ರಾಜ್ಯದಲ್ಲಿ ಒಂದಿಲ್ಲೊಂದು ವಸ್ತುಗಳ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿದ್ದು, ಇದೀಗ ಹಾಲಿನ ಸರತಿ.
ಈ ವಾರದಿಂದಲೇ ಹಾಲಿನ ದರದಲ್ಲಿ ಹೆಚ್ಚಳವಾಗಲಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟಲಿದೆ ಎಂದು ಹೇಳಲಾಗಿದೆ.
ಹಾಲಿನ ದರ ಹೆಚ್ಚಳ ಮಾಡುವ ಸಂಬಂಧ ಮಾತನಾಡಿರುವ ರಾಜ್ಯ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ಹಾಲು ಉತ್ಪಾದಕರಿಂದ
ಖರೀದಿಸುವ ಹಾಲಿನ ದರವನ್ನು ಹೆಚ್ಚಳ ಮಾಡಲಾಗುವುದು ಎಂದಿದ್ದಾರೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಹಾಲಿನ ದರ ಹೆಚ್ಚಳವಾಗುವ ಮುನ್ಸೂಚನೆ ಸಿಕ್ಕಿದೆ.
ಆಗಿದ್ದರೆ ಹಾಲಿನ ದರ ಹೆಚ್ಚಳ ಯಾವ ಕಾರಣಕ್ಕೆ ಆಗುತ್ತಿದೆ. ಹಾಲಿನ ದರ ಹೆಚ್ಚಳವಾದರೆ, ಎಷ್ಟಾಗಲಿದೆ ಎನ್ನುವುದರ ವಿವರ ಇಲ್ಲಿದೆ.
ವಿವಿಧ ಕಾರಣಗಳಿಂದ ಹಾಲಿನ ದರವನ್ನು ಹೆಚ್ಚಳ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.
ಕೆಎಂಎಫ್ ಹಾಗೂ ಅಧಿಕಾರಿಗಳ ಮನವಿಯಂತೆ ಹಾಲಿನ ಮೊತ್ತವನ್ನು 5 ರೂಪಾಯಿಗೆ ಹೆಚ್ಚಳ ಮಾಡಲು ಮನವಿ ಸಲ್ಲಿಸಲಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಹಾಲಿನ ದರ ಹೆಚ್ಚಳ ಮಾಡಬೇಕು ಎನ್ನುವುದರ ಕುರಿತು ನಿರಂತರವಾಗಿ ಬೇಡಿಕೆ ಕೇಳಿ ಬರುತ್ತಲೇ ಇದೆ.
ಹಾಲಿನ ದರ ಹೆಚ್ಚಳ ಮಾಡುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.
ಕೆಎಂಎಫ್‌ನ ಅಧ್ಯಕ್ಷರು ಸಹ ಈ ಹಿಂದೆ ಹಾಲಿನ ದರ ಹೆಚ್ಚಳ ಮಾಡುವ ಕುರಿತು ಪ್ರಸ್ತಾವ ಸಲ್ಲಿಸಿದ್ದರು.
ರಾಜ್ಯದಲ್ಲಿ ಇಷ್ಟರಲ್ಲೇ ಹಾಲು ಖರೀದಿ ದರ ಹೆಚ್ಚಳ: ಸಚಿವ ಕೆ. ವೆಂಕಟೇಶ್!
