News

Heat ರಾಜ್ಯದಲ್ಲಿ ಕೆಂಡದ ಮಳೆಯಂತಹ ಬಿಸಿಲು; ಎಚ್ಚರ!

18 May, 2023 2:52 PM IST By: Hitesh
Sunshine like torrential rain in the state; Beware!

ರಾಜ್ಯದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಗರಿಷ್ಠ (Maximum temperature) ತಾಪಮಾನವು 40ಡಿಗ್ರಿ ಸೆಲ್ಸಿಯಸ್‌ನಿಂದ 44 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಲಿದೆ!  

ರಾಜ್ಯದಲ್ಲಿ ಕೆಂಡದ ಮಳೆಯಂತಹ ಬಿಸಿಲು ಶುರುವಾಗಿದ್ದು, ಇದು ಇನ್ನೂ ತೀವ್ರವಾಗುವ ಸಾಧ್ಯತೆ ಇದೆ. 

ಸಂಬಂಧ ಕರ್ನಾಟಕ ರಾಜ್ಯ ನೈಸರ್ಗಿ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದೆ.

ಈಗಾಗಲೇ ಕಳೆದ ಮೂರು ದಿನಗಳಿಂದ ಬಿಸಿಲಿನ ಝಳ ತೀವ್ರವಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ ಅನ್ನು ದಾಟಿದೆ.

ಅದರಲ್ಲಿಯೂ ಉತ್ತರ ಕರ್ನಾಟಕದ ಹಲವು ಭಾಗದಲ್ಲಿ ಇದ್ದಿಲು ಕೆಂಡವಾಗಿ ಬದಲಾಗುವ ಪ್ರಮಾಣದಲ್ಲಿ ಬಿಸಿಲು ಹೆಚ್ಚಳವಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿ ವಿಕೋಪ ಉಸ್ತುವಾರಿ ಎಚ್ಚರಿಕೆ: ರಾಜ್ಯದಲ್ಲಿ ಬಿಸಿಲಿನ ಝಳ ತೀವ್ರವಾಗಿ ಹೆಚ್ಚಳವಾಗುವ ಸಾಧ್ಯತೆ

ಇರುವ ಹಿನ್ನೆಲೆಯಲ್ಲಿ ಇನ್ನೂ ಮುಂದಿನ ಮೂರು ದಿನಗಳ ಕಾಲ ಎಚ್ಚರಿಕೆ ವಹಿಸುವಂತೆ ಕರ್ನಾಟಕ ರಾಜ್ಯ

ನೈಸರ್ಗಿ ವಿಕೋಪ ಉಸ್ತುವಾರಿ ಕೇಂದ್ರ ರಾಜ್ಯದ ಜನತೆಗೆ ಎಚ್ಚರಿಕೆಯನ್ನು ನೀಡಿದೆ.

ಕರ್ನಾಟಕ ರಾಜ್ಯ ನೈಸರ್ಗಿ ವಿಕೋಪ ಉಸ್ತುವಾರಿ ಕೇಂದ್ರವು ಬಿಸಿಲಿನ ಝಳ ಹೆಚ್ಚಾಗಿರುವ ಪ್ರದೇಶದ ಜನರಿಗೆ ಕಳುಹಿಸಿರುವ ಸಂದೇಶದಲ್ಲಿ

“ಹಿಂದಿನ 3 ದಿನಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದ್ದು, ಮುಂದಿನ 3 ದಿನಗಳಲ್ಲಿ ಗರಿಷ್ಠ ತಾಪಮಾನವು

40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಮುಂದುವರಿಯುವ ಸಾಧ್ಯತೆ ಇದೆ. ದಯವಿಟ್ಟು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ

ಎಂದು ಕೆಎಸ್‌ಎನ್‌ಡಿಎಂಸಿ ( ಕರ್ನಾಟಕ ರಾಜ್ಯ ನೈಸರ್ಗಿ ವಿಕೋಪ ಉಸ್ತುವಾರಿ ಕೇಂದ್ರ) ಸಂದೇಶ ರವಾನಿಸಿದೆ.

ಮುಂದಿನ ಮೂರು ದಿನ ಎಚ್ಚರ ಇರಲಿ
ರಾಜ್ಯದ ಹಲವು ಭಾಗದಲ್ಲಿ ಅದರಲ್ಲಿಯೂ ಪ್ರಮುಖವಾಗಿ  ಉತ್ತರ ಕರ್ನಾಟಕದ ಹಲವು ಭಾಗದಲ್ಲಿ ಬಿಸಿಲಿನ ತಾಪಮಾನ ಗಣನೀಯ ಪ್ರಮಾಣದಲ್ಲಿ ಹೆಚ್ಚಳಗುವ ಸಾಧ್ಯತೆ ಇದೆ.

