ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ, ವಸತಿ ರಹಿತ ಹಾಗೂ ಖಾಲಿ ನಿವೇಶನ ಹೊಂದಿರುವ ಫಲಾನುಭವಿಗಳಿಗೆ 2021-22 ನೇ ಸಾಲಿಗೆ ‘ವಾಜಪೇಯಿ ನಗರ ಯೋಜನೆ’ಯಲ್ಲಿ ಅಲ್ಪಸಂಖ್ಯಾತರಿಗೆ ಮತ್ತು ಸಾಮಾನ್ಯ ವರ್ಗದವರಿಗೆ ಹಾಗೂ ಡಾ.ಅಂಬೇಡ್ಕರ್ ನಗರ ವಸತಿ ಯೋಜನೆ’ಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮನೆ ನಿರ್ಮಿಸಲು ಅರ್ಜಿ ಆಹ್ವಾನಿಸಲಾಗಿದೆ.
ನಿಗಮವು ಕಂಪನಿ ಕಾಯ್ದೆ ಪ್ರಕಾರ ನೊಂದಾಯಿತ ಸರ್ಕಾರಿ ಸ್ವಾಮ್ಯದ ಒಂದು ಉದ್ದಿಮೆಯಾಗಿದ್ದು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗಾಗಿ ವಸತಿ ಸೌಲಭ್ಯವನ್ನು ಕಲ್ಪಿಸುವುದಕ್ಕಾಗಿ 2000ನೇ ಇಸ್ವಿಯಲ್ಲಿ ಸ್ಥಾಪನೆಗೊಂಡಿದೆ. ಇದು ರೂ.10 ಕೋಟಿಗಳ ಅಧಿಕೃತ ಷೇರು ಬಂಡವಾಳ (Authorised Capital)ಹೊಂದಿದ್ದು, ರೂ.3 ಕೋಟಿಗಳ ಪಾವತಿಯಾದ ಷೇರು ಬಂಡವಾಳವನ್ನು (Paid up Capital)ಹೊಂದಿರುತ್ತದೆ.
ಸದ್ಯ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವವರು, ಖಾಲಿ ನಿವೇಶನ ಹಾಗೂ ಹಳೆಯ ಮನೆ ಹೊಂದಿರುವ, ಆದಾಯ ಮತ್ತು ಜಾತಿ ದೃಢೀಕರಣ ಪತ್ರ, ಪಡಿತರ ಚೀಟಿ, ಆಧಾರ್‍ಕಾರ್ಡ್ ಹಾಗೂ ಇನ್ನಿತರ ಅಗತ್ಯ ದಾಖಲೆ ಪತ್ರ ಇರುವ ಫಲಾನುಭವಿಗಳು ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.
₹23 ಲಕ್ಷಕ್ಕೆ ಬೇಡಿಕೆ ಗಿಟ್ಟಿಸಿಕೊಂಡ ಅಪರೂಪದ ಮೇಕೆ! ಏನಿದರ ವಿಶೇಷತೆ ಗೊತ್ತೆ?
ಜೂನ್ 1 "ವಿಶ್ವ ಹಾಲು ದಿನ": ಹಾಲಿನ ಪ್ರಾಮುಖ್ಯತೆ ಮತ್ತು ಅದರ ವಿಶಿಷ್ಟ ಪ್ರಯೋಜನಗಳೇನು ಗೊತ್ತಾ?
ಅರ್ಹ ಫಲಾನುಭವಿಗಳು ಜೂನ್, 14 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕಚೇರಿಯ ಕೆಲಸದ ವೇಳೆಯಲ್ಲಿ ವಸತಿ ಶಾಖೆಯ ವಿಷಯ ನಿರ್ವಾಹಕರನ್ನು ಸಂಪರ್ಕಿಸುವಂತೆ ನಗರಸಭೆ ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಅವರು ತಿಳಿಸಿದ್ದಾರೆ.
ಯೋಜನೆಯ ಧ್ಯೇಯೋದ್ದೇಶಗಳು
➤ ರಾಜ್ಯಾದ್ಯಂತ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪ್ರಾಯೋಜಿಸಲ್ಪಟ್ಟ ವಸತಿ ಯೋಜನೆಗಳಡಿ ವಸತಿ ಸೌಕರ್ಯವನ್ನು ಒದಗಿಸುವುದು.
➤ ವಿದ್ಯುನ್ಮಾನ ತಂತ್ರಜ್ಞಾನದ ಬಳಕೆಯಿಂದ ಹಣ ವರ್ಗಾವಣೆ ಪದ್ದತಿ (Electronic Fund Transfer System) ಮೂಲಕ ಫಲಾನುಭವಿಗಳ ಖಾತೆಗೆ ನೇರ ಅನುದಾನ ಬಿಡುಗಡೆ.
➤ ಅಗ್ಗ ಕಟ್ಟಡ ಸಾಮಗ್ರಿಗಳನ್ನು ಸಂಘಟಿತ ಉತ್ಪಾದನೆಯಿಂದ ಅಥವಾ ಬೃಹತ್ ಸಂಗ್ರಹಣೆ ಮೂಲಕ ಪಡೆಯುವುದು.
➤ ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆಯನ್ನು ಅನುಷ್ಠಾನಗೊಳಿಸುವುದು.
➤ ಸ್ವ ಸಹಾಯದ ಮೂಲಕ ಜನರಿಗೆ ಕಟ್ಟಡ ಸಾಮಗ್ರಿಗಳು, ವಿನ್ಯಾಸ ಮತ್ತು ತಂತ್ರಜ್ಞಾನಗಳನ್ನು ಆಯ್ಕೆ ಮಾಡಲು ಅವಕಾಶ ನೀಡುವುದು.
➤ ಗ್ರಾಮ ಪಂಚಾಯತಿ ಹಾಗೂ ಸರ್ಕಾರೇತರ ಸಂಸ್ಥೆಗಳೊಂದಿಗೆ ಪಾಲುಗಾರಿಕೆ.
ಗುಡ್‌ನ್ಯೂಸ್; ಡ್ರೋನ್ ಖರೀದಿಸುವ ರೈತರಿಗೆ ಸರ್ಕಾರ ನೀಡುತ್ತಿದೆ ₹5 ಲಕ್ಷ ಸಹಾಯಧನ!
PM ಉಚಿತ ಹೊಲಿಗೆ ಯಂತ್ರ ಯೋಜನೆ; ಒಂದು ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆಯಿರಿ..! ಈಗಲೇ ಅರ್ಜಿ ಸಲ್ಲಿಸಿ
ಸಾರ್ವಜನಿಕರ ಪಾತ್ರ
➤ ನಿಗಮವು ಸ್ವ ಸಹಾಯ ಪದ್ಧತಿ ಮೂಲಕ ಮನೆಗಳನ್ನು ಫಲಾನುಭವಿಗಳೇ ನಿರ್ಮಿಸಿಕೊಳ್ಳಲು ಪ್ರೋತ್ಸಾಹಿಸುವ ಸಂಬಂಧ ಈ ಕೆಳಕಂಡಂತೆ ಹೆಜ್ಜೆಗಳನ್ನು ತೆಗೆದುಕೊಳ್ಳಲಾಗಿದೆ;
➤ ಅರ್ಹ ಫಲಾನುಭವಿಗಳ ಆಯ್ಕೆಯನ್ನು ವಸತಿರಹಿತರ ಪಟ್ಟಿಯಿಂದ ಗ್ರಾಮ ಸಭೆಯ ಮೂಲಕ ಅನುಮೋದಿಸುವುದು.
➤ ಫಲಾನುಭವಿಗಳೇ ಮನೆ ನಿರ್ಮಿಸಿಕೊಳ್ಳಲು ಮೊದಲ ಆದ್ಯತೆ ನೀಡುವುದು. ಫಲಾನುಭವಿಗಳ ಅಗತ್ಯದ ಮೇಲೆ ಮನೆ ಕಟ್ಟಲು ನೆರವಿಗಾಗಿ ನಿಗಮದಿಂದ ಕ್ರಮ ಕೈಗೊಳ್ಳುವುದು.
➤ ಮಿತವ್ಯಯಕಾರಿ ತಂತ್ರಜ್ಞಾನಗಳ ಬಳಕೆ ಮತ್ತು ವಸತಿ ನಿರ್ಮಾಣದ ಪರಿಕಲ್ಪನೆಯನ್ನು ನಿರ್ಮಿತಿ ಕೇಂದ್ರಗಳು ನಿರ್ಮಿಸಿದ ಮಾದರಿ ಮನೆಗಳ ಮೂಲಕ ಪ್ರದರ್ಶನೆ ಮಾಡುವುದು.
➤ ನಿಗಮವು ನುರಿತ ವಿನ್ಯಾಸಗಾರರೊಂದಿಗೆ ಒಡಂಬಡಿಕೆ ಮಾಡುವುದರ ಮೂಲಕ ವೃತ್ತಿಪರ ಸೇವೆಗಳನ್ನು ವಸತಿ ವಲಯದಲ್ಲಿ ಪಡೆಯುವುದು.
ಹಸು ಸಾಕಾಣಿಕೆಗೆ ₹60,249, ಎಮ್ಮೆ ಸಾಕಾಣಿಕೆಗೆ ₹40,783 ಸಹಾಯಧನ! ಯಾವ ಪ್ರಾಣಿ ಸಾಕಾಣಿಕೆಗೆ ಎಷ್ಟು ಹಣ ಗೊತ್ತೆ?
ಸಾವಯವ ಗೊಬ್ಬರ ಖರೀದಿಸುವ ರೈತರಿಗೆ ಭರ್ಜರಿ ರಿಯಾಯಿತಿ: ಈ ಯೋಜನೆಯಡಿ ₹227.40 ಲಕ್ಷ ಅನುದಾನ ಮೀಸಲು!