News

10ನೇ ತರಗತಿ ಪಾಸ್‌ ಆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 10 ಸಾವಿರ ರೂ ಸ್ಕಾಲರ್‌ಶಿಪ್‌.. ಇಲ್ಲಿದೆ ವಿವರ

23 July, 2022 12:28 PM IST By: Maltesh
Vidyadhan Karnataka Class 11 and 12 Scholarship Program 2022 How to apply

ಈ ಕಾರ್ಯಕ್ರಮದಲ್ಲಿ  10 ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹೆಚ್ಚಿನ ವ್ಯಾಸಂಗಕ್ಕಾಘಿ ವಾರ್ಷಿಕ 10 ಸಾವಿರ ರೂಪಾಯಿಗಳನ್ನು ವಿದ್ಯಾರ್ಥಿ ವೇತನವಾಗಿ ಅರ್ಹ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಪ್ರಸ್ತುತವಾಗಿ ಕರ್ನಾಟಕ ಶಿಕ್ಷಣ ಸಂಸ್ಥೆಯಿಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ 11 ಅಥವಾ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ Scholership ಗೆ ಅರ್ಹರಾಗಿದ್ದಾರೆ.

ಈ ಕಾರ್ಯಕ್ರಮದ ಕುರಿತು:
ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿಯಾದ Infosys ನ ಸಹ ಸಂಸ್ಥಾಪಕರು ಹಾಗೂ ಮಾಜಿ CEO ಆಗಿದ್ದ S D ಶಿಬುಲಾಲ್‌ ಅವರು 1999 ರಲ್ಲಿ ಸ್ಥಾಪಿಸಿದ ಸರೋಜಿನಿ ದಾಮೋದರನ್ ಪ್ರತಿಷ್ಠಾನವು ಸಮಾಜದಲ್ಲಿ ಹಿಂದುಳಿದವರ ಉನ್ನತ ಶಿಕ್ಷಣಕ್ಕೆ ಕೊಡುಗೆ  ನೀಡುತ್ತಿದೆ. ಈ ಮೂಲಕ  ಅವರ ಜೀವನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳು ವರ್ಷಕ್ಕೆ INR 10,000 ಪಡೆಯುತ್ತಾರೆ.

ಈ ವಿದ್ಯಾರ್ಥಿ ವೇತನದ ಮಾನದಂಡಗಳೇನು ಹಾಗೂ ಯಾರು ಅರ್ಹರು..?

ಕರ್ನಾಟಕದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ  10 ನೇ ತರಗತಿ ಅಥವಾ ತತ್ಸಮಾನ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು

10/SSLC ಪರೀಕ್ಷೆಯಲ್ಲಿ ಕನಿಷ್ಠ 90% ಅಂಕಗಳನ್ನು ಗಳಿಸಿರಬೇಕು

ಸೂಚನೆ: ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಕಟ್-ಆಫ್ ಮಾರ್ಕ್ 75%.

ಎಲ್ಲಾ ಆದಾಯ ಮೂಲಗಳಿಂದ INR 2 ಲಕ್ಷಕ್ಕಿಂತ ಕಡಿಮೆ ಕುಟುಂಬದ ವಾರ್ಷಿಕ ಆದಾಯವನ್ನು ಹೊಂದಿರಬೇಕು.

ಪ್ರಯೋಜನಗಳು

ಆಯ್ಕೆಯಾದ ಅಭ್ಯರ್ಥಿಗಳು ವರ್ಷಕ್ಕೆ INR 10,000 ದೊರೆಯುತ್ತದೆ.

ಸೈನ್ಸ್‌ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ಸಿಗುತ್ತಿದೆ 80 ಸಾವಿರ ರೂಗಳ ಸ್ಕಾಲರ್‌ಶಿಪ್‌..ಹೀಗೆ ಅರ್ಜಿ ಸಲ್ಲಿಸಿ

ಬೇಕಾಗುವ ದಾಖಲೆಗಳು

ಇತ್ತೀಚಿನ ಛಾಯಾಚಿತ್ರ 

10ನೇ ಅಂಕಪಟ್ಟಿಯ ಸ್ಕ್ಯಾನ್ ಮಾಡಿದ ಪ್ರತಿ 

ಆದಾಯ ಪ್ರಮಾಣಪತ್ರದ ಸ್ಕ್ಯಾನ್ ಮಾಡಿದ ಪ್ರತಿ

ಗಮನಿಸಿ - ಮೂಲ ಮಾರ್ಕ್ ಶೀಟ್ ಲಭ್ಯವಿಲ್ಲದಿದ್ದರೆ, ನೀವು SSLC/CBSE/ICSC ವೆಬ್‌ಸೈಟ್‌ನಿಂದ ತಾತ್ಕಾಲಿಕ/ಆನ್‌ಲೈನ್ ಮಾರ್ಕ್ ಶೀಟ್ ಅನ್ನು ಅಪ್‌ಲೋಡ್ ಮಾಡಬಹುದು.

ಅರ್ಜಿ ಸಲ್ಲಿಕೆ ಹೇಗೆ?

ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್‌ನ ಮೂಲಕ ನೀವು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು:

ನೀವು ಕಡ್ಡಾಯ ದಾಖಲೆಗಳು ಮತ್ತು ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಿದ ನಂತರವೇ ಅರ್ಜಿಯನ್ನು ಸಂಪೂರ್ಣವೆಂದು ಪರಿಗಣಿಸಲಾಗುತ್ತದೆ.

ಸ್ಕ್ರೀನಿಂಗ್ ಟೆಸ್ಟ್:

31 ಡಿಸೆಂಬರ್ 2022

 

ಆಯ್ಕೆ ಮಾನದಂಡ

ಸರೋಜಿನಿ ದಾಮೋದರನ್ ಫೌಂಡೇಶನ್ (SDF) ಅರ್ಜಿದಾರರನ್ನು ಅವರ ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ಅರ್ಜಿ ನಮೂನೆಯಲ್ಲಿ ಒದಗಿಸಿದ ಮಾಹಿತಿಯ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಕಿರು ಆನ್‌ಲೈನ್ ಪರೀಕ್ಷೆ/ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಸರೋಜಿನಿ ದಾಮೋದರನ್ ಫೌಂಡೇಶನ್

678, 11ನೇ ಮುಖ್ಯ ರಸ್ತೆ, 4ನೇ ಟಿ ಬ್ಲಾಕ್ ಪೂರ್ವ,

4ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560041

ಇಮೇಲ್ ಐಡಿ - vidyadhan.goa@sdfoundationindia .