News

ಡಿಸೆಂಬರ್‌ 25ಕ್ಕೆ ಧಾರವಾಡದಲ್ಲಿ ಸೊಪ್ಪಿನ ಮೇಳ, ಅಡುಗೆ ಸ್ಪರ್ಧೆ!

22 December, 2022 5:28 PM IST By: Hitesh
Vegetable fair, cooking competition in Dharwad on December 25!

ಸೊಪ್ಪಿನ ವೈವಿಧ್ಯವನ್ನು ಮತ್ತೆ ಜನಪ್ರಿಯಗೊಳಿಸುವ ಉದ್ದೇಶದಿಂದ ಧಾರವಾಡದ ಗಾಂಧಿನಗರದ ದೇಸಿ ಅಂಗಡಿ, ಯಾಲಕ್ಕಿ ಶೆಟ್ಟರ ಕಾಲೊನಿಯಲ್ಲಿ ಡಿಸೆಂಬರ್‌ 25ರ ಮಧ್ಯಾಹ್ನ 12ಕ್ಕೆ ಸೊಪ್ಪು ಮೇಳವನ್ನು ಆಯೋಜಿಸಲಾಗಿದ್ದು, ಸೊಪ್ಪಿನ ಅಡುಗೆಗಳ ಸ್ಪರ್ಧೆ ನಡೆಯಲಿದೆ.  

ವಿವಿಧ ಬಗೆಯ ಸೊಪ್ಪುಗಳನ್ನು ಬಳಸಿ ತಯಾರಿಸಿದ ಸಾಂಪ್ರದಾಯಿಕ ಅಥಾವ ಹೊಸ ಬಗೆಯ ಅಡುಗೆಗಳನ್ನು ಮನೆಯಲ್ಲಿ ತಯಾರಿಸಿ ದಿನಾಂಕ 25 ಡಿಸೆಂಬರ್ 2022ರ ಭಾನುವಾರ ಮಧ್ಯಾಹ್ನ 12 ಘಂಟೆಗೆ ಸೊಪ್ಪು ಮೇಳಕ್ಕೆ ತರಬಹುದಾಗಿದೆ. ಉತ್ತಮ ಅಡುಗೆಗಳಗೆ ಆಕರ್ಷಕ ಬಹುಮಾನ ಮತ್ತು ಪ್ರಶಂಸಾ ಪತ್ರ ಇರುತ್ತದೆ.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೀಪಲ್ ಫಸ್ಟ್ ಫೌಂಡೇಷನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರಕಾಶ್ ಭಟ್ ಅವರು ವಹಿಸಿಕೊಳ್ಳಲಿದ್ದಾರೆ.

Sugarcane| ಕಬ್ಬು ಬೆಳಗಾರರಿಗೆ 21 ಕೋಟಿ ಪಾವತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

ಕಾರ್ಯಕ್ರಮದ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಇತ್ತೀಚಿನ ದಿನಗಳಲ್ಲಿ ನಾವು ಆಹಾರದ ವಿಷಯದಲ್ಲಿ ಗಳಿಸಿದ್ದಕ್ಕಿಂತ  ಕಳೆದುಕೊಂಡಿದ್ದೇ ಹೆಚ್ಚು, ಆಹಾರದ ಉತ್ಪಾದನೆಯ ಪ್ರಮಾಣವೇನೋ ಹೆಚ್ಚಿತು, ಆದರೆ ಅದನ್ನು ಸಾಧಿಸುವಾಗ ಆಹಾರ ವೈವಿಧ್ಯ ಹಾಗೂ ಗುಣಮಟ್ಟ ಕುಸಿಯಿತು.

ಹಲವು ಬೆಳೆಗಳು, ಕಳೆಗಳು, ನಮ್ಮ ಪೋಷಕಾಂಶ ಭದ್ರತೆಗೆ ಒದಗುತಿದ್ದವು. ಕಳೆಗಳನ್ನು ಬಿಡಿ, ಕೆಲವು ಬೆಳೆಗಳೂ ಇಂದು ಯಾರೂ ಬೆಳೆಯದೇ “ಅನಾಥ ಬೆಳೆಗಳ” ಪಟ್ಟಿಗೆ ಸೇರಿವೆ.

ಎಲ್ಲರೂ ಒಂದೇ ರೀತಿಯ ಆಹಾರ ಪದ್ಧತಿಗೆ ಬಂದು ದಶಕಗಳೇ ಕಳೆದಿವೆ. ನಮ್ಮ ತಟ್ಟೆಯಲ್ಲಿ ಇದ್ದು, ಆಹಾರ ಸಂಸ್ಕೃತಿಯನ್ನು ಸಮೃದ್ಧಗೊಳಿಸಿದ್ದ, ಇಂದು ಮರೆವಿಗೆ ಸಂದಿರುವ ಇಂತಹ ಆಹಾರ ಮೂಲಗಳನ್ನು ನೆನಪಿಸಿಕೊಂಡು ಮತ್ತೆ ನಮ್ಮ ಆಹಾರ ಸಂಸ್ಕೃತಿಯಲ್ಲಿ ಅವುಗಳನ್ನು ಒಳಗೊಳ್ಳುವ ಕೆಲಸವಾಗಬೇಕಿದೆ ಎಂದಿದ್ದಾರೆ.  

Sugarcane Growers| ಕಬ್ಬು ಬೆಳೆಗಾರರಿಗೆ ವಂಚನೆ: 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ!

ನಾವು ಕಳೆದುಕೊಳ್ಳುತ್ತಿರುವ ಆಹಾರ ಮೂಲಗಳಲ್ಲಿ ಸೊಪ್ಪು ಸಹ ಒಂದು. ಕಳೆಸೊಪ್ಪುಗಳು, ಕುಡಿಗಳು, ಕೈತೋಟದ ಸೊಪ್ಪುಗಳು ಇವುಗಳ ಪಟ್ಟಿ ದೊಡ್ಡದಿದೆ. ಹೊನಗೊನೆ, ಒಂದೆಲಗ, ಕಾಕಿ, ಗುಬ್ಬಿಸೊಪ್ಪು, ಬಸಳೆ, ನೆಲಬಸಳೆ, ಹರಿವೆ, ಕಿರ್ಕಸಾಲಿ, ಮೂಲಂಗಿ, ಕೆಸು, ಹಾಡೆಬಳ್ಳಿ, ಒಂದೇ..? ಎರಡೇ..?

ಮಾವು ಬೆಳೆ ಸಂರಕ್ಷಣೆಗೆ ಇಲ್ಲಿದೆ ಸುಲಭ ಉಪಯೋಗಗಳು…

ಇವುಗಳನ್ನೆಲ್ಲ ನೆನಪಿಸಿಕೊಳ್ಳಲು, ನಮ್ಮ ಆಹಾರದ ತಟ್ಟೆಗೆ ತರಲು, ಬೇಕಾದ ಪ್ರೇರಣೆಗಾಗಿ ಧಾರವಾಡದಲ್ಲಿ ಡಿಸೆಂಬರ್ 25ರಂದು ಸೊಪ್ಪಿನ ಮೇಳವನ್ನು ಆಯೋಜಿಸುತ್ತಿದ್ದೇವೆ. ತರೇವಾರಿ ಸೊಪ್ಪುಗಳು, ತರಕಾರಿಗಳು ಇತರೆ ಕಳೆದುಹೋಗುತ್ತಿರುವ ಆಹಾರದ ಮೂಲಗಳ ಜೊತೆಗೆ ಅಂದು ಪ್ರದರ್ಶನಗೊಳ್ಳಲಿದೆ, ಮಾರಾಟವಾಗಲಿವೆ. ಬನ್ನಿ ಸೊಪ್ಪಿನ ಆಂದೋಲನಕ್ಕೆ ಕೈ ಜೋಡಿಸಿ ಎಂದು ಹೇಳಿದ್ದಾರೆ.   

ಚೀನಾದಲ್ಲಿ ಮತ್ತೆ ಹೆಚ್ಚಾಯ್ತು ಕೋವಿಡ್‌: ವಿಶ್ವದೆಲ್ಲೆಡೆ ಆತಂಕ!