News

ಜಗತ್ತಿನ ಅತ್ಯಂತ ಕೊಳಕು ಮನುಷ್ಯ ಸಾವು; ದಶಕಗಳ ಕಾಲ ಸ್ನಾನವನ್ನೇ ಮಾಡಿರಲಿಲ್ಲ ಈ ಭೂಪ!

26 October, 2022 10:47 AM IST By: KJ Staff
Amou Haji

Amou Haji ಜಗತ್ತಿನಲ್ಲಿ ಚಿತ್ರವಿಚಿತ್ರ ಮನುಷ್ಯರ ಬಗ್ಗೆ ನೀವು ಕೇಳಿರುತ್ತೀರಿ ಅಂಥವರ ಸಾಲಿನಲ್ಲಿ ಇರಾನ್‌ನ ವ್ಯಕ್ತಿ ಅಮೌ ಹಾಜಿ ಅವರು ಸಹ ಒಬ್ಬರು.

ಇದನ್ನೂ ಓದಿರಿ: ರಾಜ್ಯದಲ್ಲಿ ನೈರುತ್ಯ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ! 

ಸುದೀರ್ಘ ಅರ್ಧದಶಕಗಳ ಕಾಲ ಅಮೌ ಹಾಜಿ ಅವರು ಸ್ನಾನವನ್ನೇ ಮಾಡಿರಲಿಲ್ಲ. ಅವರು ಮೃತಪಟ್ಟಿರುವುದಾಗಿ ಇರಾನ್‌ನ ಮಾಧ್ಯಮಗಳು ವರದಿ ಮಾಡಿವೆ.

ವಿಶ್ವದಲ್ಲಿಯೇ ಅತ್ಯಂತ ಕೊಳಕು ಮನುಷ್ಯ ಎಂದು ಪರಿಗಣಿಸಲ್ಪಟ್ಟಿದ್ದ ಈ ವ್ಯಕ್ತಿ ತಮ್ಮ 94ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾನೆ. ದಶಕಗಳ ಕಾಲ ಸ್ನಾನ ಮಾಡದ ಈತ, ಅತ್ಯಂತ ಕೊಳಕು ಮನುಷ್ಯ ಎನಿಸಿಕೊಂಡಿದ್ದ.

ದಕ್ಷಿಣದ ಫಾರ್ಸ್ ಪ್ರಾಂತ್ಯದ ದೇಜ್ಗಾಹ್ ಹಳ್ಳಿಯಲ್ಲಿ ಆತ ಭಾನುವಾರ ಮೃತಪಟ್ಟಿದ್ದಾನೆ ಎಂದು ಐಆರ್‌ಎನ್‌ಎ ಸುದ್ದಿಸಂಸ್ಥೆ ವರದಿ ಮಾಡಿದೆ.

ಹಲವು ದಶಕಗಳ ಬಳಿಕ ಬಲವಂತವಾಗಿ ಸ್ನಾನ ಮಾಡಿದ ಕೆಲವೇ ದಿನಗಳಲ್ಲಿ ಆತ ಕೊನೆಯುಸಿರೆಳೆದಿದ್ದಾನೆ.

ಚಿನ್ನ, ಬೆಳ್ಳಿ ದರ ಯಥಾಸ್ಥಿತಿ, ಎಷ್ಟಿದೆ ಚಿನ್ನ, ಬೆಳ್ಳಿ ದರ ?

ಸ್ನಾನ ಮಾಡಿದ ಕೆಲವೇ ದಿನಗಳಲ್ಲಿ ಸಾವು!

ಸ್ನಾನ ಮಾಡಿದರೆ ಸಾಯುತ್ತೇನೆ ಎನ್ನುವ ಆತಂಕದಿಂದಲೇ ಅಮೌ (Amou Haji) ಅರ್ಧದಶಕಕ್ಕೂ ಹೆಚ್ಚು ಕಾಲ ಸ್ನಾನವನ್ನೇ ಮಾಡಿರಲಿಲ್ಲ.

ಸ್ನಾನ ಮಾಡುವುದರಿಂದ ಸಾವನ್ನಪ್ಪಬಹುದು ಎನ್ನುವ ಆತಂಕವೇ ಆತನನ್ನು ಕಾಡುತ್ತಿತ್ತು.

