ಇಲ್ಲೊಂದು ಅಪರೂಪದಲ್ಲೆ ಅಪರೂಪದ ಸುದ್ದಿಯನ್ನು ನಿಮಗಾಗಿ ನಾವು ಹೆಕ್ಕಿ ತಂದಿದ್ದೇವೆ. ಏನಪ್ಪ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.
ಜಗತ್ತಿನ ಪ್ರತಿಯೊಂದು ಜೀವಿಗೂ ಪ್ರಕೃತಿಯೇ ಸ್ಪೂರ್ತಿ ಮತ್ತು ಬದುಕು ನೀಡಿದ ದೇವರು. ಆದರೆ, ಈ ಪ್ರಕೃತಿಗೂ ಜೀವಂತ ವ್ಯಕ್ತಿಯ ಸ್ಥಾನ ನೀಡಲು ಮುಂದಾಗಿದೆ ಮದ್ರಾಸಿನ ಹೈ ಕೋರ್ಟ್.
ಹೌದು! ಅಭಿವೃದ್ಧಿ ಹೆಸರಲ್ಲಿ ಈಗಾಗಲೇ ಸಾಕಷ್ಟು ಪರಿಸರವನ್ನು ನಾವು ಹಾಳು ಮಾಡಿದ್ದೇವೆ. ಮಿತಿಮೀರಿದ ನಗರೀಕರಣ ಹಾಗೂ ಕೈಗಾರೀಕರಣದಿಂದಾಗಿ ನಿಸರ್ಗ ಹಾಳಾಗುತ್ತಿರುವಾಗಲೇ, ಪರಿಸರ ಸಂರಕ್ಷಣೆಗಾಗಿ ಮದ್ರಾಸ್ ಹೈಕೋರ್ಟ್ ಗಟ್ಟಿ ನಿಲುವಿನೊಂದಿಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಅದುವೇ ಪ್ರಕೃತಿ ಅಥವಾ ಪರಿಸರವನ್ನು ಜೀವಂತ ವ್ಯಕ್ತಿ ಎಂದು ಘೋಷಣೆ ಮಾಡುವುದು.
ಇದನ್ನೂ ಓದಿರಿ:
ರಾಜ್ಯ ಸರ್ಕಾರದ ಮಹತ್ವದ ಆದೇಶ; ಸರ್ಕಾರಿ ನೌಕರರ ಎರಡನೆ ಪತ್ನಿ- ಮಕ್ಕಳಿಗೂ ಸಿಗಲಿದೆ ಅನುಕಂಪದ ನೌಕರಿ!
ಎಚ್ಚರಿಕೆ! “ವಾಹನ ಚಾಲಕರಿಗೆ ಎಚ್ಚರಿಕೆ” ಡ್ರೈವಿಂಗ್ ವೇಳೆ ಗುಟ್ಕಾ ಜಗಿದರೆ ಬೀಳತ್ತೆ ದಂಡ!
ಪರಿಸರ ಸಂರಕ್ಷಣೆಯನ್ನು ಮಾಡುವ ನಿಟ್ಟಿನಲ್ಲಿ ಮದ್ರಾಸ್ ಹೈಕೋರ್ಟ್ (Madras High Court) ಪ್ರಕೃತಿಯನ್ನು (Nature) ಜೀವಂತ ವ್ಯಕ್ತಿ (Mother Nature) ಎಂದು ಘೋಷಣೆ ಮಾಡಿದೆ. ಜೀವಂತ ಮಾನವನಿಗೆ ಇರುವ ಎಲ್ಲ ಹಕ್ಕು, ಕರ್ತವ್ಯ ಹಾಗೂ ಹೊಣೆಗಾರಿಕೆಗಳೂ ಪ್ರಕೃತಿಗೆ ಇವೆ ಎಂದು ಹೇಳಿದೆ.
ರಾಷ್ಟ್ರವೇ ಪೋಷಕ ಎಂಬ ತತ್ವದಡಿ ಉತ್ತರಾಖಂಡ ಹೈಕೋರ್ಟ್ ಗಂಗೋತ್ರಿ, ಯಮನೋತ್ರಿ ಸೇರಿದಂತೆ ಆ ರಾಜ್ಯದ ಎಲ್ಲ ನೀರ್ಗಲ್ಲುಗಳನ್ನು ಕಾನೂನುಬದ್ಧ ಸಂಸ್ಥೆಗಳು ಎಂದು ಪ್ರಕಟಿಸಿತ್ತು. ಅವುಗಳ ಸಂರಕ್ಷಣೆ ಉದ್ದೇಶದಿಂದ ಈ ಕ್ರಮ ಕೈಗೊಂಡಿತ್ತು.
ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳನ್ನು ಕೂಡಿ ಹಾಕಿದ ರೈತರು!
ಹೈನುಗಾರಿಕೆಯಲ್ಲಿ ಹೆಚ್ಚಿನ ಹಾಲು ಉತ್ಪಾದನೆಗೆ ಹೀಗೆ ಮಾಡಿ…
ಪ್ರಕರಣವೊಂದರ ವಿಚಾರಣೆ ವೇಳೆ ಮದುರೈ ಪೀಠದ ನ್ಯಾ ಎಸ್.ಶ್ರೀಮತಿ ಅವರು ಉತ್ತರಾಖಂಡ ಹೈಕೋರ್ಟ್ ಹೊರಡಿಸಿದ್ದ ತೀರ್ಪನ್ನು ಉಲ್ಲೇಖಿಸಿದರು. ಹಿಂದಿನ ತಲೆಮಾರುಗಳು ನಮಗೆ ಪ್ರಕೃತಿ ಮಾತೆಯನ್ನು ಶುದ್ಧ ರೂಪದಲ್ಲಿ ನೀಡಿವೆ. ಅದನ್ನು ನಾವು ನಮ್ಮ ಮುಂದಿನ ಪೀಳಿಗೆಗೂ ಹಸ್ತಾಂತರಿಸುವುದು ನೈತಿಕತೆ ಎಂದು ಹೇಳಿದರು.
ಪ್ರಕೃತಿಗೆ ಜೀವಂತ ವ್ಯಕ್ತಿಯ ಸ್ಥಾನಮಾನ ನೀಡಲು ಇದು ಬಹಳ ಸೂಕ್ತ ಕಾಲ. ಪ್ರಕೃತಿ ಮಾತೆಗೆ ಜೀವಂತ ವ್ಯಕ್ತಿಯ ಸ್ಥಾನಮಾನ ನೀಡಲಾಗುತ್ತದೆ. ಉಳಿವು, ಸುರಕ್ಷತೆಗಾಗಿ ಬೇಕಾದ ಮೂಲಭೂತ, ಕಾನೂನು, ಸಾಂವಿಧಾನಿಕ ಹಕ್ಕುಗಳನ್ನೂ ನೀಡಲಾಗುತ್ತದೆ. ಪ್ರಕೃತಿ ಮಾತೆಯನ್ನು ಸಂರಕ್ಷಿಸಲು, ಸಾಧ್ಯವಿರುವ ಎಲ್ಲ ದಾರಿ ಬಳಸಿ ರಕ್ಷಣೆ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಸೂಚನೆ ನೀಡಲಾಗುತ್ತದೆ ಎಂದರು.
PPF: ಕೇವಲ 1000 ಡೆಪಾಸಿಟ್ ಮಾಡಿ 18 ಲಕ್ಷ ಲಾಭ ಪಡೆಯಿರಿ; ನೌಕರರಿಗೆ ಇಲ್ಲಿದೆ ಅದ್ಬುತ ಯೋಜನೆ!