News

ನಾಗರಹೊಳೆ ಉದ್ಯಾನದಂಚಿನಲ್ಲಿ ಹುಲಿ ದಾಳಿ: ಆತಂಕದಲ್ಲಿ ರೈತರು!

05 December, 2022 11:45 AM IST By: Hitesh
Tiger in Nagarahole Park: Farmers are worried!

ಮೈಸೂರಿನ ನಾಗರಹೊಳೆ ಭಾಗದಲ್ಲಿನ ಗ್ರಾಮದ ಜನರಿಗೆ ಮತ್ತೆ ಕಾಡು ಪ್ರಾಣಿಗಳ ಹಾವಳಿ ಎದುರಾಗಿದೆ.  

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವುದು ವರದಿ ಆಗುತ್ತಿದೆ. ಇದರ ಬೆನ್ನಲ್ಲಿಯೇ ಹುಲಿ ಅಟ್ಟಹಾಸ ಮೆರೆಯುತ್ತಿದ್ದು,

ಈ ಭಾಗದಲ್ಲಿರುವ ಜನ ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ.  

ಹುಣಸೂರು ತಾಲ್ಲೂಕಿನ ನಾಗರಹೊಳೆ ಉದ್ಯಾನದಂಚಿನ ಹನಗೋಡು ಹೋಬಳಿಯ ಶೆಟ್ಟಹಳ್ಳಿ, ಅಬ್ಬೂರು ಸೇರಿದಂತೆ

ವಿವಿಧ ಭಾಗದ ಜನರು ಕೃಷಿ ಮತ್ತು ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ.

ಆದರೆ, ಇದೀಗ ಕಾಡಾನೆ ಹಾಗೂ ಹುಲಿಗಳ ಹಾವಳಿ ಹೆಚ್ಚಾಗುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಚಿರತೆ, ಹುಲಿಗಳು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ.

ಇದರ ನಡುವೆ ರೈತರು ಕೂಡ ಕಾಡಾನೆ, ಹುಲಿ, ಚಿರತೆ ದಾಳಿಗೆ ಬಲಿಯಾಗುತ್ತಿದ್ದಾರೆ.

ನಿರಂತರವಾಗಿ ಎದುರಾಗುತ್ತಿರುವ ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸಬೇಕು ಎನ್ನುವುದು ಈ ಭಾಗದ ರೈತರ ಆಗ್ರಹವಾಗಿದೆ. 

ಕಾಡಂಚಿನ ಗ್ರಾಮಗಳ ಜನರು ಇತ್ತೀಚೆಗೆ ಕೆಲ ವರ್ಷಗಳಿಂದ ಪ್ರಾಣ ಭಯದಲ್ಲಿಯೇ  ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಹೀಗಾಗಿ, ಕಾಡಂಚಿನಲ್ಲಿನ ಆನೆ ತಡೆ ಕಂದಕಗಳು, ಸೋಲಾರ್ ಬೇಲಿ ಸೇರಿದಂತೆ ಕಾಡು ಪ್ರಾಣಿಗಳು ಅರಣ್ಯ ದಾಟದಂತೆ ಮಾಡಿದ

ಯೋಜನೆಗಳು ಹಳ್ಳ ಹಿಡಿದಿದ್ದರಿಂದ ಆಗಾಗ ಕಾಡು ಪ್ರಾಣಿಗಳು ಗ್ರಾಮಗಳಿಗೆ ಸಲೀಸಾಗಿ ಬರುತ್ತಿವೆ. ಇದು ಜನರ ನಿದ್ದೆಗೆಡಿಸುವಂತೆ ಮಾಡಿದೆ.

7th Pay Commission ಏಳನೇ ವೇತನ ಆಯೋಗ ರಚನೆಗೆ ಜಾಗ ನಿಗದಿ ಮಾಡಿ ಆದೇಶ!

