ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ( Hubli-Dharwad Smart City) ಅನುದಾನಡಿ 8 ಕೋಟಿ ರೂ ವೆಚ್ಚದಲ್ಲಿ ಲಿಂಗರಾಜನಗರದ ಹತ್ತಿರದ ರಾಣಿ ಚೆನ್ನಮ್ಮ ನಗರದ ಸೇತುವೆ ಬಳಿ ಹಸಿರು ಸಂಚಾರಿ ಪಥ (Green Mobility Corridor) ನ ಮೊದಲ ಹಂತವನ್ನು ಪೂರ್ಣಗೊಳಿಸಿತು.
ಇದನ್ನೂ ಓದಿರಿ: ಅಂಗಾಂಶ ಕೃಷಿ ಸಸ್ಯಗಳ ಹೆಚ್ಚಳಕ್ಕೆ ಕೇಂದ್ರದ ಒತ್ತಾಯ!
Bengaluru: ತಲೆ ಎತ್ತಲಿದೆ 85 ಕೋಟಿಯ ಕೆಂಪೆಗೌಡರ ಪ್ರತಿಮೆ: ದೆಹಲಿಯಿಂದ ಬೆಂಗಳೂರಿಗೆ 4 ಸಾವಿರ ಕೆ.ಜಿ ತೂಕದ ಖಡ್ಗ!
ಸ್ಮಾರ್ಟ್ ಸಿಟಿ ಹಣೆಪಟ್ಟಿ ಹೊತ್ತಿರುವ ಹುಬ್ಬಳ್ಳಿ-ಧಾರವಾಡ ಇಷ್ಟು ದಿನಗಳ ಕಾಲ ವಿಳಂಬ ಕಾಮಗಾರಿ ಹೆಸರಿನಲ್ಲಿ ಸುದ್ದಿಯಾಗುತ್ತಿತ್ತು. ಇದೀಗ ವಿದೇಶ ಮಾದರಿಯಲ್ಲಿ Smart City ಕಾಮಗಾರಿ ಅನುದಾನದಲ್ಲಿ ದೇಶದ 100 ನಗರಗಳ ಸ್ಮಾರ್ಟ್ ಸಿಟಿ ಯೋಜನೆಗಳ ಪೈಕಿ, ಹಸಿರು ಸಂಚಾರಿ ಪಥ (Green Mobility Corridor) ಮೊದಲನೆಯದಾಗಿ ಲೋಕಾರ್ಪಣೆಗೊಳಿಸಿದೆ.
ಇದನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಶಂಕರಪಾಟೀಲ ಮುನೇನಕೊಪ್ಪ ಚಾಲನೆ ನೀಡಿದರು. ಈ ಮೂಲಕ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಯಿತು.
Shocking news: ಮತ್ತೆ LPG ಸಿಲಿಂಡರ್ ಬೆಲೆಯಲ್ಲಿ 50 ರೂ ಹೆಚ್ಚಳ!
ಎಚ್ಚರಿಕೆ! “ವಾಹನ ಚಾಲಕರಿಗೆ ಎಚ್ಚರಿಕೆ” ಡ್ರೈವಿಂಗ್ ವೇಳೆ ಗುಟ್ಕಾ ಜಗಿದರೆ ಬೀಳತ್ತೆ ದಂಡ!
ಈ ಹಿಂದೆ ವ್ಯವಸ್ಥಿತ ನಾಲಾಗಳಿಲ್ಲದ ಕಾರಣ ಅತಿಯಾಗಿ ಮಳೆಯಾದರೆ ಚೆನ್ನಮ್ಮ ನಗರಕ್ಕೆ ಮಳೆನೀರು ಮನೆಗಳಿಗೆ ನುಗ್ಗಿ ಅವ್ಯವಸ್ಥೆ ಉಂಟು ಮಾಡುತ್ತಿತ್ತು. ಅಲ್ಲದೇ ಜನರು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಜೀವನ ನಡೆಸುತ್ತಿದ್ದರು. ಇದಲ್ಲದೇ ರಕ್ಷಣೆವಿಲ್ಲದ ಭಯಕೂಡಾ ಕಾಡುತ್ತಿತ್ತು. ಇದೀಗ ಈ ಎಲ್ಲ ಸಮಸ್ಯೆಗಳಿಗೆ ಮೊದಲ ಹಂತದ ಹಸಿರು ಸಂಚಾರಿ ಪಥ ಪರಿಹಾರ ಒದಗಿಸಿದೆ.
