ ಆಗುತ್ತಿದೆ.
ಪಿಎಂ ಉಜ್ವಲ ಯೋಜನೆಯಡಿ ಸರ್ಕಾರದಿಂದ ದೊರೆಯಲಿವೆ 2 ಉಚಿತ ಸಿಲೆಂಡರ್! ಯಾರು ಅರ್ಹರು ಗೊತ್ತೆ?
ವಾಟ್ಯಾಪ್ ಸ್ಥಗಿತವಾಗಿರುವುದಕ್ಕೆ ಸಂಬಂಧಿಸಿದಂತೆ ಟ್ವೀಟರ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಾಪ್ ಡೌನ್ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ. ತುರ್ತು ಸಂದೇಶಗಳನ್ನು ಕಳುಹಿಸಲಾಗದೆ ಹಲವರು ಸಮಸ್ಯೆ ಎದುರಿಸುತ್ತಿದ್ದಾರೆ.