ಭಾರತದ ಮಾತೃ ಭಾಷೆಗಳ ಸಮೀಕ್ಷೆ ಇದೀಗ ಪೂರ್ಣಗೊಂಡಿದೆ. ಈ ಸಮೀಕ್ಷೆಯ ಹಿನ್ನೆಲೆ ಏನು, ಇದರಿಂದ ಆಗುವ ಲಾಭಗಳೇನು ಇಲ್ಲಿದೆ ಅದರ ವಿವರ…
ನೇಪಾಳದಲ್ಲಿ ಭೂಕಂಪನ: ದೆಹಲಿಯಲ್ಲಿ ಭೂಮಿ ಕಂಪಿಸಿದ ಅನುಭವ!
ಭಾರತದಲ್ಲಿರುವ ಮಾತೃ ಭಾಷೆಗಳ ಸಮೀಕ್ಷೆಯನ್ನು ಕೇಂದ್ರ ಗೃಹ ಸಚಿವಾಲಯ ಮಾಡಿದೆ. 576 ಭಾಷೆಗಳು ಮತ್ತು ಉಪ ಭಾಷೆಗಳ ಕ್ಷೇತ್ರ ವಿಡಿಯೋಗ್ರಫಿ ಕಾರ್ಯವನ್ನು ದೇಶಾದ್ಯಂತ ಮಾಡಲಾಗಿದೆ.
ಪ್ರತಿಯೊಂದು ಸ್ಥಳೀಯ ಭಾಷೆಗಳನ್ನು ಸಂರಕ್ಷಿಸುವ ಉದ್ದೇಶದಿಂದ Survey Of Mother Tongues in India ಭಾರತೀಯ ಮಾತೃ ಭಾಷೆಗಳ ಸಮೀಕ್ಷೆಯನ್ನು ಆಯೋಜಿಸಲಾಗಿತ್ತು.
ಆಧಾರ್ ಕಾರ್ಡ್‌ಗಾಗಿ 24 ವರ್ಷ ಬಿಟ್ಟು ಮನೆಗೆ ಬಂದ ವ್ಯಕ್ತಿ!
ಕೇಂದ್ರ ಸರ್ಕಾರವು ಮಾತೃಭಾಷೆಗಳ ಸಮೀಕ್ಷೆಗೆ ವಿಶೇಷವಾದ ಮುತುವರ್ಜಿಯನ್ನು ವಹಿಸಿತ್ತು. ಇದುವರೆಗೂ ಕ್ಷೇತ್ರವಾರು ವಿಡಿಯೊ ಚಿತ್ರೀಕರಣದೊಂದಿಗೆ 576 ಮಾತೃಭಾಷೆಗಳ ಸಮೀಕ್ಷೆಯನ್ನು ಮಾಡಲಾಗಿದೆ.
ಸ್ಥಳೀಯ ಭಾಷೆಗಳೊಂದಿಗೆ ಅದರ ಉಪ ಭಾಷೆಗಳ ಸಮೀಕ್ಷೆಯನ್ನು ಒಳಗೊಂಡಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ವಿವಿಧ ಭಾಷೆ ಮತ್ತು ವೈವಿಧ್ಯಮಯ ಸಂಸ್ಕೃತಿ ಒಳಗೊಂಡಿರುವ ಭಾರತದ ಮೂಲ ಸಂಸ್ಕೃತಿ ಮತ್ತು ಸೊಗಡನ್ನು ಉಳಿಸಿಕೊಳ್ಳುವ ಅವಶ್ಯಕತೆ ಇದೆ.
ಮಾತೃಭಾಷೆಯ ಅಸ್ಮಿತೆ ಸಂರಕ್ಷಿಸಲು ಹಾಗೂ ಅದನ್ನು ವಿಶ್ಲೇಷಣೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿ (ಎನ್‌ಐಸಿ) ವೆಬ್ ದಸ್ತಾವೇಜು (ಆರ್ಕೈವ್) ಸ್ಥಾಪಿಸಲು ಉದ್ದೇಶಿಸಲಾಗಿದೆ.
ಕರಾವಳಿ ಬಿಪಿಎಲ್ ಕಾರ್ಡ್‌ದಾರರಿಗೆ ಸಿಹಿಸುದ್ದಿ: ಇನ್ಮುಂದೆ ಸಿಗಲಿದೆ ಕುಚಲಕ್ಕಿ!
ಇನ್ನು ಭಾಷಾ ಶಾಸ್ತ್ರಜ್ಞರಿಂದ ದೇಸಿ ಭಾಷೆಗಳ ದತ್ತಾಂಶಗಳ ಸಂಗ್ರಹಣೆ ಹಾಗೂ ಮಾಹಿತಿ ಸಂಗ್ರಹ ಮಾಡುವ ಕೆಲಸಗಳು ಈಗಾಗಲೇ ಪ್ರಾರಂಭವಾಗಿದೆ.
