News

ನಿರೀಕ್ಷೆಗಿಂತ ಹೆಚ್ಚು ತೆರಿಗೆ ಸಂಗ್ರಹ CM ಬೊಮ್ಮಾಯಿ

30 March, 2022 11:25 AM IST By: Kalmesh T
Tax collection CM Bommai more than expected

ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಆರ್ಥಿಕ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಸರ್ಕಾರವು ಬದ್ಧವಾಗಿದ್ದು, ಮೋಟಾರು ವಾಹನ ತೆರಿಗೆ ಹೊರತುಪಡಿಸಿದರೆ ತೆರಿಗೆ ಸಂಗ್ರಹವು ನಿಗದಿತ ಗುರಿಗಿಂತ ಹೆಚ್ಚಾಗಿದೆ ಎಂದು (CM) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ.

ಇಲಾಖಾವಾರು ಅನುದಾನ (Grants) ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಮೋಟಾರು ವಾಹನ Tax Collection  ಹೊರತುಪಡಿಸಿದರೆ ಉಳಿದ ತೆರಿಗೆ ಸಂಗ್ರಹವು ನಿರೀಕ್ಷೆಗಿಂತ ಹೆಚ್ಚು ಸಂಗ್ರಹವಾಗಿದೆ. 7,500 ಕೋಟಿ ರು.ಗಿಂತ ಹೆಚ್ಚು ತೆರಿಗೆ ಸಂಗ್ರಹಿಸುವ ನಿರೀಕ್ಷೆ ಮಾಡಲಾಗಿತ್ತು. ಆದರೆ, 9,500 ಕೋಟಿ ರು. ನಷ್ಟು ತೆರಿಗೆ ಸಂಗ್ರಹವಾಗಿದೆ.

ಇದನ್ನು ಓದಿ: 

Fuel Price ಏರಿಕೆ ಬಗ್ಗೆ ಸಚಿವೆ ನಿರ್ಮಲಾ ಸಿತಾರಾಮನ್‌ ಸಮರ್ಥನೆ

Covid-19 ನಿಂದಾಗಿ 21-22ನೇ ಆರ್ಥಿಕ ಸಾಲಿನ ಮೊದಲ ಐದು ತಿಂಗಳು Tax Collection ಉತ್ತಮವಾಗಿರಲಿಲ್ಲ. ನಂತರದ ತಿಂಗಳಲ್ಲಿ ತೆರಿಗೆ ಸಂಗ್ರಹಣೆ ಹೆಚ್ಚಳವಾಗಿದೆ. ಆರ್ಥಿಕ ಶಿಸ್ತಿಗೆ ಒತ್ತು ನೀಡಿ ತೆರಿಗೆ ಸಂಗ್ರಹದಲ್ಲಿ ದಕ್ಷತೆ ತೋರಿದ ಪರಿಣಾಮ ಗುರಿ ಮೀರಿ ತೆರಿಗೆ ಸಂಗ್ರಹಿಸಲಾಗಿದೆ ಎಂದು ಹೇಳಿದರು.

Tax Collection ನ ಕೊರತೆಗಳನ್ನು ಸರಿಪಡಿಸಲು ಕೈಗೊಂಡ ಕ್ರಮಗಳಿಂದ ನಿಗದಿತ ಗುರಿ ಮೀರಿ ಆದಾಯ ಸಂಗ್ರಹ ಮಾಡಲಾಗಿದೆ. ಸ್ಟ್ಯಾಂಪ್‌ ಡ್ಯೂಟಿಯಲ್ಲಿ ಶೇ.10ರಷ್ಟು ರಿಯಾಯಿತಿ(Discount) ನೀಡಿದ್ದರಿಂದ 100 ಕೋಟಿ ರು. ಹೆಚ್ಚು ಆದಾಯ ಸಂಗ್ರಹವಾಗಿದೆ. ತೆರಿಗೇತರ ಆದಾಯ ಹೆಚ್ಚಳಕ್ಕೂ ಗಮನ ನೀಡಲಾಗಿದೆ. ನಾಲ್ಕು ಸಾವಿರ ಕೋಟಿ ರು. ತೆರಿಗೆಯೇತರ ಆದಾಯ ಗುರಿಯನ್ನು ಹೊಂದಲಾಗಿದ್ದು, ಆರು ಸಾವಿರ ಕೋಟಿ ರು. ತೆರಿಗೆಯೇತರ ಆದಾಯವನ್ನು ಸಂಗ್ರಹಿಸಲಾಗಿದೆ.

ಗ್ರಾಹಕರೇ ದಯವಿಟ್ಟು ಗಮನಿಸಿ.. ಏಪ್ರಿಲ್ 1 ರಿಂದ ಬದಲಾಗುತ್ತಿರುವ ಈ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು..?

ಮಾರಾಟವಾಗದೆ ಉಳಿದಿದ್ದ ಕಬ್ಬಿಣದ ಅದಿರನ್ನು ಮಾರಾಟ ಮಾಡಿ 500 ಕೋಟಿ ರು. ಸಂಗ್ರಹಿಸಲಾಗಿದೆ. ಅಂತೆಯೇ ಬಾಕಿ ಇದ್ದ ಅರಣ್ಯ ಇಲಾಖೆಯ(Forest Department) ಅನುಮತಿಯನ್ನು ನೀಡಿ ಗಣಿ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ. ಪರಿಣಾಮ ತೆರಿಗೇತರ ಆದಾಯ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.

2022-23ನೇ ಆರ್ಥಿಕ ವರ್ಷದಲ್ಲಿ 67 ಸಾವಿರ ಕೋಟಿ ರು. ಸಾಲ ಪಡೆಯಲು ಅವಕಾಶ ಇದ್ದರೂ 63,100 ಕೋಟಿ ರು. ಸಾಲ ಪಡೆದು ನಾಲ್ಕು ಸಾವಿರ ಕೋಟಿ ರು. ಸಾಲ ಕಡಿಮೆ ಮಾಡಿದ್ದೇವೆ. ಮುಂದಿನ ದಿನದಲ್ಲಿ ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಿ ವಿತ್ತೀಯ ಕೊರತೆಗಳನ್ನು ಸರಿದೂಗಿಸಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಆದಾಯ ಹೆಚ್ಚಳ ಮಾಡಲಾಗುವುದು ಎಂದು ಸಿಎಂ ಹೇಳಿದರು.

ಇತರರಿಗೆ ಗೊತ್ತಿಲ್ಲದಂತೆ ಅವರ Whatsapp ನೋಡಬೇಕೆ? ಈ App ಡೌನ್ಲೋಡ್ ಮಾಡಿ ಸಾಕು

21-22ನೇ ಸಾಲಿನಲ್ಲಿ ಆರ್ಥಿಕ ಕೊರತೆಯು 15 ಸಾವಿರ ಕೋಟಿ ರು. ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಆರು ಸಾವಿರ ಕೋಟಿ ರು. ಮಾತ್ರ ಆರ್ಥಿಕ ಕೊರತೆಯಾಗಿದೆ. 22-23ನೇ ಸಾಲಿನಲ್ಲಿ ಆರ್ಥಿಕ ಕೊರತೆಯು 14 ಸಾವಿರ ಕೋಟಿ ರು. ಅಂದಾಜು ಮಾಡಲಾಗಿದೆ. ಇದನ್ನು ಕಡಿಮೆ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.

Kisan Credit Card Big News! 3.20 ಲಕ್ಷ ಕೋಟಿ ಸಾಲ ಪಡೆಯಬಹುದು!