ಈ ನಡುವೆ ಈ ವ್ಯಾಪ್ತಿಯಲ್ಲಿ ಹುಲಿ ಕಾಣಿಸಿಕೊಂಡಿದ್ದು, ಹನಗೋಡು ಹೋಬಳಿಯ ಅಬ್ಬೂರು ಗ್ರಾಮದ

ಕರಿಗೌಡರಿಗೆ ಸೇರಿದ ಕರುವಿನ ಮೇಲೆ ಹಾಡಹಗಲೇ ಹಠಾತ್ ದಾಳಿ ನಡೆಸಿದೆ.  

ನಾಗರಹೊಳೆ ಉದ್ಯಾನವನದಂಚಿನಲ್ಲಿ ಜಮೀನು ಹೊಂದಿ ಅದರಲ್ಲಿ ಕೃಷಿ ಮಾಡಿಕೊಂಡು ನೂರಾರು ಕುಟುಂಬಗಳು ಬದುಕುತ್ತಿವೆ.

ಇವರಿಗೆ ಕೃಷಿ ಹೊರತು ಪಡಿಸಿದರೆ ಜೀವನೋಪಾಯಕ್ಕೆ ಬೇರೆ ದಾರಿ ಇಲ್ಲದಾಗಿದೆ.

ಹೀಗಿರುವಾಗ ಹುಲಿ ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಮುಂದೇನು ಎಂಬ ಚಿಂತೆ ರೈತರನ್ನು  ನಿರಂತರವಾಗಿ ಕಾಡುತ್ತಿದೆ.

ಒಂದೇ ವೇದಿಕೆಯಲ್ಲಿ ಇಬ್ಬರನ್ನು ಮದುವೆಯಾದ ಭೂಪ!

ಅರಣ್ಯದಿಂದ ಬಂದ ಹುಲಿ ಮತ್ತೆ ಅರಣ್ಯಕ್ಕೆ ಸೇರದೆ, ಪೊದೆ ಒಳಗಡೆ ಅವಿತುಕೊಂಡು ಅಟ್ಟಹಾಸ ಮೆರೆಯುತ್ತಿರುವುದರಿಂದ ಓಡಾಡಲು,

ಕೆಲಸ ಮಾಡಲು ಜನರು ಭಯಪಡುತ್ತಿದ್ದಾರೆ. ಕಳೆದ ಒಂದು ವಾರದ ಹಿಂದೆ ಹುಲಿ ಅಬ್ಬೂರು ಗ್ರಾಮದ ತಿಮ್ಮೇಗೌಡರಿಗೆ ಸೇರಿದ ಹಸು

ಮತ್ತು ಮೇಕೆಯ ಮೇಲೆ ಹುಲಿ ದಾಳಿ ನಡೆಸಿತ್ತು. ಈ ಬೆಳವಣಿಗೆಯಿಂದ ರೈತರು ಇನ್ನಷ್ಟು ಆತಂಕ ಎದುರಿಸುವಂತಾಗಿದೆ.  

ಈಚೆಗೆ ಇಲ್ಲಿನ ಶೆಟ್ಟಳ್ಳಿ ಅಬ್ಬೂರು ಹಾಗೂ ಬಿ.ಆರ್. ಕಾವಲ್ ಗ್ರಾಮದಲ್ಲಿ ಹುಲಿಯ ಹೆಜ್ಜೆ ಪತ್ತೆಯಾಗಿತ್ತು.

ಹುಲಿಯು ಜಾನುವಾರುಗಳ ಮೇಲೆ ಪದೇ ಪದೇ ದಾಳಿ ನಡೆಸುತ್ತಿರುವುದರಿಂದ ಈ ಭಾಗದ ಜನತೆ ಆತಂಕಗೊಂಡಿದ್ದು,

ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ತೋಟಗಳಿಗೆ ಕೆಲಸಕ್ಕೆ ತೆರಳುವ ಕೂಲಿ- ಕಾರ್ಮಿಕರು ಭಯದಲ್ಲೇ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ.    

Heavy Rain ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದ ವಿವಿಧೆಡೆ ಮೂರು ದಿನ ಮಳೆ