ಕಾಯಿಲೆಗೆ ತುತ್ತಾಗಬಹುದು ಎಂಬ ಭಯದಿಂದ ಆತ 50ಕ್ಕೂ ಹೆಚ್ಚು ವರ್ಷಗಳಿಂದ ಸ್ನಾನವನ್ನೇ ಮಾಡಿರಲಿಲ್ಲ.  

ನೀರಿನಿಂದ ಬಹುದೂರವೇ ಇದ್ದ ಆತನನ್ನು, ಕಳೆದ ಕೆಲವು ತಿಂಗಳ ಹಿಂದೆ ಮೊದಲ ಬಾರಿಗೆ ಗ್ರಾಮಸ್ಥರು ಒತ್ತಾಯಪೂರ್ವಕವಾಗಿ ಸ್ನಾನದ ಕೊಠಡಿಗೆ ಹೊತ್ತುಕೊಂಡು ಹೋಗಿ ಸ್ನಾನ ಮಾಡಿಸಿದ್ದರು ಎನ್ನಲಾಗಿದೆ.

ರಾಜ್ಯದಲ್ಲಿ ಪಾರ್ಶ್ವ ಸೂರ್ಯಗ್ರಹಣ ಗೋಚರ, ಹೇಗಿತ್ತು ಗ್ರಹಣ; ಇಲ್ಲಿದೆ ವಿವರ

ಜೀವನ ಶೈಲಿಯೇ ವಿಚಿತ್ರವಾಗಿತ್ತು

ಅಮೌ ಹಾಜಿ ಜೀವನ ಶೈಲಿಯೇ ವಿಚಿತ್ರವಾಗಿತ್ತು. ಅದೇ ಕಾರಣಕ್ಕೆ ಈತ ಜಗತ್ತಿನ ಅತ್ಯಂತ ಕೊಳಕು ವ್ಯಕ್ತಿ ಎಂದು ಕುಖ್ಯಾತಿ ಕರೆಯಲ್ಪಟ್ಟಿದ್ದು.  

ಅಮೌ ಸಂಸಾರಿಯೂ ಆಗಿರಲಿಲ್ಲ. ಏಕಾಂಗಿ ಜೀವನ, ಅಲೆಮಾರಿ ತನದಲ್ಲಿ ಅವನು ಬದುಕು ಸಾಗಿಸುತ್ತಿದ್ದ. ಈತನ ಜೀವನ ಶೈಲಿ ಕೂಡ ಬಹಳ ವಿಚಿತ್ರವಾಗಿತ್ತು. 

ಸ್ವಚ್ಛ ಜೀವನ, ಪೌಷ್ಟಿಕಾಂಶಯುತ ಆಹಾರದಂತಹ ಬದುಕಿನ ಬಗ್ಗೆ ಹೇಳುವ ವಿಜ್ಞಾನಕ್ಕೂ ಈತ ದೊಡ್ಡ ಸವಾಲಾಗಿದ್ದ.

ಅಷ್ಟೆಲ್ಲ ಕೆಟ್ಟ ಮತ್ತು ಕೊಳಕು ಜೀವನ ಕ್ರಮ ಹೊಂದಿದ್ದರೂ ಸುದೀರ್ಘ 94 ವರ್ಷ ಬದುಕಿದ್ದು ವಿಜ್ಞಾನಿಗಳಿಗೂ ಅಚ್ಚರಿಯ ವಿಷಯವಾಗಿದೆ.  

ರಾಜ್ಯದಲ್ಲಿ ನೈರುತ್ಯ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ! 

Amou Haji

ಕೆಲವು ವರದಿಗಳ ಪ್ರಕಾರ ಆತ ಏಳು ದಶಕಗಳಿಂದ (ಸುಮಾರು 70 ವರ್ಷ) ಸ್ನಾನವನ್ನೇ ಮಾಡಿರಲಿಲ್ಲ. ಇನ್ನು ಹಲ್ಲುಜ್ಜುವುದು ದೂರದ ಮಾತು. ಸ್ನಾನ ಮಾಡಿದರೆ ತನ್ನ ಆರೋಗ್ಯ ಹದಗೆಡುತ್ತದೆ.

ಸ್ವಚ್ಛವಾದಷ್ಟೂ ತನಗೆ ಅಪಾಯ ಎಂದು ಅವನು ಭಾವಿಸಿದ್ದ. ಇದೇ ಕಾರಣಕ್ಕೆ ಸ್ನಾನದ ಬಗ್ಗೆ ವಿಪರೀತವಾದ ಭಯ ಸೃಷ್ಟಿಯಾಗಿತ್ತು.  