ಅಲ್ಲದೇ ವೇಗವಾಗಿ ನಡೆಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯದ 2021-22ನೇ ಸಾಲಿನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
6ನೇ ಪಂಚವಾರ್ಷಿಕ ಯೋಜನೆಯಿಂದಲೂ ದೇಶದಲ್ಲಿ ಭಾಷೆಗಳ ಸಮೀಕ್ಷೆ ಕಾರ್ಯ (ಎಲ್‌ಎಸ್‌ಐ) ಹಾಗೂ ಸಂಶೋಧನೆಗಳು ನಿರಂತರವಾಗಿ ಮಾಡಲಾಗುತ್ತಿದೆ.
ಅಡಿಕೆ ಚುಕ್ಕೆರೋಗ ತಡೆಗೆ 10 ಕೋಟಿ ರೂ. ಅನುದಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಇದೀಗ ಭಾರತದ ಮಾತೃಭಾಷಾ ಸಮೀಕ್ಷೆ (ಎಂಟಿಎಸ್‌ಐ) ಯೋಜನೆಯಡಿ ಇದುವರೆಗೂ 576 ಮಾತೃಭಾಷೆ ಮತ್ತು ಅವುಗಳ ಉಪ ಭಾಷೆಗಳ ಸಮೀಕ್ಷೆ ಕಾರ್ಯ ಮುಕ್ತಾಯವಾಗಿದೆ.
ಎನ್‌ಐಸಿ ಮತ್ತು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್‌ಎಫ್‌ಡಿಸಿ)ಗಳು ಸಮೀಕ್ಷೆಗೆ ಒಳಪಡಿಸಿದ ಮಾತೃ ಭಾಷೆಗಳ ಮಾಹಿತಿಯನ್ನು ಒಂದು ಗೂಡಿಸುತ್ತಿದೆ.
ಈಗಾಗಲೇ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಆಡಿಯೊ ಮತ್ತು ವಿಡಿಯೊಗಳನ್ನು ಸಹ ಮಾಡಿಕೊಳ್ಳಲಾಗಿದೆ.
ಭಾಷಿಕ ದತ್ತಾಂಶಗಳನ್ನು ದಾಖಲಿಸುವ ಹಾಗೂ ಸಂರಕ್ಷಿಸುವ ಕೆಲಸವನ್ನು ಮಾಡಲಾಗುತ್ತಿದೆ. ಭಾಷಾ ದತ್ತಾಂಶಗಳನ್ನು ಎನ್‌ಐಸಿ ಸರ್ವೆಯಲ್ಲಿ ದಸ್ತಾವೇಜು ಉದ್ದೇಶದಿಂದ ಅಪ್ಲೋಡ್ ಮಾಡಲಾಗುತ್ತದೆ.
ಜಾರ್ಖಂಡ್‌ನಲ್ಲಿನ ಸ್ಥಳೀಯ ಭಾಷೆಗಳ ದಾಖಲೀಕರಣ ಮುಕ್ತಾಯವಾಗಿದೆ. ಹಿಮಾಚಲ ಪ್ರದೇಶ, ತಮಿಳುನಾಡು, ಉತ್ತರ ಪ್ರದೇಶದಲ್ಲಿ ಕ್ಷೇತ್ರ ಕಾರ್ಯ ನಡೆಯುತ್ತಿದೆ.
ಬೆಂಗಳೂರು “ಕೃಷಿ ಮೇಳ” ಹಲವು ದಾಖಲೆ ಸೃಷ್ಟಿ ; ಮೇಳಕ್ಕೆ 17.35 ಲಕ್ಷ ಜನ ಭೇಟಿ!
2011ರ ಭಾಷಿಕ ಗಣತಿ ದತ್ತಾಂಶ ಮತ್ತು 2018ರ ವಿಶ್ಲೇಷಣೆ ಪ್ರಕಾರ, ಭಾರತದಲ್ಲಿ 19,500ಕ್ಕೂ ಅಧಿಕ ಭಾಷೆಗಳು ಅಥವಾ ಉಪಭಾಷೆಗಳನ್ನು ಭಾರತದಲ್ಲಿ ಮಾತೃ ಭಾಷೆಗಳನ್ನಾಗಿ ಬಳಸಲಾಗುತ್ತಿದೆ ಬೆಳಕಿಗೆ ಬಂದಿದೆ.
ಇನ್ನು ಭಾರತೀಯ ಮಾತೃ ಭಾಷೆಗಳ ಸಮೀಕ್ಷೆಯು ಈಗಾಗಲೇ ಮುಕ್ತಾಯವಾಗಬೇಕಿತ್ತು. ಆದರೆ, ಕೊರೊನಾ ಸೋಂಕು ಭೀತಿಯಿಂದಾಗಿ ಸಮೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.
ಇದೀಗ ಇದರ ಪ್ರಕ್ರಿಯೆಗಳನ್ನು ಮುಂದುವರಿಸುತ್ತಿರುವುದಾಗಿ ಕೇಂದ್ರ ಸರ್ಕಾರವು ಪ್ರಕಟಣೆಯಲ್ಲಿ ತಿಳಿಸಿದೆ.