ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರು ಅಲ್ಲಿ ಒಣದೇ ಸಮಸ್ಯೆ ಪ್ಲಾಸ್ಟಿಕ್..ಪ್ಲಾಸ್ಟಿಕ್..ಎಲ್ಲೆಡೆ ಪ್ಲಾಸ್ಟಿಕ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವು ಪರಿಸರಕ್ಕೆ ಹಾಗೂ ಮನುಕುಲಕ್ಕೆ ಅತಿದೊಡ್ಡ ಅಪಾಯವಾಗಿದೆ. ಇನ್ನು ಸ್ವಚ್ಚಂದವಾಗಿದ್ದ ನಮ್ಮ ದೇಶದ ಹಳ್ಳಿಗಳಲ್ಲೂ ಇದೀಗ ಪ್ಲಾಸ್ಟಿಕ್ ಭೂತ ಕಾಡುತ್ತಿದೆ.
ಹೌದು ಜಮ್ಮು ಮತ್ತು ಕಾಶ್ಮೀರದ ಒಂದು ಸಣ್ಣ ಹಳ್ಳಿಯಲ್ಲಿ, ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ವಿಪರೀತವಾಗಿದೆ. ಅಲ್ಲಿಯ ಪಂಚಾಯತಿಯ ಸರಪಂಚ್ ಪ್ಲಾಸ್ಟಿಕ್ ಭೂತವನ್ನು ನಿರ್ಮೂಲನೆ ಮಾಡಲು ನಿರ್ಧರಿಸಿ ವಿನೂತನ ಐಡಿಯಾವೊಂದನ್ನು ಮಾಡಿದ್ದಾರೆ. ಸರಪಂಚ ಅವರು ಗ್ರಾಮದಲ್ಲಿ ತ್ಯಾಜ್ಯ ರೂಪದಲ್ಲಿರುವ 20 ಕ್ವಿಂಟಾಲ್ ಪ್ಲಾಸ್ಟಿಕ್ ತಂದರೆ ಚಿನ್ನದ ನಾಣ್ಯ ನೀಡುವುದಾಗಿ ಘೋಷಿಸಿದರು.
ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆಗೆ ವಿಮೆ ಜಾರಿ: ಸಿಎಂ ಬಸವರಾಜ ಬೊಮ್ಮಾಯಿ
ಅವರು ಈ ಗೋಷಣೆ ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಗ್ರಾಮದ ಜನರು ರಸ್ತೆ, ರಸ್ತೆ ಪಕ್ಕದ ಚರಂಡಿಗಳಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲಾರಂಭಿಸಿದರು. ಪರಿಣಾಮ 12-15 ದಿನದಲ್ಲಿ ಹಳ್ಳಿಯ ಸಂಪೂರ್ಣ ಚಿತ್ರಣವೇ ಬದಲಾಯಿತು. ಇದೀಗ ಈ ಐಡಿಯಾದಿಂದ ಗ್ರಾಮ ಪ್ಲಾಸ್ಟಿಕ್ ಮುಕ್ತ ಗ್ರಾಮವಾಗಿದೆ. ಇದರೊಂದಿಗೆ ಅಧಿಕಾರಿಗಳು ಗ್ರಾಮವನ್ನು ಸ್ವಚ್ಛ ಭಾರತ ಅಭಿಯಾನ-2 ಅಡಿಯಲ್ಲಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಎಂದು ಘೋಷಿಸಲು ಮುಂದಾಗಿದ್ದಾರೆ.
ಸದಿವಾರ ಗ್ರಾಮವು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಹಿಲ್ಲರ್ ಶಾಬಾದ್ ಬ್ಲಾಕ್‌ನಲ್ಲಿದೆ. ಫಾರೂಕ್ ಅಹಮದ್ ಈ ಗ್ರಾಮದ ಸರಪಂಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ವೃತ್ತಿಯಲ್ಲಿ ವಕೀಲರು ಆಗಿರುವ ಅವರು ಗ್ರಾಮದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚುತ್ತಿದ್ದು, ಇದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಸಾಕಷ್ಟು ದಿನದಿಂದ ಯೋಚನೆ ಮಾಡುತ್ತಿದ್ದರು.
ಹೀಗೆ ಯೋಜನೆ ಹಾಗೂ ಯೋಚನೆ ಮಾಡಿದ ನಂತರ ಕೂಡಲೇ ಗ್ರಾಮದಲ್ಲಿ ಯಾರಾದರೂ 20 ಕ್ವಿಂಟಾಲ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದರೆ ಅವರಿಗೆ ಚಿನ್ನದ ನಾಣ್ಯ ನೀಡಲಾಗುವುದು ಎಂದು ಘೋಷಿಸಿದರು.
ವಾಟ್ಸಪ್ ಪ್ರಿಯರೇ ಗಮನಿಸಿ: ಇನ್ಮುಂದೆ ಪರ್ಸನಲ್ ಚಾಟ್ ಕೂಡ ಲಾಕ್ ಮಾಡಬಹುದು! ಹೇಗೆ ಗೊತ್ತಾ?
ಸರಪಂಚರ ಘೋಷಣೆ ಮೇರೆಗೆ ಗ್ರಾಮಸ್ಥರು ಬೀದಿ ಬೀದಿ ಅಲೆದು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದರು. ಚರಂಡಿಗಳಲ್ಲಿ ಸಂಗ್ರಹವಾಗಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆಗೆಯುವ ಕಾರ್ಯವೂ ಆರಂಭವಾಗಿದೆ. ಇದರಿಂದ ಹದಿನೈದು ದಿನದಲ್ಲಿ ಪ್ಲಾಸ್ಟಿಕ್ ಮುಕ್ತ ಗ್ರಾಮವಾಯಿತು.
ಅಧಿಕಾರಿಗಳು ಸಧಿವಾರ ಗ್ರಾಮವನ್ನು ಸ್ವಚ್ಛ ಭಾರತ ಅಭಿಯಾನ-2 ಅಡಿಯಲ್ಲಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಎಂದು ಘೋಷಿಸಿದರು. ಗ್ರಾಮ ಹಾಗೂ ಸಮೀಪದ ಹೊಳೆ, ನದಿಗಳನ್ನೂ ಸ್ವಚ್ಛಗೊಳಿಸಲಾಗಿದೆ ಎಂದು ಸರಪಂಚ್ ಫಾರೂಕ್ ತಿಳಿಸಿದರು. ಸಾಧಿವಾರ ಗ್ರಾಮದ ಪ್ರೇರಣೆಯಿಂದ ಹಲವು ಗ್ರಾಮಗಳು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿಸಲು ಸಿದ್ಧತೆ ನಡೆಸಿವೆ.