News

Breaking: ಆ.14 ರಿಂದ ಮೈದಾ, ರವೆ, ಗೋಧಿ ಹಿಟ್ಟಿನ ರಫ್ತಿನ ಮೇಲೆ ನಿರ್ಬಂಧ ವಿಧಿಸಲು ಕೇಂದ್ರ ಸರ್ಕಾರ ನಿರ್ಧಾರ!

12 August, 2022 4:59 PM IST By: Kalmesh T
The export of maida, semolina, wheat flour from August 14...

ದೇಶದಲ್ಲಿ ಗೋಧಿ ಬೆಲೆಯಲ್ಲಿ ಗಣನೀಯ ಏರಿಕೆಯಾದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಗಸ್ಟ್ 14ರಿಂದ ಜಾರಿಗೆ ಬರುವಂತೆ ಮೈದಾ, ರವೆ ಹಾಗೂ ಗೋಧಿ ಹಿಟ್ಟಿನ ರಫ್ತಿನ ಮೇಲೆ ನಿರ್ಬಂಧ ಹೇರಿದೆ.

ಇದನ್ನೂ ಓದಿರಿ: ರೈತರಿಗೆ ಗುಡ್‌ನ್ಯೂಸ್‌: ರೈತರಿಂದ ಗೋಮೂತ್ರ, ಸಗಣಿ ಖರೀದಿಸಲು ಮುಂದಾದ ಸರ್ಕಾರ! ಬೆಲೆ ಎಷ್ಟು ಗೊತ್ತೆ?

ಗೋಧಿ ರಫ್ತಿನ ಅಂತರ್ ಸಚಿವಾಲಯ ಸಮಿತಿಯ (IMC) ಅನುಮತಿ ನೀಡಿದ ಬಳಿಕವಷ್ಟೇ ಇವುಗಳ ರಫ್ತಿಗೆ ಅವಕಾಶ ನೀಡಲಾಗುತ್ತದೆ ಎಂದು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯದ ( DGFT) ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.

ಗೋಧಿ ಜಾಗತಿಕ ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸರ್ಕಾರ ಗೋಧಿ ಹಿಟ್ಟಿನ ರಫ್ತಿನ  ಮೇಲೆ ನಿಷೇಧ ಹೇರಿತ್ತು. ಆಗಸ್ಟ್ 8ರ ಆದೇಶದಲ್ಲಿ ರಫ್ತು ಹಾಗೂ ಆಮದು ಸಂಬಂಧಿತ ವಿಚಾರಗಳಿಗೆ ಸಂಬಂಧಿಸಿದ ವಾಣಿಜ್ಯ ಸಚಿವಾಲಯದ  ಅಂಗಸಂಸ್ಥೆ ಡಿಜಿಎಫ್‌ಟಿ ಹೀಗೆ ಹೇಳಿದೆ.

'ಆಗಸ್ಟ್ 8ರಿಂದ 14ರ ತನಕದ ಅವಧಿಯಲ್ಲಿ ಮೈದಾ, ರವೆಯ ಈ ಕೆಳಗಿನ ರವಾನೆಗೆ ಹಾಗೂ ರಫ್ತಿಗೆ ಅವಕಾಶ ನೀಡಲಾಗುತ್ತದೆ. i)ಈ ಅಧಿಸೂಚನೆಗೆ ಮುನ್ನ ಹಡಗಿಗೆ ಲೋಡ್ ಮಾಡಿದ್ರೆ  ii)ಈ ಅಧಿಸೂಚನೆಗೂ ಮುನ್ನ ಸರಕನ್ನು ಕಸ್ಟಮ್ಸ್ ಗೆ  ಹಸ್ತಾಂತರಿಸಿದ್ರೆ ಹಾಗೂ

ಅವರ ಸಿಸ್ಟ್ಂ ನಲ್ಲಿ ನೋಂದಣಿ ಮಾಡಿಸಿದ್ರೆ, ಉಚಿತ ರಫ್ತಾಗುವ ಎಲ್ಲ ವಸ್ತುಗಳು ಗೋಧಿ ರಫ್ತಿಗೆ ರಚಿತವಾಗಿರುವ ಅಂತರ್ ಸಚಿವಾಲಯ ಸಮಿತಿಯ (IMC) ಶಿಫಾರಸ್ಸುಗಳಿಗೆ ಒಳಪಟ್ಟಿದೆ ಎಂದು ಆದೇಶ ತಿಳಿಸಿದೆ.

ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಉಡುಗೊರೆ; ಈ ಯೋಜನೆಯಡಿ ದೊರೆಯಲಿದೆ ₹1.50 ಲಕ್ಷ! ಯಾರು ಅರ್ಹರು ಗೊತ್ತೆ?

'ಐಎಂಸಿಯಿಂದ ಅನುಮೋದನೆ ಪಡೆದಿರುವ ಎಲ್ಲ ಶಿಪ್ಪ್ಮೆಂಟ್ ಗಳ ರಫ್ತು ಪರಿಶೀಲನಾ ಮಂಡಳಿಯಿಂದ (EIC) ಅಥವಾ ದೆಹಲಿ (Delhi), ಮುಂಬೈ (Mumbai), ಚೆನ್ನೈ (Chennai) ಹಾಗೂ ಕೋಲ್ಕತ್ತದ (Kolkata) ಇಐಎಎಸ್ ನಿಂದ ಗುಣಮಟ್ಟದ ಪ್ರಮಾಣಪತ್ರ ಪಡೆದಿರಬೇಕು.

