News

ಭಾರತದಿಂದ IOS-Andriodಗೆ ಟಕ್ಕರ್! ಸ್ವಂತ ಮೊಬೈಲ್ ಒಎಸ್ ತಯಾರಿಸಲಿದೆಯಾ India

20 March, 2022 12:29 PM IST By: Kalmesh T
Tucker for IOS-Andriod from India! , Will India make its own mobile OS?

ಸ್ವಂತ ಮೊಬೈಲ್‌ ಒಎಸ್‌ ತಯಾರಿಸಲಿರುವ ಭಾರತ

ಈ ಹಿಂದೆ ಮೈಕ್ರೊಸಾಫ್ಟ್ ಹಾಗೂ ಇತರ ಸಣ್ಣ ಪುಟ್ಟ ಕಂಪನಿಗಳು ತನ್ನದೇ ಆದ ಮೊಬೈಲ್ OSಗಳನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ತಂದಿವೆ. ಆದರೆ , Android ಅಥವಾ IOS ಬೆಳೆದಿರುವಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿಲ್ಲ. ಇದೀಗ ಭಾರತ ಇವುಗಳಿಗೆ ಟಕ್ಕರ್ ನೀಡುವಂತಹ OS ತರಲಿದೆ ಎಂಬ ವಿಷಯ ಬಹಿರಂಗಪಡಿಸಿದೆ. ಮೊಬೈಲ್ ಫೋನ್ ಹಾಗೂ ಕಂಪ್ಯೂಟರ್‌ಗಳಿಗೆ ಹೊಸದಾದ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಗೆ ವ್ಯವಸ್ಥೆಯನ್ನು ರಚಿಸಲು ಸರ್ಕಾರ ಯೋಜಿಸುತ್ತಿದೆ ಎಂದು ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಸಂಸತ್ತಿನಲ್ಲಿ ತಿಳಿಸಿದ್ದಾರೆ.

ಇದನ್ನು ಓದಿರಿ:

36 Million ವರ್ಷ ಹಳೆಯ ತಿಮಿಂಗಲು ಪತ್ತೆ! ಇದರ Speciality ಏನು?

ಅಚ್ಚರಿ ಆದ್ರೂ ಸತ್ಯ: ಪೇಪರ್‌ Shortage ಅಂತಾ ಪರೀಕ್ಷೆ ಕ್ಯಾನ್ಸಲ್‌..! ಆತಂಕದಲ್ಲಿ 35 ಲಕ್ಷ ವಿದ್ಯಾರ್ಥಿಗಳು

ಬೇರೆ ದೇಶಗಳಿಗೂ ರಫ್ತಾಗುವ ಸಾಧ್ಯತೆ

ಭಾರತದಲ್ಲಿ ತಯಾರಾಗಲಿರುವ OS ಕೇವಲ ಭಾರತೀಯ ಮಾರುಕಟ್ಟೆಗೆ ಸೀಮಿತವಾಗಲಿದೆಯೇ ಎಂದು ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದ ಕಾರ್ತಿ ಪಿ. ಚಿದಂಬರ್ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಚಂದ್ರಶೇಖರ್ ದೇಶದಲ್ಲಿ ತಯಾರಾಗಲಿರುವ ಒಎಸ್ ದೇಶದ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿರುತ್ತದೆ ಎನ್ನಲಾಗುವುದಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.  ಈ ಹೇಳಿಕೆ ಮೂಲಕ ಭಾರತದಲ್ಲಿ ತಯಾರಾಗಲಿರುವ ಒಎಸ್‌ಗಳು ಇತರ ದೇಶಗಳಿಗೂ ರಫ್ತಾಗುವ ಸಾಧ್ಯತೆ ಇದ್ದು, ಇದರ ವ್ಯಾಪಕ ಮಾರಾಟದ ಬಗ್ಗೆಯೂ ಸರ್ಕಾರ ಯೋಜಿಸುತ್ತಿದೆ ಎಂಬ ಬಗ್ಗೆ ಸುಳಿವು ನೀಡಿದ್ದಾರೆ.

ಇನ್ನುಷ್ಟು ಓದಿರಿ:

Share ಮಾರ್ಕೇಟ್‌ನಲ್ಲಿ ಸ್ವಲ್ಪನಾದ್ರು ಹಣ ಗಳಿಸೋದು ಹೇಗೆ..? ಇಲ್ಲಿವೆ Top 5 ಸೂತ್ರಗಳು

Trend ಸೃಷ್ಟಿಸಿದ James!̧ Cinema ನೋಡಿದ ಪ್ರೇಕ್ಷಕರು Full ಫಿದಾ

ಸ್ಟ್ಯಟಿಸ್ಟಾ ಡೇಟಾ ಪ್ರಕಾರ 2021ರಲ್ಲಿ ಭಾರತದಲ್ಲಿ ಮೊಬೈಲ್ ಫೋನ್ ಆಪರೇಟಿಂಗ್ ಸಿಸ್ಟಂ ಮಾರುಕಟ್ಟೆಯ ಶೇ.95.85 ರಷ್ಟು ಪಾಲನ್ನು ಆಂಡ್ರಾಯ್ಡ್ ಹೊಂದಿದ್ದರೆ, ಆಪಲ್‌ನ ಐಒಎಸ್ ಕೇವಲ ಶೇ.3.1 ರಷ್ಟು ಪಾಲನ್ನು ಹೊಂದಿದೆ. ಆಂಡ್ರಾಯ್ಡ್ ಫೋನ್‌ಗಳು ಭಾರತದ ಮಾರುಕಟ್ಟೆಯಲ್ಲಿ 5 ಸಾವಿರ ರೂ. ಯಿಂದ ಪ್ರಾರಂಭವಾಗುತ್ತದೆ ಹಾಗೂ ಐಒಎಸ್ ಫೋನ್‌ಗಳು 44 ಸಾವಿರ ರೂ. ಯಿಂದ ಪ್ರಾರಂಭವಾಗುತ್ತದೆ.

ಮತ್ತಷ್ಟು ಓದಿರಿ:

ನಿಮಗೆ ಮಹಿಳಾ ಉದ್ಯಮಿಯಾಗೋ ಆಸೆ ಇದೆಯೇ..?ಹಾಗಾದ್ರೆ ಇಲ್ಲಿವೆ Top 10 Business Ideas

Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್‌ನಲ್ಲಿ ಘೋಷಣೆ

ಎಷ್ಟು ಬೆಲೆಗೆ ದೊರಕಿಲಿದೆ ಮೊಬೈಲ್‌

ಇಷ್ಟೆಲ್ಲ ಮಾಹಿತಿ ಮತ್ತು ಹೊಸ ವಿಷಯವನ್ನು ನೀಡಿರುವ ಸಚಿವರು ಮೊಬೈಲ್‌ನ ಬೆಲೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದ್ದರಿಂದ ಭಾರತದಲ್ಲಿ ತಯಾರಾಗಲಿರುವ ಫೋನ್‌ಗಳು ಎಷ್ಟು ಬೆಲೆಗೆ ಜನರ ಕೈಗೆ ಎಟುಕಲಿದೆ ಎಂಬುದನ್ನು ನಿರೀಕ್ಷಿಸಬೇಕಿದೆ.

ಮತ್ತಷ್ಟು ಓದಿರಿ:

ಅಬ್ಬರಿಸಲು ಸಜ್ಜಾದ ದೇಶದ ಮೊದಲ Cyclone..ಏಲ್ಲೆಲ್ಲಿ Effect..!

15 ಸಾವಿರ ಶಿಕ್ಷಕರ ನೇಮಕಾತಿ: ಎಂಜಿನಿಯರಿಂಗ್‌ ಪದವಿಧರರಿಗೆ ಭರ್ಜರಿ ನ್ಯೂಸ್‌ ನೀಡಿದ ಸರ್ಕಾರ