ಮೇಕೆದಾಟು (Mekedatu) ಜಲಾಶಯ ಯೋಜನೆಯಿಂದ ಶೇ. 95ರಷ್ಟು ಲಾಭ ತಮಿಳುನಾಡಿಗೆ (Tamilnadu) ಆಗುವುದರಿಂದ ಕಾರಣವಿಲ್ಲದೆ ವಿರೋಧ ವ್ಯಕ್ತಪಡಿಸುವ ಬದಲು ಯೋಜನಾ ವೆಚ್ಚದಲ್ಲಿ ಶೇ. 50ರಷ್ಟನ್ನು ಭರಿಸಲು ಅಲ್ಲಿನ ಸರ್ಕಾರ ಮುಂದಾಗಬೇಕು ಎಂದು ದಿ ಇನ್‌ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಇಂಡಿಯಾ (The Institution Of Engineers India) ಅಧ್ಯಕ್ಷ ಎಂ. ಲಕ್ಷ್ಮಣ ಹೇಳಿದರು.
ಇದನ್ನು ಓದಿರಿ:
“ರೈತರೊಂದಿಗೆ ಚೆಲ್ಲಾಟವಾಡಿದರೆ ಅಧಿಕಾರದಿಂದ ಕೆಳಗಿಳಿಸುತ್ತೇವೆ”- ಪ್ರಧಾನಿ ಮೋದಿಗೆ ಕೆಸಿಆರ್ ಎಚ್ಚರಿಕೆ!
ಎಲೆಕ್ಟ್ರಿಕ್ ವಾಹನ ಖರೀದಿಗೆ ಈ ಬ್ಯಾಂಕ್ ನೀಡಲಿದೆ ಉತ್ತಮವಾದ ಸಬ್ಸಿಡಿ!
‘ಮೇಕೆದಾಟು ಜಲಾಶಯ ನಿರ್ಮಾಣ; ಇಂದಿನ ಸ್ಥಿತಿಗತಿ’ ಕುರಿತ ಚರ್ಚಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಜಲಾಶಯ ನಿರ್ಮಿಸಲು ಗುರುತಿಸಿರುವ ಸ್ಥಳದಿಂದ ಐದು ಕಿ.ಮೀ. ದೂರದಲ್ಲಿ ತಮಿಳುನಾಡು ಸರಹದ್ದು ಪ್ರಾರಂಭವಾಗುತ್ತದೆ. ಅದೂ ಸಾವಿರಾರು ಅಡಿ ಕೆಳಭಾಗದಲ್ಲಿ ಇದೆ. ಈ ಯೋಜನೆ ಅಡಿ ಜಲ ವಿದ್ಯುತ್ ಉತ್ಪಾದನೆಗೆ ಬಳಕೆಯಾಗುವ ನೀರು ನೇರವಾಗಿ ತಮಿಳುನಾಡಿಗೆ ಹರಿದುಹೋಗುತ್ತದೆ. ಆ ಭಾಗದ ರೈತರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.
UIDAI ನೇಮಕಾತಿ 2022: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿ ಉದ್ಯೋಗ
ನರೇಗಾ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕದ ಸಾಧನೆ!- ಸಚಿವ ಕೆ.ಎಸ್.ಈಶ್ವರಪ್ಪ
ಮೇಕೆದಾಟು ಯೋಜನೆ(Mekedatu Project )ಯನ್ನು ತಮಿಳುನಾಡು ವಿರೋಧಿಸಲು ಅವಕಾಶವೇ ಇಲ್ಲ. ಈ ಹಿಂದೆ ತಮಿಳುನಾಡು ಪರ ವಕೀಲರು ಕಾವೇರಿ ವಿವಾದಕ್ಕೆ ಸಂಬಂಧಿಸಿದ ವ್ಯಾಜ್ಯವೊಂದರಲ್ಲಿ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸುವಾಗ ಕರ್ನಾಟಕಕ್ಕೆ ಅಗತ್ಯವಿದ್ದಲ್ಲಿ ಮತ್ತೊಂದು ಜಲಾಶಯ ನಿರ್ಮಿಸಿಕೊಳ್ಳಲಿ. ನಮಗೆ(ತಮಿಳುನಾಡಿಗೆ) ಹಂಚಿಕೆಯಾದ ನೀರನ್ನು ನಿಯಮಿತವಾಗಿ ನೀಡಲಿ ಎಂದು ತಿಳಿಸಿದ್ದರು.
ಹೆಂಡತಿಯ ಹೆಸರಲ್ಲಿ ಈ ಅಕೌಂಟ್ ತೆರೆಯಿರಿ..ತಿಂಗಳಿಗೆ 44,793 ರೂ. ಆದಾಯ ಪಡೆಯಿರಿ
50 ಲೀ. ವರೆಗೆ ಹಾಲು ನೀಡುವ ದೇಸಿ ತಳಿಯ ಹಸುಗಳು! ರೈತರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.
ಅಲ್ಲದೆ, ನಮ್ಮ ರಾಜ್ಯದಲ್ಲಿ ಜಲಾಶಯ ನಿರ್ಮಿಸಿಕೊಳ್ಳಲು ಯಾವುದೇ ನ್ಯಾಯಾಲಯ ತಡೆ ನೀಡಿಲ್ಲ. ಇನ್ನು ಪರಿಸರ ಸಚಿವಾಲಯಕ್ಕೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ 90 ದಿನಗಳ ನಂತರ ಯಾವುದೇ ಪ್ರತಿಕ್ರಿಯೆ ಬಾರದಿದ್ದದ್ದಲ್ಲಿ ಅನುಮತಿ ಲಭ್ಯವಾದಂತೆ ಎಂದರು.
ಯೋಜನೆಗೆ ಮೂರು ಹಳ್ಳಿಗಳು ಮತ್ತು 250 ಎಕರೆ ರೈತರ ಭೂಮಿ ಮುಳುಗಡೆ ಆಗಲಿದೆ. 150 ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆಗೆ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ರಾಜ್ಯ ಸರ್ಕಾರ ಕೂಡಲೇ ಸಮಗ್ರ ಯೋಜನಾ ವರದಿಗೆ (DPR) ಅನುಮತಿ ನೀಡುವಂತೆ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಹೇಳಿದರು.
ಮೇ ತಿಂಗಳಲ್ಲಿ ಬಿತ್ತನೆ ಮಾಡಬೇಕಾದ ಬೆಳೆಗಳು! ಇದರಿಂದ ರೈತರಿಗಾಗಲಿದೆ ಹೆಚ್ಚಿನ ಲಾಭ
POULTRY Farming ತುಂಬಾ ಲಾಭದಾಯಕ ಉದ್ಯೋಗ! ಮತ್ತು ಸರ್ಕಾರದಿಂದ ಸಹಾಯ?