News

ಬಿಸಿಲ ಬೆಗೆಯ ಜೊತೆ ಗಗನಕ್ಕೇರಿದ ಹಣ್ಣಿನ ಬೆಲೆ! : ಗ್ರಾಹಕರು ಕಂಗಾಲು

10 March, 2023 3:23 PM IST By: KJ Staff
The price of fruit has skyrocketed with the heat! :

1. ಇನ್ಫೋಸಿಸ್ ಬಿಟ್ಟು ರೈತನ ಕೈ ಹಿಡಿದ ಮಹಿಳೆ ;ಮೂಲ ಸೌಕರ್ಯ ವಂಚನೆಯಿಂದ ಕಂಗಾಲು

2. ಶೇ . ೯೦ ಸಹಾಯಧನದಲ್ಲಿ ಕೃಷಿ ಯಂತ್ರಗಳ ಖರೀದಿಗೆ ಅರ್ಜಿ ಅಹ್ವಾನ

3.ರಾಜ್ಯ ಹಾಗು ಹೊರ ರಾಜ್ಯದಲ್ಲಿ ಈರುಳ್ಳಿ ಉತ್ತಮ ಇಳುವರಿ -ಬೆಂಗಳೂರಿಗೆ ೪೨ ಸಾವಿರ .ಚೀಲ ಈರುಳ್ಳಿ ಪೂರೈಕೆ

4.ಬಿಸಿಲ ಬೇಗೆಯ ಜೊತೆ ಜೊತೆಗೆ ಹಣ್ಣಿನ ಬೆಲೆ ಏರಿಕೆ : ತರಕಾರಿ ಬೆಲೆ ಸ್ಥಿರ

5. .ಆರೋಗ್ಯ ಇಲಾಖೆಯ ಕ್ರಮ :ಉತ್ತರ ಕನ್ನಡ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ ಮಂಗನ ಖಾಯಿಲೆ ದೂರ

6. ಕರಾವಳಿ ಜಿಲ್ಲೆ ಮಂಗಳೂರು , ಹೊನ್ನಾವರದಲ್ಲಿ ಗರಿಷ್ಠ ತಾಪಮಾನ : ಎಷ್ಟಿದೆ ತಾಪಮಾನ ಇಲ್ಲಿದೆ ಮಾಹಿತಿ

7.ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಗೆ ಕೇಂದ್ರ ಕಡಿವಾಣ ; ಮುಂಜಾಗೃತ ಕ್ರಮ ಕೈಗೊಳ್ಳಲು ಸೂಚನೆ

೧. ಇನ್ಫೋಸಿಸ್ ಬಿಟ್ಟು ರೈತನ ಕೈ ಹಿಡಿದ ಮಹಿಳೆ ;ಮೂಲ ಸೌಕರ್ಯ ವಂಚನೆಯಿಂದ ಕಂಗಾಲು

ನಮ್ಗೆಲ್ಲಾ ತಿಳಿದ ಹಾಗೆ ಹುಡುಗಿಯರು ಮದುವೆ ವಿಚಾರದಲ್ಲಿ ತನಗಿಂತ ದೊಡ್ಡ ಸ್ಥಾನದಲ್ಲಿ ಇರುವ ವರರನ್ನು ವರಿಸುತ್ತಾರೆ .ಆದರೆ ಇಲ್ಲಿ ಇದಕ್ಕೆ ತದ್ವಿರೋಧವಾಗಿ ಮಹಿಳೆಯೊಬ್ಬಳು ರೈತನನ್ನು ಮದುವೆಯಾಗಬೇಕೆಂದು ,ಇನ್ಫೋಸಿಸ್ ಅಂತಹ ದೊಡ್ಡ ಸಂಸ್ಥೆಯಲ್ಲಿ ಕೆಲಸ ಬಿಟ್ಟು ,ಹಳ್ಳಿಯ ರೈತನನ್ನು ಮದುವೆಯಾಗಿದ್ದಾಳೆ .ಆದರೆ ಹಳ್ಳಿಯಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದಾಗಿ ರೋಸಿಹೋಗಿದ್ದಾಳೆ . ಈ ಊರಿನಲ್ಲಿ ಸರಿಯಾದ ರಸ್ತೆ ಇಲ್ಲ ,ಸೇತುವೆ ಇಲ್ಲ ,ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಬೆಡ್ಶೀಟ್ ನಲ್ಲಿ ಎತ್ತಿಕೊಂಡು ಆಸ್ಪತ್ರೆಗೆ ಹೋಗ್ಬೇಕು ಎಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಚೀರಿ ಚಿನ್ನಳ್ಳಿಯ ಆಶಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ .

ರಸ್ತೆ ಹಾಗು ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮಸ್ಥರು ೨ ದಿನಗಳ ಪ್ರತಿಭಟನೆ ಯನ್ನು ಹಮ್ಮಿಕೊಂಡಿದ್ದರು .ಈ ಸಂದರ್ಭ ಪ್ರತಿಭಟನಾ ಸ್ಥಳಕ್ಕೆ ಶಾಸಕ ಎಚ್ .ಕೆ. ಕುಮಾರಸ್ವಾಮಿ ಭೇಟಿ ನೀಡಿದ ಅಹವಾಲು ಆಲಿಸುವ ಸಂದರ್ಭ ಈ ಘಟನೆ ನಡೆದಿದೆ .

೨. ಕೃಷಿ ಕಟಾವು ಯಂತ್ರಗಳ ಖರೀದಿಗೆ ಶೇ . ೯೦ ಸಹಾಯಧನ ನೀಡಲು ಅರ್ಜಿ ಅಹ್ವಾನ

ರೈತರ ಏಳಿಗೆಗಾಗಿ ಕೃಷಿ ಇಲಾಖೆಯಿಂದ ಕೃಷಿ ಯಂತ್ರೋಪಕರಣಗಳ ಖರೀದಿಗೆ ವಿವಿಧ ಯೋಜನೆಯಡಿಯಲ್ಲಿ ಶೇ . ೯೦% ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ .

ರಾಜ್ಯದ ಹಾಸನ ಜಿಲ್ಲೆ ,ಮೈಸೂರು ಹಾಗು ತುಮಕೂರು ಜಿಲ್ಲೆಯಲ್ಲಿ ರೈತರಿಗೆ ಕಟಾವು ಯಂತ್ರಗಳ ಖರೀದಿಗೆ ಸಹಾಯಧನ ಬೇಕಾದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ .

ಸಾಮಾನ್ಯ ಜನರಿಗೆ ಶೇ. ೫೦% ರಷ್ಟು , ಮತ್ತು ಪರಿಶಿಷ್ಟ ಜಾತಿ ಹಾಗು ಪಂಗಡದ ಜನರಿಗೆ ಶೇ. ೯೦% ಸಹಾಯಧನ ನೀಡಲಾಗುವುದು . ಅರ್ಜಿಯನ್ನು ಸಲ್ಲಿಸುವ ಆಸಕ್ತ ರೈತರು ನಿಮ್ಮ ಜಿಲ್ಲೆಯ ಹತ್ತಿರದ ರೈತ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದಾಗಿದೆ .


೩. ರಾಜ್ಯ ಹಾಗು ಹೊರ ರಾಜ್ಯದಲ್ಲಿ ಈರುಳ್ಳಿ ಉತ್ತಮ ಇಳುವರಿ -ಬೆಂಗಳೂರಿಗೆ ೪೨ ಸಾವಿರ .ಚೀಲ ಈರುಳ್ಳಿ ಪೂರೈಕೆ

ವಿವಿಧ ರಾಜ್ಯಗಳಲ್ಲಿ ಈರುಳ್ಳಿಯ ಉತ್ತಮ ಇಳುವರಿಯಿಂದಾಗಿ , ಈರುಳ್ಳಿಯ ಬೆಲೆ ಕುಸಿತಗೊಂಡಿದೆ. ಮಹಾರಾಷ್ಟದಿಂದ ಹೆಚ್ಚಿನ ಪ್ರಮಾಣದ ಈರುಳ್ಳಿ ಬೆಂಗಳೂರಿಗೆ ಆವಕವಾಗುತ್ತಿದೆ . ಬೇಡಿಕೆ ಇಲ್ಲದ ಕಾರಣ ವ್ಯಾಪಾರಿಗಳು ನಷ್ಟವನ್ನು ಅನುಭವಿಸುತ್ತಿದ್ದಾರೆ.ಕಳೆದ ೨ ದಿನಗಳ ಹಿಂದೆ ಬೆಂಗಳೂರಿನ ಯಶವಂತಪುರ ಎ.ಪಿ,ಎಂ .ಸಿ ಮಾರುಕಟ್ಟೆಯಲ್ಲಿ ಸಣ್ಣ ಈರುಳ್ಳಿ ಪ್ರತಿ ಕೆಜಿ ಗೆ ೩ರೂ ಹಾಗು ದೊಡ್ಡಈರುಳ್ಳಿ ಪ್ರತಿ ಕೆಜಿ ಗೆ ೧೪ ರವರೆಗೆ ಮಾರಟವಾಗುತ್ತಿತ್ತು.

ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಯಶವಂತಪುರ ಎ.ಪಿ,ಎಂ .ಸಿ ಮಾರುಕಟ್ಟೆಗೆ ತಲಾ ೫೦ ಕೆಜಿ ಯಾ ೪೨. ೬೪೭ ಚೀಲ ಈರುಳ್ಳಿ ಪೂರೈಕೆಯಾಗಿದೆ .

೪. ಬಿಸಿಲ ಬೇಗೆಯ ಜೊತೆ ಜೊತೆಗೆ ಹಣ್ಣಿನ ಬೆಲೆ ಏರಿಕೆ : ತರಕಾರಿ ಬೆಲೆ ಸ್ಥಿರ

ಮಾರ್ಚ್ ನಿಂದ ಜೂನ್ ವರೆಗಿನ ಬೇಸಿಗೆ ಯಾ ಅವಧಿಯಲ್ಲಿ ಸಾಮನ್ಯವಾಗಿ ಜನರು ದೇಹಾದ ದಾಹ ತಣಿಸಲು ಹಣ್ಣಿನ ಮೊರೆ ಹೋಗುತ್ತಾರೆ .
ಈ ಬಾರಿ ಬೇಸಿಗೆಯಲ್ಲಿ ತಕಾರಿಯಾ ಬೆಲೆ ಕೊಂಚ ಇಳಿಕೆ ಕಂಡಿದೆ ಆದರೆ ಹಣ್ಣಗಳಿಗೆ ಭಾರಿ ಬೇಡಿಕೆ ಇದ್ದು ಬೆಲೆ ಕೂಡ ದಿನೆ ದಿನೆ ಹೆಚ್ಚುತ್ತಾ ಹೋಗುತ್ತಿದೆ .

ಮನೆ ಪೂರ್ತಿಗೊಳಿಸದ ಗುತ್ತಿಗೆದಾರನಿಗೆ ಬಿತ್ತು ಬರೋಬ್ಬರಿ 7 ಲಕ್ಷ ರೂ ದಂಡ!

ತರಕಾರಿಯ ಆವಕ ಪ್ರಮಾಣ ಪ್ರತಿ ನಿತ್ಯ ಹೆಚ್ಚುತ್ತಲೇ ಇದೆ . ಕಳೆದ ವಾರ ೧೬೦ ಇದ್ದ ಸೇಬಿನ ಬೆಲೆ ಈ ವಾರ ೨೦೦ಕ್ಕೆ ಏರಿಕೆ ಯಾಗಿದೆ . ಅದೇ ರೀತಿ ಕಿತ್ತಳೆ ೧೦೦ರಿಂದ ೧೨೦ಕ್ಕೆ ಏರಿಕೆಯಾಗಿದೆ . ದಾಳಿಂಬೆ, ಸಪೋಟ ,ಕಲ್ಲಂಗಡಿ , ಯಾಲಕ್ಕಿ ಬಾಳೆ ಹಣ್ಣು ಹಾಗು ಬಾಳೆಹಣ್ಣಿನ ಬೆಲೆ ಕೂಡ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹಣ್ಣಿನ ಬೆಳೆಗಳು ಕೊಂಚ ಏರಿಕೆಯನ್ನು ಕಂಡಿದ್ದು ,ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಾರೆ .

5.ಆರೋಗ್ಯ ಇಲಾಖೆ ಯಾ ಕ್ರಮ :ಉತ್ತರ ಕನ್ನಡ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ ಮಂಗನ ಖಾಯಿಲೆ ದೂರ

ಕಳೆದ ನಾಲ್ಕು ವರ್ಷಗಳಿಂದ ಆತಂಕ ಸೃಷ್ಟಿಸಿದ ಮಂಗನ ಖಾಯಿಲೆ ಉತ್ತರಕನ್ನಡ ಜಿಲ್ಲೆಯಲ್ಲಿ ದೂರವಾಗಿದೆ . ಈವರೆಗೂ ಖಾಯಿಲೆ ಪತ್ತೆಯಾದ ವರದಿಯಾಗಿಲ್ಲ .
2019ರಿಂದ ಸತತವಾಗಿ ನಾಲ್ಕು ವರ್ಷ ಸೆಪ್ಟೆಂಬರ್‌ ತಿಂಗಳಿನಿಂದ ಮೇ ವರೆಗೆ ಸಿದ್ದಾಪುರ, ಹೊನ್ನಾವರ ಸೇರಿದಂತೆ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಮಂಗನ ಕಾಯಿಲೆ ಭೀತಿ ಆವರಿಸುತ್ತಿತ್ತು. 199 ಮಂಗನ ಕಾಯಿಲೆ ಪ್ರಕರಣ ಜಿಲ್ಲೆಯಲ್ಲಿ ವರದಿಯಾಗಿದ್ದವು. ಈ ಪೈಕಿ 8 ಮಂದಿ ಮೃತಪಟ್ಟಿದ್ದರು.