ಇನ್ನು ಕೊಳೆತ ಮಾಂಸ ಹಾಗೂ ಸತ್ತ ಪ್ರಾಣಿಗಳು ಆತನ ನೆಚ್ಚಿನ ಆಹಾರವಾಗಿದ್ದವು.

ಅದರಲ್ಲಿಯೂ ಮುಳ್ಳುಹಂದಿಗಳೆಂದರೆ ಪಂಚಪ್ರಾಣ. ಆತನಿಗೆ  ಧೂಮಪಾನ ಬಹಳ ಇಷ್ಟದ ಹವ್ಯಾಸ. ಆದರೆ ಅದರಲ್ಲಿ ಆತ ಹೊಗೆಸೊಪ್ಪು ಬಳಸುತ್ತಿರಲಿಲ್ಲ. ಬದಲಾಗಿ ಪ್ರಾಣಿಗಳ ದೇಹದ ವ್ಯರ್ಥ ಭಾಗಗಳನ್ನು ತುಕ್ಕುಹಿಡಿದ ಕೊಳವೆಗೆ ಹಾಕಿ ಸೇದುತ್ತಿದ್ದ!

ಯೌವನದಲ್ಲಿ ಅತ್ಯಂತ ನೋವು ಅನುಭವಿಸಿದ್ದ ಅವರು ಈ ರೀತಿ ಕೊಳಕು ಜೀವನಕ್ಕೆ ಹೊಂದಿಕೊಳ್ಳಲು ಕಾರಣವಾಯಿತು ಎನ್ನಲಾಗಿದೆ.  

ಚಳಿಗಾಲದಲ್ಲಿ ತನ್ನನ್ನು ಬೆಚ್ಚಗಿರಿಸಿಕೊಳ್ಳಲು ಯುದ್ಧ ಶಿರಸ್ತ್ರಾಣವನ್ನು ಧರಿಸುತ್ತಿದ್ದ.

ನೆಲದ ಒಳಗೆ ಇರಲು ಸಮಾಧಿಯಂತಹ ಕಿಂಡಿಯಲ್ಲಿ ಹೆಚ್ಚಿನ ಸಮಯ ವಾಸಿಸುತ್ತಿದ್ದ. ಜನರು ಆತನಿಗಾಗಿ ಸಣ್ಣ ಗುಡಿಸಲನ್ನೂ ಕಟ್ಟಿಕೊಟ್ಟಿದ್ದರು.

ಇನ್ನೂ ಅಚ್ಚರಿ, ಕುತೂಹಲಕಾರಿ ಸಂಗತಿ ಎಂದರೆ, ಕಾರುಗಳ ಸೈಡ್ ಮಿರರ್‌ಗಳನ್ನು ತನ್ನ ರೂಪವನ್ನು ನೋಡಿಕೊಂಡು ಆತ ಸಂಭ್ರಮಿಸುತ್ತಿದ್ದ.

ತುಕ್ಕು ಹಿಡಿದ ದೊಡ್ಡ ಕ್ಯಾನ್‌ನಲ್ಲಿ ಪ್ರತಿದಿನ ಐದು ಲೀಟರ್ ನೀರು ಕುಡಿಯುತ್ತಿದ್ದ. ಬೆಂಕಿಗೆ ತಲೆಗೂದಲು ಕೊಡುವ ಮುನ್ನ ಅವುಗಳನ್ನು ಟ್ರಿಮ್ ಮಾಡಿಕೊಳ್ಳುತ್ತಿದ್ದ.

 ವಿಶ್ವದ ಅತ್ಯಂತ ಕೊಳಕು ವ್ಯಕ್ತಿ  ಬಗ್ಗೆ ದಿ ಸ್ಟ್ರೇಂಜ್ ಲೈಫ್ ಆಫ್ ಅಮೌ ಹಾಜಿ The Strange Life of Amou Haji (ಅಮೌ ಹಾಜಿಯ ವಿಚಿತ್ರ ಜೀವನ) ಎಂಬ ಕಿರು ಸಾಕ್ಷ್ಯಚಿತ್ರ 2013ರಲ್ಲಿ ಬಿಡುಗಡೆಯಾಗಿತ್ತು.

Amou Haji