News

ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದೇನು,ಬಜೆಟ್‌ ಹೈಲೆಟ್ಸ್‌ ಇಲ್ಲಿದೆ!

01 February, 2023 3:30 PM IST By: Hitesh
What Karnataka got in the budget, here are the budget highlights!

ಕೇಂದ್ರ ಸರ್ಕಾರದ 2023-24ನೇ ಸಾಲಿನ ಬಜೆಟ್‌ ಮೇಲೆ ಬಹುನಿರೀಕ್ಷೆ ಮೂಡಿಸಿತ್ತು. ನಿರೀಕ್ಷೆಯಂತೆ ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಉತ್ತಮ ಕೊಡುಗೆ ಸಿಕ್ಕಿದೆ.

ಕೇಂದ್ರ ಬಜೆಟ್‌ 2023 ಮಹಿಳೆಯರಿಗೆ ಕಹಿಸುದ್ದಿ: ಚಿನ್ನ, ಬೆಳ್ಳಿ ದರ ತುಟ್ಟಿ! ಯಾವೆಲ್ಲ ವಸ್ತುಗಳ ಬೆಲೆ ಏರಿಕೆ, ಇಳಿಕೆ ಇಲ್ಲಿದೆ ವಿವರ

ಅದೇ ಸಂದರ್ಭದಲ್ಲಿ ಕೆಲವು ವಸ್ತುಗಳ ಬೆಲೆ ಏರಿಕೆಯೂ ಆಗಿದೆ. ಕೃಷಿ, ಶಿಕ್ಷಣ, ಮಧ್ಯಮ ವರ್ಗದವರನ್ನೂ ಗಮನದಲ್ಲಿ ಇರಿಸಿಕೊಂಡು ಈ ಬಾರಿಯ ಬಜೆಟ್‌ ಮಂಡನೆ ಮಾಡಲಾಗಿದೆ. 

ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ.

ಬಜೆಟ್‌ನ ಪ್ರಮುಖ ಅಂಶಗಳು ಈ ರೀತಿ ಇವೆ 

  • ಹಸಿರು ಕ್ರಾಂತಿಗಾಗಿ ರಾಜ್ಯಗಳನ್ನು ಉತ್ತೇಜನ ಮಾಡಲು ಪಿ.ಎಂ ಪ್ರಣಾಮ್ ಯೋಜನೆ ಪರಿಚಯ
  • ಗೋಬರ್ದನ್ ಯೋಜನೆ ಅಡಿ ದೇಶಾದ್ಯಂತ 200 ಬಯೋ ಗ್ಯಾಸ್ ಘಟಕಗಳ ನಿರ್ಮಾಣ
  • ಮೊಬೈಲ್ ಫೋನ್ ಕ್ಯಾಮರಾ ಲೆನ್ಸ್ ಆಮದು ಸುಂಕ ರದ್ದು  
  • ಮೊಬೈಲ್ ಫೋನ್‌ಗಳ ದರ ಇಳಿಕೆ

ಮಧ್ಯಮ ವರ್ಗದವರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ: 7ಲಕ್ಷದ ವರೆಗೆ ಆದಾಯ ತೆರಿಗೆ ವಿನಾಯಿತಿ!

  • ಲೀಥಿಯಂ ಅಯಾನ್ ಬ್ಯಾಟರಿಗಳು ಅಗ್ಗ, ಕಸ್ಟಮ್ ಡ್ಯೂಟಿ ಶೇ. 13ರಷ್ಟು ಇಳಿಕೆ
  • ಮೊಬೈಲ್, ಕ್ಯಾಮರಾ ಲೆನ್ಸ್, ಟಿವಿ ಬೆಲೆ ಇಳಿಕೆ
  • ಬ್ಲೆಂಡೆಡ್ ಸಿಎನ್‌ಜಿಗೆ ಸುಂಕ ಕಡಿತ
  • ಆದಾಯ ತೆರಿಗೆ ವಿನಾಯಿತಿ ಮಿತಿ 5 ಲಕ್ಷದಿಂದ 7 ಲಕ್ಷ ರೂಪಾಯಿಗೆ 
  • ಕೇಂದ್ರ ಸರ್ಕಾರವು ಸಿರಿಧಾನ್ಯಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದು, ಈ ಬಾರಿಯ ಬಜೆಟ್‌ನಲ್ಲಿ ಸಿರಿಧಾನ್ಯ ಸೇರಿದಂತೆ ರಾಗಿ, ಜೋಳ ಸೇರಿದಂತೆ ಸಿರಿ ಧಾನ್ಯಗಳ ಕೃಷಿ ಉತ್ತೇಜನ ನೀಡುವುದಕ್ಕೆ ಹೊಸ ಯೋಜನೆ ಪರಿಚಯಿಸಲಿದೆ
  • ಕೃಷಿ ಸಾಲಕ್ಕೆ 20 ಲಕ್ಷ ಕೋಟಿ ರೂ. ಮೀಸಲು
  • ಪ್ಲಾಟಿನಂ, ಬಂಗಾರ, ಬೆಳ್ಳಿ, ವಜ್ರ ದುಬಾರಿ 

ಓಲ್ಡ್‌ ಪೊಲ್ಯೂಟಿಂಗ್‌ ಎನ್ನುವುದಕ್ಕೆ ಓಲ್ಡ್‌ ಪೊಲಿಟಿಕಲ್‌ ಎಂದ ನಿರ್ಮಲಾ ಸೀತರಾಮನ್‌ ನಗೆಗಡಲಲ್ಲಿ ತೇಲಿದ ಸಂಸತ್!

  • ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳ ದರ ಇಳಿಕೆ
  • ಸಿಗರೇಟ್ ಮೇಲಿನ ತೆರಿಗೆ ಏರಿಕೆ
  • ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ರೂಪಾಯಿ ಅನುದಾನ
  • ರೈಲ್ವೆ ಇಲಾಖೆಗೆ 2.40 ಲಕ್ಷ ಕೋಟಿ ರೂಪಾಯಿ ಬಿಡುಗಡೆ
  • ದೇಶದಲ್ಲಿ 50 ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ
  • ನಗರೋತ್ಥಾನಕ್ಕಾಗಿ 10 ಸಾವಿರ ಕೋಟಿ ರೂಪಾಯಿ ಮೀಸಲು
  • ದೇಶಾದ್ಯಂತ 157 ನೂತನ ನರ್ಸಿಂಗ್ ಕಾಲೇಜುಗಳ ಸ್ಥಾಪನೆ
  • 2047ರ ಒಳಗೆ ಮ್ಯಾನ್‌ಹೋಲ್ ಮುಕ್ತ ಚರಂಡಿ ವ್ಯವಸ್ಥೆ
  • ರಾಜ್ಯ ಸರ್ಕಾರಗಳಿಗೆ ನೀಡುವ 50 ವರ್ಷಗಳ ಬಡ್ಡಿ ರಹಿತ ಸಾಲ
    ಮತ್ತೊಂದು ವರ್ಷ ಮುಂದುವರಿಕೆ
  • 2070ಕ್ಕೆ ಕಾರ್ಬನ್ ಮುಕ್ತ ಭಾರತ ನಿರ್ಮಾಣದ ಗುರಿ
  • ಹಳೆಯ ಸರ್ಕಾರಿ ವಾಹನಗಳು ಗುಜರಿ ಪಾಲು, ಹೊಸ ವಾಹನಗಳ ಖರೀದಿಗೆ ಅನುದಾನ ಬಿಡುಗಡೆ
  • ಪ್ರವಾಸೋದ್ಯಮ ಅಭಿವೃದ್ಧಿಗೆ ಡಿಜಿಟಲ್ ಸ್ಪರ್ಶ: ಸ್ವದೇಶ ದರ್ಶನ್, ದೇಖೋ ಅಪ್ನಾ ದೇಶ್ ಯೋಜನೆ ಪರಿಚಯ  

Budget 2023-2024 ಮೀನುಗಾರರಿಗೆ 6 ಸಾವಿರ ಕೋಟಿ ರೂಪಾಯಿ ಮೀಸಲು, ಕೃಷಿ ವೇಗವರ್ಧಕ ನಿಧಿ ಸ್ಥಾಪನೆ

nirmala sitharaman

ಯಾವೆಲ್ಲ ವಸ್ತುಗಳ ಬೆಲೆ ಏರಿಕೆ

ಸಿಗರೇಟ್ ಮೇಲಿನ ತೆರಿಗೆ ಶೇ. 16ರಷ್ಟು ಏರಿಕೆ. ಪ್ರತಿ ಸಿಗರೇಟ್ ದರ ಶೇ. 1 ರಿಂದ 2 ರಷ್ಟು ಏರಿಕೆ ಆಗಲಿದೆ.

ಪ್ಲಾಟಿನಂ, ಬಂಗಾರ, ಬೆಳ್ಳಿ, ವಜ್ರ ದುಬಾರಿ

ಬೈಸಿಕಲ್‌ಗಳ ದರ ಏರಿಕೆ

ಮಕ್ಕಳ ಆಟದ ಸಾಮಾನುಗಳ ದರ ಏರಿಕೆ

ವಿದೇಶಿ ವಾಹನಗಳ ದರ ಏರಿಕೆ

ದರ ಇಳಿಕೆ ಈ ರೀತಿ ಇದೆ

ಮೊಬೈಲ್ ಫೋನ್ ಕ್ಯಾಮರಾ ಲೆನ್ಸ್ ಆಮದು ಸುಂಕ ರದ್ದು ಮಾಡಲಾಗಿದ್ದು,  ಮೊಬೈಲ್ ಫೋನ್‌ಗಳ ದರ ಇಳಿಕೆ

ಲೀಥಿಯಂ ಅಯಾನ್ ಬ್ಯಾಟರಿಗಳು ಅಗ್ಗ, ಕಸ್ಟಮ್ ಡ್ಯೂಟಿ ಶೇ. 13ರಷ್ಟು ಇಳಿಕೆ

ಮೊಬೈಲ್, ಕ್ಯಾಮರಾ ಲೆನ್ಸ್, ಟಿವಿ ಬೆಲೆ ಇಳಿಕೆ

ಬ್ಲೆಂಡೆಡ್ ಸಿಎನ್‌ಜಿಗೆ ಸುಂಕ ಕಡಿತ ಮಾಡಲಾಗಿದೆ

ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳ ದರ ಇಳಿಕೆ

ಕೆ.ಸಿ ಜನರಲ್‌ ಆಸ್ಪತ್ರೆಯಿಂದ ಬರೋಬ್ಬರಿ 48 ಲಕ್ಷ ವಿದ್ಯುತ್‌ ಬಿಲ್‌ ಬಾಕಿ: ಬೆಸ್ಕಾಂನಿಂದ ಬಂತು ನೋಟಿಸ್‌!