8 ಕೋಟಿ ರೂ.ವೆಚ್ಚದಲ್ಲಿ 630 ಮೀಟರ್ ಉದ್ದದ ಹಸಿರು ಸಂಚಾರ ಪಥ ನಿರ್ಮಿಸಲಾಗಿದೆ. 340 ಮೀಟರ್ ಉದ್ದ ಹಾಗೂ 3.5 ಮೀ . ಅಗಲದ ಸೈಕಲ್ ಟ್ರ್ಯಾಕ್ ಇದಾಗಿದೆ.
ನಾಲಾದ ಎರಡೂ ಬದಿಗೆ 630 ಮೀ. ಗೇಬಿಯನ್ ವಾಲ್, 150 ಮೀ. ರಿಟೇನಿಂಗ್ ವಾಲ್,1170 ಮೀ. ನೈಸರ್ಗಿಕ ಜೈವಿಕ ಒಳಚರಂಡಿ ಮಾರ್ಗ, 0.5 ಎಂ.ಎಲ್.ಡಿ ನೈಸರ್ಗಿಕ ಚರಂಡಿ ನೀರು ಶುದ್ಧಿಕರಣ ಘಟಕ, ಒಂದು ಪಿಬಿಎಸ್ ನಿಲ್ದಾಣ, 1,000 ಚ.ಮೀ. ಲ್ಯಾಂಡ್ ಸ್ಕೇಪ್ ಮತ್ತು 340 ಚ.ಮೀ. ಹಾರ್ಡ್ ಸ್ಕೇಪ್, 340 ಮೀ. ಚೈನ್ ಲಿಂಕ್ ಫೆನ್ಸಿಂಗ್, 340 ಮೀ ಹ್ಯಾಂಡ್ ರೈಲಿಂಗ್, ಪಾದಚಾರಿ ಮಾರ್ಗ ಇಲ್ಲಿವೆ.
ಪೈಲ್ವಾನ್ ಕಿಚ್ಚ ಸುದೀಪ್ ಕೊಟ್ಟ ಗುನ್ನಾಕೆ ಮಕಾಡೆ ಮಲಗಿದ ಅಜಯ್ ದೇವಗನ್!
ಕಾರಿಡಾರ್ ಉದ್ದಕ್ಕೂ 8 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೇ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಚಲನ ವಲನಗಳನ್ನು ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ದಾಖಲಿಸಲಾಗುತ್ತದೆ. ಮಾರ್ಗದಲ್ಲಿ 39 ವಿದ್ಯುತ್ ದೀಪಗಳಿವೆ.
ಇನ್ನೂ ಇದೇ ವೇಳೆ ಹಸಿರು ಸಂಚಾರಿ ಪಥ ಯೋಜನೆಯ 2ನೇ ಹಂತದ ಕಾಮಗಾರಿಗೆ ಭೂಮಿಪೂಜೆಯನ್ನು ನೇರವೇರಿಸಲಾಯಿತು. 96.26 ಕೋಟಿ ರೂ.ವೆಚ್ಚದಲ್ಲಿ 5 ಕಿ.ಮೀ. ಪಥವನ್ನು ಸೇತುವೆ -2 ರಿಂದ ಕಾರವಾರ ರಸ್ತೆ ಸೇತುವೆ 12 ರವರೆಗೆ ನಿರ್ಮಿಸಲಾಗುತ್ತಿದ್ದು, ಒಟ್ಟಿನಲ್ಲಿ ಆದಷ್ಟು ಬೇಗ ಹಸಿರು ಸಂಚಾರಿ ಪಥ ಕಾಮಗಾರಿ ಪೂರ್ಣಗೊಂಡು ಹು-ಧಾ ಅವಳಿ ನಗರದ ಸೌಂದರ್ಯ ಹೆಚ್ಚಾಗಲಿ ಎಂಬುದೆ ಜನರ ಆಶಯವಾಗಿದೆ.
ಎಚ್ಚರಿಕೆ! “ವಾಹನ ಚಾಲಕರಿಗೆ ಎಚ್ಚರಿಕೆ” ಡ್ರೈವಿಂಗ್ ವೇಳೆ ಗುಟ್ಕಾ ಜಗಿದರೆ ಬೀಳತ್ತೆ ದಂಡ!
SBI ಅಲರ್ಟ್: ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI