ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯಲ್ಲಿ “ವೋಕಲ್ ಫಾರ್ ಲೋಕಲ್” (Vocal For Local) ಹೆಸರಿನಡಿ ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ಮೇಳ ನಡೆಸಲು ನಿರ್ಧಾರ ಮಾಡಿದೆ.
ಇದನ್ನೂ ಓದಿರಿ: ಅಂಗಾಂಶ ಕೃಷಿ ಸಸ್ಯಗಳ ಹೆಚ್ಚಳಕ್ಕೆ ಕೇಂದ್ರದ ಒತ್ತಾಯ!
Bengaluru: ತಲೆ ಎತ್ತಲಿದೆ 85 ಕೋಟಿಯ ಕೆಂಪೆಗೌಡರ ಪ್ರತಿಮೆ: ದೆಹಲಿಯಿಂದ ಬೆಂಗಳೂರಿಗೆ 4 ಸಾವಿರ ಕೆ.ಜಿ ತೂಕದ ಖಡ್ಗ!
ಬಹುಪಾಲು ಯುವಕರಿಗೆ ಉದ್ಯೋಗ ಹುಡುಕಾಟವೆಂಬುದು ಒಂದು ದೊಡ್ಡ ಸಂಕಟ. ಸರಿಯಾದ ವಿದ್ಯಾಬ್ಯಾಸ ಇದ್ದರೂ ಅದಕ್ಕೆ ತಕ್ಕುದಾದ ಉದ್ಯೋಗ ದೊರೆಯದೆ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಊರು ಬಿಟ್ಟು ಶಹರಗಳತ್ತ ಬರಬೇಕಾದ ಅನಿವಾರ್ಯತೆ ಇದೆ.
ಉದ್ಯೋಗ ಸಿಗುತ್ತದೊ ಇಲ್ಲವೋ ಆದರೆ ಸಂದರ್ಶನ, ಹುಡುಕಾಟ ಅಂತ ದುಡ್ಡ ಖರ್ಚು ಮಾಡಿಕೊಂಡು ಶಹರಗಳಲ್ಲಿ ಅಲೆಯುವುದು ತೀರ ಕಷ್ಟದ ಕೆಲಸ. ಈ ಕಷ್ಟವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯಲ್ಲಿ “ವೋಕಲ್ ಫಾರ್ ಲೋಕಲ್” (Vocal For Local) ಹೆಸರಿನಡಿ ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ಮೇಳ ನಡೆಸಲು ನಿರ್ಧಾರ ಮಾಡಿದೆ.
Shocking news: ಮತ್ತೆ LPG ಸಿಲಿಂಡರ್ ಬೆಲೆಯಲ್ಲಿ 50 ರೂ ಹೆಚ್ಚಳ!
ಎಚ್ಚರಿಕೆ! “ವಾಹನ ಚಾಲಕರಿಗೆ ಎಚ್ಚರಿಕೆ” ಡ್ರೈವಿಂಗ್ ವೇಳೆ ಗುಟ್ಕಾ ಜಗಿದರೆ ಬೀಳತ್ತೆ ದಂಡ!
ಬೆಂಗಳೂರಿನಿಂದ ಹೊರಗಿರುವ ಸ್ಥಳೀಯರಿಗೆ ಉದ್ಯೋಗ ಒದಗಿಸಲು, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (Karnataka Skill Development Corporation) ಪ್ರತಿ ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳಗಳನ್ನು (job fairs ) ನಡೆಸಲು ಮುಂದಾಗಿದೆ.
ಈ ಹಿಂದೆ ನಡೆಸಲಾಗಿದ್ದ ಉದ್ಯೋಗ ಮೇಳಗಳಲ್ಲಿ ಐಟಿ ಸಂಸ್ಥೆಗಳು ಸೇರಿದಂತೆ ಹಲವು ದೊಡ್ಡ ಕಂಪನಿಗಳು ಮೈಸೂರು ಮತ್ತು ಮಂಗಳೂರಿನಲ್ಲಿರುವ ತಮ್ಮ ಕೇಂದ್ರಗಳಿಗೆ ನೇಮಕಾತಿ ಮಾಡಿಕೊಂಡಿವೆ ಎಂದು ತಿಳಿದುಬಂದಿದೆ.
ಕಳೆದ ಕೆಲವು ತಿಂಗಳುಗಳಲ್ಲಿ, ನಿಗಮವು ಬೆಳಗಾವಿ, ಕಲಬುರಗಿ, ಮಂಗಳೂರು, ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಉದ್ಯೋಗ ಮೇಳಗಳನ್ನು ನಡೆಸಿದೆ. ಈ ಉದ್ಯೋಗ ಮೇಳದಲ್ಲಿ 402 ಕಂಪನಿಗಳು ಭಾಗವಹಿಸಿದ್ದು, KSDC ಅಂಕಿಅಂಶಗಳ ಪ್ರಕಾರ, ವಿದ್ಯಾರ್ಥಿಗಳು ಸೇರಿದಂತೆ 30,000 ಜನರು ಈ ಉದ್ಯೋಗ ಮೇಳಗಳಲ್ಲಿ ಭಾಗವಹಿಸಿದ್ದರು ಮತ್ತು 10,085 ಜನರಿಗೆ ಉದ್ಯೋಗದ ಆಫರ್ ಲೆಟರ್‌ಗಳನ್ನು ನೀಡಲಾಗಿದೆ.
ಪೈಲ್ವಾನ್ ಕಿಚ್ಚ ಸುದೀಪ್ ಕೊಟ್ಟ ಗುನ್ನಾಕೆ ಮಕಾಡೆ ಮಲಗಿದ ಅಜಯ್ ದೇವಗನ್!
ಆನ್‌ಲೈನ್ ನೋಂದಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ಸ್ವವಿವರಗಳೊಂದಿಗೆ ತಮ್ಮ ವಿವರಗಳನ್ನು ಅಪ್‌ಲೋಡ್ ಮಾಡಬಹುದು.
ಇಲಾಖೆಯು ಮಿನಿ-ಉದ್ಯೋಗ ಮೇಳಗಳನ್ನು ಸಹ ನಡೆಸಿತು, ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಉದ್ಯೋಗ ಕಳೆದುಕೊಂಡವರು ಸ್ವಯಂ ಉದ್ಯೋಗದತ್ತ ಗಮನ ಹರಿಸಿದರು. ಹೀಗಾಗಿ ಕೋವಿಡ್ ಹೋಪ್ಸ್ ಮಿನಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದೆ ಎಂದು KSDC ಯ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಹೇಳಿಕೆ ನೀಡಿದ್ದಾರೆ.
ರಾಜ್ಯ ಸರಕಾರವು ಕೋವಿಡ್ ಬಳಿಕ ಉದ್ಯೋಗ ಮೇಳ ಕಾರ್ಯಕ್ರಮ ಹಮ್ಮಿಕೊಂಡಿತು. ಜುಲೈ 10 ರಂದು ಮೊದಲ ರೀತಿಯ ವರ್ಚುವಲ್ ಉದ್ಯೋಗ ಮೇಳವನ್ನು ನಡೆಸಿತು. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ(ಕೆಎಸ್‌ಡಿಸಿ) ದಿಂದ ಸಂಯೋಜಿಸಲ್ಪಟ್ಟ ಈ ಉದ್ಯೋಗ ಮೇಳದಲ್ಲಿ ಸುಮಾರು 6,000 ಉದ್ಯೋಗಾವಕಾಶಗಳಿಗಾಗಿ 40 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು.
ಎಚ್ಚರಿಕೆ! “ವಾಹನ ಚಾಲಕರಿಗೆ ಎಚ್ಚರಿಕೆ” ಡ್ರೈವಿಂಗ್ ವೇಳೆ ಗುಟ್ಕಾ ಜಗಿದರೆ ಬೀಳತ್ತೆ ದಂಡ!
SBI ಅಲರ್ಟ್: ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI