News

ರಾಸುಗಳಲ್ಲಿ ಕೆಚ್ಚಲು ಬಾವು ಕಾಯಿಲೆ: ಪರೀಕ್ಷೆಗೆ ನಾಲ್ಕು ಹನಿ ಹಾಲು ಸಾಕು!

20 November, 2022 3:46 PM IST By: Hitesh
Udder abscess disease in heifers: four drops of milk are enough for testing!

ಇತ್ತೀಚಿನ ದಿನಗಳಲ್ಲಿ ರಾಸುಗಳಲ್ಲಿ ಚರ್ಮಗಂಟು ರೋಗ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಲ್ಲದೇ ಹಲವು ಆರೋಗ್ಯ ಸಮಸ್ಯೆ ಎದುರಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ರಾಸುಗಳಲ್ಲಿ ಚರ್ಮಗಂಟು ರೋಗ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಲ್ಲದೇ ಹಲವು ಆರೋಗ್ಯ ಸಮಸ್ಯೆ ಎದುರಾಗುತ್ತಿದೆ.

ರಾಜ್ಯದಲ್ಲಿ ಚಳಿ ಹೆಚ್ಚಾಗುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ!

ಅಲ್ಲದೇ ರಾಸುಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕೆಚ್ಚಲು ಬಾವು ಕಾಯಿಲೆಯೂ ಒಂದು. ಇನ್ನು ಮುಂದೆ ಇದರ ಪತ್ತೆ ಸುಲಭವಾಗಲಿದೆ. 

ರಾಸುಗಳಲ್ಲಿ ಕಂಡುಬರುವ ಕೆಚ್ಚಲು ಬಾವು ಕಾಯಿಲೆಯನ್ನು ಮೂಲ ಹಂತದಲ್ಲೇ ಪತ್ತೆ ಹಚ್ಚುವುದು ಸವಾಲಿನ ಕೆಲಸ ಇದೀಗ ಇದಕ್ಕೂ ಪರಿಹಾರ ಸಿಕ್ಕಿದೆ!

ಸರ್ಕಾರಿ ನೌಕರರಿಗೆ ಸಿಹಿಸುದ್ದಿ: 7ನೇ ವೇತನ ಆಯೋಗ ರಚನೆಗೆ ಸಿಎಂ ಅನುಮೋದನೆ: ಆರು ತಿಂಗಳಲ್ಲಿ ಶಿಫಾರಸ್ಸು ಸಾಧ್ಯತೆ!

ಫೌನ್‌ಟೆಕ್‌ ಸೊಲ್ಯುಷನ್ಸ್‌ (Fountech Solutions) ಎಂಬ ನವೋದ್ಯಮ ಸಂಸ್ಥೆಯು ರಾಸುಗಳಲ್ಲಿ ಕಾಣಿಸಿಕೊಳ್ಳುವ ಕೆಚ್ಚಲು ಬಾವು ಕಾಯಿಲೆಯನ್ನು ನಾಲ್ಕು ಹನಿ ಹಾಲಿನಿಂದ ಪತ್ತೆ ಮಾಡುವ ಉಪಕರಣವನ್ನು ಸಂಶೋಧನೆ ಮಾಡಿದೆ.

ಕಾಯಿಲೆಗಳ ಪತ್ತೆಗೆ ವಿಶೇಷ ಉಪಕರಣವನ್ನು ಅಭಿವೃದ್ಧಿಪಡಿಸಿದ್ದು, ಈ ಪರಿಕರದ ಮೂಲಕ ವೈದ್ಯರ ಸಹಾಯವೂ ಇಲ್ಲದೆಯೇ ಮೊಬೈಲ್‌ನಲ್ಲೇ ರಾಸುಗಳಲ್ಲಿ ಕಂಡು ಬರುವ ಕಾಯಿಲೆಯನ್ನು ಪತ್ತೆ ಮಾಡಬಹುದಾಗಿದೆ.

ಅಲ್ಲದೇ ಕಾಯಿಲೆಯ ವಿವರಗಳನ್ನು ಪಡೆಯಬಹುದಾಗಿದೆ. ಈ ಕಾರ್ಯಕ್ಕೆ ಸೆಂಟರ್‌ ಫಾರ್‌ ಸೆಲ್ಯುಲಾರ್‌ ಮತ್ತು ಮಾಲೆಕ್ಯುಲಾರ್‌ ಪ್ಲಾಟ್‌ಫಾರ್ಮ್‌ (Center for Cellular and Molecular Platform ಸಿ–ಸಿಎಎಂಪಿ) ನೆರವು ಸಿಕ್ಕಿದೆ.

ಈ ನೂತನ ಸಂಶೋಧನೆಯನ್ನು ಈಚೆಗೆ ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಟೆಕ್ಸಮಿಟ್‌ನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿತ್ತು.  

ಬೆಂಕಿ ರೋಗ ನಿರೋಧಕ ಶಕ್ತಿ ಇರುವ ಕೆಂಪಕ್ಕಿ ಭತ್ತದ ತಳಿ ಅಭಿವೃದ್ಧಿ! 