ಈ ವರ್ಷ ಜಿಲ್ಲೆಯ ೪ ಕಡೆ ಮಂಗಗಳು ಮೃತ ಪಟ್ಟ ವರದಿಯಾಗಿದ್ದರು, ಮಂಗನ ಖಾಯಿಲೆ ಪತ್ತೆಯಾಗಿಲ್ಲ ,ಹಾಗು ಶಂಕಿತ ೩೦ ವ್ಯಕ್ತಿಗಳ ರಕ್ತ ತಪಾಸಣೆಯನ್ನು ಮಾಡಲಾಗಿದ್ದು ,ಯಾರೊಬ್ಬರೂ ಮಂಗನ ಖಾಯಿಲೆಗೆ ತುತ್ತಾಗಿಲ್ಲ ಎಂದು ತಿಳಿದು ಬಂದಿದೆ .
ಮಂಗಗಳು ಮೃತಪಟ್ಟ ಸಂದರ್ಭದಲ್ಲಿ ಸಾರ್ವಜನಿಕರು ಹತ್ತಿರದ ಅರಣ್ಯ ಇಲಾಕೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದು , ತಕ್ಷಣ ಮುಂಜಾಗೃತಾ ಕ್ರಮ ಕೈಗೊಂಡ ಕಾರಣ ಖಾಯಿಲೆಯನ್ನು ತಡೆಗತಲೂ ಸಾಧ್ಯವಾಗಿದೆ ಎಂದು ಅಧಿಕಾರಿಗಳು ಮಾಹಿತಿಯನ್ನ ನೀಡಿದ್ದಾರೆ.

6. ಕರಾವಳಿ ಜಿಲ್ಲೆ ಮಂಗಳೂರು , ಹೊನ್ನಾವರದಲ್ಲಿ ಗರಿಷ್ಠ ತಾಪಮಾನ : ಎಷ್ಟಿದೆ ತಾಪಮಾನ ಇಲ್ಲಿದೆ ಮಾಹಿತಿ

ಈಗಗಾಲೇ ಬೇಸಿಗೆ ಕಾಲ ಪ್ರಾಂಭವಾಗಿದೆ ,ಬೇಸಿಗೆಯ ಪ್ರಾಂಭದಲ್ಲಿಯೇ ಬಿಸಿಲಿನ ಬೇಗೆ ಹೆಚ್ಚಿದೆ . ಹೌದು ಕರಾವಳಿ ಜಿಲ್ಲೆಯಾದ ಮಂಗಳೂರಿನ ಪಣಂಬೂರು ಹಾಗು ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ದೇಶದಲ್ಲಿಯೇ ಗರಿಷ್ಠ ತಾಪಮಾನ ವರದಿಯಾಗಿದೆ. ಸಾಮನ್ಯವಾಗಿ ಮಾರ್ಚ್ ನ ಮೊದಲ ವಾರ ಹಾಗು ಎರಡನೇ ವಾರ ಕಾರಾವಳಿಯಲಿ ೩೪ ಡಿಗ್ರಿ ಸೆ. ನಷ್ಟು ತಾಪಮಾನ ಇರುತ್ತಿತ್ತು ಆದರೆ ಈ ಬಾರಿ ೩೮.೯ ಡಿಗ್ರಿ ಸೆ. ನಷ್ಟು ತಾಪಮಾನ ಏರಿಕೆಯಾಗಿದೆ . ಒಣಹವೆ ಹಾಗು ಉಟ್ತಾಈ ಭಾಗದ ಬಲವಾದ ಗಾಳಿಯ ಒತ್ತಡದ ಪರಿಣಾಮ ಸಾಧರ್ಯಾಂಕಿಂತ ೨ರಿಂದ ೩ ಡಿಗ್ರಿ ಸೆ. ತಾಪಮಾನ ಏರಿಕೆಯಾಗಿದೆ .
ಗುಡ್‌ನ್ಯೂಸ್‌: ಯಶಸ್ವಿನಿ ಯೋಜನೆಯ ನೋಂದಣಿ ದಿನಾಂಕ ವಿಸ್ತರಣೆ
ಕರಾವಳಿ ಜಿಲ್ಲೆಗಳ ಒಂದೆರಡು ಪ್ರದೇಶಗಳಲ್ಲಿ ಬಿಸಿ ಗಾಳಿ ಬೀಸಬಹುದು ಎಂದು ಹವಾಮಾನ ಇಲಾಖೆ ಜನರಿಗೆ ಎಸ್. ಎಂ.ಎಸ್. ಕಳುಹಿಸಿದೆ . ಕೆಲದಿನಗಳ ಹಿಂದೆಯೂ ಬಿಸಿಗಾಳಿಯ ಬಗ್ಗೆ ಎಚ್ಚರಿಕೆ ಯನ್ನು ನೀಡಿತ್ತಾದ್ರು ನಂತರ ಎಚ್ಚರಿಕೆಯನ್ನು ವಾಪಾಸೂ ಪಡೆಯಲಾಗಿತ್ತು .

7. ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಗೆ ಕೇಂದ್ರ ಕಡಿವಾಣ ; ಮುಂಜಾಗೃತಾ ಕ್ರಮ ಕೈಗೊಳ್ಳಲು ಸೂಚನೆ

ಬೇಸಿಗೆ ಸಂದರ್ಭದಲ್ಲಿ ಲೋಡ್ ಶೆಡ್ಡಿಂಗ್ ಮಾಡದಿರಲು ಮುಂಜಾಗ್ರತ ಕ್ರಮಗಳನ್ನು ವಿದ್ಯುತ್ ಕಂಪೆನಿ ಗಳಿಗೆ ಕೈಗೊಳ್ಳಲು ಕೇಂದ್ರ ಸರ್ಕಾರ ಸೂಚಿಸಿದೆ . ಮುಂಬರುವ ದಿನಗಳಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಲಿದ್ದು ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ವಿವಿಧ ಅಂಶಗಳ ಕುರಿತು ವಿದ್ಯು ,ಕಲ್ಲಿದ್ದಲು , ಮತ್ತು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳ ಜೊತೆ ಕೇಂದ್ರ ವಿದ್ಯುತ್ ಸಚಿವ ಅರ. ಕೆ .ಸಿಂಗ್ ಅವರು ಪರಿಶೀಲಿಲನ ಸಭೆ ನಡೆಸಿದರು.

ಕೇಂದ್ರ ವಿದ್ಯುತ್ ಪ್ರಾಧಿಕಾರದ ಅಂದಾಜಿನ ಪ್ರಕಾರ , ಈ ವರ್ಷದ ಏಪ್ರಿನಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ ೨೨೯ ಗಿಗಾ ವ್ಯಾಟ್ ತಲುಪುವ ನಿರೀಕ್ಷೆ ಇದೆ . ದೇಶದ ಧಕ್ಷಿಣ ಭಾಗದಿಂದ ಮುಂಗಾರು ಹಂಗಾಮು ಆರಂಭವಾದಾಗ ಬೇಡಿಕೆ ಕಡಿಮೆಯಾಗುತ್ತದೆ ಮತ್ತು ಅದು ಮುಂದಿನ ೩-೪ ತಿಂಗಳುಗಳಲ್ಲಿ ಇಡೀ ದೇಶವನ್ನು ಆವರಿಸುತ್ತದೆ .
ಒಂದು ಅಂದಾಜಿನ ಪ್ರಕಾರ ಈ ವರ್ಷದ ಏಪ್ರಿಲ್ ನಲ್ಲಿ 142079 ಮೆಗಾ ಯೂನಿಟ್ ವಿದ್ಯುತ್ ಗೆ ಬೇಡಿಕೆ ಉಂಟಾಗಲಿದೆ ಎಂದು ನಿರೀಕ್ಷಿಸಲಾಗಿದೆ .ಇದು ಈ ವರ್ಷದಲ್ಲೇ ಅತ್ಯಧಿಕವಾಗಿದೆ. ವಿದ್ಯುತ್ ಬೇಡಿಕೆಯು ಮೇ ತಿಂಗಳಲ್ಲಿ 1,41,464 ಮೆ. ಯೂನಿಟ್ ಗೆ ಮತ್ತು ನವೆಂಬರ್‌ನಲ್ಲಿ 1,17,049 ಮೆ. ಯೂನಿಟ್‌ಗೆ ಇಳಿಯಲಿದೆ ಎಂದು ನಿರೀಕ್ಷಿಸಲಾಗಿದೆ.

ಚಿನ್ನ  ಖರೀದಿಗೆ ಜಬರ್ದಸ್ತ್‌ ಟೈಮ್‌: ಬಂಗಾರದ ಬೆಲೆಯಲ್ಲಿ ಭರ್ಜರಿ ಇಳಿಕೆ