News

ಗ್ರಾಹಕರಿಗೆ ಸಂತಸದ ಸುದ್ದಿ: ವಾರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

25 July, 2022 2:45 PM IST By: Maltesh
Today Gold And Silver Price

Gold And Silver Price Today: ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ. ಇಂದೂ ಸಹ ಹಳದಿ ಲೋಹದ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಗ್ರಾಹಕರಿಗೆ ಸಿಹಿಸುದ್ದಿ ನೀಡಿದಂತಾಗಿದೆ  ಸೋಮವಾರ ಭಾರತೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ಬಿಡುಗಡೆ ಮಾಡಲಾಗಿದೆ.

ವಾರದ ಮೊದಲ ದಿನವೇ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಚಿನ್ನ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದ್ದರೆ, ಬೆಳ್ಳಿ ಬೆಲೆಯೂ ಇಂದು ಇಳಿಕೆಯಾಗಿದೆ. 24 ಕ್ಯಾರೆಟ್ ಬಂಗಾರದ ಬೆಲೆಯಲ್ಲಿ 330 ರೂ ಇಳಿಕೆಯಾಗಿ, ಇದೀಗ 10 ಗ್ರಾಂಗೆ ಚಿನ್ನಕ್ಕೆ 50,400 ರೂ ಆಗಿದೆ. ಇನ್ನು 22 ಕ್ಯಾರೆಟ್ ಬಂಗಾರದ ಬೆಲೆಯಲ್ಲಿ 300 ರೂ ಕಡಿಮೆಯಾಗಿದ್ದು, 10 ಗ್ರಾಂ ಗೆ 46,500 ರೂ. ಆಗಿದೆ. 

ಚಿನ್ನ ಮತ್ತು ಬೆಳ್ಳಿಯ ಬೆಲೆಯನ್ನು ದಿನಕ್ಕೆ ಎರಡು ಬಾರಿ ಬಿಡುಗಡೆ ಮಾಡಲಾಗುತ್ತದೆ. ಮೊದಲ ಬಾರಿಗೆ ಬೆಳಿಗ್ಗೆ ಮತ್ತು ಎರಡನೇ ಬಾರಿಗೆ ಸಂಜೆ.

22 ಮತ್ತು 24 ಕ್ಯಾರೆಟ್ ನಡುವಿನ ವ್ಯತ್ಯಾಸವೇನು ಗೊತ್ತಾ?
24 ಕ್ಯಾರೆಟ್ ಚಿನ್ನವು 99.9% ಶುದ್ಧವಾಗಿದೆ ಮತ್ತು 22 ಕ್ಯಾರೆಟ್ ಸರಿಸುಮಾರು 91 ಪ್ರತಿಶತ ಶುದ್ಧವಾಗಿದೆ. 22 ಕ್ಯಾರೆಟ್ ಚಿನ್ನದಲ್ಲಿ ತಾಮ್ರ, ಬೆಳ್ಳಿ, ಸತು ಮುಂತಾದ ಇತರ ಲೋಹಗಳನ್ನು ಶೇ.9 ರಷ್ಟು ಮಿಶ್ರಣ ಮಾಡಿ ಆಭರಣಗಳನ್ನು ತಯಾರಿಸಲಾಗುತ್ತದೆ. 24 ಕ್ಯಾರೆಟ್ ಚಿನ್ನ ಅದ್ಭುತವಾಗಿದ್ದರೂ ಅದನ್ನು ಆಭರಣವನ್ನಾಗಿ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಹೆಚ್ಚಿನ ಅಂಗಡಿಯವರು 22 ಕ್ಯಾರೆಟ್ ಚಿನ್ನವನ್ನು ಮಾರಾಟ ಮಾಡುತ್ತಾರೆ.

ಇದನ್ನೂ ಮಿಸ್‌ ಮಾಡ್ದೆ ಓದಿ: ಹವಾಮಾನ ವರದಿ: ಮತ್ತೇ ಈ 7 ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ..!

ಚಿನ್ನ-ಬೆಳ್ಳಿಯ ದರವನ್ನುಮೊಬೈಲ್‌ನಲ್ಲಿ ತಿಳಿಯುವುದು ಹೇಗೆ?
ನೀವು ಯಾವಾಗಲಾದರು ತಕ್ಷಣವೇ ಚಿನ್ನ ಹಾಗೂ ಬೆಳ್ಳಿಯ ದರವನ್ನು ಶೀಘ್ರವಾಗಿ ಪಡೆಯಬೇಕೆಂದರೆ 8955664433 ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ನೀಡದರೆ ಸಾಕು. ಅಂದಿನ ಚಿನ್ನ ಮತ್ತು ಬೆಳ್ಳಿಯ ದರಗಳು ಕ್ಷಣಾರ್ಧದಲ್ಲಿ ನಿಮ್ಮ ಮೊಬೈಲ್‌ಗೆ ಸಂದೇಶದ ರೂಪದಲ್ಲಿ ಬರುತ್ತದೆ.

ಇಂದಿನ ಬೆಳ್ಳಿ ದರ ಎಷ್ಟು..?
ನಿನ್ನೆಗೆ ಹೋಲಿಸಿದರೆ ಇಂದು ದೇಶದಲ್ಲಿ ಬೆಳ್ಳಿ ದರದಲ್ಲಿ ಕೊಂಚ ಇಳಿಕೆಯಾಗಿದೆ ಎಂದು ಹೇಳಬಹುದು.  ಹೌದು ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಏರಿಳಿತಗಳ ಮೇಲೆ ಅವಲಂಬಿತವಾಗಿದ್ದು ವಿವಿಧ ವಿದ್ಯಮಾನಗಳಿಗೆ ತಕ್ಕಂತೆ ಬದಲಾಗುತ್ತಲೆ ಇರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ವ್ಯತ್ಯಾಸವೂ ಕೂಡ  ಸಹ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.

 ಬೆಂಗಳೂರಲ್ಲಿ ಎಷ್ಟು..?
ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 61,100 ಆಗಿದ್ದರೆ, ದೆಹಲಿಯಲ್ಲಿ 54,900, ಮುಂಬೈನಲ್ಲಿ 54,900 ಹಾಗೂ ಕೋಲ್ಕತ್ತದಲ್ಲೂ ರೂ. 54,900 ಗಳಾಗಿದೆ. ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 611, ರೂ. 6,110 ಹಾಗೂ ರೂ. 61,100 ಗಳಾಗಿವೆ.

ಇದನ್ನೂ ಮಿಸ್‌ ಮಾಡ್ದೆ ಓದಿ: 7 ನೇ ವೇತನ ಆಯೋಗ: ತುಟ್ಟಿಭತ್ಯೆ 4% ರಷ್ಟು ಹೆಚ್ಚಳ ಸಾಧ್ಯತೆ..ಸಂಬಳ ಎಷ್ಟಾಗಲಿದೆ..?