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ Indian Institute of Science) ಸಹಯೋಗದಲ್ಲಿ ಈ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದ್ದು, 100 ಕೆ.ಜಿಯಷ್ಟು ಸರಕು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.

Fountech Solutions ಅಭಿವೃದ್ಧಿಪಡಿಸಿರುವ ಉಪಕರಣವು ಆ್ಯಪ್ಆಧಾರಿತವಾಗಿದ್ದು, ಬ್ಲೂಟೂಥ್‌ನ ಮೂಲಕ ಮೊಬೈಲ್‌ಗೆ ಸಂಪರ್ಕ ಕಲ್ಪಿಸಬಹುದಾಗಿದೆ.

ಉಪಕರಣದಲ್ಲಿ ನಾಲ್ಕು ಹನಿ ಹಾಲು ಹಾಕಿದರೆ ಕೆಲವೇ ನಿಮಿಷಗಳಲ್ಲಿ ಕಾಯಿಲೆಯ ಬಗ್ಗೆ ವಿವರಗಳು ರೈತರ ಕೈ ಸೇರಲಿವೆ! ಇದು ಚಿಕ್ಕದಾಗಿರುವುದರಿಂದ ಸುಲಭವಾಗಿ ಎಲ್ಲಿ ಬೇಕಾದರೂ ಸಾಗಿಸುವ ರೀತಿಯಲ್ಲಿ ಅನುಕೂಲಕರವಾಗಿದೆ.  

Udder abscess disease in heifers: four drops of milk are enough for testing!

ಇನ್ನು ದೇಶದಲ್ಲಿ ಮೊದಲ ಬಾರಿ ಇಂತಹ ಉಪಕರಣವನ್ನು ಅಭಿವೃದ್ಧಿಪಡಿಸಲಾಗಿದ್ದು, ಇದರಿಂದ ಹಾಲಿನ ಗುಣಮಟ್ಟ ಕಾಪಾಡಲು ಸಹಕಾರಿಯಾಗಲಿದೆ.

ರೈತರಿಗೂ ಅವರ ರಾಸುಗಳ ಆರೋಗ್ಯದ ಮೇಲೆ ನಿರಂತರವಾಗಿ ನಿಗಾವಹಿಸಲು ಸಹಕಾರಿ ಆಗಿದೆ. ಮೊಬೈಲ್‌ ಆ್ಯಪ್ ರಾಸುಗಳಿಗೆ ಇರುವ ಆರೋಗ್ಯ ಸಮಸ್ಯೆಗಳ ವಿವರಗಳು ಲಭ್ಯವಾಗಲಿವೆ.  

ಪ್ರಸಕ್ತ ಕೆಚ್ಚಲು ಬಾವು ಕಾಯಿಲೆ ಬಗ್ಗೆ ಸಂಶೋಧನೆ ಮಾಡಲಾಗಿದೆ. ಇತರ ಕಾಯಿಲೆಗಳು ಮತ್ತು ಜಾನುವಾರುಗಳ ಆರೋಗ್ಯ ಕಾಪಾಡುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ ಎಂದು ಸಂಶೋಧನಾ ಸಂಸ್ಥೆ ತಿಳಿಸಿದೆ.

ರೈತರ ಮಕ್ಕಳಿಗೆ ಸಿಹಿಸುದ್ದಿ: ಶಿಕ್ಷಣದಲ್ಲಿ ಶೇ.10% ಮೀಸಲಾತಿ; 430 ಸೀಟು ಲಭ್ಯ- ಬಿ.ಸಿ ಪಾಟೀಲ್‌!

Udder abscess disease in heifers: four drops of milk are enough for testing!

ಹೊಸ ಮಾದರಿಯ ಸಂಶೋಧನೆಯಿಂದಾಗಿ ಹಲವು ರೈತರಿಗೆ ಅನುಕೂಲವಾಗಲಿದೆ. ಶೀಘ್ರ ಕೆಚ್ಚಲು ಬಾವು ಕಾಯಿಲೆ ಪತ್ತೆ ಮಾಡಲು ಸಾಧ್ಯವಾಗುವುದರಿಂದ ರಾಸುಗಳ ಆರೈಕೆಗೂ ನೆರವಾಗಲಿದೆ. 

ವಿಶ್ವವಿಖ್ಯಾತ ಬಸವನಗುಡಿ ಕಡಲೆ ಪರಿಷೆಗೆ ಕ್ಷಣಗಣನೆ! 

ಫೌನ್‌ಟೆಕ್‌ ಸೊಲ್ಯುಷನ್ಸ್‌ ವ್ಯವಸ್ಥಾಪಕ ಅಷರಿತ್‌ ಸಂಸ್ಥೆ ಅಭಿವೃದ್ಧಿಪಡಿಸಿದ ಸಾಧನ ಪ್ರದರ್ಶಿಸಿದರು