ದೇವರ ಮೊಸಳೆ ಎಂದೆ ಪ್ರಸಿದ್ಧಿ ಪಡೆದಿದ್ದ ಕಾಸರಗೋಡಿನ ಅನಂತ ಪದ್ಮನಾಭ ದೇವಸ್ಥಾನದಲ್ಲಿದ್ದ ಮೊಸಳೆ “ಬಬಿಯಾ” ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿರಿ: 8ನೇ ತರಗತಿ ಪಾಸ್ ಆದವರಿಗೆ ಇಲ್ಲಿದೆ ಭರ್ಜರಿ ಉದ್ಯೋಗಾವಕಾಶ; 60,000 ವೇತನ!
ಬಬಿಯಾ ಪ್ರತಿದಿನ ದೇವರ ಮಧ್ಯಾಹ್ನದ ಪೂಜೆಯ ನಂತರ ನೀಡಲಾಗುವ ದೇವಾಲಯದ ಪ್ರಸಾದವನ್ನು ಮಾತ್ರ ತಿನ್ನುತ್ತಿತ್ತು.
ಕಾಸರಗೋಡಿನ ಅನಂತ ಪದ್ಮನಾಭ ದೇವಸ್ಥಾನದ ಮೊಸಳೆ ಬಬಿಯಾ ವಿಧಿವಶವಾಗಿದೆ. ಭಕ್ತ ವಲಯದಲ್ಲಿ ಪ್ರಸಿದ್ಧಿ ಪಡೆದ ಬಬಿಯಾ ಮೊಸಳೆಯು ಇಹಲೋಕ (Babiya Crocodile Passes Away) ತ್ಯಜಿಸಿರುವುದು ಭಕ್ತರ ಪಾಲಿಗೆ ನೋವನ್ನುಂಟು ಮಾಡಿದೆ.
ನಿಯಮಗಳ ಉಲ್ಲಂಘನೆ; ಕರ್ನಾಟಕದಲ್ಲಿ Ola, Uber, Rapido ಆಟೋ ಸೇವೆ ಸ್ಥಗಿತಗೊಳಿಸುವಂತೆ ಸರ್ಕಾರಿ ಆದೇಶ!
2 ವರ್ಷಗಳ ಹಿಂದೆ ಇದೇ ಮೊದಲ ಬಾರಿಗೆ ನೀರಿನಿಂದ ಹೊರ ಬಂದಿದ್ದ ಬಬಿಯಾ ಮೊಸಳೆ ದೇಗುಲದ ಆವರಣಕ್ಕೆ ಬಂದಿತ್ತು. ಇದು ಭಕ್ತರ ಅಚ್ಚರಿಗೆ ಕಾರಣವಾಗಿತ್ತು. ಅನಂತ ಪದ್ಮನಾಭ ದೇವಸ್ಥಾನದ ಆವರಣದಲ್ಲಿ ಬಬಿಯಾ ಮೊಸಳೆಯ ಅಂತಿಮ ವಿಧಿ ವಿಧಾನ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರ ಸರೋವರದ ದೇವಾಲಯದ ರಕ್ಷಕನಾಗಿತ್ತು ಬಬಿಯಾ ಮೊಸಳೆ. ಸ್ಥಳೀಯ ದಂತಕಥೆಗಳ ಪ್ರಕಾರ ಬಬಿಯಾ ಪ್ರತಿದಿನ ದೇವರ ಮಧ್ಯಾಹ್ನದ ಪೂಜೆಯ ನಂತರ ನೀಡಲಾಗುವ ದೇವಾಲಯದ ಪ್ರಸಾದವನ್ನು ಮಾತ್ರ ತಿನ್ನುತ್ತಿತ್ತು.
ಪ್ರಸಾದವು ಬೇಯಿಸಿದ ಅನ್ನ ಮತ್ತು ಬೆಲ್ಲವನ್ನು ಒಳಗೊಂಡಿತ್ತು. ಅಲ್ಲದೇ ಈ ಮೊಸಲೆಯು ಮನುಷ್ಯರಿಗೆ ಎಷ್ಟು ಹೊಂದಿಕೊಂಡಿತ್ತು ಎಂದರೆ ಭಕ್ತರು ನಿರ್ಭಯವಾಗಿ ತಮ್ಮ ಕೈಗಳಿಂದ ಸ್ನೇಹಪರ ಮೊಸಳೆಗೆ ಆಹಾರವನ್ನು ನೀಡುತ್ತಿದ್ದರು.