ಟಾಲಿವುಡ್‌ನ ನಟ ಮಹೇಶ್ ಬಾಬು ಅವರ ತಂದೆ ಹಾಗೂ ತೆಲುಗಿನ ಸೂಪರ್ ಸ್ಟಾರ್ ನಟ ಕೃಷ್ಣ ಘಟ್ಟಮೇನನಿ ಅವರು ಮಂಗಳವಾರ ಮುಂಜಾನೆ ವಿಧಿವಶರಾಗಿದ್ದಾರೆ.
ಮಾಲೀಕನ ಹುಡುಕಿ ಕೊಟ್ಟ ನಾಯಿ, ಗ್ರಾಮಸ್ಥರ ಹರ್ಷ!
ಹೃದಯಾಘಾತದಿಂದ ಅಸ್ವಸ್ಥರಾಗಿದ್ದ ನಟ ಕೃಷ್ಣ ಅವರನ್ನು ಸೋಮವಾರ ಮುಂಜಾನೆ ಹೈದರಾಬಾದ್ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮಹೇಶ್ ಬಾಬು ಅವರ ಕುಟುಂಬ ಅಕ್ಷರಶಃ ಈಗ ದುಃಖದಲ್ಲಿ ಮುಳುಗಿದೆ. ಕಳೆದ ಒಂದೇ ವರ್ಷದಲ್ಲಿ ಅವರ ಕುಟುಂಬದಲ್ಲಿ ಮೂವರು ನಿಧನರಾದಂತಾಗಿದೆ.
ಸಾಕು ನಾಯಿ ಕಚ್ಚಿದರೆ ಮಾಲೀಕರು ಕಟ್ಟಬೇಕು 10 ಸಾವಿರ ದಂಡ!
ಮಹೇಶ್ ಬಾಬು ಅವರ ತಾಯಿ ಇಂದಿರಾ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ನಿಧನರಾಗಿದ್ದರು. ಮಹೇಶ್ ಸಹೋದರ ರಮೇಶ್ ಬಾಬು ಕಳೆದ ಜನವರಿಯಲ್ಲಿ ಮೃತಪಟ್ಟಿದ್ದರು.
ಕೃಷ್ಣ ಅವರ ಮೂಲ ಹೆಸರು ಘಟ್ಟಮನೇನಿ ಶಿವ ರಾಮ ಕೃಷ್ಣ ಮೂರ್ತಿ. ಘಟ್ಟಮನೇನಿ ಅವರು ಸುಮಾರು 350 ಚಿತ್ರಗಳಲ್ಲಿ ನಟಿಸಿದ್ದಾರೆ.
ತೆಲುಗಿನಲ್ಲಿ ಅಗ್ರಗಣ್ಯ ನಟರಲ್ಲಿ ಒಬ್ಬರು ಎಂದೇ ಗುರುತಿಸಿಕೊಂಡಿದ್ದಾರೆ. ಕೇವಲ ನಟನೆಯಲ್ಲಿ ಅಷ್ಟೇ ಅಲ್ಲದೇ ನಿರ್ದೇಶನ ಹಾಗೂ ನಿರ್ಮಾಪಕರಾಗಿಯೂ ಅವರು ತೊಡಗಿಸಿಕೊಂಡಿದ್ದರು.
ಚಿತ್ರರಂಗಕ್ಕೆ ಅವರು ನೀಡಿದ ಸೇವೆಯನ್ನು ಪರಿಗಣಿಸಿ, ಅವರಿಗೆ 2009ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
BMTC: ವಿದ್ಯಾರ್ಥಿ ಪಾಸ್ ಇದ್ದರೆ ಟಿಕೆಟ್ ಕೊಡುವಂತಿಲ್ಲ!
ನಟ ಕೃಷ್ಣ ಅವರು ಟಿಡಿಪಿ ನಾಯಕ ಜಯ್‌ಗಲ್ಲಾ ಅವರ ಮಾವ ಕೂಡ ಆಗಿದ್ದಾರೆ. 1980ರ ದಶಕದಲ್ಲಿ ಅವರು ಕಾಂಗ್ರೆಸ್‌ಪಕ್ಷ ಸೇರಿ ಸಂಸದರು ಆಗಿದ್ದರು.
ಆದರೆ, ತಮಿಳುನಾಡಿನಲ್ಲಿ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಹತ್ಯೆಯಾದ ಬಳಿಕ ಕೃಷ್ಣ ಅವರು ರಾಜಕೀಯಕ್ಕೆ ವಿದಾಯ ಹೇಳಿದ್ದರು.
1965ರಲ್ಲಿ ಅವರು ಸಿನಿಮಾ ಜರ್ನಿ ಆರಂಭಿಸಿದ್ದ ಕೃಷ್ಣ ಅವರು, ಪೌರಾಣಿಕ, ಐತಿಹಾಸಿಕ ಸೇರಿದಂತೆ ಹಲವು ಬಗೆಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ.
ಕೃಷ್ಣ ಅವರ ಅಂದಾಜು 25 ಸಿನಿಮಾಗಳಲ್ಲಿ ಮಹೇಶ್ ಬಾಬು ಬಾಲ ನಟನಾಗಿ ಅಭಿನಯಿಸಿದ್ದರು.
ಸೆಪ್ಟೆಂಬರ್ 28ರಂದು ಕೃಷ್ಣ ಅವರ ಪತ್ನಿ ಇಂದಿರಾ ದೇವಿ ನಿಧನ ಹೊಂದಿದರು. ಪತ್ನಿ ನಿಧನದಿಂದಾಗಿ ಕೃಷ್ಣ ಅವರು ಖಿನ್ನತೆಗೆ ಒಳಗಾದರು ಎನ್ನಲಾಗಿದೆ.