ಭಾರತದಲ್ಲಿ ಗೋಧಿ (Wheat) ಬೆಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಸುಮಾರು ಶೇ. 14ರಷ್ಟು ಹೆಚ್ಚಳವಾಗಿದೆ. ಇದಕ್ಕೆ ಕಾರಣ ಮೈದಾ (Maida), ಬಿಸ್ಕೆಟ್ಸ್ (Biscuits), ಗೋಧಿ ಹಿಟ್ಟು (Wheat flour) ಹಾಗೂ ರವೆಗೆ ( suji) ಭಾರೀ ಬೇಡಿಕೆ ಸೃಷ್ಟಿಯಾಗಿರೋದು ಹಾಗೂ ಮಳೆಯ ಸೀಸನ್ ಕಾರಣದಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿರೋದು.

ದೇಶದ ಉತ್ತರ ಭಾಗದಲ್ಲಿ ಗಿರಣಿಗಳಿಗೆ  (Mills) ಪೂರೈಕೆಯಾದ ಗೋಧಿ ಬೆಲೆಯಲ್ಲಿ ಪ್ರತಿ ಕ್ವಿಂಟಾಲ್ ಗೆ ಜೂನ್ ನಲ್ಲಿ  2,260ರೂ.-2,270ರೂ. ಇತ್ತು. ಆದ್ರೆ, ಇತ್ತೀಚೆಗೆ 2,300ರೂ.-2,350 ರೂ.ಗೆ ಏರಿಕೆಯಾಗಿದೆ.

ದೊಡ್ಡ ಕಂಪನಿಗಳು ಹಾಗೂ ವ್ಯಾಪಾರಿಗಳು ಬೆಲೆಯಲ್ಲಿ ಇನ್ನಷ್ಟು ಹೆಚ್ಚಳವಾಗಬಹುದು ಎಂಬ ನಿರೀಕ್ಷೆಯಲ್ಲಿ ಗೋಧಿಯ ಸ್ಟಾಕ್ ಇಟ್ಟುಕೊಂಡಿದ್ದಾರೆ. ಇನ್ನು ಸಣ್ಣ ರೈತರು ಹಾಗೂ ವ್ಯಾಪಾರಿಗಳು ಈಗಾಗಲೇ ತಮ್ಮ ಬಳಿಯಿರುವ ಗೋಧಿಯನ್ನು ಮಾರಾಟ ಮಾಡಿಯಾಗಿದೆ.

ಹೈನುಗಾರಿಕೆಯಲ್ಲಿ ಯಶಸ್ಸು ಪಡೆದ ವಿಜಯಪುರದ ಯುವ ರೈತ! ಸಾಕಾಣಿಕೆ, ಸಂಪಾದನೆ ಎಲ್ಲದರ ಕುರಿತು ಇಲ್ಲಿದೆ ವಿವರ

ಈ ವರ್ಷ ಇದೇ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ಭಾರತದ ಆಹಾರ ನಿಗಮದಿಂದ (FCI) ಗಿರಣಿಗಳಿಗೆ ಗೋಧಿ (Wheat) ಲಭಿಸುತ್ತಿಲ್ಲ.

ದೇಶೀಯ ಮಾರುಕಟ್ಟೆಯಲ್ಲಿ ಆಹಾರ ಬೆಲೆಗಳ ನಿಯಂತ್ರಣಕ್ಕೆ ಮೇನಲ್ಲಿ ಸರ್ಕಾರ ಗೋಧಿ ರಫ್ತನ್ನು ನಿಷೇಧಿಸಿದೆ. ಗೋಧಿ ನಿತ್ಯದ ಸರಾಸರಿ ಚಿಲ್ಲರೆ ಬೆಲೆಯಲ್ಲಿ ಶೇ. 19.34ರಷ್ಟು ಏರಿಕೆಯಾಗಿದೆ.

ಒಂದು ವರ್ಷದ ಹಿಂದೆ ಕೆಜಿಗೆ 24.71 ರೂ.ಇದ್ದ ಗೋಧಿ ಬೆಲೆ 29.49ರೂ.ಗೆ ಹೆಚ್ಚಳವಾಗಿದೆ. 2022ನೇ ಆರ್ಥಿಕ ಸಾಲಿನಲ್ಲಿ ಭಾರತದ ಗೋಧಿ ಹಿಟ್ಟಿನ ರಫ್ತಿನಲ್ಲಿ ಏರಿಕೆಯಾಗಿದೆ. 2022ನೇ ಹಣಕಾಸು ಸಾಲಿನಲ್ಲಿ ಭಾರತ 7 ಮಿಲಿಯನ್ ಟನ್ ದಾಖಲೆಯ ಗೋಧಿ ರಫ್ತು ಮಾಡಿತ್ತು.

ಇದು ಸುಮಾರು 2.12 ಬಿಲಿಯನ್ ಡಾಲರ್ ಮೌಲ್ಯದಾಗಿದೆ.ಇದು ಕಳೆದ ವರ್ಷದ ಇದೇ ಅವಧಿಗಿಂತ ಶೇ.274ರಷ್ಟು ಹೆಚ್ಚು ಮೌಲ್ಯವನ್ನು ಹೊಂದಿದೆ.