News

ಇಂದು ನವೆಂಬರ್‌ 1; ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಗೊತ್ತೆ?

01 November, 2022 10:26 AM IST By: Hitesh
Karnataka Rajyotsava

ನವೆಂಬರ್‌ 1 ಕರ್ನಾಟಕದ ಜನತೆಗೆ ಕನ್ನಡ ಜಾತ್ರೆ, ಕನ್ನಡ ಭಾಷೆಯ ಹಬ್ಬ….

ಟ್ವಿಟರ್‌: ಇನ್ಮುಂದೆ ಬ್ಲೂಟಿಕ್‌ಗೂ ಕೊಡ್ಬೇಕಾ ದುಡ್ಡು ? 

ನವೆಂಬರ್‌ ಒಂದು ಎಂದರೆ ಮನೆ ಮನಗಳಲ್ಲಿ ತನುಮನಗಳಲ್ಲಿ, ಬೀದಿ ಬೀದಿಯಲ್ಲಿ, ರಾರಾಜಿಸುವ ಕನ್ನಡದ ಬಾವುಟ, ಹಾಡುಗಳು ಎಲ್ಲೆ ಇಲ್ಲದ ಸಂಭ್ರಮದ ವಾತಾವರಣ…

ತಿಂಗಳಲ್ಲಿ 36 ಲಕ್ಷ ಆದಾಯ ಗಳಿಸಿದ ಎಂಬಿಎ ಪದವೀಧರ; ಈ ಯಶೋಗಾಥೆ ನಿಮಗೂ ಪ್ರೇರಣೆ!  

ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ

ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ

ಇಲ್ಲಿಯ ಜನ ಮನ ಭಾಷೆಯು ಕನ್ನಡವದು ಒಂದೇ

ಒಂದೇ ಜಗವು ಮನವು ಕನ್ನಡಿಗರು ಎಂದೆ

ಕುಲವೊಂದೇ ಛಲವೊಂದೇ ನೀತಿಯ ನೆಲೆಯೊಂದೇ

ಹೀಗೆನ್ನದ ಹೆರವರು ಅವರಿದ್ದರು ಒಂದೆ ಇರದಿದ್ದರು ಒಂದೆ

ಕನ್ನಡವೆಂದು ಒಪ್ಪದು ಕರ್ನಾಟಕ ನಿಂದೆ: (ಸಾಹಿತ್ಯ ದ.ರಾ ಬೇಂದ್ರೆ) 

ಇವು ದ.ರಾ ಬೇಂದ್ರೆ ಅವರು ಸಾಲುಗಳು ಈ ರೀತಿಯ ಹಲವು ಸಾಲುಗಳು ಕನ್ನಡದ ಹಿರಿಮೆಯನ್ನು ಹೆಚ್ಚಿಸಿವೆ.

ಕನ್ನಡವನ್ನು ಮಾತನಾಡುವವರು ಹತ್ತಾರು ಕಡೆ ಹರಿದು ಹಂಚಿಹೋಗಿದ್ದವರನ್ನು ಒಂದುಗೂಡುವ ಪ್ರಕ್ರಿಯೆ ಹೇಗೆ ನಡೆಯಿತು. ಕನ್ನಡ ರಾಜ್ಯೋತ್ಸವದ ವಿಶೇಷತೆ ಏನು ಇಲ್ಲಿದೆ ವಿವರ…

ಕನ್ನಡ ಭಾಷೆಯನ್ನು ಮಾತನಾಡುವ ಹತ್ತಾರು ಪ್ರದೇಶಗಳನ್ನು ಭೌಗೋಳಿಕವಾಗಿ ಒಂದು ಮಾಡಿದ ಹೆಮ್ಮೆಯ ದಿನ ನವೆಂಬರ್ 1, 1956.

ಈ ಹಿಂದೆ ಮಹಾರಾಜರ ಅಧೀನದಲ್ಲಿದ್ದ ಮೈಸೂರು ಸಂಸ್ಥಾನ, ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ಹೈದ್ರಾಬಾದ್ ಕರ್ನಾಟಕ, ಬ್ರಿಟಿಷರ ಅಧೀನದಲ್ಲಿದ್ದ ಮದ್ರಾಸ್ ಮತ್ತು ಮುಂಬೈನ ಪ್ರಾಂತ್ಯಗಳನ್ನು ಈ ದಿನ ಒಂದುಗೂಡಿಸಲಾಗಿತ್ತು.   

ಕನ್ನಡ ಭಾಷಿಕ ಪ್ರದೇಶಗಳನ್ನು 1972ರವರೆಗೆ ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿತ್ತು.

ಕನ್ನಡಿಗರ ದಶಕಗಳ ಬೇಡಿಕೆಗೆ ಮಣಿದ ಅಂದಿನ ರಾಜ್ಯ ಸರ್ಕಾರವು 1972ರಲ್ಲಿ ಕನ್ನಡಿಗರ ಬಹುದಿನಗಳ ಒತ್ತಾಯಕ್ಕೆ ಮಣಿದು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿತ್ತು.  

ದೇಶದಲ್ಲಿ ರಾಜ್ಯಗಳ ವಿಲೀನದ ಪ್ರಕ್ರಿಯೆಗಳು ಮುಕ್ತಾಯವಾದ ನಂತರ, ಆಯಾ ಪ್ರದೇಶದಲ್ಲಿ ಭಾಷಾವಾರು ರಾಜ್ಯಗಳು ರಚನೆ ಆಯಿತು.

Karnataka Rajyotsava

ದೇಶದಲ್ಲಿ ರಾಜ್ಯಗಳ ವಿಲೀನಿಕರಣ ಪ್ರಕ್ರಿಯೆ 19ನೇ ಶತಮಾನದ ಮಧ್ಯಭಾಗದಲ್ಲಿ ಆರಂಭಗೊಂಡಿತು.

ನಂತರ 1956ರಲ್ಲಿ ರಾಜ್ಯವು ಪುನರ್ವಿಗಂಡನಾ ಕಾಯ್ದೆಯ ಜಾರಿ ಆಗುವುದರೊಂದಿಗೆ  ಪ್ರಕ್ರಿಯೆ ಮುಕ್ತಯಗೊಂಡಿತು.

ಕೂರ್ಗ್‌, ಮದರಾಸು, ಹೈದರಾಬಾದ್ ಮತ್ತು ಬಾಂಬೆ ಸಂಸ್ಥಾನದ ಕೆಲ ನಿರ್ದಿಷ್ಟ ಪ್ರದೇಶಗಳು ಈ ಪ್ರಕ್ರಿಯೆಯಲ್ಲಿ ಮೈಸೂರು ರಾಜ್ಯಕ್ಕೆ ಸೇರಿಸಲ್ಪಟ್ಟವು.  

ದಕ್ಷಿಣ ಭಾರತದಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಭಾಷಿಕರು ಇರುವ ಎಲ್ಲ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವು 1956ರಲ್ಲಿ ಅಸ್ತಿತ್ವಕ್ಕೆ ಬಂದಿತು.

ಕರ್ನಾಟಕ ಹುಟ್ಟಿಗೆ ಹೋರಾಡಿದವರಲ್ಲಿ ಆಲೂರು ವೆಂಕಟರಾಯರು ಮೊದಲಿಗರು.

ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳುವಳಿಯನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಅಂದರೆ, 1905ರಲ್ಲಿ  ಪ್ರಾರಂಭಿಸಿದರು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಗಣರಾಜ್ಯವಾದ ನಂತರ ಭಾಷೆಗಳ ಆಧಾರದ ಮೇಲೆ 1956ರ ನವೆಂಬರ್ 01 ರಂದು ರಾಜ್ಯಗಳನ್ನು ವಿಂಗಡಿಸಲಾಯಿತು.    

Pm kisan, ಕಿಸಾನ್ ಪಿಂಚಣಿ ಯೋಜನೆ: 200 ರೂಪಾಯಿ ಹೂಡಿಕೆ ಮಾಡಿ 3 ಸಾವಿರ ಪಿಂಚಣಿ ಗಳಿಸಬಹುದು!