ಹೀಗಾಗಿ, ಸಾಧ್ಯವಾದಷ್ಟು ಮುಂದಿನ ಮೂರು ದಿನಗಳ ಕಾಲ ಹೊರಗೆ ಹೋಗಿ ಮಾಡುವಂತಹ ಕೆಲಸಗಳನ್ನು ಮುಂದೂಡಿ,

ಅಂದರೆ ಬಿಸಿಲಿನಲ್ಲಿ ಓಡಾಡುವುದು ಅಥವಾ ಖರೀದಿ ಮಾಡುವಂತಹ ಪ್ರಕ್ರಿಯೆಗಳನ್ನು ಮುಂದೂಡಿ.

ಅನಿವಾರ್ಯವಾಗಿ ಮನೆಯಿಂದ ಹೊರಗೆ ಹೋಗುವ ಸಂದರ್ಭ ಎದುರಾದರೆ, ತಲೆಯ ಮೇಲೆ ಟೋಪಿ ಅಥವಾ ತೆಳುವಾದ ಬಟ್ಟೆಯನ್ನು ಹೊದಿಕೆಯಂತೆ ಹಾಕಿಕೊಳ್ಳಿ.

ಹೆಚ್ಚು ನೀರು ಸೇವಿಸಿ ಹಾಗೂ ನೀರಿನ ಅಂಶ ಹೆಚ್ಚಾಗಿ ಇರುವ ಆಹಾರ ಪದಾರ್ಥವನ್ನು ಬಳಸಿ.

ಈ ಸಂದರ್ಭದಲ್ಲಿ ಅತೀ ಮುಖ್ಯವಾಗಿ ಸಣ್ಣ ಮಕ್ಕಳು ಹಾಗೂ ಹಿರಿಯರ ಆರೋಗ್ಯ ಕಾಳಜಿ ವಹಿಸಿ.

Sunshine like torrential rain in the state; Beware!

ಯಾವ ಭಾಗದಲ್ಲಿ ಹೆಚ್ಚು ತಾಪಮಾನ

ಕರ್ನಾಟಕ ರಾಜ್ಯ ನೈಸರ್ಗಿ ವಿಕೋಪ ಉಸ್ತುವಾರಿ ಕೇಂದ್ರ ವರದಿಯ ಪ್ರಕಾರ, ರಾಜ್ಯದ ಉತ್ತರ ಕರ್ನಾಟಕ ಭಾಗದ ಹಲವು ಪ್ರದೇಶಗಳಲ್ಲಿ

ಮುಂದಿನ ಮೂರು ದಿನಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ಕಾಣಿಸಿಕೊಳ್ಳಲಿದೆ.

ಪ್ರಮುಖ ಪ್ರದೇಶಗಳು: ಮೇ 18ರಿಂದ ಮೇ 20ರ ವರೆಗೆ ಹೆಚ್ಚು ತಾಪಮಾನ ಅಂದರೆ 40 ಡಿಗ್ರಿ ಸೆಲ್ಸಿಯಸ್‌ನಿಂದ 42 ಡಿಗ್ರಿ ಸೆಲ್ಸಿಯಸ್‌

ತಾಪಮಾನ ತಲುಪುವ ಪ್ರದೇಶಗಳಲ್ಲಿ ಬಾಗಲಕೋಟೆ, ಬಳ್ಳಾರಿ, ಹೊಸಪೇಟೆ, ಬೀದರ್‌, ವಿಜಯಪುರ,

ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು ಸೇರಿದಂತೆ ವಿವಿಧ ಭಾಗದಲ್ಲಿ ಗರಿಷ್ಠ ತಾಪಮಾನವು

40ಡಿಗ್ರಿ ಸೆಲ್ಸಿಯಸ್‌ನಿಂದ 44 ಡಿಗ್ರಿ ಸೆಲ್ಸಿಯಸ್‌ನ ವರೆಗೆ ತಲುಪಲಿದ್ದು, ರೆಡ್‌ ಅಲರ್ಟ್‌ ನೀಡಲಾಗಿದೆ.    

Rain ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಮುಂದುವರಿದ ಮಳೆ!

Pic Credits: pexels