ರಾಜ್ಯದಲ್ಲಿ ಹಾಲು ಖರೀದಿ ದರ ಇಷ್ಟರಲ್ಲೇ ಹೆಚ್ಚಳವಾಗಲಿದೆ. ಈ ಸಂಬಂಧ ಖುದ್ದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರವು ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ದರವನ್ನು ಹೆಚ್ಚಳ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಹಾಲಿನ ದರ ಹೆಚ್ಚಳ ಮಾಡುವ ಸಂಬಂಧ ಮಾತನಾಡಿರುವ ರಾಜ್ಯ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ಹಾಲು ಉತ್ಪಾದಕರಿಂದ ಖರೀದಿಸುವ
ಹಾಲಿನ ದರವನ್ನು ಹೆಚ್ಚಳ ಮಾಡಲಾಗುವುದು ಎಂದಿದ್ದಾರೆ. ಈ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದ್ದು, ಚರ್ಚೆಯ ನಂತರದಲ್ಲಿ ಪರಿಷ್ಕೃತ ದರ ನಿಗದಿ ಮಾಡಲಿದ್ದೇವೆ
ಎಂದು ಹೇಳಿದ್ದಾರೆ.
ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ಹೇಳಿದ್ದರು ಸಹ. ಇದೀಗ ಕೆಎಂಎಫ್ ಪದಾಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.
ಇನ್ನು ಹಾಲಿನ ದರ ಹೆಚ್ಚಳಕ್ಕೆ ಮುಂದಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮತಿ ಮಾತ್ರ ಬಾಕಿ ಉಳಿದಂತಾಗಿದೆ.
ಹಾಲಿನ ದರ ಹೆಚ್ಚಳ ಬಹುತೇಕ ಖಚಿತ
ರಾಜ್ಯದಲ್ಲಿ ಹಾಲಿನ ದರ ಏರಿಕೆ ಬಹುತೇಕ ಖಚಿತವಾಗಿದೆ.
ಮುಂದಿನ ವಾರದಿಂದ ಹೊಸ ದರ ಜಾರಿಗೆ ಬಂದರೂ ಅಚ್ಚರಿ ಇಲ್ಲ ಎಂದು ಹೇಳಲಾಗಿದೆ.
ಇದೇ ಶುಕ್ರವಾರದಂದು ಮತ್ತೆ ಕೆಎಂಎಫ್ ಪದಾಧಿಕಾರಿಗಳೊಂದಿಗೆ ಸಿದ್ದರಾಮಯ್ಯ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಹಾಲಿನ ದರ ಹೆಚ್ಚಳ ಮಾಡುವ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿ ಅನುಮತಿ ನೀಡುವ ಸಾಧ್ಯತೆ ಇದೆ.
Rain ರಾಜ್ಯದ ಕರಾವಳಿ ಭಾಗದಲ್ಲಿ ಮುಂದುವರಿದ ವರ್ಷಧಾರೆ!
ಹಾಲಿನ ದರ ಐದು ರೂಪಾಯಿ ಹೆಚ್ಚಳವಾಗು ಸಾಧ್ಯತೆ
ಪ್ರತಿ ಲೀಟರ್ ಹಾಲಿನ ದರವು 5 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ.
ಈ ರೀತಿ ಹೆಚ್ಚಳ ಮಾಡುವ 5 ರೂಪಾಯಿಯಲ್ಲಿ ರೈತರಿಗೆ 3 ರೂಪಾಯಿ ಪ್ರೋತ್ಸಾಹ ದನ ಹಾಗೂ ಸಂಸ್ಕರಣ ವೆಚ್ಚ 2 ರೂಪಾಯಿ ನಿಗದಿ ಮಾಡುವುದರ ಕುರಿತು
ರಾಜ್ಯ ಸರ್ಕಾರಕ್ಕೆ ಕೆಎಂಎಫ್ ಪ್ರಸ್ತಾವನೆಯನ್ನು ಸಲ್ಲಿಸಿದೆ. ಆದರೆ, ಒಮ್ಮೆಗೆ ಐದು ರೂಪಾಯಿಯನ್ನು ರಾಜ್ಯ ಸರ್ಕಾರವು ಹೆಚ್ಚಳ ಮಾಡುವ ಸಾಧ್ಯತೆ ಕಡಿಮೆ ಇದೆ.
ಇದರ ಬದಲಿಗೆ ಪ್ರತಿ ಲೀಟರ್ ಹಾಲಿಗೆ 2 ರಿಂದ 3 ರೂಪಾಯಿ ಹೆಚ್ಚಳಕ್ಕೆ ಸರ್ಕಾರ ಅಸ್ತು ಎನ್ನುವ ಸಾಧ್ಯತೆ ಇದ್ದು,
ಈ ಪ್ರಮಾಣದಲ್ಲಿ ಬೆಲೆ ಹೆಚ್ಚಳ ನಿಶ್ಚಿತ ಎಂದೇ ಹೇಳಲಾಗಿದೆ.
ಉಳಿದ ರಾಜ್ಯಗಳಲ್ಲಿ ಹಾಲಿನ ದರ ನಮ್ಮ ರಾಜ್ಯಕ್ಕಿಂತ ಹೆಚ್ಚಿದೆ. ಅಲ್ಲದೇ ಪಶು ಸಂಗೋಪನೆ ವೆಚ್ಚವೂ ನಿರಂತರವಾಗಿ ಹೆಚ್ಚಳವಾಗಿದೆ.
ಇದರೊಂದಿಗೆ ರೈತರು ಹಾಲು ಉತ್ಪಾದಕ ಸಂಘಗಳು ಕಷ್ಟದಲ್ಲಿವೆ.
ಹೀಗಾಗಿ, ರಾಜ್ಯದಲ್ಲಿ ಹಾಲಿನ ದರ ಹೆಚ್ಚಳ ಅನಿವಾರ್ಯ ಎಂದು ಕೆಎಂಎಫ್ ಅಧಿಕಾರಿಗಳು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ವಿಧಾನಪರಿಷತ್ತಿನಲ್ಲಿ ಚರ್ಚೆ
ಮಂಗಳವಾರ ವಿಧಾನಪರಿಷತ್ತಿನಲ್ಲಿ ಜೆಡಿಎಸ್‌ನ ಕೆ.ಎ.ತಿಪ್ಪೇಸ್ವಾಮಿ, ಎಸ್.ಎಲ್. ಭೋಜೇಗೌಡ ಅವರ ಗಮನ ಪ್ರಸ್ತಾವನೆಗೆ ಸಚಿವರು ಉತ್ತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿ ಲೀಟರ್ ಹಾಲಿಗೆ ಒಕ್ಕೂಟಗಳು 128 ನೀಡುತ್ತಿದ್ದು, ಸರ್ಕಾರದಿಂದ 15 ರೂಪಾಯಿಯನ್ನು
ಪ್ರೋತ್ಸಾಹ ಧನದ ರೂಪದಲ್ಲಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಹಾಲಿನ ಕೊರತೆ ಇರುವ ಪ್ರದೇಶದಲ್ಲಿ ಖಾಸಗಿಯವರು
ರೈತರಿಂದ ಅಧಿಕ ದರ ನೀಡಿ ಹಾಲು ಖರೀದಿ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಹಾಲು ಒಕ್ಕೂಟಗಳು ಹೆಚ್ಚಿನ ದರ ನೀಡಿ ಹಾಲು ಖರೀದಿ ಮಾಡುವುದರಿಂದಾಗಿ ಖಾಸಗಿ ಅವರೊಂದಿಗೆ ಪೈಪೋಟಿ ಮಾಡಲು ಸಾಧ್ಯವಾಗುತ್ತದೆ.
ಇದೇ ಸಂದರ್ಭದಲ್ಲಿ ಬೆಲೆ ಏರಿಕೆಯಿಂದಾಗಿ ಹಸು, ಎಮ್ಮೆ ಸಾಕುವುದಕ್ಕೆ ಹೆಚ್ಚು ಖರ್ಚಾಗುತ್ತಿರುವುದರಿಂದ ದರ ಹೆಚ್ಚಳ ಖಚಿತ ಎಂದು ಹೇಳಿದರು.