ತೋಟಗಾರಿಕೆ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಸಂಭ್ರಮದಲ್ಲಿ ಈ ಬಾರಿ ಪುಗತಿಪರ ರೈತ, ತೋಟಗಾರಿಕೆ ಬೆಳೆಗಾರ ಹೆಚ್. ಏಕಾಂತಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡಲು ತೋಟಗಾರಿಕೆ ವಿವಿ ಆಡಳಿತ ಮಂಡಳಿ ತೀರ್ಮಾನಿಸಿದೆ.
ಇದನ್ನೂ ಓದಿರಿ: ಪಿಎಂ ಕಿಸಾನ್ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!
Pm Kisan ಬ್ರೇಕಿಂಗ್; ಈ ದಿನ ಫಿಕ್ಸ್ ಬರಲಿದೆ ರೈತರ ಖಾತೆಗೆ 11ನೇ ಕಂತಿನ ಹಣ! ಕೃಷಿ ಸಚಿವರಿಂದ ಸ್ಪಷ್ಟನೆ..
ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಹೆಚ್ ಏಕಾಂತಯ್ಯ ಅವರಿಗೆ ನೀಡುತ್ತಿದೆ.
ಹೆಚ್. ಏಕಾಂತಯ್ಯನವರ ಪರಿಚಯ:
ಹೆಚ್ ಏಕಾಂತಯ್ಯನವರು 1935ರ ಫೆಬ್ರುವರಿ 1 ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೈಲಾಲು ಎಂಬ ಗ್ರಾಮದಲ್ಲಿ ಜನಿಸಿದರು.
ಇವರು ಬಿಎಸ್ಸಿ ಮತ್ತು ಬಿಎಎನ್ಎಲ್ಸಿ ಪದವೀಧರರಾಗಿದ್ದು 1957ರಿಂದ 88 ರವರೆಗೆ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.
3ನೇ ಮಗುವಿಗೆ ಜನ್ಮ ನೀಡಿದರೆ 11 ಲಕ್ಷ ರೂಪಾಯಿ ಬೋನಸ್ ನೀಡತ್ತೆ ಈ ಕಂಪನಿ.. ಜೊತೆಗೆ 1 ವರ್ಷ ರಜೆ!
ನಂತರ ರಾಜಕೀಯ ಕೃಷಿ ಎರಡರಲ್ಲೂ ತೊಡಗಿಕೊಂಡರು. ಹೆಚ್ ಏಕಾಂತಯ್ಯ, ಅವರು 1985 ರಿಂದ 89 ರ ಅವಧಿಯಲ್ಲಿ ಚಿತ್ರದುರ್ಗದಿಂದ ಎರಡು ಬಾರಿ ಶಾಸನ ಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು.
ಇವರು ಕೃಷಿ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು 1992ರಿಂದ ತಮ್ಮ ಐವತ್ತು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಮತಿ ಗಳನ್ನು ಅಳವಡಿಸಿ ಇತರರಿಗೆ ಮಾದರಿಯಾಗಿದ್ದಾರೆ.
1995 ರಲ್ಲಿ “ರೆಡ್ ಲೇಡಿ” ಎಂಬ ತೈವಾನ್ ಪಪ್ಪಾಯಿ ತಳಿಯನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಹೆಗ್ಗಳಿಕೆ ಇವರದಾಗಿದೆ.
ರೈತರಿಗೆ ಸಿಹಿ ಸುದ್ದಿ: ಮಾರುಕಟ್ಟೆಯಲ್ಲಿ ಗೋಧಿಗೆ ಬಂಪರ್ ಬೆಲೆ: ರೈತರ ಮುಖದಲ್ಲಿ ನಗೆ!
Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…