News

Goodnews: ರಷ್ಯಾ ಉಕ್ರೇನ್ ಸಮರ: ದೇಶದ ಗೋಧಿಗೆ ಬಂತು ಭಾರೀ ಬೇಡಿಕೆ..!

15 March, 2022 5:28 PM IST By: KJ Staff
The Russia-Ukraine war could spur India’s best wheat export

ರಷ್ಯಾ ಮತ್ತು ಉಕ್ರೇನ್ ಸಂಘರ್ಷದಿಂದ ಭಾರತದ ವಿದೇಶಿ ವ್ಯಾಪಾರದ ಮೇಲೆ ಅದರಲ್ಲೂ ವಿಶೇಷವಾಗಿ ಕೃಷಿ ವಲಯದ ವಹಿವಾಟಿನ ಮೇಲೆ  ಭಾರೀ  ಪರಿಣಾಮ ಬೀರುತ್ತಿದೆ. ಹೌದು  ರಷ್ಯ-ಉಕ್ರೇನ್ ಸಂಘರ್ಷ: ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಗೋದಿಗೆ ಭಾರಿ ಬೇಡಿಕೆ ಉಂಟಾಗಿದೆ ಎಂದು ವರದಿಗಳಾಗಿವೆ..

ಇದನ್ನು ಓದಿರಿ:

ಮಾರ್ಚ್ ೨೧ರಿಂದ ಮತ್ತೆ ಶುರುವಾಗಲಿದೆ ರೈತರ ಪ್ರತಿಭಟನೆ.. ಕಾರಣವೇನು ..?

ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡಿಬಿಡುವ ಯುದ್ಧ, ಕೆಲವೊಂದು ಅನಿರೀಕ್ಷಿತ ಲಾಭಗಳನ್ನೂ ತಂದುಬಿಡುತ್ತದೆ. ಇ ಮಾತು ನಿಜ ಎಂಬಂತೆ, ರಷ್ಯ-ಉಕ್ರೇನ್ ಸಂಘರ್ಷದ ಕಾರಣದಿಂದ ತೈಲ ಬೆಲೆ ಏರಿಕೆ ಬಿಸಿಗೆ ಆತಂಕಿತವಾಗಿರುವ ಭಾರತವು ಒಂದು ವಿಷಯದಲ್ಲಿ ಮಾತ್ರ ತುಸು ಲಾಭ ಪಡೆಯುವತ್ತ ಮುಖ ಮಾಡಿದೆ ಅಂದರೆ ತಪ್ಪಾಗಲಾರದು..

ಇದನ್ನು ಓದಿರಿ:

ಸದ್ದು ಮಾಡುತ್ತಿರುವ The Kashmir Files ಸಿನಿಮಾ.. ರಾಜ್ಯ ಸರ್ಕಾರದಿಂದ ತೆರಿಗೆ ವಿನಾಯತಿ

 


ರಷ್ಯಾ ಉಕ್ರೇನ್ ಸಮರ: ಗೋಧಿ ಬಂತು ಭಾರೀ ಬೇಡಿಕೆ..!

ಇದೀಗ ಯುದ್ಧ ಮತ್ತು ಆರ್ಥಿಕ ನಿರ್ಬಂಧಗಳ ಕಾರಣದಿಂದ ಇ ಪೂರೈಕೆ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ.ರಷ್ಯ ಮತ್ತು ಉಕ್ರೇನ್ ಗಳು ಒಟ್ಟಾಗಿ ಜಗತ್ತಿನ ಬೇಡಿಕೆಯ ಶೇಕಡ 25ರಷ್ಟು ಗೋದಿಯನ್ನು ಮಾರುಕಟ್ಟೆಗೆ ಒದಗಿಸುತ್ತಿವೆ. ಇತ್ತ ಅಗತ್ಯಕ್ಕಿಂತ ಹೆಚ್ಚು ಗೋದಿ ತುಂಬಿಸಿಟ್ಟುಕೊಂಡಿದ್ದ ಭಾರತಕ್ಕೆ ಈಗ ತುಸು ಪರಿಸ್ಥಿತಿಯ ಪ್ರಯೋಜನವಾಗುತ್ತಿದೆ.

ಇದನ್ನು ಓದಿರಿ:

Ukraine-russia war effect: ಅಡುಗೆ ಎಣ್ಣೆ ರಫ್ತಿನಲ್ಲಿ ಉಕ್ರೇನ್ ಪಾಲೇಷ್ಟು..?

ಎರಡು ಕಾರಣಗಳಿಂದ ಭಾರತದ ಗೋದಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಥಾನ ಪಡೆದಿರಲಿಲ್ಲ. ಒಂದು, ತನ್ನ ಪಡಿತರ ವ್ಯವಸ್ಥೆಗೆ ಭಂಗ ಬರದಿರಲಿ ಎಂದು ಭಾರತ ಹೆಚ್ಚುವರಿ ಗೋದಿಯನ್ನು ಸಹ ತನ್ನಲ್ಲೇ ಇಟ್ಟುಕೊಳ್ಳುತ್ತಿತ್ತು. ಎರಡನೆಯದಾಗಿ, ಬೆಂಬಲ ಬೆಲೆ ನೀಡುವುದಕ್ಕೆ ಗೋದಿಗೆ ಸರ್ಕಾರವೇ ಹಣ ವ್ಯಯಿಸುತ್ತದೆಯಾದ್ದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಟ್ಟು ಅದಕ್ಕೆ ಸ್ಪರ್ಧಾತ್ಮಕ ಬೆಲೆ ಪಡೆಯುವುದು ಈವರೆಗೆ ಸಾಧ್ಯವಿರಲಿಲ್ಲ. ಆದರೆ ರಷ್ಯ-ಉಕ್ರೇನ್ ಸಂಘರ್ಷವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋದಿ ಬೆಲೆಯನ್ನು ಕಳೆದ 14 ವರ್ಷಗಳಲ್ಲೇ ಅತಿ ಹೆಚ್ಚಿನದಾಗಿಸಿರುವುದರಿಂದ ಈ ಹಂತದಲ್ಲಿ ಗೋದಿಯನ್ನು ಮಾರುವುದರಲ್ಲಿ ಭಾರತಕ್ಕೆ ಲಾಭವಿದೆ.

ಇನ್ನಷ್ಟು ಓದಿರಿ:

ಮಾ ೨೧ರಿಂದ ಮತ್ತೆ ಶುರುವಾಗಲಿದೆ ರೈತರ ಪ್ರತಿಭಟನೆ.. ಕಾರಣವೇನು ..?

Gold Price BIG UPDATE! ಚಿನ್ನದ ಬೆಲೆ 2786 ರೂ. ಕಡಿಮೆಯಾಗಿದೆ! ಈಗಲೇ ಹೋಗಿ ಖರೀದಿ ಮಾಡಿ!